
ಮಾಜಿ ಮಿಸ್ ಯೂನಿವರ್ಸ್, ಬಾಲಿವುಡ್ ನಟಿ ಸುಷ್ಮಿತಾ ಸೇನ್ (Sushmita Sen) ರಿಲೆಷನ್‌ಶಿಪ್‌ಗಳ ಕಾರಣದಿಂದ ಸುದ್ದಿಯಾಗುವುದು ಹೊಸದೇನಲ್ಲ. ನಟಿ ಸುಷ್ಮಿತಾ ಸೇನ್ 49 ವರ್ಷಕ್ಕೆ ಕಾಲಿಟ್ಟರೂ, ಅವರು ಇನ್ನೂ ಒಂಟಿಯಾಗಿದ್ದಾರೆ. ಕೆಲ ದಿನಗಳ ಹಿಂದೆ ನಟಿ ಸಕತ್ ಸದ್ದು ಮಾಡಿದ್ದರು. ಅವರ ಮತ್ತು ಅವರ ಮಾಜಿ ಪ್ರೇಮಿ ರೋಹ್ಮನ್ ಶಾಲ್ (Rohman Shawl) ಅವರ ವೀಡಿಯೋ ಒಂದು ವೈರಲ್ ಆಗಿತ್ತು. (ರೋಹ್ಮನ್ ಶಾಲ್ಗೆ 32ರ ಪ್ರಾಯ. ಸುಷ್ಮಿತಾಗಿಂತಲೂ ರೋಹ್ಮನ್ 15 ವರ್ಷ ಕಿರಿಯರು) ಮತ್ತೆ ಇವರಿಬ್ಬರು ಡೇಟಿಂಗ್ ಮಾಡುತ್ತಿದ್ದಾರೆ ಎಂದು ವರದಿಯಾಗಿತ್ತು. ಸುದೀರ್ಘ ಸಂಬಂಧದ ನಂತರ, ಡಿಸೆಂಬರ್ 2021 ರಲ್ಲಿ ಸುಷ್ಮಿತಾ ಸೇನ್ ರೋಹ್ಮನ್ ಶಾಲ್ ಅವರೊಂದಿಗೆ ಬ್ರೇಕಪ್ ಆಗಿರವ ವಿಷಯ ಘೋಷಿಸಿದ್ದರು. ಅವರ ಬ್ರೇಕಪ್ ನಂತರವೂ ಇಬ್ಬರು ಸ್ನೇಹಿತರಾಗಿ ಮುಂದುವರೆದರು. ರೋಹ್ಮನ್ ಅವರು ಹೆಚ್ಚಾಗಿ ಸೇನ್ ಕುಟುಂಬದೊಂದಿಗೆ ಕಾಣಿಸಿಕೊಂಡರು. ನಂತರ ಮತ್ತೆ ಇಬ್ಬರು ಮತ್ತೆ ಒಂದಾಗಿರುವಂತೆ ವಿಡಿಯೋ ವೈರಲ್ ಆಗಿತ್ತು.
