ಬೆಂಗ್ಳೂರು ಡೇಸ್‌ನ ಕ್ಲೈಮ್ಯಾಕ್ಸ್‌ನ ರಿಯಲ್‌ ಸ್ಟಂಟ್ ಮಾಡಿದ್ದು ಓರ್ವ ಕನ್ನಡಿಗ: ಈಗ ಸಿನಿಮಾ ಹೀರೋ

By Anusha Kb  |  First Published Nov 29, 2023, 10:41 PM IST

ಬಹುತೇಕ ಸಿನಿಮಾಗಳಲ್ಲಿ ಹೀರೋಗಳು ಸ್ಟಂಟ್ ಮಾಡುವುದನ್ನು ತೋರಿಸುತ್ತಾರೆ. ಆದರೆ ನಿಜವಾಗಿಯೂ ಸ್ಟಂಟ್ ಮಾಡುವ ರಿಯಲ್ ಹೀರೋ ಮುಖವನ್ನು ಸಿನಿಮಾದಲ್ಲಿ ಮರೆ ಮಾಡಲಾಗುತ್ತದೆ. ಹೀರೋನನ್ನು ವೈಭವೀಕರಿಸಲಾಗುತ್ತದೆ. ಅದೇ ರೀತಿ ಬೆಂಗಳೂರು ಡೇಸ್ ಸಿನಿಮಾದಲ್ಲಿ ಸ್ಟಂಟ್ ಮಾಡಿದ್ದ ನಿಜವಾದ ಹೀರೋ ಈಗ ತಮ್ಮ ಚೊಚ್ಚಲ ಸಿನಿಮಾ ಮೂಲಕ ಸ್ಯಾಂಡಲ್‌ವುಡ್‌ನಲ್ಲಿ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ ಅವರು ಯಾರು ಇಲ್ಲಿದೆ ಡಿಟೇಲ್ಸ್..


ಬೆಂಗಳೂರು ಡೇಸ್‌ ಸಿನಿಮಾ ಯಾರಿಗೆ ಗೊತ್ತಿಲ್ಲ ಹೇಳಿ. 2014ರಲ್ಲಿ ತೆರೆಕಂಡ ಈ ಮಲೆಯಾಳಂ ಸಿನಿಮಾ, ಮಲೆಯಾಳಂ ಚಿತ್ರರಂಗಕ್ಕೆ ಒಂದು ಹೊಸತನ ಬ್ರೇಕ್‌ ನೀಡಿದಂತಹ ಸಿನಿಮಾ. ಈ ಸಿನಿಮಾವನ್ನು ಕೇವಲ ಮಲೆಯಾಳಿಗಳು ಮಾತ್ರವಲ್ಲದೇ ದಕ್ಷಿಣ ಭಾರತ ಉತ್ತರ ಭಾರತೀಯರು ನೋಡಿ ಮೆಚ್ಚಿಕೊಂಡಂತಹ ಸಿನಿಮಾವನ್ನು ಮಲೆಯಾಳಂನ ಖ್ಯಾತ  ನಿರ್ದೇಶಕಿ ಅಂಜಲಿ ಮೆನನ್‌ ನಿರ್ದೇಶನ ಮಾಡಿದ್ದರು. ಮೂವರು ಮಲೆಯಾಳಿ ಸೋದರ ಸಂಬಂಧಿಗಳು ಬೆಂಗಳೂರಿಗೆ ಬಂದು ಜೀವನ ನಡೆಸುವುದರ ಸುತ್ತ ಸುತ್ತುವ ಈ ಪುಟ್ಟ ಕತೆಯನ್ನು ಅದ್ಭುತವಾಗಿ ನಿರೂಪಿಸಿದ ಸಿನಿಮಾ ಇದು. ಈ ವಿಚಾರ ಈಗ ಯಾಕೆ ಅಂತೀರಾ? 

