ಅಮಿತಾಭ್​ ಸರ್​ ಪ್ಲೀಸ್ ಪ್ಲಿಸ್​... ಫೈನಲ್​ ಮ್ಯಾಚ್​ ನೋಡ್ಬೇಡಿ ಅಂತಿದ್ದಾರೆ ನೆಟ್ಟಿಗರು! ಅಷ್ಟಕ್ಕೂ ಆಗಿದ್ದೇನು?

By Suvarna News  |  First Published Nov 17, 2023, 6:11 PM IST

ಅಮಿತಾಭ್​ ಸರ್​ ಪ್ಲೀಸ್ ಪ್ಲಿಸ್​... ಫೈನಲ್​ ಮ್ಯಾಚ್​ ನೋಡ್ಬೇಡಿ ಎಂದು ನಟನಿಗೆ ದುಂಬಾಲು ಬಿದ್ದಿದ್ದಾರೆ ನೆಟ್ಟಿಗರು! ಅಷ್ಟಕ್ಕೂ ಆಗಿದ್ದೇನು?
 


ಈ ಸಮಯದಲ್ಲಿ ಎಲ್ಲರೂ ಕುತೂಹಲದಿಂದ ನವೆಂಬರ್ 19ಗಾಗಿ ಕಾಯುತ್ತಿದ್ದಾರೆ.  ಏಕೆಂದರೆ  ಅಂದು ಮಧ್ಯಾಹ್ನ 2 ಗಂಟೆಗೆ ಗುಜರಾತಿನ ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ವಿಶ್ವಕಪ್ 2023 ರ ಫೈನಲ್ ಪಂದ್ಯ ನಡೆಯಲಿದೆ.  ನ್ಯೂಜಿಲೆಂಡ್ ತಂಡವನ್ನು ಸೋಲಿಸುವ ಮೂಲಕ ಭಾರತ ಫೈನಲ್‌ಗೆ ಲಗ್ಗೆ ಇಟ್ಟಿದೆ.  ಟೀಂ ಇಂಡಿಯಾ ಸತತ 10ನೇ ಜಯದೊಂದಿಗೆ ಫೈನಲ್‌ ಪ್ರವೇಶಿಸಿದೆ. ಅಕ್ಟೋಬರ್​ 5ರಂದು ಆರಂಭಗೊಂಡ ಕ್ರಿಕೆಟ್ ಹಬ್ಬ ಮುಕ್ತಾಯದ ಹಂತಕ್ಕೆ ಬಂದಿದೆ. ಸದ್ಯ  47 ಪಂದ್ಯಗಳು ಪೂರ್ಣಗೊಂಡಿದ್ದು ಫೈನಲ್ ಪಂದ್ಯ ಮಾತ್ರ ಬಾಕಿ ಉಳಿದಿದೆ.  ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳು ಚಾಂಪಿಯನ್​ ಪಟ್ಟಕ್ಕಾಗಿ ಕಾದಾಟ ನಡೆಸಲಿದ್ದು,  ಉಭಯ ದೇಶಗಳ ಪ್ರೇಮಿಗಳು ತಮ್ಮ ದೇಶದ ತಂಡ ವಿಜೇತರಾಗಲು ಪ್ರಾರ್ಥಿಸುತ್ತಿದ್ದಾರೆ. ಅದೇ ಇನ್ನೊಂದೆಡೆ, ಈ ಬಾರಿ ಒಂದೇ  ಒಂದು ಮ್ಯಾಚ್​ ಸೋಲದ ಭಾರತಕ್ಕೇ ಜಯ ಸಿಗುವುದಾಗಿ ಎಲ್ಲರೂ ನಂಬಿದ್ದಾರೆ.

ಫೈನಲ್‍ನಲ್ಲಿ ಆಸೀಸ್‍ ತಂಡವನ್ನು ಸೋಲಿಸಲು  ಟೀಂ ಇಂಡಿಯಾ ಹವಣಿಸುತ್ತಿದೆ. 2003ರ ಸೋಲಿನ ಸೇಡನ್ನು ತೀರಿಸಿಕೊಳ್ಳಲು ಕಾತರವಾಗಿದೆ.  ಹೀಗಾಗಿ ಎಲ್ಲೆಡೆ ಸಂಭ್ರಮ, ಆತಂಕ ಮನೆ ಮಾಡಿದ್ದು, ಫೈನಲ್ ಫೈಟ್ ಬಗ್ಗೆ ತೀವ್ರ ಕುತೂಹಲ ಮೂಡಿದೆ. ವಿರಾಟ್ ಕೊಹ್ಲಿ, ಶುಭಮನ್‍ ಗಿಲ್, ರೋಹಿತ್ ಶರ್ಮಾ, ಶ್ರೇಯಸ್ ಅಯ್ಯರ್‌ ಅವರ ಅಮೋಘ ಬ್ಯಾಟಿಂಗ್‌ ಜೊತೆಗೆ ಮೊಹಮ್ಮದ್ ಶಮಿ ಮತ್ತು ಸಿರಾಜ್ ಅವರ ಶ್ರೇಷ್ಠ ಬೌಲಿಂಗ್‌ ದಾಳಿ ಎದುರಾಳಿ ತಂಡಗಳಿವೆ ನಡುಕ ಹುಟ್ಟಿಸಿದೆ. ಹೀಗಾಗಿ ಆಸೀಸ್ ಕೂಡ ಭಾರತವನ್ನು ಮಣಿಸುವ ನಿಟ್ಟಿನಲ್ಲಿ ಲೆಕ್ಕಾಚಾರ ಹಾಕುತ್ತಿದೆ.

