ವಯಸ್ಸಾದ ನಟರು ಹದಿಹರೆಯದ ನಟಿಯರ ಜೊತೆ ರೊಮಾನ್ಸ್ ಮಾಡುವ ನಡುವೆಯೇ ಅಪ್ಪ ಮತ್ತು ಮಗನ ಜೊತೆ ಲಿಪ್ಲಾಕ್ ಮಾಡಿದ ನಟಿಯರೂ ನಮ್ಮ ನಡುವೆ ಇದ್ದಾರೆ. ಅವರು ಇವರೇ ನೋಡಿ...
ದುಡ್ಡು ಕೊಟ್ಟರೆ ನಟ ಯಾರಾದರೂ ಸೈ, ಅವರ ಜೊತೆ ಎಂಥದ್ದೇ ದೃಶ್ಯಕ್ಕೂ ಇಂದಿನ ಬಹುತೇಕ ನಟಿಯರು ಸೈ ಎನಿಸಿಕೊಂಡಿದ್ದಾರೆ. 60-70 ವರ್ಷ ವಯಸ್ಸಾದ ನಟರ ಜೊತೆಗೂ ಈಗ ತಾನೇ ಸಿನಿಮಾಕ್ಕೆ ಎಂಟ್ರಿ ಕೊಡುವ 20-22 ವರ್ಷಗಳ ನಟಿಯರು ಲಿಪ್ಲಾಕ್, ಇಂಟಿಮೇಟ್ ಸೀನ್ ಸೇರಿದಂತೆ ಎಲ್ಲಾ ಪರಿಯ ರೊಮಾನ್ಸ್ ಸೀನ್ಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಚಿತ್ರರಂಗದಲ್ಲಿ ತಳವೂರಬೇಕಾದರೆ ಇದಾಗಲೇ ಸ್ಟಾರ್ ಪಟ್ಟ ಗಳಿಸಿರೋ ನಟರ ಜೊತೆ ಇಂಥ ದೃಶ್ಯಗಳಲ್ಲಿ ಕಾಣಿಸಿಕೊಳ್ಳುವ ಅನಿವಾರ್ಯತೆಯೂ ಇಂದಿನ ಹೆಚ್ಚಿನ ನಟಿಯರಿಗೆ ಇದೆ. ಕೆಲವೊಬ್ಬರು ನಟ-ನಟಿಯರು ಮಾತ್ರ ಟ್ರೋಲ್ ಆಗುವುದು ಬಿಟ್ಟರೆ, ಸಿನಿ ಪ್ರಿಯರಿಗೆ, ಸ್ಟಾರ್ ನಟರ ಅಭಿಮಾನಿಗಳಿಗೆ ಎಲ್ಲವೂ ಚೆಂದವೇ.
ನಾಯಕಿ-ನಾಯಕನ ಪಾತ್ರ ಮಾಡುತ್ತಿದ್ದ ಸ್ಟಾರ್ ನಟ-ನಟಿಯರು ಕೆಲವೇ ವರ್ಷಗಳಲ್ಲಿ ಅಮ್ಮ-ಮಗನ ದೃಶ್ಯಗಳಲ್ಲಿ ಕಾಣಿಸಿಕೊಂಡಿರೋ ಕೆಲವು ಉದಾಹರಣೆಗಳು ಇವೆ. ಏಕೆಂದರೆ ನಟಿಯರಿಗೆ ಸ್ವಲ್ಪ ವಯಸ್ಸಾದ ಬಳಿಕ ಅವರಿಗೆ ಅಮ್ಮನ ರೋಲ್ ಸಿಕ್ಕರೆ, ಸ್ಟಾರ್ ಎನಿಸಿಕೊಂಡಿರೋ ನಟರು 60ರ ಮೇಲಾದರೂ ಅವರು ನಾಯಕನ ಪಟ್ಟವನ್ನು ಬಿಟ್ಟುಕೊಡುವುದಿಲ್ಲ ಎನ್ನುವುದು ಬಹಿರಂಗ ಸತ್ಯವೇ. ಆದರೆ ಇದಕ್ಕೆ ವಿರುದ್ಧ ಎಂಬಂತೆ ಕೆಲವು ನಟಿಯರು ಅಪ್ಪ-ಮಗ ಇಬ್ಬರ ಜೊತೆಯೂ ರೊಮಾನ್ಸ್ ಮಾಡಿರೋ ಉದಾಹರಣೆಗಳು ಬಾಲಿವುಡ್ನಲ್ಲಿ ಕಾಣಸಿಗುತ್ತದೆ. ಹೌದು. ಇಂಥ ಅಪರೂಪದ ಕೆಲವು ಬಾಲಿವುಡ್ ನಾಯಕಿಯರ ಪರಿಚಯ ಇಲ್ಲಿದೆ.
ದೀಪಿಕಾ-ರಣವೀರ್ಗೆ ಗಂಡು ಮಗು, ಅಲ್ಲಲ್ಲಾ ಅದು ಹೆಣ್ಣು... ಮಗುವಿನ ಅಸಲಿಯತ್ತು ತಿಳಿದು ಫ್ಯಾನ್ಸ್ ಶಾಕ್!
80-90ರ ದಶಕದಲ್ಲಿ ಬಾಲಿವುಡ್ ಎಂದರೆ ಅದು ಕೇವಲ ಶ್ರೀದೇವಿ ಮತ್ತು ಜಯಪ್ರದಾ ಎನ್ನುತ್ತಿದ್ದ ಕಾಲವದು. ಆದರೆ ಕುತೂಹಲ ಎಂಬಂತೆ ಈ ಇಬ್ಬರು ನಟಿಯರು ಅಪ್ಪ ಮತ್ತು ಮಗನ ಜೊತೆ ನಾಯಕಿಯಾಗಿ ತೆರೆ ಹಂಚಿಕೊಂಡಿದ್ದಾರೆ.
