Shooting Setನಲ್ಲಿ ಬೆತ್ತಲಾಗಿ ವಿಶ್ರಮಿಸಲು ಈ ನಟರಿಗೆ ಪ್ರತ್ಯೇಕ ವಾಹನ! ಶಾಕಿಂಗ್​ ವಿಷ್ಯ ರಿವೀಲ್​

Published : Sep 11, 2025, 07:58 PM IST
Vanity Van

ಸಾರಾಂಶ

ನಿರ್ಮಾಪಕ ಸಂಜಯ್ ಗುಪ್ತಾ ಕೆಲವು ಸ್ಟಾರ್​ಗಳು 6-11 ವ್ಯಾನಿಟಿ ವ್ಯಾನ್​ಗಳನ್ನು ಬಳಸುವುದನ್ನು ಬಹಿರಂಗಪಡಿಸಿದ್ದಾರೆ. ಒಬ್ಬ ನಟ ಬೆತ್ತಲೆಯಾಗಿ ಕುಳಿತುಕೊಳ್ಳಲು ಪ್ರತ್ಯೇಕ ವ್ಯಾನ್ ಬಳಸುತ್ತಾರಂತೆ.  ಈ ಬಗ್ಗೆ ಅವರು ಹೇಳಿದ್ದೇನು? 

ಶೂಟಿಂಗ್​ ಸಮಯದಲ್ಲಿ ಎಲ್ಲಾ ನಟ-ನಟಿಯರಿಗೂ ಅವರದ್ದೇ ಆದ ಪ್ರತ್ಯೇಕ ವಾಹನ (Vanity Van) ಇರುತ್ತದೆ. ನಟ-ನಟಿಯರು ಸಮಯ ಕಳೆಯಲು, ಮೇಕಪ್​ ಮಾಡಿಕೊಳ್ಳಲು ಇತರ ಕೆಲಸಗಳಿಗೆ ಇದು ನೆರವಾಗುತ್ತದೆ. ಕೆಲವೊಂದು ನಟರ ಈ ವ್ಯಾನಿಟಿ ವ್ಯಾನ್​ ಐಷಾರಾಮಿ ಬಂಗಲೆಯನ್ನೂ ಮೀರಿಸುವಂತಿದ್ದು, ಭರ್ಜರಿ ಸೌಲಭ್ಯಗಳು ಇರುತ್ತವೆ. ಆದರೆ ಇದೀಗ ಚಲನಚಿತ್ರ ನಿರ್ಮಾಪಕ ಸಂಜಯ್ ಗುಪ್ತಾ ಅವರು ಶಾಕಿಂಗ್​ ವಿಷಯವೊಂದನ್ನು ರಿವೀಲ್​ ಮಾಡಿದ್ದಾರೆ. ಕೆಲವು ನಟರು ಒಂದು ಅಥವಾ ಎರಡಲ್ಲ, 6 ವ್ಯಾನಿಟಿ ವ್ಯಾನ್‌ಗಳು ಮತ್ತು ಸಿಬ್ಬಂದಿಯ ವೆಚ್ಚವನ್ನು ನಿರ್ಮಾಪಕರ ಮೇಲೆ ಹಾಕುವ ಬಗ್ಗೆ ಮಾತನಾಡಿದ್ದಾರೆ. ಅದಕ್ಕಿಂತಲೂ ವಿಚಿತ್ರ ಎನ್ನಿಸಿದ್ದು, ಆ 6 ವ್ಯಾನಿಟಿಗಳಲ್ಲಿ ಏನು ಕೆಲಸ ನಡೆಯುತ್ತದೆ ಎನ್ನುವ ಬಗ್ಗೆ. ಅಷ್ಟೇ ಅಲ್ಲದೇ ಸ್ಟಾರ್​ ದಂಪತಿಯೊಬ್ಬರು (ಹೆಸರನ್ನು ಅವರು ಉಲ್ಲೇಖಿಸಿಲ್ಲ) 11 ವ್ಯಾನಿಟಿ ವ್ಯಾನ್‌ಗಳನ್ನು ಕೇಳುವ ಬಗ್ಗೆಯೂ ಕೋಪವನ್ನು ವ್ಯಕ್ತಪಡಿಸಿದ್ದಾರೆ.

