ಪ್ರಿಯಾಂಕಾ ಚೋಪ್ರಾ ಜತೆ ನಟಿಸಿದ್ದ ಟ್ಯಾಲೆಂಟೆಡ್ ನಟ ಈಗ ಮುಂಬೈನಲ್ಲಿ ಹೊಟ್ಟೆಪಾಡಿಗೆ ಹಣ್ಣು ಮಾರುತ್ತಿದ್ದಾರೆ

By Shriram Bhat  |  First Published Nov 17, 2023, 7:36 PM IST

ಸಂದರ್ಶನವೊಂದರಲ್ಲಿ ಮಾತನಾಡಿರುವ ಈ ನಟ 'ನನಗೆ ಇತ್ತೀಚೆಗೆ ಯಾವುದೇ ಸಿನಿಮಾದಲ್ಲಿ ನಟಿಸಲು ಅವಕಾಶ ಸಿಕ್ಕಿಲ್ಲ. ಆದರೆ, ಸ್ವಲ್ಪ ಕಾಲದ ಮೊದಲು ನಟ ರಿಶಿ ಕಪೂರ್ ನಾಯಕತ್ವದ ಸಿನಿಮಾ ಒಂದರಲ್ಲಿ ವಾಟರ್ ಮೆಲನ್ ಮಾರುವವನ ಪಾತ್ರ ಸಿಕ್ಕಿತ್ತು. ಆದರೆ, ಹಿರಿಯ ನಟ ರಿ‍ಷಿ ಕಪೂರ್ ಅವರಿಗೆ ಅನಾರೋಗ್ಯ ಕಾಡಿ, ಅವರು ಅದರಿಂದ ನರಳುತ್ತ ಇಹಲೋಕ ತ್ಯಜಿಸಿಬಿಟ್ಟರು.


ಬಾಲಿವುಡ್ ಸಿನಿಮಾಗಳಲ್ಲಿ ನಟಿಸಿರುವ ಈ ನಟ ಹಿಂದಿ ಚಿತ್ರಂಗದ ಹಲವಾರು ಘಟಾನುಘಟಿ ಸ್ಟಾರ್‌ಗಳೊಂದಿಗೆ ನಟಿಸಿದ್ದಾರೆ, ಪ್ರಿಯಾಂಕಾ ಚೋಪ್ರಾ, ಆಯುಷ್ಮಾನ್ ಖುರಾನಾ ಹಾಗೂ ರಾಜ್‌ಕುಮಾರ್ ರಾವ್ ಮೊದಲಾದವರೊಂದಿಗೆ ಸ್ಕ್ರೀನ್ ಶೇರ್ ಮಾಡಿದ್ದಾರೆ. ಆದರೆ, ಇಂಥ ಟ್ಯಾಲೆಂಟೆಡ್ ನಟ ಇಂದು ಹಣ್ಣಿನಂಗಡಿ ಇಟ್ಟು ಮಾರಾಟ ಮಾಡುತ್ತಿದ್ದಾರೆ. 'ನಾನು ನನ್ನಿಬ್ಬರು ಮಕ್ಕಳನ್ನು ನೋಡಿಕೊಳ್ಳಬೇಕು. ನನಗೆ ಸದ್ಯ ಇದಕ್ಕಿಂತ ಒಳ್ಳೇಯ ಉದ್ಯೋಗವಿಲ್ಲ' ಎಂದಿದ್ದಾರೆ ಈ ನಟ. 

ಡ್ರೀಮ್ ಗರ್ಲ್, ದಿ ವೈಟ್ ಟೈಗರ್, ಸೊಂಚಿರಿಯಾ ಮುಂತಾದ ಬಾಲಿವುಡ್ ಸಿನಿಮಾಗಳಲ್ಲಿ ನಟಿಸಿದ್ದ ನಟ ಇಂದು ಹಣ್ಣು ಮಾರುವ ಪರಿಸ್ಥಿತಿಗೆ ಬಂದಿದ್ದಾರೆ. ಹಣ್ಣು ಮಾರುವುದು ಕೀಳು ಉದ್ಯೋಗವೇನೂ ಅಲ್ಲ. ಆದರೆ, ಸಿನಿಮಾ ನಟನಾಗಬೇಕು ಎಂದು ಚಿತ್ರರಂಗಕ್ಕೆ ಬಂದು, ಹಲವು ಸಿನಿಮಾಗಳಲ್ಲಿ ನಟಿಸಿದ ಬಳಿಕ, ತನ್ನ ಕನಸನ್ನು ಬಿಟ್ಟು ಹಣ್ಣು ಮಾರುವುದು ಆ ವ್ಯಕ್ತಿಗೆ ಕಷ್ಟವಾಗಬಹುದಷ್ಟೇ. ಅವರೇ ಹೇಳಿರುವಂತೆ, ಈ ನಟನಿಗೆ ಬೇರೆ ಯಾವುದೇ ಆದಾಯದ ಮೂಲ ಇಲ್ಲವಂತೆ, ಅದಕ್ಕಾಗಿ ಹಣ್ಣು ಮಾರುತ್ತಿದ್ದಾರಂತೆ. 