ನಟಿ ಶ್ರೀದೇವಿ ಅವರು ಧರ್ಮೇಂದ್ರ ಅವರೊಂದಿಗೆ ‘ನಾಕಾಬಂದಿ’ ಚಿತ್ರದಲ್ಲಿ ಕಾಣಿಸಿಕೊಂಡಿದ್ದರೆ, ಅವರು ಸನ್ನಿ ಡಿಯೋಲ್ ಅವರೊಂದಿಗೆ ‘ನಿಗಾಹೆನ್’ ಚಿತ್ರದಲ್ಲಿ ಕೆಲಸ ಮಾಡಿದರು. ನಟಿ ಕಿಮಿ ಕಾಟ್ಕರ್ ಕೂಡ ಈ ತಂದೆ-ಮಗ ಜೋಡಿಯೊಂದಿಗೆ ರೊಮ್ಯಾನ್ಸ್ ಮಾಡಿದ್ದಾರೆ. ಕಿಮಿ ಕಾಟ್ಕರ್ (Kimi Katkar) 'ಹಮ್ಲಾ' ಚಿತ್ರದಲ್ಲಿ ಧರ್ಮೇಂದ್ರ ಎದುರು ಕಾಣಿಸಿಕೊಂಡರು ಮತ್ತು ಕಿಮಿ 'ವರ್ದಿ' ಚಿತ್ರದಲ್ಲಿ ಸನ್ನಿ ಡಿಯೋಲ್‌ಗೆ ರೊಮ್ಯಾನ್ಸ್ ಮಾಡಿದರು. ಅದೇ ರೀತಿ, ಜಯಪ್ರದಾ ಅವರು ಧರ್ಮೇಂದ್ರ ಅವರೊಂದಿಗೆ 'ಕುಂದನ್' ಚಿತ್ರದಲ್ಲಿ ಕಾಣಿಸಿಕೊಂಡರು, ಅವರು ನಟ ಸನ್ನಿ ಡಿಯೋಲ್ ಅವರೊಂದಿಗೆ 'ವೀರ್ತಾ' ಚಿತ್ರದಲ್ಲಿ ಕೆಲಸ ಮಾಡಿದರು.
ಇನ್ನು ನಟಿ ಪೂನಂ ಧಿಲ್ಲೋನ್ (Poonam Dhiloon) 1988 ರ ಚಲನಚಿತ್ರ 'ಸೋನೆ ಪೆ ಸುಹಾಗಾ' ಚಿತ್ರದಲ್ಲಿ ಧರ್ಮೇಂದ್ರ ಎದುರು ಕಾಣಿಸಿಕೊಂಡರು, ಅವರು ಸನ್ನಿ ಡಿಯೋಲ್ ಜೊತೆ 'ಸೋಹ್ನಿ ಮಹಿವಾಲ್' ನಲ್ಲಿ ಕೆಲಸ ಮಾಡಿದರು. ಡಿಂಪಲ್ ಕಪಾಡಿಯಾ ಅವರು ಸನ್ನಿ ಡಿಯೋಲ್ ಅವರೊಂದಿಗೆ 'ಅರ್ಜುನ್', 'ಗುಣಾ' ಮತ್ತು 'ಆಗ್ ಕಾ ಗೋಲಾ' ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ, ಆದರೆ ಅವರು ನಟ ಧರ್ಮೇಂದ್ರ ಅವರೊಂದಿಗೆ 'ಬಂಟ್ವಾರ' ಮತ್ತು 'ಶೆಹಜಾದಾ' ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ನಟಿ ಅಮೃತಾ ಸಿಂಗ್ (Amrutha Singh) ಅವರು ಧರ್ಮೇಂದ್ರ ಅವರೊಂದಿಗೆ 'ಸಚೈ ಕಿ ತಕ್ತ್' ಚಿತ್ರದಲ್ಲಿ ಕೆಲಸ ಮಾಡಿದ್ದರೆ, ಅವರು ಸನ್ನಿ ಡಿಯೋಲ್ ಜೊತೆ 'ಬೇತಾಬ್' ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ನಟಿ ಅಮೃತಾ ಸಿಂಗ್ (Amrutha Singh) ಅವರು ಧರ್ಮೇಂದ್ರ ಅವರೊಂದಿಗೆ 'ಸಚೈ ಕಿ ತಕ್ತ್' ಚಿತ್ರದಲ್ಲಿ ಕೆಲಸ ಮಾಡಿದ್ದರೆ, ಅವರು ಸನ್ನಿ ಡಿಯೋಲ್ ಜೊತೆ 'ಬೇತಾಬ್' ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಕಿಮಿ ಕಾಟ್ಕರ್ (Kimi Katkar) 'ಹಮ್ಲಾ' ಚಿತ್ರದಲ್ಲಿ ಧರ್ಮೇಂದ್ರ ಎದುರು ಕಾಣಿಸಿಕೊಂಡರು ಮತ್ತು ಕಿಮಿ 'ವರ್ದಿ' ಚಿತ್ರದಲ್ಲಿ ಸನ್ನಿ ಡಿಯೋಲ್‌ಗೆ ರೊಮ್ಯಾನ್ಸ್ ಮಾಡಿದರು.
ವಿನೇಶ್ ಫೋಗಟ್ ವಿಷ್ಯದಲ್ಲಿ ಈ ಅಪಹಾಸ್ಯ ಪ್ರಕಾಶ್ ರಾಜ್ಗೆ ಬೇಕಿತ್ತಾ? ಕೋಲು ಕೊಟ್ಟು ಬಾರಿಸಿಕೊಂಡ ನಟ!