ಬೆತ್ತಲಾಗಲು ಒಂದು ವ್ಯಾನಿಟಿ ವ್ಯಾನ್​

‘6 ವ್ಯಾನಿಟಿ ವ್ಯಾನ್‌ಗಳನ್ನು ಹೊಂದಿರುವ ಕೆಲವು ನಟರನ್ನು ನಾನು ಬಲ್ಲೆ. ಮೊದಲ ವ್ಯಾನ್ ಅವರ ವೈಯಕ್ತಿಕ ಸ್ಥಳ. ನಟರಿಗೆ ಆ ವ್ಯಾನ್​ ಬೆತ್ತಲೆಯಾಗಿ ಕುಳಿತುಕೊಳ್ಳಲು ಬೇಕಂತೆ. ಅದರ ಪಕ್ಕದಲ್ಲಿ ಎರಡನೇ ವ್ಯಾನ್. ಅಲ್ಲಿ ಅವರು ಮೇಕಪ್ ಮತ್ತು ಕೂದಲನ್ನು ರೆಡಿ ಮಾಡುತ್ತಾರೆ. ಮೂರನೇ ವ್ಯಾನ್ ಮತ್ತು 4ರಲ್ಲಿ ಜಿಮ್ ನಡೆಯುತ್ತದೆ. ಅದರ ತರಬೇತುದಾರ, ಸಹಾಯಕ, ವ್ಯಾನ್ ಚಾಲಕ ಮತ್ತು ವ್ಯಾನ್ ನಿರ್ವಹಣಾ ವ್ಯಕ್ತಿಗೆ ಪ್ರತ್ಯೇಕ ವ್ಯಾನ್​... ಹೀಗೆ ಸಾಗುತ್ತದೆ ಅವರ ದಿನಚರಿ ಎಂದಿದ್ದಾರೆ! ನಗ್ನವಾಗಿ ಕುಳಿತು ಏನು ಮಾಡುತ್ತಾರೆ ಎಂದು ಡಿಟೇಲ್​ ಆಗಿ ಹೇಳಲು ಅವರು ಒಪ್ಪಲಿಲ್ಲ!

ಇದನ್ನೂ ಓದಿ: ಮೊದಲ ಬಾರಿಗೆ ಡಿವೋರ್ಸ್​ ಕುರಿತು ಮಾತನಾಡಿದ ಬಾಲಿವುಡ್​ ನಟಿ ಕಾಜೋಲ್​! ಆಗಿದ್ದೇನು?

ಶೂಟಿಂಗ್​ ಸಮಯದಲ್ಲಿ ಎಲ್ಲಾ ನಟ-ನಟಿಯರಿಗೂ ಅವರದ್ದೇ ಆದ ಪ್ರತ್ಯೇಕ ವಾಹನ (Vanity Van) ಇರುತ್ತದೆ. ನಟ-ನಟಿಯರು ಸಮಯ ಕಳೆಯಲು, ಮೇಕಪ್​ ಮಾಡಿಕೊಳ್ಳಲು ಇತರ ಕೆಲಸಗಳಿಗೆ ಇದು ನೆರವಾಗುತ್ತದೆ. ಕೆಲವೊಂದು ನಟರ ಈ ವ್ಯಾನಿಟಿ ವ್ಯಾನ್​ ಐಷಾರಾಮಿ ಬಂಗಲೆಯನ್ನೂ ಮೀರಿಸುವಂತಿದ್ದು, ಭರ್ಜರಿ ಸೌಲಭ್ಯಗಳು ಇರುತ್ತವೆ. ಆದರೆ ಇದೀಗ ಚಲನಚಿತ್ರ ನಿರ್ಮಾಪಕ ಸಂಜಯ್ ಗುಪ್ತಾ ಅವರು ಶಾಕಿಂಗ್​ ವಿಷಯವೊಂದನ್ನು ರಿವೀಲ್​ ಮಾಡಿದ್ದಾರೆ. ಕೆಲವು ನಟರು ಒಂದು ಅಥವಾ ಎರಡಲ್ಲ, 6 ವ್ಯಾನಿಟಿ ವ್ಯಾನ್‌ಗಳು ಮತ್ತು ಸಿಬ್ಬಂದಿಯ ವೆಚ್ಚವನ್ನು ನಿರ್ಮಾಪಕರ ಮೇಲೆ ಹಾಕುವ ಬಗ್ಗೆ ಮಾತನಾಡಿದ್ದಾರೆ. ಅದಕ್ಕಿಂತಲೂ ವಿಚಿತ್ರ ಎನ್ನಿಸಿದ್ದು, ಆ 6 ವ್ಯಾನಿಟಿಗಳಲ್ಲಿ ಏನು ಕೆಲಸ ನಡೆಯುತ್ತದೆ ಎನ್ನುವ ಬಗ್ಗೆ. ಅಷ್ಟೇ ಅಲ್ಲದೇ ಸ್ಟಾರ್​ ದಂಪತಿಯೊಬ್ಬರು (ಹೆಸರನ್ನು ಅವರು ಉಲ್ಲೇಖಿಸಿಲ್ಲ) 11 ವ್ಯಾನಿಟಿ ವ್ಯಾನ್‌ಗಳನ್ನು ಕೇಳುವ ಬಗ್ಗೆಯೂ ಕೋಪವನ್ನು ವ್ಯಕ್ತಪಡಿಸಿದ್ದಾರೆ.

