ಶಾರುಖ್‌ ಖಾನ್ ಈ ವಸ್ತು ಮೇಲೆ ಕೊಹ್ಲಿ ಪತ್ನಿ ಕಣ್ಣು, ಕದ್ದು ಮಾರ್ತರಂತೆ ಅನುಷ್ಕಾ !

Published : Sep 11, 2025, 01:16 PM IST
Anushka sharma  Shahrukh khan

ಸಾರಾಂಶ

Anushka - Shahrukh : ಬಾಲಿವುಡ್ ನಟಿ, ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾಗೆ ಶಾರುಖ್‌ ಖಾನ್ ಬಳಿ ಇರುವ ಕೆಲ ವಸ್ತುಗಳ ಮೇಲೆ ಕಣ್ಣಿದೆ. ಅದನ್ನು ಕದ್ದು ಮಾರಾಟ ಮಾಡೋ ಪ್ಲಾನ್ ಮಾಡಿದ್ದರಂತೆ ಅನುಷ್ಕಾ. 

ಬಾಲಿವುಡ್ ಸೂಪರ್ ಜೋಡಿಗಳಲ್ಲಿ ಶಾರುಖ್‌ ಖಾನ್ (Shahrukh Khan) ಹಾಗೂ ಅನುಷ್ಕಾ ಶರ್ಮಾ (Anushka Sharma) ಸೇರಿದ್ದಾರೆ. ಒಟ್ಟಿಗೆ ಮೂರ್ನಾಲ್ಕು ಚಿತ್ರಗಳಲ್ಲಿ ನಟಿಸಿದ್ದು, ಎಲ್ಲ ಚಿತ್ರ ಸೂಪರ್ ಹಿಟ್. ಮತ್ತೆ ಈ ಜೋಡಿಯನ್ನು ತೆರೆ ಮೇಲೆ ನೋಡೋಕೆ ಫ್ಯಾನ್ಸ್ ಕಾಯ್ತಿದ್ದಾರೆ. ಆದ್ರೆ ಅನುಷ್ಕಾ, ತಾಯ್ತನ ಎಂಜಾಯ್ ಮಾಡ್ತಿದ್ದು, ಸಂಪೂರ್ಣ ಸಿನಿಮಾದಿಂದ ದೂರ ಸರಿದಂತಿದೆ. ಫ್ಯಾನ್ಸ್ ತಮ್ಮ ಸ್ಟಾರ್ಸ್ ಪರ್ಸನಲ್ ಲೈಫ್ ತಿಳಿದುಕೊಳ್ಳೋಕೆ ಆಸಕ್ತರಾಗಿರ್ತಾರೆ. ಸಹ ನಟ ಅಥವಾ ನಟಿ ಜೊತೆ ಅವರ ಬಾಂಡಿಂಗ್ ಹೇಗಿದೆ, ಶೂಟಿಂಗ್ ವೇಳೆ ಏನೆಲ್ಲ ಮೋಜು – ಮಸ್ತಿ ಮಾಡ್ತಾರೆ ಎಂಬುದನ್ನು ತಿಳಿಯೋ ಇಂಟರೆಸ್ಟ್ ಇದ್ದೇ ಇರುತ್ತೆ. ಈಗ ಶಾರುಖ್‌ ಖಾನ್ ಅವರ ಯಾವ ವಸ್ತುವನ್ನು ಅನುಷ್ಕಾ ಕದಿಯೋಕೆ ಇಷ್ಟಪಡ್ತಾರೆ ಎನ್ನುವ ವಿಡಿಯೋ ಒಂದು ವೈರಲ್ ಆಗಿದೆ.

