ಅರೆರೆ! ಬದಲಾಗಿದ್ದಾರೆ ರಾಖಿ ಸಾವಂತ್, ಇದೇ ಫಸ್ಟ್ ಟೈಮ್ ಎಲ್ರೂ ಹೊಗಳುತ್ತಿದ್ದಾರೆ!

By Roopa Hegde  |  First Published Aug 8, 2024, 4:27 PM IST

ರಾಖಿ ಸಾವಂತ್ ಇದ್ದಲ್ಲಿ ಡ್ರಾಮಾ ಇದ್ದಿದ್ದೆ. ಹಾಗಾಗಿಯೇ ಡ್ರಾಮಾ ಕ್ವೀನ್ ಅಂತಲೇ ಹೆಸರು ಪಡೆದಿರುವ ರಾಖಿ ಈಗ ಮತ್ತೊಂದು ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಅವರ ಸ್ಟೈಲ್ ನೆಟ್ಟಿಗರಿಗೆ ಖುಷಿ ನೀಡಿದೆ.
 


ಡ್ರಾಮಾ ಕ್ವೀನ್ ರಾಖಿ ಸಾವಂತ್ (Drama Queen Rakhi Sawanth) ಸದಾ ಒಂದಿಲ್ಲೊಂದು ವಿಷ್ಯಕ್ಕೆ ಸುದ್ದಿಯಲ್ಲಿರ್ತಾರೆ. ಈಗ ರಾಖಿ ಸಾವಂತ್ ಹೊಸ ವಿಡಿಯೋ ಒಂದು ವೈರಲ್ ಆಗಿದೆ. ಅದ್ರಲ್ಲಿ ಇವರು ರಾಖಿನಾ ಎಂತ ಪ್ರಶ್ನೆ ಬರುವಷ್ಟು ಡಿಫರೆಂಟ್ ಆಗಿ ರಾಖಿ ಸಾವಂತ್ ಕಾಣ್ತಿದ್ದಾರೆ. ಸದಾ ಬೋಲ್ಡ್ ಡ್ರೆಸ್, ಚಿತ್ರ ವಿಚಿತ್ರ ಹೇರ್ ಸ್ಟೈಲ್ ನಲ್ಲಿ ಕಾಣಿಸಿಕೊಳ್ತಿದ್ದ ರಾಖಿ ಸಾವಂತ್ ಈ ಬಾರಿ ತುಂಬಾ ಚೇಂಜ್ ಆಗಿ ಚೂಡಿದಾರದಲ್ಲಿ ಕಾಣಿಸಿಕೊಂಡಿದ್ದಾರೆ. ಸಂಪೂರ್ಣ ಸಾಂಪ್ರದಾಯಿಕ ಉಡುಗೊರೆಯಲ್ಲಿರುವ ರಾಖಿಯನ್ನು ಗುರುತಿಸೋದೆ ಕಷ್ಟ. 

ಕೈನಲ್ಲಿ ಮೊಬೈಲ್ ಹಿಡಿದು ಹೊರಗೆ ಬಂದ ರಾಖಿ ಸಾವಂತ್ (Rakhi Sawant), ಪಾಪರಾಜಿಗಳನ್ನು ನೋಡಿ ಶಾಕ್ ಆಗ್ತಾರೆ. ಎಲ್ಲ ಕಡೆ ನೀವು ಬರ್ತಿರಾ ಅಲ್ವಾ ಅಂತ ಪ್ರಶ್ನೆ ಮಾಡ್ತಾರೆ. ಅಲ್ದೆ ನಾನು ಮೊದಲು ಹೊರಗಿನವಳಾಗಿದ್ದೆ, ಈಗ ಮನೆಯವಳಾಗಿದ್ದೇನೆ ಎನ್ನುವ ರಾಖಿ, ಈ ಡ್ರೆಸ್ (Dress) ನಲ್ಲಿ ನನ್ನನ್ನು ಗುರುತಿಸಿದ್ರಾ ಅಂತಾರೆ. ಇನ್ನು ಪಾಪರಾಜಿ (Paparazzi) ಗಳ ಕಾಲೆಳೆದ ರಾಖಿ, ಪಾಪರಾಜಿ, ಮಮ್ಮಿರಾಜಿ ಇನ್ನೇನ್ ಇದ್ಯೋ ಎನ್ನುತ್ತಲೇ ತಾವು ಮೇಕಪ್ ಇಲ್ದೆ ಬಂದಿದ್ದೇನೆ ಅಂತಾ ಸ್ವಲ್ಪ ಓವರ್ ಆಕ್ಟ್ ಮಾಡಿದ್ದಾರೆ. ಇದನ್ನು ಕೇಳಿದ ಪಾಪರಾಜಿಗಳು, ನಿಮಗ್ಯಾಕೆ ಮೇಕಪ್ ಅಂತ ಕಾಲೆಳೆದಿದ್ದಾರೆ. ಅದಕ್ಕೆ ಕ್ಯೂಟ್ ಆಗಿ ರಿಯಾಕ್ಷನ್ ನೀಡಿದ್ದಾರೆ ರಾಖಿ ಸಾವಂತ್.

Tap to resize

Latest Videos

ಕೊನೆಗೂ ಪುಟ್ಟ ತಂಗಿಯ ಮುಖ ತೋರಿಸಿದ ಭವ್ಯಾ ಗೌಡ; ವಯಸ್ಸಿನ ಅಂತರ ನೋಡಿ ಕಾಲೆಳೆದ ನೆಟ್ಟಿಗರು!