6 ಪ್ರತ್ಯೇಕ ವಾಹನ​

'6 ವ್ಯಾನಿಟಿ ವ್ಯಾನ್‌ಗಳನ್ನು ಹೊಂದಿರುವ ಕೆಲವು ನಟರನ್ನು ನಾನು ಬಲ್ಲೆ. ಮೊದಲ ವ್ಯಾನ್ ಅವರ ವೈಯಕ್ತಿಕ ಸ್ಥಳ. ನಟರಿಗೆ ಆ ವ್ಯಾನ್​ ಬೆತ್ತಲೆಯಾಗಿ ಕುಳಿತುಕೊಳ್ಳಲು ಬೇಕಂತೆ. ಅದರ ಪಕ್ಕದಲ್ಲಿ ಎರಡನೇ ವ್ಯಾನ್. ಅಲ್ಲಿ ಅವರು ಮೇಕಪ್ ಮತ್ತು ಕೂದಲನ್ನು ರೆಡಿ ಮಾಡುತ್ತಾರೆ. ಮೂರನೇ ವ್ಯಾನ್ ಮತ್ತು 4ರಲ್ಲಿ ಜಿಮ್ ನಡೆಯುತ್ತದೆ. ಅದರ ತರಬೇತುದಾರ, ಸಹಾಯಕ, ವ್ಯಾನ್ ಚಾಲಕ ಮತ್ತು ವ್ಯಾನ್ ನಿರ್ವಹಣಾ ವ್ಯಕ್ತಿಗೆ ಪ್ರತ್ಯೇಕ ವ್ಯಾನ್​... ಹೀಗೆ ಸಾಗುತ್ತದೆ ಅವರ ದಿನಚರಿ ಎಂದಿದ್ದಾರೆ! ನಗ್ನವಾಗಿ ಕುಳಿತು ಏನು ಮಾಡುತ್ತಾರೆ ಎಂದು ಡಿಟೇಲ್​ ಆಗಿ ಹೇಳಲು ಅವರು ಒಪ್ಪಲಿಲ್ಲ!

11 ವ್ಯಾನ್​ನಲ್ಲಿ ಬರುವ ಸ್ಟಾರ್​ ದಂಪತಿ

ಇತ್ತೀಚಿನ ದಿನಗಳಲ್ಲಿ ಕೆಲವು ತಾರೆಯರು ಏಳು ವ್ಯಾನಿಟಿ ವ್ಯಾನ್‌ಗಳವರೆಗೆ ಕೇಳುತ್ತಾರೆ. ಸ್ಟಾರ್​ ದಂಪತಿಯೊಬ್ಬರು ಸೆಟ್‌ಗೆ ಬರುವಾಗ ಅವರ ಜೊತೆ 11 ವ್ಯಾನ್‌ಗಳು ಬರುತ್ತವೆ. ಅವರು ಮನೆಯಲ್ಲಿ ಒಟ್ಟಿಗೆ ಊಟ ಮಾಡುತ್ತಾರೋ ಇಲ್ಲವೋ ಗೊತ್ತಿಲ್ಲ. ಆದರೆ ಅವರಿಗೆ ಸೆಟ್​ನಲ್ಲಿ ಊಟ ಮಾಡಲು ಪ್ರತ್ಯೇಕ ವ್ಯಾನ್​ ಸೌಲಭ್ಯ ಬೇಕು. ಅವರು ಎಷ್ಟೇ ತಂದುಕೊಳ್ಳಲಿ ಪರವಾಗಿಲ್ಲ. ಆದರೆ ಅದರ ಸಂಪೂರ್ಣ ಖರ್ಚನ್ನು ನಮ್ಮ ತಲೆಯ ಮೇಲೆ ಎತ್ತಿಹಾಕುತ್ತಾರೆ ಎಂದು ಬೇಸರದಿಂದ ನುಡಿದಿದ್ದಾರೆ. ಇದೇ ವೇಳೆ ಅವರು, ಅಮಿತಾಭ್​ ಬಚ್ಚನ್ (Amitabh Bachchan) ಇಂದಿಗೂ ತಮ್ಮ ಸಿಬ್ಬಂದಿಯ ವೆಚ್ಚವನ್ನು ಸ್ವತಃ ಭರಿಸುವ ಮತ್ತು ನಿರ್ಮಾಪಕರಿಗೆ ಬಿಲ್ ನೀಡದ ಏಕೈಕ ಚಲನಚಿತ್ರ ತಾರೆ ಎಂದು ಬಣ್ಣಿಸಿದ್ದಾರೆ.

