ಲವ್ ದೋಖಾಕ್ಕೆ ಚಾನ್ಸ್ ಕೊಡಲಿಲ್ಲ ಧಮೇಂದ್ರ, ಹೇಮಾ ಮಾಲಿನಿಗೆ ತಾಳಿ ಕಟ್ಟಲಿಲ್ಲ ಜಿತೇಂದ್ರ; ಶೋಭಾಳ ಕಥೆ ಏನಾಯ್ತು?

By Shriram Bhat  |  First Published Nov 17, 2023, 4:33 PM IST

ಹೇಮಾ ಮಾಲಿನಿ ಅಪ್ಪ-ಅಮ್ಮ ತಮ್ಮ ಮಗಳನ್ನು ಜಿತೇಂದ್ರ ಹಾಗೂ ಅವರ ಪೋಷಕರಿಗೆ ಪರಿಚಯ ಮಾಡಿಸಿ, ಜಿತೇಂದ್ರನನ್ನು ಹೇಮಾ ಮದುವೆಯಾಗಲು ಒಪ್ಪುವಂತೆ ಮನವೊಲಿಸುವಲ್ಲಿ ಯಶಸ್ವಿಯಾದರು. ಆದರೆ, ಆಕೆ ಈ ಮದುವೆಗೆ 'ಓಕೆ' ಎಂದಷ್ಟೇ ಹೇಳಿದ್ದಳು. ಜಿತೇಂದ್ರ ಹಾಗೂ ಹೇಮಾ ಮಾಲಿನಿ ಅವರಿಬ್ಬರ ಮದುವೆ ಚೆನ್ನೈನ ಒಂದು ಕಲ್ಯಾಣ ಮಂಟಪದಲ್ಲಿ ನಡೆಯುವದರಲ್ಲಿತ್ತು.


ಬಾಲಿವುಡ್ ಸಿನಿಮಾ ಜಗತ್ತಿನಲ್ಲಿ ಹಲವು ಪ್ರೇಮ ಪುರಾಣಗಳು ಯಾವತ್ತೂ ಮತ್ತೆಮತ್ತೆ ನೆನಪಿಸಿಕೊಳ್ಳುವಂತಿದೆ. ಹಲವು ನಟನಟಿಯರು ತಮ್ಮ ಸಿನಿಮಾಜರ್ನಿಯ ಪ್ರಾರಂಭದ ದಿನಗಳಲ್ಲಿ ಕ್ರಶ್, ಲವ್ ಅಂತ ಸಾಕಷ್ಟು ಸುದ್ದಿಗೆ ಕಾರಣವಾಗಿದ್ದರು. ಆದರೆ, ಬಳಿಕ ಅವರು ಇನ್ಯಾರನ್ನೋ ಮದುವೆಯಾಗಿ ಸಂಸಾರ, ಮಕ್ಕಳು ಅಂತ ಜೀವನ ನಡೆಸುತ್ತಿದ್ದಾರೆ. ಇಂಥ ಲವ್ ಸ್ಟೋರಿಗಳಲ್ಲಿ 1970 ರಿಂದ 1980ರ ಒಳಗೆ ನಡೆದ ಲವ್, ದೋಖಾ, ಮದುವೆಯೊಂದು ಭಾರೀ ಇಂಟರೆಸ್ಟಿಂಗ್ ಆಗಿದೆ ಎನ್ನಬಹುದು. 

ಹೌದು, ಅದು ನಟಿ ಹೇಮಾ ಮಾಲಿನಿಯದು. 1970ರ ದಶಕದಲ್ಲಿ ನಟಿ ಹೇಮಾ ಮಾಲಿನಿ ಅತಿ ಹಚ್ಚು ಸಂಭಾವನೆ ಪಡೆಯುತ್ತಿದ್ದ ನಟಿ. ಆ ಕಾಲದಲ್ಲಿ ಬಾಲಿವುಡ್  ಸ್ಟಾರ್ ನಟಿ ಎಂದರೆ ಅದು ಹೇಮಾ ಮಾಲಿನಿ ಮಾತ್ರ. 'ಸೀತಾ ಔರ್ ಗೀತಾ' ಸೂಪರ್ ಹಿಟ್ ಸಿನಿಮಾ ಮೂಲಕ ತಾವು ಹೀರೋಯಿನ್ ಓರಿಯೆಂಟೆಡ್ ಸಿನಿಮಾಗಳಿಗೂ ಸಲ್ಲುವ ನಟಿ, ಸಿನಿಮಾವನ್ನು ಗೆಲ್ಲಿಸುವ ತಾಖತ್ತಿರುವ ನಟಿ ಎಂಬುದನ್ನು ಹೇಮಾ ಮಾಲಿನಿ ಪ್ರೂವ್ ಮಾಡಿದ್ದರು. ಅದರೆ, ಅದೇ ವೇಳೆ ನಟ ಧಮೇಂದ್ರನ ಸಹವಾಸಕ್ಕೆ ಸಿಕ್ಕು ಅವನನ್ನು ಲವ್ ಮಾಡತೊಡಗಿದ್ದಳು. 

