ಬೆಳಗ್ಗೆ 4 ಗಂಟೆಯಿಂದಲೇ ವೆಟ್ಟೈಯಾನ್‌ ಪ್ರದರ್ಶನ: ರಜನಿಕಾಂತ್‌ ಡ್ಯಾನ್ಸ್‌ಗೆ ಅಭಿಮಾನಿಗಳು ಫಿದಾ

By Govindaraj S  |  First Published Oct 10, 2024, 11:26 AM IST

ಸೂಪರ್‌ಸ್ಟಾರ್‌ ರಜನಿಕಾಂತ್‌ ಹಾಗೂ ‘ಜೈ ಭೀಮ್‌’ ಚಿತ್ರದ ಖ್ಯಾತಿಯ ನಿರ್ದೇಶಕ ಜ್ಞಾನವೇಲು ಕಾಂಬಿನೇಶನ್‌ನ ‘ವೆಟ್ಟೈಯಾನ್‌’ ಸಿನಿಮಾ ಇಂದು (ಅ.10) ಅದ್ದೂರಿಯಾಗಿ ತೆರೆಗೆ ಬಂದಿದೆ. 


ಸೂಪರ್‌ ಸ್ಟಾರ್‌ ರಜನಿಕಾಂತ್‌ ಹಾಗೂ ‘ಜೈ ಭೀಮ್‌’ ಚಿತ್ರದ ಖ್ಯಾತಿಯ ನಿರ್ದೇಶಕ ಜ್ಞಾನವೇಲು ಕಾಂಬಿನೇಶನ್‌ನ ‘ವೆಟ್ಟೈಯಾನ್‌’ ಸಿನಿಮಾ ಇಂದು (ಅ.10) ಅದ್ದೂರಿಯಾಗಿ ತೆರೆಗೆ ಬಂದಿದೆ. ರಜನಿಕಾಂತ್‌ ಅವರ ಜತೆಗೆ ಬಿಗ್‌ಬಿ ಅಮಿತಾಬ್‌ ಬಚ್ಚನ್‌, ಫಹಾದ್‌ ಫಾಸಿಲ್‌, ರಾಣಾ ದಗ್ಗುಬಾಟಿ, ಮಂಜು ವಾರಿಯರ್‌ ಸೇರಿದಂತೆ ಕಲಾವಿದರ ದೊಡ್ಡ ದಂಡೇ ಇದೆ. ವಿಶೇಷ ಎಂದರೆ ಈ ದೊಡ್ಡ ಬಜೆಟ್‌ ಚಿತ್ರದಲ್ಲಿ ಕನ್ನಡಿಗ ದುನಿಯಾ ಕಿಶೋರ್‌ ಕೂಡ ಕಾಣಿಸಿಕೊಳ್ಳುತ್ತಿದ್ದಾರೆ. ಈ ಹಿಂದೆ ರಜನಿಕಾಂತ್‌ ಅವರೊಂದಿಗೆ ‘ಕಾಲಾ’, ‘ಜೈಲರ್’ ಚಿತ್ರದಲ್ಲೂ ಕಿಶೋರ್‌ ನಟಿಸಿದ್ದರು.

ತಮಿಳು, ತೆಲುಗು, ಹಿಂದಿ ಹಾಗೂ ಮಲಯಾ‍ಳಂ ಜತೆಗೆ ಕನ್ನಡಕ್ಕೂ ಡಬ್‌ ಆಗಿರುವ ಈ ಚಿತ್ರದ ‘ಮನಸಿಲಾಯೋ’ ಹಾಡು ಟ್ರೆಂಡಿಂಗ್‌ ಆಗಿದ್ದು, ಮಂಜು ವಾರಿಯರ್‌ ಹಾಗೂ ರಜನಿಕಾಂತ್‌ ಡ್ಯಾನ್ಸ್‌ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಕರ್ನಾಟಕದಲ್ಲಿ ಬೆಂಗಳೂರು ಸೇರಿದಂತೆ ಹಲವು ಕಡೆ ಇಂದು ಬೆಳಗ್ಗೆ 4.5ಕ್ಕೆ ಮೊದಲ ಶೋ ಪ್ರದರ್ಶನ ಆಗಿದೆ. ಉಳಿದಂತೆ ಬಹುತೇಕ ಕಡೆ ಬೆಳಗ್ಗೆ 6.30ರಿಂದ ಸಿನಿಮಾ ಪ್ರದರ್ಶನ ಆರಂಭವಾಗಿದೆ.