ಬಹುತೇಕ ಸಿನಿಮಾಗಳಲ್ಲಿ ಹೀರೋಗಳು ಸ್ಟಂಟ್ ಮಾಡುವುದನ್ನು ತೋರಿಸುತ್ತಾರೆ. ಆದರೆ ನಿಜವಾಗಿಯೂ ಸ್ಟಂಟ್ ಮಾಡುವ ರಿಯಲ್ ಹೀರೋ ಮುಖವನ್ನು ಸಿನಿಮಾದಲ್ಲಿ ಮರೆ ಮಾಡಲಾಗುತ್ತದೆ. ಹೀರೋನನ್ನು ವೈಭವೀಕರಿಸಲಾಗುತ್ತದೆ. ಈ ನಿಜವಾಗಿಯೂ ಸ್ಟಂಟ್ ಮಾಡುವ ರಿಯಲ್ ಹೀರೋಗಳು ಮಾಧ್ಯಮಗಳ ಮುಂದೆ ಬರುವುದೂ ಇಲ್ಲ, ಅವರನ್ನು ಯಾರೂ ಗುರುತಿಸುವುದು ಇಲ್ಲ. ತೆರೆಮರೆಯಲ್ಲಿಯೇ ಸಾಹಸಗಳನ್ನು ಮಾಡಿ ಅವರು ನೇಪಥ್ಯಕ್ಕೆ ಸರಿಯುತ್ತಾರೆ. ಸಾಹಸ ಪ್ರದರ್ಶನಗಳ ಕಾರಣಕ್ಕೆ ಪ್ರಸಿದ್ಧಿ ಪಡೆದ ಹಲವು  ಸಿನಿಮಾಗಳಲ್ಲಿ ಇಂತಹ ಘಟನೆಗಳು ಸಾಕಷ್ಟು ನಡೆದು ಹೋಗಿವೆ.  ಮುಖವಾಡ ಹಿಂದೆ ಕೆಲಸ ಮಾಡುವ ಯಾವುದೇ ಸಾಹಸ ಕಲಾವಿದ ತಾನು ಈ ಸಾಹಸ ಮಾಡಿದೆ ಎಂದು ಹೇಳಿಕೊಳ್ಳುವುದೂ ಇಲ್ಲ. ಅದೇ ರೀತಿ ಈ ಬೆಂಗಳೂರು ಡೇಸ್‌ನಲ್ಲಿಯೂ ಕೂಡ ರೇಸ್ ಸ್ಟಂಟ್ ಮಾಡಿದ್ದು, ಓರ್ವ ರಿಯಲ್ ಹೀರೋ. ಅವರು ನಮ್ಮ ಕನ್ನಡಿಗ. ಇದನ್ನು ಅವರೆಲ್ಲೂ ಹೇಳಿಕೊಂಡಿಲ್ಲ. ಆದರೆ ಅದೃಷ್ಟವಶಾತ್ ಅವರೊಂದು ಸಿನಿಮಾ ಮೂಲಕ ತೆರೆಮೇಲೆ ಬರುತ್ತಿದ್ದು, ಅವರು ಬೇರೆ ಯಾರು  ಅಲ್ಲ, ನಮ್ಮ ಹೆಮ್ಮೆಯ ಕನ್ನಡಿಗ ಅರವಿಂದ ಕೆಪಿ.

