ಚೋಲಿ ಕೆ ಪೀಚೆ ಕ್ಯಾ ಹೈ.. ರಾಣಿ ಮುಖರ್ಜಿ ಸೆರಗು ಜಾರಿದ್ದೂ ಪ್ರಯೋಜನವಾಗಿಲ್ಲ ಅಂತಿದ್ದಾರೆ ಕಿಲಾಡಿ ನೆಟ್ಟಿಗರು!

By Bhavani Bhat  |  First Published Oct 10, 2024, 11:00 AM IST

ಒಂದು ಫನ್ನಿ ರೀಲ್ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗ್ತಿದೆ. ರಾಣಿ ಮುಖರ್ಜಿ ಸೆರಗು ಜಾರಿದ ವೀಡಿಯೋವದು. ರಾಣಿ ಪಕ್ಕದಲ್ಲಿ ಜಯಾ ಬಚ್ಚನ್ ಕೂತಿದ್ದಾರೆ. ರಾಣಿ ಸೆರಗು ಜಾರಿರೋದಕ್ಕೂ ಜಯಾ ಬಚ್ಚನ್‌ಗೂ ಸಂಬಂಧ ಇದೆ ಅಂತಿದ್ದಾರೆ ನೆಟ್ಟಿಗರು..


ರಾಣಿ ಮುಖರ್ಜಿ ಭಾರತೀಯ ಚಿತ್ರರಂಗದ ಪ್ರತಿಭಾವಂತ ನಟಿ. ಅನೇಕ ಬಾಲಿವುಡ್‌ ಸಿನಿಮಾಗಳಲ್ಲಿ ಮಿಂಚಿ ಒಂದು ಕಾಲದಲ್ಲಿ ಮನೆ ಮಾತಾದವ್ರು. ವರ್ಸಟೈಲ್ ಆಕ್ಟರ್ ಅಂತಲೇ ಜನಪ್ರಿಯರಾದವರು. ಇಂಥಾ ನಟಿಯ ಒಂದು ವೀಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಕಿಲಾಡಿ ನೆಟ್ಟಿಗರ ತಲೆ ಹರಟೆ ಕಾಮೆಂಟ್‌ಗಳಿಗೆ ಸಾಕ್ಷಿಯಾಗ್ತಾ ಇದೆ. ಜೊತೆಗೆ ಈ ಬಗ್ಗೆ ಸೀರಿಯಸ್ ಆಗಿಯೂ ಒಂದಿಷ್ಟು ಜನ ಕಾಮೆಂಟ್ ಮಾಡಿದ್ದಾರೆ. ಹಾಗೆ ನೋಡಿದರೆ ಇದು ಒಂದು ಫಂಕ್ಷನ್‌ನ ಕ್ಲಿಪ್ಪಿಂಗ್. ಬಹಳ ವರ್ಷ ಹಿಂದಿನದು ಅನಿಸುತ್ತೆ. ಬಹುಶಃ ರಾಣಿ ನಟಿಸಿರೋ 'ಕಭಿ ಖುಷಿ ಕಭಿ ಗಮ್' ಸಿನಿಮಾದ್ದಿರಬೇಕು. ಇದರಲ್ಲಿ ರಾಣಿ ಮುಖರ್ಜಿ ಅಚ್ಚ ಸಂಪ್ರದಾಯಸ್ಥ ಭಾರತೀಯ ನಾರಿಯಂತೆ ಅಲಂಕರಿಸಿಕೊಂಡು ಕೂತಿದ್ದಾರೆ. ಪಕ್ಕ ಜಯಾ ಬಚ್ಚನ್ ಇದ್ದಾರೆ. ರಾಣಿ ಹಾಗೂ ಜಯಾ ಇಬ್ಬರೂ ಅಕ್ಕ ಪಕ್ಕ ಕೂತು ಮಾತನಾಡುವ ಬದಲಿಗೆ ಮೊಬೈಲಿನಲ್ಲಿ ಬ್ಯುಸಿ ಆಗಿದ್ದಾರೆ. ಹಾಗಂತ ಇವರ ನಡುವೆ ವಿರಸ ಗಿರಸ ಏನೂ ಇದ್ದಂಗಿಲ್ಲ.