ಶಾರುಖ್ ಖಾನ್ ಈ ವಸ್ತು ಕಳ್ಳತನ ಮಾಡ್ತಿದ್ದರಂತೆ ಅನುಷ್ಕಾ ಶರ್ಮಾ : ಶಾರು‌ಖ್‌ ಖಾನ್ ಹಾಗೂ ಅನುಷ್ಕಾ ಶರ್ಮಾರ ವೈರಲ್ ಆಗಿರುವ ಈ ವಿಡಿಯೋ ಹಳೆಯದು. 2016ರಲ್ಲಿ ನಿರ್ಮಾಪಕ ಸಾಜಿದ್ ಖಾನ್ ಮತ್ತು ನಟ ರಿತೇಶ್ ದೇಶ್ಮುಖ್ ಅವರ 'ಯಾರೋನ್ ಕಿ ಬಾರಾತ್' ಚಾಟ್ ಶೋ ವಿಡಿಯೋ. ಇದ್ರಲ್ಲಿ ಸಾಜಿದ್ ಖಾನ್, ಅನುಷ್ಕಾಗೆ ಪ್ರಶ್ನೆ ಕೇಳ್ತಾರೆ. ಅನುಷ್ಕಾ, ಶಾರುಖ್‌ ಖಾನ್ ಯಾವ ವಸ್ತುವನ್ನು ಕದಿಯೋಕೆ ಇಷ್ಟಪಡ್ತಾರೆ ಅಂತ ಸಾಜಿದ್ ಕೇಳ್ತಾರೆ. ಅದಕ್ಕೆ ನಗುವ ಅನುಷ್ಕಾ, ಶಾರುಖ್ ರಿಂದ ಕದಿಯೋಕೆ ಸಾಕಷ್ಟು ವಸ್ತುವಿದೆ ಅಂತಾರೆ. 

ದಳಪತಿ ವಿಜಯ್-ಸಂಗೀತಾ ಡಿವೋರ್ಸ್ ವದಂತಿ; ಇನ್ನೊಬ್ಬ ನಟಿ ಹೆಸರು ಕೇಳಿಬರುತ್ತಿರೋದು ಯಾಕೆ?

ಬಾದ್ ಶಾ ಶಾರುಖ್‌ ಖಾನ್, ವಾಚ್ ಕದಿಯೋದಾಗಿ ಅನುಷ್ಕಾ ಹೇಳ್ತಾರೆ. ಬರೀ ಕದಿಯೋದಲ್ಲ ಅದನ್ನು ಮಾರಾಟ ಮಾಡೋದಾಗಿ ಅನುಷ್ಕಾ ಹೇಳ್ತಿದ್ದಂತೆ ಶಾರುಖ್‌ ನಗೋದಲ್ದೆ, ಇದು ಬ್ಯುಸಿನೆಸ್ ವುಮೆನ್ ಮೈಂಡ್ ಅಂತಾರೆ. ಈ ಮಧ್ಯೆ ಶಾರುಖ್‌ ಈಗಾಗ್ಲೇ ಒಂದೆರಡು ವಸ್ತು ಕದ್ದಿದ್ದಾರೆ ಎನ್ನುವ ಉತ್ತರ ನೀಡ್ತಾರೆ.

ಶಾರುಖ್‌ ಖಾನ್ ಮನ್ನತ್ ಮೇಲೆ ಅನುಷ್ಕಾ ಕಣ್ಣು : ಅನುಷ್ಕಾ ಲೀಸ್ಟ್ ಇಲ್ಲಿಗೆ ನಿಂತಿಲ್ಲ. ಅವರ ನೆಕ್ಸ್ಟ್ ಆನ್ಸರ್ ಮನ್ನತ್. ಶಾರುಖ್‌ ಖಾನ್ ಮನೆ ಮನ್ನತ್ ಕದಿಯೋದಾಗಿ ಅನುಷ್ಕಾ ಹೇಳ್ತಾರೆ. ಇನ್ನು ಮೂರನೇಯ ವಸ್ತು ಏನು ಎಂದಾಗ, ಸಾಕು, ಒಂದಾದ್ರೂ ಅವರಿಗೆ ಬಿಡ್ತೇನೆ ಎನ್ನುತ್ತಾರೆ ಅನುಷ್ಕಾ. ಅದಕ್ಕೆ ಉತ್ತರಿಸುವ ಶಾರುಖ್‌, ವ್ಯಾನಿಟಿ ವ್ಯಾನ್ ಬಿಟ್ಬಿಡಿ. ನಾನು ನನ್ನ ಹೆಂಡ್ತಿ, ಮಕ್ಕಳ ಜೊತೆ ಅಲ್ಲೇ ಇರ್ತೇನೆ ಅಂತಾರೆ. ಅದಕ್ಕೆ ಆಯ್ತು, ತಗೋಳಿ ಎನ್ನುವ ಅನುಷ್ಕಾ ಕ್ಯೂಟ್ನೆಸ್ ಫ್ಯಾನ್ಸ್ ಗೆ ಇಷ್ಟವಾಗಿದೆ. ವಿಡಿಯೋ ಹಳೆಯದಾದ್ರೂ ಈಗ್ಲೂ ನೋಡಿ ನಗ್ತೇವೆ ಅಂತ ಅನೇಕರು ಕಮೆಂಟ್ ಮಾಡಿದ್ದಾರೆ. ಅನುಷ್ಕಾ ಶರ್ಮಾ, ಇನೋಸೆನ್ಸ್ ಇಷ್ಟಪಟ್ಟಿದ್ದಾರೆ ಫ್ಯಾನ್ಸ್.