Tap to resize

Latest Videos

ಇನ್ವಿಟೇಶನ್ ಜತೆಯಲ್ಲೇ ಅನೌನ್ಸ್‌ಮೆಂಟ್ ಕೂಡ ಮಾಡುತ್ತೇವೆ: ದಿವ್ಯಾ ಉರುಡುಗ-ಅರವಿಂದ್ ಕೆಪಿ

ಹೌದು, ಇತ್ತೀಚಿಗಿನ ಸಂದರ್ಶನವೊಂದರಲ್ಲಿ  ಸ್ವತಃ ಸಿನಿಮಾದ ನಿರ್ದೇಶಕಿ ಅಂಜಲಿ ಮೆನನ್ ಅವರೇ ತಮ್ಮ ಬೆಂಗ್ಳೂರು ಡೇಸ್ ಸಿನಿಮಾದ  ಆ ದಿನಗಳ ಬಗ್ಗೆ ಮಾತನಾಡಿದ್ದಾರೆ.  ಅದರಲ್ಲಿ ರೇಸರ್‌ ಹಾಗೂ ಕನ್ನಡ ಬಿಗ್‌ಬಾಸ್ ರನ್ನರ್ ಖ್ಯಾತಿಯ (Bigg Boss runner fame) ಕೆಪಿ ಅರವಿಂದ್ ಪಾತ್ರ ನಿರ್ವಹಿಸಿದ್ದರ ಬಗ್ಗೆ ಹೇಳಿಕೊಂಡಿದ್ದಾರೆ.  ಬೆಂಗಳೂರು ಡೇಸ್ ಸಿನಿಮಾ ನಿರ್ಮಾಣದ ಸಮಯದಲ್ಲಿ ತಂಡದ ಬಳಿ ಸ್ವತಃ ಸಿನಿಮಾಗಾಗಿ ಒಂದು ಸೂಪರ್ ಫಾಸ್ಟ್ ಬೈಕ್ ರೇಸ್ ನಡೆಸುವಷ್ಟು ಹಣವಿರಲಿಲ್ಲವಂತೆ. ಈ ಬಗ್ಗೆ ಏನು ಮಾಡುವುದ ಎಂದು ಚಿಂತಿಸುತ್ತಿದ್ದಾಗ ಪುಣೆಯಲ್ಲಿ ನಿಜವಾಗಿಯೂ ಸೂಪರ್ ಫಾಸ್ಟ್ ಟ್ರ್ಯಾಕ್ ಬೈಕ್ ರೇಸಿಂಗ್ ನಡೆಯುತ್ತಿರುವ ಆಯೋಜನೆಯಾಗಿರುವ ಬಗ್ಗೆ ನಿರ್ದೇಶಕಿ ಅಂಜಲಿ ಮೆನನ್ ಅವರಿಗೆ ಮಾಹಿತಿ ಸಿಗುತ್ತದೆ. ಈ ಸಂದರ್ಭದಲ್ಲಿ ಸಿನಿಮಾದ ಅಜ್ಜುಸ್ ಪಾತ್ರಕ್ಕಾಗಿ ನಾವು ಆಗ ನ್ಯಾಷನಲ್ ಚಾಂಪಿಯನ್ ಆಗಿದ್ದ ಅರವಿಂದ್ ಕೆಪಿಯವರನ್ನು  ಈ ಸಿನಿಮಾಕ್ಕಾಗಿ ತಮ್ಮನ್ನು ಶೂಟ್ ಮಾಡುವುದಾಗಿ ಕೇಳುತ್ತೇವೆ.  ಅವರು ಇದಕ್ಕೆ ಒಪ್ಪಿಕೊಳ್ಳುತ್ತಾರೆ.

