65ರ ಹರೆಯದಲ್ಲಿ 4ನೇ ಬಾರಿ ಹಸೆಮಣೆ ಏರಿದ ಸಂಜಯ್ ದತ್‌

By Anusha Kb  |  First Published Oct 10, 2024, 1:33 PM IST

ಬಾಲಿವುಡ್ ನಟ ಸಂಜಯ್ ದತ್ ಅವರು 65ರ ಹರೆಯದಲ್ಲಿ ಮತ್ತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ದೇವಸ್ಥಾನವೊಂದರಲ್ಲಿ ಮತ್ತೆ ಹಸೆಮಣೆ ಏರಿದ್ದು, ಅಗ್ನಿ ಸಾಕ್ಷಿಯಾಗಿ ಸಪ್ತಪದಿ ತುಳಿದಿದ್ದಾರೆ.


ಬಾಲಿವುಡ್ ನಟ ಸಂಜಯ್ ದತ್ ಅವರು ಮತ್ತೆ 65ರ ಹರೆಯದಲ್ಲಿ ಮತ್ತೆ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದಾರೆ. ನಟಿ ಮಾನ್ಯತಾ ಜೊತೆ 16 ವರ್ಷಗಳ ನಂತರ ಮತ್ತೆ ನಟ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದು, ಅವರ ಫೋಟೋ ಹಾಗೂ ವೀಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ದೇವಸ್ಥಾನವೊಂದರಲ್ಲಿ ದಂಪತಿ 16 ವರ್ಷಗಳ ನಂತರ ಮತ್ತೆ ಹಸೆಮಣೆ ತುಳಿದಿದ್ದಾರೆ. ಅಗ್ನಿ ಸಾಕ್ಷಿಯಾಗಿ ಇಬ್ಬರು ಸಪ್ತಪದಿ ತುಳಿದಿದ್ದಾರೆ.

ವೈರಲ್ ಆದ ವೀಡಿಯೋದಲ್ಲಿ ಕಾಣಿಸುವಂತೆ ಸಂಜಯ್ ದತ್‌ ಕೇಸರಿ ಬಣ್ಣದ ಧೋತಿ ಹಾಗೂ ಕುರ್ತಾ ಧರಿಸಿದ್ದು, ಹಣೆಗೆ ದೊಡ್ಡದಾದ ತಿಲಕವಿಟ್ಟಿದ್ದಾರೆ.  ಹಾಗೆಯೇ ಪತ್ನಿ ಮಾನ್ಯತಾ ಅವರು ಪ್ರಿಂಟೆಂಡ್ ಸಲ್ವಾರ್ ಸೂಟ್ ಧರಿಸಿದ್ದು, ತಲೆಯ ಮೇಲೆ ಸಾಲು ಹೊದ್ದು, ಗಂಡನ ಕೈ ಹಿಡಿದು  ಹೋಮ ಕುಂಡಕ್ಕೆ ಸುತ್ತು ಬರುತ್ತಿದ್ದಾರೆ.  ಏಳು ಹೆಜ್ಜೆ ಅಥವಾ ಸಪ್ತಪದಿ ಎಂದು ಕರೆಯಲ್ಪಡುವ ಈ ವಿವಾಹ ಸಂಪ್ರದಾಯವೂ ಪ್ರತಿ ಹೆಜ್ಜೆಗೂ ಒಂದೊಂದು ಅರ್ಥವಿದ್ದು, ಜೀವನದ ಕೊನೆವರೆಗೂ ಜೊತೆಗಿರುವ ಜೋಡಿಯ ಬದ್ಧತೆಯನ್ನು ಸೂಚಿಸುತ್ತದೆ. 

Tap to resize

Latest Videos

undefined

ಬಾಲಿವುಡ್‌ನ ಫೇಮಸ್ ನಟನಾದರೂ ಅಪ್ಪನಿಂದ ದೂರವೇ ಉಳಿದಿರುವ ಸಂಜಯ್ ದತ್ ಪುತ್ರಿ

ಮಾನ್ಯತಾ ಅವರು ಕೂಡ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದು,  ಹೋಮಕುಂಡದ ಮುಂದೆ ಇಬ್ಬರು ಕುಳಿತಿರುವ ದೃಶ್ಯವಿದೆ.