Tap to resize

Latest Videos

ನಟ ಧರ್ಮೇಂದ್ರನಿಗೆ ಅದಾಗಲೇ ಮದುವೆಯಾಗಿ ನಾಲ್ಕು ಮಕ್ಕಳಿದ್ದರು. ಹೇಮಾ ಮಾಲಿನಿ ಧಮೇಂದ್ರನನ್ನು ಲವ್ ಮಾಡುತ್ತಿರುವ ವಿಷಯ ತಿಳಿದ ಆಕೆಯ ಅಪ್ಪ-ಅಮ್ಮನಿಗೆ ತೀವ್ರ ಆತಂಕವಾಗಿತ್ತು. ಕಾರಣ, ಈಗಾಗಲೇ ಮದುವೆಯಾಗಿ ನಾಲ್ಕು ಮಕ್ಕಳ ತಂದೆಯಾಗಿರುವ ನಟ ಧಮೇಂದ್ರನನ್ನು ತಮ್ಮ ಮಗಳ ಮದುವೆಯಾದರೆ ಗತಿಯೇನು ಎಂಬ ಚಿಂತೆ ಅವರನ್ನು ಆವರಿಸಿಬಿಟ್ಟಿತ್ತು. ಈ ಕಾರಣಕ್ಕೆ ಹೇಮಾ ಅಪ್ಪ-ಅಮ್ಮ ಆ ಕಾಲದ ಇನ್ನೊಬ್ಬ ನಟ ಜಿತೇಂದ್ರ ಅವರನ್ನು ತಮ್ಮ ಮಗಳು ಮದುವೆಯಾಗಲಿ ಎಂದು ಬಯಸಿದ್ದರು. 

ಹೇಮಾ ಮಾಲಿನಿ ಅಪ್ಪ-ಅಮ್ಮ ತಮ್ಮ ಮಗಳನ್ನು ಜಿತೇಂದ್ರ ಹಾಗೂ ಅವರ ಪೋಷಕರಿಗೆ ಪರಿಚಯ ಮಾಡಿಸಿ, ಜಿತೇಂದ್ರನನ್ನು ಹೇಮಾ ಮದುವೆಯಾಗಲು ಒಪ್ಪುವಂತೆ ಮನವೊಲಿಸುವಲ್ಲಿ ಯಶಸ್ವಿಯಾದರು. ಆದರೆ, ಆಕೆ ಈ ಮದುವೆಗೆ 'ಓಕೆ' ಎಂದಷ್ಟೇ ಹೇಳಿದ್ದಳು. ಜಿತೇಂದ್ರ ಹಾಗೂ ಹೇಮಾ ಮಾಲಿನಿ ಅವರಿಬ್ಬರ ಮದುವೆ ಚೆನ್ನೈನ ಒಂದು ಕಲ್ಯಾಣ ಮಂಟಪದಲ್ಲಿ ನಡೆಯುವದರಲ್ಲಿತ್ತು. ಆದರೆ ಈ ಸೀಕ್ರೆಟ್ ಮದುವೆಯನ್ನು ಅಂದಿನ ಸಿನಿಮಾ ಟ್ಯಾಬ್ಲಯ್ ಒಂದು ಪ್ರಕಟಿಸಿ ಅದು ಧರ್ಮೇಂದ್ರನ ಕಣ್ಣಿಗೆ ಬೀಳುವಂತಾಯ್ತು. 

ಜಿತೇಂದ್ರ ಹಾಗೂ ಹೇಮಾ ಮಾಲಿನಿ ಮದುವೆ ಕುರಿತು ವರದಿ ನೋಡಿ ಕೆಂಡಾಮಂಡಲರಾದ ಧಮೇಂದ್ರ, ಜಿತೇಂದ್ರರ ಲವರ್ ಆಗಿದ್ದ ಶೋಭಾಳನ್ನು ಕರೆದುಕೊಂಡು ಸೀದಾ ಮದುವೆ ನಡೆಯುತ್ತಿದ್ದ ಜಾಗಕ್ಕೆ ಬಂದು ಭಾರೀ ಗಲಾಟೆ ಮಾಡಿದ್ದಾನೆ. ಅವನು ಕುಡಿದು ಬಂದು ಅಂದು ಮಾಡಿದ್ದ ಗಲಾಟೆ ನೋಡಿ ಸ್ವತಃ ಹೇಮಾ ಮಾಲಿನಿ ಅಪ್ಪ-ಅಮ್ಮ ಅವನನ್ನು ಭೇಟಿಯಾಗಲು ಕೂಡ ಒಪ್ಪಲಿಲ್ಲ. ಈ ಬೆಳವಣಿಗೆ ಕಂಡ ಜಿತೇಂದ್ರ ಅಕ್ಷರಶಃ ಬೇಸರಗೊಂಡು ಭವಿಷ್ಯದಲ್ಲಿ ಹೇಮಾ ಜತೆ ಸಂಬಂಧವನ್ನೇ ಕಡಿದುಕೊಂಡು ಬಿಟ್ಟ. 