ಬಾಡಿ ಲ್ಯಾಂಗ್ವೇಜ್ ನೋಡಿದರೆ ಇಬ್ಬರೂ ಫ್ಲೆಂಡ್ಲಿ ಆಗಿರೋದು ಕಾಣಿಸ್ತಿದೆ. ಆದರೆ ಪ್ಲಾಬ್ಲೆಂ ಆಗಿರೋದು ರಾಣಿಯ ಒಂದು ಬಾಡಿ ಲ್ಯಾಂಗ್ಬೇಜ್ ನಲ್ಲಿ. ಇದನ್ನು ಆಚೆ ಪ್ರಜ್ಞಾಪೂರ್ವಕವಾಗಿ ಮಾಡಿದ್ದಾರೋ ಇಲ್ವೋ ಗೊತ್ತಿಲ್ಲ, ಆದರೆ ಇದು ನೆಟ್ಟಿಗರಿಗೆ ಬೇರೆ ರೀತಿ ಕಮ್ಯೂನಿಕೇಟ್ ಆಗಿದೆ. ಅದಕ್ಕವರು ಸಖತ್ ಫನ್ನಿಯಾಗಿ ಡಬಲ್ ಮೀನಿಂಗ್ ಬರೋ ಹಾಗೆ ಪ್ರತಿಕ್ರಿಯೆ ನೀಡುತ್ತಿದ್ದಾರೆ.

Tap to resize

Latest Videos

undefined

ನಯನತಾರ ಮಕ್ಕಳ ದಾದಿಯರಿಗೂ ನಿರ್ಮಾಪಕರು ಕೊಡ್ಬೇಕಂತೆ ಸಂಬಳ …. ಮತ್ತೊಂದು ವಿವಾದದಲ್ಲಿ ಲೇಡಿ ಸೂಪರ್ ಸ್ಟಾರ್!

ಇದೀಗ ಮುಂಬೈ, ಕೊಲ್ಕೊತ್ತಾ ಕಡೆಗೆಲ್ಲ ನವರಾತ್ರಿಯ ರಂಗೇರಿದೆ. ಅನೇಕ ಬಾಲಿವುಡ್ ತಾರೆಯರು ದುರ್ಗಾ ಪೂಜೆಯಲ್ಲಿ ಭಾಗವಹಿಸುತ್ತಾರೆ. ತಾವೇ ಆಯೋಜಿಸುತ್ತಾರೆ. ಸದ್ಯ ರಾಣಿ ಮುಖರ್ಜಿ ಇನ್ನೊಬ್ಬ ಜನಪ್ರಿಯ ನಟಿ ಕಾಜೊಲ್ ಜೊತೆಗೂಡಿ ದುರ್ಗಾಪೂಜೋ ಪಂಡಲ್ ಅನ್ನು ಆಯೋಜಿಸುತ್ತಿದ್ದಾರೆ. ಮಾ ದುರ್ಗೆಯ ಆಶೀರ್ವಾದ ಪಡೆಯಲು ಹಲವಾರು ಸೆಲೆಬ್ರಿಟಿಗಳು ಪಂಡಲ್‌ಗೆ ಭೇಟಿ ನೀಡುತ್ತಿದ್ದಾರೆ. ಈ ವರ್ಷ, ಕಾಜೋಲ್ ಮತ್ತು ರಾಣಿ ಜುಹುದಲ್ಲಿರುವ ಎಸ್‌ಎನ್‌ಡಿಟಿ ಮಹಿಳಾ ವಿಶ್ವವಿದ್ಯಾಲಯದ ಬಳಿ ದುರ್ಗಾಪೂಜಾ ಪಂಡಲ್ ಅನ್ನು ಆಯೋಜಿಸಲಿದ್ದಾರೆ . ಪ್ರತಿ ವರ್ಷದಂತೆ, ರಾಣಿ ಮುಖರ್ಜಿ ಅವರು ಪಂದಳಕ್ಕೆ ಭೇಟಿ ನೀಡಿದ ವೀಡಿಯೋ ಇದೀಗ ಜನಪ್ರಿಯವಾಗುತ್ತಿದೆ. ರಾಣಿ ತನ್ನ ಮಗಳ ಜೊತೆಗೆ ತೀರಾ ಸಾಮಾನ್ಯರಂತೆ ಈ ಹಬ್ಬದಲ್ಲಿ ಭಾಗವಹಿಸಿದ್ದಾರೆ. ಅವರ ವರ್ತನೆಯಲ್ಲಿರುವ ಸರಳತೆ ಎಲ್ಲರಿಗೂ ಇಷ್ಟವಾಗುತ್ತಿದೆ. 