Tap to resize

Latest Videos

India vs Australia: ರಜನೀಕಾಂತ್​ ನುಡಿದ್ರು ವರ್ಲ್ಡ್​ ಕಪ್​ ಭವಿಷ್ಯ- ಫ್ಯಾನ್ಸ್​ ಏನೆಂದ್ರು?

ಇದರ ಮಧ್ಯೆಯೇ, ನಟ ಅಮಿತಾಭ್​ ಬಚ್ಚನ್​ ಅವರಿಗೆ ಹಲವು ನೆಟ್ಟಿಗರು ಈ ಫೈನಲ್​ ಮ್ಯಾಚ್​ ನೋಡಬೇಡಿ ಎಂದು ದುಂಬಾಲು ಬಿದ್ದಿದ್ದಾರೆ. ಪ್ಲೀಸ್ ಅಮಿತಾಭ್​ ಸರ್​ ಫೈನಲ್​ ಮ್ಯಾಚ್​ ನೋಡಬೇಡಿ ಎನ್ನುತ್ತಿದ್ದಾರೆ. ಹೌದು. ಹೀಗೊಂದು ವಿಚಿತ್ರ ಬೇಡಿಕೆಯನ್ನುಕೆಲವು ನೆಟ್ಟಿಗರು ಇಟ್ಟಿದ್ದಾರೆ. ಅಷ್ಟಕ್ಕೂ ಆಗಿರೋದು ಏನೆಂದರೆ, ನ್ಯೂಜಿಲ್ಯಾಂಡ್ ವಿರುದ್ಧದ ಪಂದ್ಯ ಮುಗಿದ ಬಳಿಕ ಅಮಿತಾಭ್‌ ಬಚ್ಚನ್‌ ಭಾರತದ ತಂಡವನ್ನು ಅಭಿನಂದಿಸಿ ಟ್ವೀಟ್​ ಮಾಡಿದ್ದರು. ಅದರಲ್ಲಿ ಅವರು,  ‘ನಾನು ಯಾವಾಗ ಮ್ಯಾಚ್‌ ನೋಡುವುದಿಲ್ಲವೋ ಆ ದಿನವೇ ಭಾರತ ಪಂದ್ಯವನ್ನು ಗೆಲ್ಲುತ್ತದೆ ’ ಎಂದಿದ್ದರು. ಇದೇ ಕಾರಣಕ್ಕೆ ನೆಟ್ಟಿಗರೆಲ್ಲಾ ಹಾಗಿದ್ದರೆ ದಯವಿಟ್ಟು ಅಂತಿಮ ಪಂದ್ಯ ನೋಡಬೇಡಿ ಎಂದು ಕಾಲೆಳೆಯುತ್ತಿದ್ದಾರೆ. 

ಸರ್​​ ನಿಮ್ಮ ಮೇಲೆ ಅಪಾರ ಗೌರವ ಇದೆ. ಇದೀಗ ನೀವು ಫೈನಲ್ ಮ್ಯಾಚ್ ನೋಡಿದರೆ, ಸೋಲುವ ಭಯ ಶುರುವಾಗಿದೆ ಎಂದು ಮನವಿ ಮಾಡಿದ್ದಾರೆ. ಇನ್ನೂ ಕೆಲವರು ತಮಾಷೆಯ ಸಲಹೆಗಳನ್ನೂ ನೀಡಿದ್ದಾರೆ. ಫೈನಲ್​ ಪಂದ್ಯದ ಮುಕ್ಯಾಯದ ನಂತರ ಹೈಲೆಟ್ಸ್​ ನೋಡಿ ಸಂಭ್ರಮಿಸಿ ಎಂದು ಹೇಳಿದ್ದಾರೆ. ಅದಕ್ಕೆ ಪ್ರತಿಕ್ರಿಯೆ ನೀಡಿರುವ ಅಮಿತಾಭ್​ ಅವರು,  ಈಗ ನಾನು ಹೋಗಬೇಕೇ ಅಥವಾ ಬೇಡವೇ ಎಂದು ಯೋಚಿಸುತ್ತಿದ್ದೇನೆ ಎಂದಿದ್ದಾರೆ. ಅದಕ್ಕೆ ಮತ್ತೆ ರಿಪ್ಲೈ ಮಾಡಿರುವ ಅಭಿಮಾನಿಗಳು, ಪ್ಲೀಸ್​ ಸರ್​.. ಇದೊಂದು  ತ್ಯಾಗ ಮಾಡಿ, ಫೈನಲ್‌ನಿಂದ ದೂರವಿರಿ. ಮನೆಯೊಳಗೆ ಇರಿ ಎಂದಿದ್ದಾರೆ. 

ಭಾರತ ವಿಶ್ವಕಪ್​ ಗೆದ್ರೆ ಈ ನಟಿ ಬೆತ್ತಲಾಗ್ತಾರಂತೆ! ಮುಂದೇನು ಮಾಡ್ತಾರೆಂದು ಹೇಳಿದ್ದಾರೆ ಕೇಳಿ...


 

T 4831 - when i don't watch we WIN !

— Amitabh Bachchan (@SrBachchan)
click me!