ಇದೀಗ ನಟಿ ಸಲಿಂಗಕಾ*ಮಿಯಾಗಿರುವ ರಿಕಿ ಮಾರ್ಟಿನ್ (Ricky Martin) ಜೊತೆ ಸಂಬಂಧದ ಬಗ್ಗೆ ಓಪನ್ ಆಗಿಯೇ ಹೇಳಿಕೊಂಡಿದ್ದಾರೆ. ಖ್ಯಾತ ಸಂಗೀತಗಾರರಾಗಿರುವ ರಿಕಿ ಮಾರ್ಟಿನ್ ಅವರು, ವೃತ್ತಿಪರವಾಗಿ ಉತ್ತಮ ಯಶಸ್ಸನ್ನು ಸಾಧಿಸಿದ್ದಾರೆ. ಆದರೆ ಅವರ ವೈಯಕ್ತಿಕ ಜೀವನವು ಯಾವಾಗಲೂ ಸುದ್ದಿಯಲ್ಲಿರುತ್ತದೆ. ಅವರ ವೃತ್ತಿಜೀವನದ ಆರಂಭದಿಂದಲೂ, ಅವರು ಯಾವಾಗಲೂ ಡೇಟಿಂಗ್ ವದಂತಿಗಳಿಂದ ಸುತ್ತುವರೆದೇ ಇರುತ್ತಾರೆ. ಅದು ಭಾರತಕ್ಕೂ ಹರಡಿದೆ. ರಿಕಿ ಸುಷ್ಮಿತಾ ಸೇನ್ ಅವರೊಂದಿಗೆ ಸಂಬಂಧ ಹೊಂದಿರುವುದಾಗಿಯೂ ಸದ್ದು ಮಾಡಿದೆ. ಈ ಜೋಡಿ ಮೊದಲು ಸಲಿಂಗಕಾ*ಮದ ಬಗ್ಗೆ ಮಾತನಾಡದಿದ್ದರೂ, ರಿಕಿ ತಾನು ಸಲಿಂಗಕಾ*ಮಿ ಎಂದು ಜಗತ್ತಿಗೆ ಘೋಷಿಸಿದ ನಂತರವೇ ಸುಷ್ಮಿತಾ ಕೂಡ ಅದರ ಬಗ್ಗೆ ಮಾತನಾಡಿದ್ದಾರೆ.
ನಟಿ ಒಮ್ಮೆ ಡಿಎನ್‌ಎ ಜೊತೆಗಿನ ಚಾಟ್‌ನಲ್ಲಿ, “ನಾನು ಅವನನ್ನು ತಿಳಿದಿರುವ ಎಲ್ಲಾ ಸಮಯದಲ್ಲೂ, ನಾನು ಅವನ ಬಗ್ಗೆ ತುಂಬಾ ಹೆಮ್ಮೆಪಡುತ್ತಿದ್ದೆ. ನಿಮ್ಮ ಸ್ವಂತ ಡಿಎನ್‌ಎಯನ್ನು ಸ್ವೀಕರಿಸಲು ಅಪಾರ ಧೈರ್ಯ ಬೇಕು. ಅವನು ಸಲಿಂಗಕಾ*ಮಿ ಎಂದು ನನಗೆ ತಿಳಿದಿತ್ತು. ಅವನಿಗೆ ಹೆಚ್ಚಿನ ಶಕ್ತಿ ಇದೆ. ನೀವು ಯಾರನ್ನು ಬಯಸುತ್ತೀರೋ ಅವರನ್ನು ಪ್ರೀತಿಸಲು ಸಾಧ್ಯವಾಗುವುದು ಅದ್ಭುತ ಭಾವನೆ ಮತ್ತು ಅದು ನಿಮಗಾಗಿ ಯಾರೂ ಮಾಡಲು ಸಾಧ್ಯವಾಗದ ಆಯ್ಕೆಯಾಗಿದೆ ಎನ್ನುವ ಮೂಲಕ ಸಂಬಂಧವನ್ನು ಒಪ್ಪಿಕೊಂಡಿದ್ದಾರೆ.