ಶಾರುಖ್ ಖಾನ್, ಸಲ್ಮಾನ್ ಖಾನ್ ಹಾಗೂ ಅಮೀರ್ ಖಾನ್; ಅನುಪಮ್ ಖೇರ್ ನಿರ್ದೇಶನದ ಚಿತ್ರದಲ್ಲಿ ನಟಿಸಲೇ ಇಲ್ಲ ಯಾಕೆ?

ಆದರೆ, ಧರ್ಮೇಂದ್ರ ಮಾತ್ರ ತನ್ನ ಪಟ್ಟು ಬಿಡಲೇ ಇಲ್ಲ. ತಾನು ಹೇಮಾ ಮಾಲಿನಿಯನ್ನು ಒಬ್ಬಂಟಿಯಾಗಿ ಭೇಟಿಯಾಗದೇ ಇಲ್ಲಿಂದ ಕದಲಲಾರೆ ಎಂದುಬಿಟ್ಟ. ಅವನ ಮಾತಿಗೆ ಬೆಲೆ ಕೊಟ್ಟ ಹೇಮಾ ಪೋಷಕರು, ಅವನ ಮಾತಿನಂತೆ ನಡೆದುಕೊಂಡರು. ಹೇಮಾಳನ್ನು ಒಪ್ಪಿಸಿ ಮದುವೆಯಾಗುವುದರಲ್ಲಿ ಧಮೇಂದ್ರ ಯಶಸ್ವಿಯಾದ. ಇತ್ತ ತನ್ನ ಲವರ್ ಶೋಭಾಳನ್ನು ಜಿತೇಂದ್ರ 1974ರಲ್ಲಿ ಮದುವೆಯಾಗಿ ಸಂಸಾರ ಶುರು ಮಾಡಿದ. ಹೀಗೆ, ಜಿತೇಂದ್ರ ಮದುವೆಯಾಗಬೇಕಿದ್ದ ಹೇಮಾ 1979ರಲ್ಲಿ ಧಮೇಂದ್ರನ ಹೆಂಡತಿಯಾದರು. ಶೋಭಾ ತನ್ನ ಹೊಸ ಲವರ್ ಬಿಟ್ಟು ಹಳೆಯ ಲವರ್ ಜಿತೇಂದ್ರ ಮದುವೆಯಾಗಿ ಅವನ ಮಕ್ಕಳಿಗೆ ತಾಯಿಯಾದರು. 

ಭಾರತದಲ್ಲಿ ಮೊದಲ ರೋಲ್ಸ್‌ ರಾಯ್ಸ್ ಕಾರು ತಂದಿದ್ದು ಶಾರುಖ್ ಖಾನ್, ಅಂಬಾನಿ ಅಲ್ಲ; ಮೌಜ್ ಸಿನಿಮಾ ನಾಯಕಿ!

ಈಗ, ಜಿತೇಂದ್ರ-ಶೋಭಾ ಜೋಡಿಗೆ ಏಕ್ತಾ ಕಪೂರ್ ಮತ್ತು ತುಷಾರ್ ಕಪೂರ್ ಎಂಬ ಮಕ್ಕಳಿದ್ದಾರೆ ಎಂಬುದು ಜಗತ್ತಿಗೇ ಗೊತ್ತು, ಇನ್ನು ಧಮೇಂದ್ರ ಹಾಗೂ ಹೇಮಾ ಮಾಲಿನಿ ಜೋಡಿಗೆ ಇಶಾ ಡಿಯೋಲ್ ಮತ್ತು ಅಹನಾ ಡಿಯೋಲ್ ಹೆಸರಿನ ಮಕ್ಕಳಿದ್ದಾರೆ. ಸದ್ಯ ಈ ಎರಡೂ ಜೋಡಿಯದು ಸುಖಸಂಸಾರ ಎನ್ನಬಹುದು. ಒಟ್ಟಿನಲ್ಲಿ, ಯಾರನ್ನೋ ಮದುವೆ ಆಗಬೇಕಿದ್ದ ಹೇಮಾ ಮಾಲಿನಿ, ಜಿತೇಂದ್ರ ಹಾಗೂ ಶೋಭಾ ಬಾಳಲ್ಲಿ ಘಟಿಸಿದ್ದು ಮಾತ್ರ ಬೇರೆಯೇ. ಆದರೆ, ನಟ ಧಮೇಂದ್ರ ಮಾತ್ರ ತಾವು ಬಯಸಿದಂತೆ ಹೇಮಾಳನ್ನು ಪಡೆದುಕೊಂಡ. 

click me!