ಅದರಂತೆ ಪುಣೆಯಲ್ಲಿ ಈ ಸಿನಿಮಾದ ರೇಸ್ ಶೂಟ್‌ಗಾಗಿ ನಾವು ಆ ಸೂಪರ್ ಫಾಸ್ಟ್ ಟ್ರ್ಯಾಕ್ ಬೈಕ್ ರೇಸಿಂಗ್ ನಡೆಯುತ್ತಿರುವ ಸ್ಥಳಕ್ಕೆ ತೆರಳುತ್ತೇವೆ.  ನಾವು ಅರವಿಂದ್ ಕೆಪಿಯವರನ್ನೇ ಅಜ್ಜುವಿನ ಪಾತ್ರಕ್ಕಾಗಿ ಚೆನ್ನಾಗಿ ಶೂಟ್ ಮಾಡಬೇಕೆಂದು ನಿರ್ಧರಿಸಿ ನಮ್ಮ ಕ್ಯಾಮರಾ ಮ್ಯಾನ್‌ಗಳು ಅರವಿಂದ್ ಕೆಪಿಯವರನ್ನು ಚೆನ್ನಾಗಿಯೇ ಶೂಟ್ ಮಾಡುತ್ತಾರೆ. ಆದರೆ ದುರಾದೃಷ್ಟವಶಾತ್ ಮೊದಲ ರೇಸ್‌ನಲ್ಲಿ ಅರವಿಂದ್ ಕೆಪಿ (Arvind KP) ಸೋಲುತ್ತಾರೆ. ಇದರಿಂದ ನನ್ನಂತೂ ತುಂಬಾ ಚಿಂತೆಗೀಡಾದೆ ಅಯ್ಯೋ ದೇವರೆ  ನಮ್ಮ ಹೀರೋ ಇಲ್ಲಿ ಸೋತಿದ್ದಾನೆ ಇನ್ನೇನು ಮಾಡುವುದು ಎಂದು. ಆತನ ರೇಸ್ ಮೊದಲು  ಹಾಗೂ ಕೊನೆ ಎರಡು ರೌಂಡ್‌ಗಳಲ್ಲಿದ್ದವು. ನಮ್ಮ ಕ್ಯಾಮರಾ ತಂಡವೂ ಅದ್ಭುತವಾಗಿತ್ತು. ಅದ್ಭುತವಾಗಿ ಆ ದೃಶ್ಯಗಳನ್ನು ಸೆರೆ ಹಿಡಿದಿತ್ತು. ಆದರೆ ಕೊನೆಗೂ ಅದೃಷ್ಟ ನಮ್ಮ ಪರ ಇತ್ತು. ಕೊನೆಯ ರೇಸ್‌ನಲ್ಲಿ  ಅರವಿಂದ್ ಗೆದ್ದರು.  ಹೀಗಾಗಿ ಮೊದಲಿಗೆ ಸೋತು ಮತ್ತೆ ಗೆಲ್ಲುವ ಎರಡೂ  ದೃಶ್ಯಗಳು ನಮಗೆ ಸಿಕ್ಕಿತ್ತು ಎಂದು ಸ್ವತ ಈ ಸಿನಿಮಾದ ನಿರ್ದೇಶಕಿ ಅಂಜಲಿ ಹೇಳಿಕೊಂಡಿದ್ದಾರೆ. 

ಅರವಿಂದ್ ಜೊತೆ ರೊಮ್ಯಾಂಟಿಕ್ ಮೂಡ್‌ನಲ್ಲಿ ದಿವ್ಯಾ ಉರುಡುಗ: ಫೋಟೋ ವೈರಲ್

ಇನ್ನು ಅರವಿಂದ ಕೆಪಿಯವರ ಬಗ್ಗೆ ಹೇಳಬೇಕಾದರೆ ಪ್ರಸ್ತುತ ಅರ್ಧಬಂರ್ಧ ಪ್ರೇಮಕತೆ (Ardhabandha Premkate) ಸಿನಿಮಾ ಮೂಲಕ ಸ್ಯಾಂಡಲ್‌ವುಡ್‌ನಲ್ಲಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ ಈ ನಟ ಕಾಂ ರೇಸರ್, 17 ಬಾರಿ ರಾಷ್ಟ್ರೀಯ ರೇಸ್ ಚಾಂಪಿಯನ್ 1 ಇಂಟರ್‌ನ್ಯಾಷನಲ್ ರೇಸ್ ಚಾಂಪಿಯನ್ ಗರಿಯನ್ನು ಮುಡಿಗೇರಿಸಿಕೊಂಡಿರುವ ಅರವಿಂದ್ ಕೆಪಿ ಕನ್ನಡ ಬಿಗ್ಬಾಸ್‌ನಲ್ಲಿ ಕಾಣಿಸಿಕೊಂಡು ಗೆಲ್ಲುವ ಮೂಲಕ ಮತ್ತಷ್ಟು ಜನಪ್ರಿಯರಾಗಿದ್ದಾರೆ. ಈಗ ಗೆಳತಿ ದಿವ್ಯ ಉರುಡುಗ ಜೊತೆ ಅರ್ಧಂಬರ್ಧ ಪ್ರೇಮಕತೆ ಸಿನಿಮಾದಲ್ಲಿ ನಟಿಸಿದ್ದು, ಡಿಸೆಂಬರ್ 1 ರ ಶುಕ್ರವಾರ ಈ ಸಿನಿಮಾ ತೆರೆ ಕಾಣಲಿದೆ.

 
 
 
 
 
 
 
 
 
 
 
 
 
 
 

A post shared by DU✨ (@divya_uruduga)

 

click me!