ಅಷ್ಟಕ್ಕೂ ನಟಿ, ಈ ಹಿಂದೆ ಐಪಿಎಲ್ ಸಂಸ್ಥಾಪಕ, ಉದ್ಯಮಿ ಲಲಿತ್ ಮೋದಿ (Lalith Modi) 59 ವಯಸ್ಸಿನಲ್ಲಿ ಮತ್ತೆ ಸುಷ್ಮಿತಾ ಜೊತೆ ಪ್ರೀತಿಯಲ್ಲಿ ಬಿದ್ದಿದ್ದಾರೆ ಎಂದು ಸದ್ದು ಮಾಡಿತ್ತು. ಲಲಿತ್ ಮೋದಿ ಕಳೆದ ವರ್ಷ ಸುಷ್ಮಿತಾ ಸೇನ್ ಅವರೊಂದಿಗಿನ ಕೆಲವು ಸಕತ್ ಕ್ಲೋಸ್ ಎನಿಸುವ ಚಿತ್ರಗಳನ್ನು ಪೋಸ್ಟ್ ಮಾಡಿ ಸಾಕಷ್ಟು ಸಂಚಲನ ಸೃಷ್ಟಿಸಿದ್ದರು. ಜೊತೆಗೆ ಸುಷ್ಮಿತಾ ಮೇಲಿನ ಪ್ರೀತಿಯನ್ನು ಹೇಳಿಕೊಂಡಿದ್ದರು. ಇನ್ನೇನು ಇವರಿಬ್ಬರ ಮದುವೆಯೇ ಆಗಿ ಹೋಗಿದೆ ಎಂದು ಸುದ್ದಿಯಾಗಿತ್ತು. ಈ ವಿಷಯದ ಬಗ್ಗೆ ನಟಿ ಮೌನ ವಹಿಸಿದ್ದರೂ, ಲಲಿತ್ ಮೋದಿ ಆ ಪೋಸ್ಟ್ ಅನ್ನು ಕೆಲ ದಿನ ಡಿಲೀಟ್ ಮಾಡದೇ ಇಟ್ಟುಕೊಂಡಿದ್ದರು. ಇದಾದ ಬಳಿಕ ನಟಿ ಸುಷ್ಮಿತಾ ಸೇನ್ ನಾನು ಸಿಂಗಲ್, ಒಂಟಿಯಾಗಿದ್ದೇನೆ ಎನ್ನುವ ಹೇಳಿಕೆ ಕೊಟ್ಟು ಸಕತ್ ಟ್ರೋಲ್ಗೂ ಒಳಗಾಗಿದ್ದರು.
ಇದನ್ನೂ ಓದಿ: Bollywood Stars: ಮೊದಲನೆಯವರಿಗೆ ಡಿವೋರ್ಸ್ ಕೊಡದೇ ಮತ್ತೊಬ್ಬರನ್ನು ಬುಟ್ಟಿಗೆ ಹಾಕಿಕೊಂಡೋರು ಇವ್ರೇ ನೋಡಿ!
ಕೆಲ ದಿನಗಳ ಹಿಂದೆ ಸಂದರ್ಶನದಲ್ಲಿ ಸುಷ್ಮಿತಾ ಅವರ ಅಭಿಮಾನಿಯೊಬ್ಬರು ಅವರ ಮದುವೆಯ ಬಗ್ಗೆ ಕೇಳಿದಾಗ, ಅವರು ತಮಾಷೆಯ ಉತ್ತರವನ್ನು ನೀಡಿದ್ದು ಅದು ವೈರಲ್ ಆಗಿತ್ತು. ಮದುವೆಯಾಗಲು ಸರಿಯಾದ ವ್ಯಕ್ತಿಯನ್ನು ಹುಡುಕುತ್ತಿರುವುದಾಗಿ ನಟಿ ಹೇಳಿದ್ದರು. ನಟಿ ಇತ್ತೀಚೆಗೆ ಇನ್ಸ್ಟಾಗ್ರಾಮ್ನಲ್ಲಿ ಲೈವ್ ಸೆಷನ್ನಲ್ಲಿ ತಮ್ಮ ಅಭಿಮಾನಿಗಳೊಂದಿಗೆ ಸಂವಹನ ನಡೆಸಿದರು. ಚಾಟ್ ಸಮಯದಲ್ಲಿ, ಒಬ್ಬ ಬಳಕೆದಾರರು ಅವರ ಮದುವೆ ಯೋಜನೆಗಳ ಬಗ್ಗೆ ಕೇಳಿದರು. ಇದಕ್ಕೆ ನಟಿ, 'ನಾನು ಮದುವೆಯಾಗಲು ಬಯಸುತ್ತೇನೆ' ಎಂದು ಹೇಳಿದರು. ನಾನು ಮದುವೆಗೆ ಯೋಗ್ಯ ವ್ಯಕ್ತಿಯನ್ನು ಹುಡುಕಬೇಕು. ಹೃದಯದ ಸಂಬಂಧ, ಸಂದೇಶವು ಹೃದಯವನ್ನು ತಲುಪಬೇಕು, ಆಗ ಮದುವೆಯಾಗುವೆ ಎಂದಿದ್ದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.