ಸಂಜಯ್ ದತ್ ವೈಯಕ್ತಿಕ ವಿಚಾರದ ಬಗ್ಗೆ ಹೇಳುವುದಾದರೆ ಸಂಜಯ್ ದತ್‌ ಅವರು 2008ರ ಫೆಬ್ರವರಿ 7 ರಂದು ಮನ್ಯಾತಾ ಅವರನ್ನು ಮೊದಲ ಬಾರಿ ಮದುವೆಯಾದರು. ಈ ಜೋಡಿ 2010ರ ಆಕ್ಟೋಬರ್ 21ರಂದು ಅವಳಿ ಮಕ್ಕಳ ಪೋಷಕರಾಗಿದ್ದಾರೆ, ಶಹ್ರಾನ್ ದತ್, ಇಕ್ರಾ ದತ್ ಎಂಬ ಮಗ ಹಾಗೂ ಮಗಳನ್ನು ಈ ಜೋಡಿ ಹೊಂದಿದ್ದಾರೆ. ಇದಕ್ಕೂ ಮೊದಲು ಸಂಜಯ್ ದತ್  1998ರಲ್ಲಿ ಫೆಬ್ರವರಿ 14 ರಂದು ಗಗನಸಖಿ ಹಾಗೂ ಮಾಡೆಲ್ ಆಗಿದ್ದ ರಿಯಾ ಪಿಳೈ ಅವರನ್ನು ಮದುವೆಯಾಗಿದ್ದರು. ಆದರೆ 2008ರಲ್ಲಿ ಅವರು ದೂರಾಗಿದ್ದರು. ಅದಕ್ಕೂ ಮೊದಲು ಸಂಜಯ್ ದತ್ ರೀಚಾ ಶರ್ಮಾ ಅವರನ್ನು 1987ರಲ್ಲಿ ಮದುವೆಯಾಗಿದ್ದರು. ಆದರೆ 1996ರಲ್ಲಿ ರೀಚಾ ಶರ್ಮಾ  ಬ್ರೈನ್‌ ಟ್ಯೂಮರ್‌ಗೆ ಒಳಗಾಗಿ ತೀರಿಕೊಂಡಿದ್ದರು. ಇವರ ಜೊತೆಗಿನ ದಾಂಪತ್ಯದಲ್ಲಿ ಸಂಜಯ್ ದತ್‌ಗೆ ಪುತ್ರಿ ತ್ರಿಶಾಲಾ ದತ್ ಜನಿಸಿದ್ದರು.  ಪ್ರಸ್ತುತ ಅಮೆರಿಕಾದಲ್ಲಿ ನೆಲೆಸಿರುವ ತ್ರಿಶಾಲಾ ದತ್‌ಗೆ  36 ವರ್ಷ. 

ಮದ್ರಾಸ್‌ನಲ್ಲಿ ತಮ್ಮ ಹಿಂದಿನ ಜನ್ಮದ ಭವಿಷ್ಯ ಕೇಳಿದ ಸಂಜಯ್ ದತ್; ಪತ್ನಿಯನ್ನು ಕೊಂದಿದ್ದು ನಿಜವೇ?

ಇನ್ನು ಸಂಜಯ್ ದತ್ ವೃತ್ತಿ ಜೀವನದ ಬಗ್ಗೆ ಹೇಳುವುದಾದರೆ 1981ರ ರಾಕಿ ಸಿನಿಮಾದ ಮೂಲಕ ಅವರು ಬಾಲಿವುಡ್ ಪ್ರವೇಶಿಸಿದ್ದರು. 1981ರ ನಾಮ್ , 1993ರ  ಖಳನಾಯಕ್ ಸಿನಿಮಾಗಳು ಅವರಿಗೆ ಇನ್ನಿಲ್ಲದ ಜನಪ್ರಿಯತೆ ತಂದು ಕೊಟ್ಟಿತ್ತು.   1999ರ ವಾಸ್ತವ್ ದಿ ರಿಯಾಲಿಟಿ, 2003ರ ಮುನ್ನಾ ಭಾಯ್, 2005ರ  ಪರಿನೀತ್‌, 2005ರ ದಸ್‌, ಹಾಗೂ ಲಗೇ ರಹೋ ಮುನ್ನಾಭಾಯ್ ಹಾಗೂ ಕೆಜಿಎಫ್ ಎಂಬಿಬಿಎಸ್  ಸಂಜಯ್ ದತ್ ನಟನೆಯ ಪ್ರಮುಖ ಚಿತ್ರಗಳಾಗಿವೆ.

 
 
 
 
 
 
 
 
 
 
 
 
 
 
 

A post shared by Mamaraazzi (@mamaraazzi)

 

click me!