ಇದನ್ನೂ ಓದಿ: Actress Meena: ಆತನ ಮದ್ವೆ ವಿಷ್ಯ ಕೇಳಿ ಹೃದಯ ಬಡಿತವೇ ನಿಂತೊಯ್ತೆಂದು ನಟಿ ಮೀನಾ: 48ರ ವಯಸ್ಸಲ್ಲಿ ಏನಿದು ಸುದ್ದಿ?

ನೋವು ತೋಡಿಕೊಂಡ ನಿರ್ಮಾಪಕ

ಇದೇ ವೇಳೆ, ಅಜಯ್ ದೇವಗನ್, ಹೃತಿಕ್ ರೋಷನ್ ಸೇರಿದಂತೆ ಕೆಲವು ಬಾಲಿವುಡ್ ತಾರೆಯರನ್ನು ಸಹ ಅವರು ಹೊಗಳಿದರು. ಸೈರಸ್ ಬ್ರೋಚಾ ಅವರ ಪಾಡ್‌ಕ್ಯಾಸ್ಟ್‌ನಲ್ಲಿ, ಸಂಜಯ್ ಗುಪ್ತಾ ಉದ್ಯಮದ ಬಗ್ಗೆ ಅನೇಕ ಆಶ್ಚರ್ಯಕರ ಕಥೆಗಳನ್ನು ಹಂಚಿಕೊಂಡಿದ್ದಾರೆ. ಅಂದಹಾಗೆ, ಸಂಜಯ್ ಗುಪ್ತಾ ಸುಮಾರು 40 ವರ್ಷಗಳಿಂದ ಈ ಉದ್ಯಮದಲ್ಲಿ ಕೆಲಸ ಮಾಡುತ್ತಿದ್ದಾರೆ. 1994 ರಲ್ಲಿ 'ಆತಿಶ್: ಫೀಲ್ ದಿ ಫೈರ್' ಚಿತ್ರದೊಂದಿಗೆ ನಿರ್ದೇಶನವನ್ನು ಪ್ರಾರಂಭಿಸಿದರು. ಇತ್ತೀಚಿನ ವರ್ಷಗಳಲ್ಲಿ, ವಿಶೇಷವಾಗಿ ಕಳೆದ ಐದು ವರ್ಷಗಳಲ್ಲಿ ಚಲನಚಿತ್ರೋದ್ಯಮದಲ್ಲಿ ಆರ್ಥಿಕ ಕುಸಿತದ ನಂತರ, ಉದ್ಯೋಗಿಗಳೊಂದಿಗೆ ಕೆಲಸ ಮಾಡುವ ಹೆಚ್ಚುತ್ತಿರುವ ವೆಚ್ಚವು ದೊಡ್ಡ ಚರ್ಚೆಯ ವಿಷಯವಾಗಿದೆ ಎಂದು ಅವರು ಹೇಳಿದರು. ಇಂಥ ಸಮಯದಲ್ಲಿಯೂ ಅಷ್ಟು ಖರ್ಚು ಮಾಡಿ ನಮ್ಮ ತಲೆಯ ಮೇಲೆ ಲಕ್ಷಾಂತರ ರೂಪಾಯಿ ಹಾಕುತ್ತಾರೆ ಎಂದು ನೋವು ತೋಡಿಕೊಂಡಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಅಖಂಡ 2 ಪ್ರೀಮಿಯರ್ ಶೋಗಳು ರದ್ದು, ನಿರ್ಮಾಪಕರಿಗೆ ಸಂಕಷ್ಟ.. ಬಾಲಯ್ಯ ಸಿನಿಮಾ ರಿಲೀಸ್ ಕಥೆಯೇನು?
ಮೋಹನ್ ಬಾಬು ಮಾಡಿದ ಸಣ್ಣ ತಪ್ಪಿನಿಂದ ಸೌಂದರ್ಯ ಪ್ರಾಣ ಕಳೆದುಕೊಂಡ್ರಾ? ನಿರ್ದೇಶಕರು ಹೇಳಿದ ಸತ್ಯವೇನು?