ವಿನಯ್ ರಾಜ್‌ ಕುಮಾರ್ ಜೊತೆ ಡೇಟ್ ಮಾಡ್ತೀದ್ದೀರಾ ಅಂತ ಕೇಳಿದ್ದಕ್ಕೆ ರಮ್ಯಾ ಉತ್ತರಿಸಿದ್ದು ಹೀಗೆ

ಶಾರುಖ್‌ ಖಾನ್ – ಅನುಷ್ಕಾ ಶರ್ಮಾ ಸಿನಿಮಾ : ಶಾರುಖ್‌ ಖಾನ್ ಜೊತೆ ಅನುಷ್ಕಾ ಶರ್ಮಾ, ರಬ್ ನೆ ಬನಾ ದಿ ಜೋಡಿಯಲ್ಲಿ ಮೊದಲ ಬಾರಿ ಕಾಣಿಸಿಕೊಂಡಿದ್ದರು. ಇದು ಅನುಷ್ಕಾ ಶರ್ಮಾ ಮೊದಲ ಬಾಲಿವುಡ್ ಸಿನಿಮಾ. ಇದಾದ್ಮೇಲೆ ಇಬ್ಬರೂ ಜಬ್ ಹ್ಯಾರಿ ಮೆಟ್ ಸೇಜಲ್ ಮತ್ತು ಜಬ್ ತಕ್ ಹೈ ಜಾನ್ನಂತಹ ಚಿತ್ರಗಳಲ್ಲಿ ಒಟ್ಟಿಗೆ ಕೆಲಸ ಮಾಡಿದ್ದಾರೆ. ಅನುಷ್ಕಾ, ಶಾರುಖ್‌ ಖಾನ್ ಜೊತೆ 2018ರಲ್ಲಿ ಝೀರೋ ಸಿನಿಮಾದಲ್ಲಿ ನಟಿಸಿದ್ರು. ಆ ನಂತ್ರ ಯಾವುದೇ ಸಿನಿಮಾ ಮಾಡಿಲ್ಲ. ಕ್ರಿಕೆಟರ್ ಹಾಗೂ ಪತಿ ವಿರಾಟ್ ಕೊಹ್ಲಿ, ಇಬ್ಬರು ಮಕ್ಕಳ ಜೊತೆ ಅನುಷ್ಕಾ ಲಂಡನ್ ನಲ್ಲಿ ನೆಲೆಸಿದ್ದಾರೆ. ಇನ್ನು ಶಾರುಕ್ ಖಾನ್ ಸದ್ಯ ಕಿಂಗ್ ಸಿನಿಮಾ ಶೂಟಿಂಗ್ ನಲ್ಲಿ ಬ್ಯುಸಿಯಿದ್ದಾರೆ.

 

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಶಾಕಿಂಗ್.. ಆ ನಟ-ನಟಿ ಈ ವಯಸ್ಸಿನಲ್ಲಿ ಮದುವೆ ಆಗೋದಾ?.. ವಿಡಿಯೋ ನೋಡಿ ನೆಟ್ಟಿಗರ ತಲೆ ಗಿರಗಿರ..!
ರಾಜಮೌಳಿ-ಜೇಮ್ಸ್ ಕ್ಯಾಮರೂನ್ ಹೊಸ ಹೆಜ್ಜೆ, ನಟ ಮಹೇಶ್ ಬಾಬುಗೆ ಪ್ಯಾನ್ ವರ್ಲ್ಡ್ ಪಟ್ಟ..!