Tap to resize

Latest Videos

undefined

ರಜನಿ ಇಲ್ಲಿ ಅಕ್ಷರಶಃ ದುಷ್ಟರನ್ನ ಎನ್ ಕೌಂಟರ್ ಹೆಸರಲ್ಲಿ ಭೇಟೆ ಆಡೋ ಪೊಲೀಸ್ ಆಫೀಸರ್ ಪಾತ್ರದಲ್ಲಿ ಮಿಂಚಿದ್ದಾರೆ. ಆದ್ರೆ ಎನ್ ಕೌಂಟರ್ ತಪ್ಪು ಅಂತ ಕೌಂಟರ್ ಕೊಡೋ ಅವರ ಸೀನಿಯರ್ ರೋಲ್ ನಲ್ಲಿ ಬಿಗ್ ಬಿ ಅಮಿತಾಭ್ ಇದ್ದಾರೆ. ಭಾರತೀಯ ಸಿನಿರಂಗದ ಇಬ್ಬರು ಲೆಜೆಂಡ್  ಗಳನ್ನ ಒಟ್ಟಿಗೆ ನೋಡೋದೇ ಒಂದು ರೀತಿ ಸ್ಪೆಷಲ್ ಟ್ರೀಟ್ ಅನ್ನಬಹುದು. ದಶಕಗಳ ಬಳಿಕ ಬರ್ತಿರೋ ಬಿಗ್ ಬಿ ಮತ್ತು ರಜನಿ ಜುಗಲ್ ಬಂದಿ ಈ ಸಿನಿಮಾದ ಬಿಗ್ ಹೈಲೈಟ್ ಅಂದ್ರೆ ತಪ್ಪಾಗಲ್ಲ. ಇನ್ನೂ ರಜನಿ , ಅಮಿತಾಭ್ ಅಷ್ಟೇ ಅಲ್ಲ ಜೊತೆಯಲ್ಲಿ ರಾಣಾ ದಗ್ಗುಬಾಟಿ, ಫಹಾದ್ ಫಾಸಿಲ್, ಮಂಜು ವಾರಿಯರ್, ರಿತಿಕಾ ಸಿಂಗ್, ವಿಜಯನ್, ಜಿಎಂ ಸುಂದರ್, ರೋಹಿಣಿ, ಅಭಿರಾಮಿ, ರಾವ್ ರಮೇಶ್,  ಸೇರಿದಂತೆ ಹಲವು ಘಟಾನುಘಟಿ ಕಲಾವಿದರ ಬಳಗ ವೆಟ್ಟೈಯಾನ್ ನಲ್ಲಿದೆ. 

ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ರಜನಿಕಾಂತ್: ಎಷ್ಟೊಂದು ಸರ್ಜರಿ.. ಇಲ್ಲಿದೆ ತಲೈವಾ ಮೆಡಿಕಲ್ ಹಿಸ್ಟರಿ!

ಸೂರ್ಯ ನಟನೆಯ 'ಜೈ ಭೀಮ್' ಸಿನಿಮಾ ನಿರ್ದೇಶಿಸಿದ್ದ ಟಿ.ಜೆ. ಜ್ಞಾನವೇಲ್ 'ವೆಟ್ಟೈಯಾನ್'ಗೆ ಆಕ್ಷನ್ ಕಟ್ ಹೇಳಿದ್ದಾರೆ. ಲೈಕಾ ಪ್ರೊಡಕ್ಷನ್ಸ್ ಈ ಸಿನಿಮಾಗೆ ಬಂಡವಾಳ ಹೂಡಿದ್ದು, ಅದ್ದೂರಿಯಾಗಿ ಸಿನಿಮಾವನ್ನ ತೆರೆಗೆ ತಂದಿದೆ. ಸದ್ಯ ರಿಲೀಸ್ ಹೊಸ್ತಿಲಲ್ಲಿ ವೆಟ್ಟೈಯಾನ್ ಸಿನಿಮಾದ ಹಂಟರ್ ವಂಟರ್ ಅನ್ನೋ ಸ್ಪೆಷಲ್ ಸಾಂಗ್ ರಿಲೀಸ್ ಆಗಿದೆ. ಅನಿರುಧ್ ರವಿಚಂದರ್ ಈ ಮಾಸ್ ಸಾಂಗ್​ಗೆ ಮ್ಯೂಸಿಕ್ ಹಾಕಿದ್ದು, ವೆಟ್ಟೈಯಾನ್ ರಣಬೇಟೆಯನ್ನ ವರ್ಣಿಸುವಂತೆ ಮೂಡಿಬಂದಿದೆ. ಸಿದ್ದಾರ್ಥ್ ಬಸ್ರೂರು ವಾಯ್ಸ್​ನಲ್ಲಿರೋ ಈ ಹಾಡು ತಲೈವಾ ಫ್ಯಾನ್ಸ್​ನ ಹುಚ್ಚೆದ್ದು ಕುಣಿಯುವಂತೆ ಮಾಡಿದೆ. ವೆಟ್ಟೈಯಾನ್ ಭೇಟೆ ಸಖತ್ ರೋಚಕವಾಗಿರುತ್ತೆ ಅನ್ನೋ ಸೂಚನೆ ನೀಡಿದೆ. 

click me!