Tap to resize

Latest Videos

ಲವ್ ದೋಖಾಕ್ಕೆ ಚಾನ್ಸ್ ಕೊಡಲಿಲ್ಲ ಧಮೇಂದ್ರ, ಹೇಮಾ ಮಾಲಿನಿಗೆ ತಾಳಿ ಕಟ್ಟಲಿಲ್ಲ ಜಿತೇಂದ್ರ; ಶೋಭಾಳ ಕಥೆ ಏನಾಯ್ತು?

ಸಂದರ್ಶನವೊಂದರಲ್ಲಿ ಮಾತನಾಡಿರುವ ಈ ನಟ 'ನನಗೆ ಇತ್ತೀಚೆಗೆ ಯಾವುದೇ ಸಿನಿಮಾದಲ್ಲಿ ನಟಿಸಲು ಅವಕಾಶ ಸಿಕ್ಕಿಲ್ಲ. ಆದರೆ, ಸ್ವಲ್ಪ ಕಾಲದ ಮೊದಲು ನಟ ರಿಶಿ ಕಪೂರ್ ನಾಯಕತ್ವದ ಸಿನಿಮಾ ಒಂದರಲ್ಲಿ ವಾಟರ್ ಮೆಲನ್ ಮಾರುವವನ ಪಾತ್ರ ಸಿಕ್ಕಿತ್ತು. ಆದರೆ, ಹಿರಿಯ ನಟ ರಿ‍ಷಿ ಕಪೂರ್ ಅವರಿಗೆ ಅನಾರೋಗ್ಯ ಕಾಡಿ, ಅವರು ಅದರಿಂದ ನರಳುತ್ತ ಇಹಲೋಕ ತ್ಯಜಿಸಿಬಿಟ್ಟರು. ಈ ಕಾರಣಕ್ಕೆ ಆ ಸಿನಿಮಾವೇ ನಿಂತುಬಿಟ್ಟಿತು. ನನಗೆ ಇದು ತೀವ್ರ ನಿರಾಸೆ ತಂದಿದೆ' ಎಂದಿದ್ದಾರೆ ಈ ಬಾಲಿವುಡ್ ನಟ.

ರಕ್ಷಿತ್ ಶೆಟ್ಟಿ 'ಸಪ್ತ ಸಾಗರದಾಚೆ ಎಲ್ಲೋ ಸೈಡ್ ಬಿ' ಬಿಡುಗಡೆ; ಪ್ರೇಕ್ಷಕರ ವಿಶೇಷ ಪ್ರತಿಕ್ರಿಯೆ ಹಿಂದೆ ಏನಿದೆ ಗುಟ್ಟು? 

ನನಗೆ ನಟಿಸುವುದು ಎಂದರೆ ಪಂಚಪ್ರಾಣ. ಅದೇ ನನ್ನ ಮೊದಲ ಆಯ್ಕೆ. ಆದರೆ, ನನಗೆ ಸೂಕ್ತ ಅವಕಾಶ ಸಿಗುತ್ತಿಲ್ಲ. ನಾನು ನನ್ನೂರು ಉತ್ತರ ಪ್ರದೇಶದ ಹಳ್ಳಿಯಲ್ಲಿ ಥಿಯೇಟರ್‌ನಲ್ಲಿ ಸಿನಿಮಾದ ಮದ್ಯೆ ಇಂಟರ್‌ವೆಲ್‌ನಲ್ಲಿ ಪಾಪಡ್ ಮಾರಾಟ ಮಾಡುತ್ತಿದ್ದೆ. ಆಗಲೇ ನಾನು ಮುಂದೆ ನಟನಾಗುವ ಕನಸು ಕಂಡೆ. ಅದೇ ಪ್ರಯತ್ನದಲ್ಲಿದ್ದ ನನಗೆ ಕೆಲವು ಅವಕಾಶಗಳೂ ಸಿಕ್ಕವು. ಆದರೆ, ಅದು ಮುಂದುವರೆಯಲಿಲ್ಲ. ಹೀಗಾಗಿ ನಾನು ನನ್ನ ಕುಟುಂಬದ ಕಸುಬಾಗಿರುವ ಹಣ್ಣು ಮಾರಾಟವನ್ನು ಮತ್ತೆ ಮಾಡುತ್ತಿದ್ದೇನೆ' ಎಂದಿದ್ದಾರೆ. ಈ ನಟ ಬೇರಾರೂ ಅಲ್ಲ, ಸೋಲಂಕಿ ದಿವಾಕರ್. 

click me!