ಇನ್ನೊಂದೆಡೆ ಮೊನ್ನೆ ಮೊನ್ನೆ ನಡೆದ ಇಫಾ ಅವಾರ್ಡ್ ಫಂಕ್ಷನ್‌ನಲ್ಲಿ ರಾಣಿ ಮುಖರ್ಜಿ ಜೊತೆ ಶಾರೂಖ್ ಮೂವ್ ಒಂದು ಸಖತ್ ವೈರಲ್ ಆಗಿತ್ತು. ಈ ಪ್ರೋಗ್ರಾಂನಲ್ಲಿ ರಾಣಿ ಮುಖರ್ಜಿ ಸೀ-ಗ್ರೀನ್ ರೇಷ್ಮೆ ಸೀರೆ, ಮ್ಯಾಚಿಂಗ್ ಬ್ಲೌಸ್‌ನೊಂದಿಗೆ ತುಂಬಾ ಸುಂದರವಾಗಿ ಕಾಣುತ್ತಿದ್ದರು. ರಾಣಿ ಮುಖರ್ಜಿ ಅವರು ಕರಣ್ ಜೋಹರ್ ಅವರನ್ನು ವೇದಿಕೆಯ ಮೇಲೆ ತಬ್ಬಿಕೊಂಡು ವಿಶ್ ಮಾಡಿದ್ರು. ಶಾರುಖ್ ಖಾನ್ , ನಟಿ ರಾಣಿ ಮುಖರ್ಜಿ ಸೀರೆಯ ಪಲ್ಲು ಹಿಡಿದು ಅವರನ್ನೇ ಫಾಲೋ ಮಾಡಿದ್ರು. ಸೀರೆ ಪಲ್ಲು ವೇದಿಕೆಯನ್ನು ಸಾರಿಸುತ್ತಿದ್ದನ್ನ ಕಂಡ ಶಾರುಖ್​ ರಾಣಿ ಸೀರೆ ಪಲ್ಲು ಹಿಡಿದುಕೊಂಡಿದ್ರು. ಶಾರುಖ್ ಖಾನ್‌ ಮಾಡಿರೋ ಈ ತಮಾಷೆ ಕಂಡು ನಟಿ ರಾಣಿ ಮುಖರ್ಜಿ ನಕ್ಕರು. ವಿಜೇತರ ಹೆಸರನ್ನು ಘೋಷಿಸಲು ಮೈಕ್ ಬಳಿ ತಲುಪಿದ್ರು. ನಂತರ ಶಾರುಖ್ ತನ್ನ ಸೀರೆಯ ಪಲ್ಲುವನ್ನು ಬಿಟ್ರು.

ಸನ್ನಿ ಲಿಯೋನ್‌ಗಿಂತ ಮುಂಚೆಯೇ ವರ್ಜಿನಿಟಿ ಕಳೆದುಕೊಂಡಿದ್ದರಂತೆ ಈ ಬಾಲಿವುಡ್ ನಟಿ!

ಆದರೆ ಈಗ ಹೇಳೋಕೆ ಹೊರಟಿರೋ ವಿಚಾರ ಅದಲ್ಲ. ಇತ್ತೀಚೆಗೆ ವೈರಲ್ ಆಗ್ತಿರೋ ರಾಣಿ ಮುಖರ್ಜಿ ಅವರ ಫನ್ನಿ ವೀಡಿಯೋ ಬಗ್ಗೆ. ಇದರಲ್ಲಿ ರಾಣಿಯ ಸೆರಗು ಜಾರಿ ಎದೆ ಸೀಳಿನ ದರ್ಶನವಾಗುತ್ತೆ, ಇದನ್ನು ಗಮನಿಸೋ ಆಕೆ ಸೀರೆಯ ಸೆರಗನ್ನು ಮೇಲಕ್ಕೆಳೆದುಕೊಳ್ಳುತ್ತಾರೆ. ಪಕ್ಕದಲ್ಲಿರುವ ಜಯಾ ಬಚ್ಚನ್ ಇದನ್ನು ಗಮನಿಸೋದಿಲ್ಲ. ಆದರೆ ಪಾಪರಾಜಿಗಳ ಕ್ಯಾಮರಗಳು ಇದನ್ನು ಸೆರೆ ಹಿಡಿದಿವೆ. ಜೊತೆಗೆ ಬ್ಯಾಗ್ರೌಂಡ್‌ನಲ್ಲಿ ವಿಷಾದ ಗೀತೆ ಇದೆ. ಜಯಾ ಬಚ್ಚನ್‌ಗೆ ರಾಣಿಯನ್ನು ಸೊಸೆ ಮಾಡಿಕೊಳ್ಳೋ ಆಸೆ ಇತ್ತು. ಇದಕ್ಕೆ ಸರಿಯಾಗಿ ರಾಣಿ ಅಭಿಷೇಕ್ ಜೋಡಿಯೂ ಹಲವರಿಗೆ ಇಷ್ಟವಾಗಿತ್ತು. ಆದರೆ ವಿಧಿಲೀಲೆ ಅದು ಸಾಧ್ಯವಾಗಲಿಲ್ಲ. ಸದ್ಯ ರಾಣಿ ಸೆರಗು ಸರಿ ಮಾಡೋ ವೀಡಿಯೋ ಹರಿಯಬಿಟ್ಟು ಡಬಲ್ ಮೀನಿಂಗ್‌ನಲ್ಲಿ ಇದನ್ನು ತಿಳಿಸೋ ಪ್ರಯತ್ನದಲ್ಲಿದ್ದಾರೆ ನೆಟ್ಟಿಗರು.

 

click me!