ಪೀಚ್ ಕಲರ್ ಸಲ್ವಾರ್ ಧರಿಸಿದ್ದ ರಾಖಿ ಡ್ರೆಸ್ ಮೇಲೆ ಕುಂದನ್ ಇದೆ. ಅದಕ್ಕೆ ಮ್ಯಾಚ್ ಮಾಡಲು ರಾಖಿ ವೈಟ್ ಕಲರ್ ಪಲಾಝೊ ಧರಿಸಿದ್ರು. ಕೂದಲನ್ನು ಇಳಿಬಿಟ್ಟಿದ್ದ ರಾಖಿ ಸಾವಂತ್ ಈ ಡ್ರೆಸ್ ನಲ್ಲಿ ಸುಂದರವಾಗಿ ಕಾಣ್ತಿದ್ರು. ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ವೈರಲ್ ಆಗಿದೆ. ಬಳಕೆದಾರರು ರಾಖಿ ಹೊಸ ಲುಕ್ ಇಷ್ಟಪಟ್ಟಿದ್ದಾರೆ.

Viralbhayani ಇನ್ಸ್ಟಾಗ್ರಾಮ್ ಖಾತೆಯಲ್ಲಿ ರಾಖಿ ವಿಡಿಯೋ ಪೋಸ್ಟ್ ಆಗ್ತಿದ್ದಂತೆ ನೆಟ್ಟಿಗರ ಕಮೆಂಟ್ ಶುರುವಾಗಿದೆ. ರಾಖಿ ಸ್ಟೈಲ್ ಗೆ 44 ಸಾವಿರಕ್ಕಿಂತಲೂ ಹೆಚ್ಚು ಜನರು ಲೈಕ್ ಒತ್ತಿದ್ದಾರೆ. ಈ ಡ್ರೆಸ್ ನಲ್ಲಿ ರಾಖಿ ಚೆಂದ ಕಾಣ್ತಿದ್ದಾಲೆ ಎಂದು ಬಳಕೆದಾರರೊಬ್ಬರು ಕಮೆಂಟ್ ಮಾಡಿದ್ದಾರೆ. ಮೈತುಂಬ ಬಟ್ಟೆ ತೊಟ್ಟಿರುವ ರಾಖಿ ಸುಂದರವಾಗಿ ಕಾಣ್ತಿದ್ದಾರೆ ಎಂದು ಇನ್ನೊಬ್ಬರು ಕಮೆಂಟ್ ಮಾಡಿದ್ದಾರೆ. ಟ್ರೆಡಿಷನಲ್ ಡ್ರೆಸ್ ನಲ್ಲಿ ರಾಖಿ ತುಂಬಾ ಸುಂದರವಾಗಿ ಕಾಣ್ತಿದ್ದಾರೆ, ಇಂಥ ಡ್ರೆಸ್ ಹೆಚ್ಚಾಗಿ ಧರಿಸಿ ಅಂತಾ ಬಹುತೇಕ ನೆಟ್ಟಿಗರು ರಾಖಿ ಸಾವಂತ್ ಗೆ ಸಲಹೆ ನೀಡಿದ್ದಾರೆ.

ವಿತ್ ಔಟ್ ಮೇಕಪ್ ಎಂಬ ರಾಖಿ ಮಾತನ್ನು ಮಾತ್ರ ನೆಟ್ಟಗರು ನಂಬ್ತಿಲ್ಲ. ಮೀಡಿಯಾ ಮುಂದೆ ಡ್ರಾಮಾ ಮಾಡುವ ರಾಖಿ, ಮೇಕಪ್ ಮಾಡ್ಕೊಂಡು, ಮಾಡಿಲ್ಲ ಅಂತ ಸುಳ್ಳು ಹೇಳ್ತಿದ್ದಾರೆ ಎಂದು ನೆಟ್ಟಿಗರ ಸಂಖ್ಯೆ ಸಾಕಷ್ಟಿದೆ. ರಾಖಿ ಇಷ್ಟಪಡದ ಅನೇಕರು, ಇವತ್ತು ಫಸ್ಟ್ ಟೈಂ ನಿಮ್ಮನ್ನು ಇಷ್ಟಪಡ್ತಿದ್ದೇವೆ ಎಂದು ಕಮೆಂಟ್ ಮಾಡಿದ್ದಾರೆ.

ಫ್ಯಾಮಿಲಿ ಜೊತೆ ಥೈಲ್ಯಾಂಡ್ ಪ್ರವಾಸ: ನೆನಪುಗಳನ್ನ ಮೆಲುಕು ಹಾಕಿದ ಶ್ವೇತಾ ಚಂಗಪ್ಪ

ಸಾಮಾಜಿಕ ಜಾಲತಾಣದಲ್ಲಿ ರಾಖಿ ಸಾವಂತ್ ಸಕ್ರಿಯವಾಗಿದ್ದಾರೆ. ಆಗಾಗ ಒಂದಿಷ್ಟು ವಿಡಿಯೋ ಹಾಕಿ ಜನರ ಗಮನ ಸೆಳೆಯುವ ರಾಖಿ ಸಾವಂತ್, ಕೆಲ ದಿನಗಳ ಹಿಂದೆ ಬಿಗ್ ಬಾಸ್ ಒಟಿಟಿ 3 ಬಗ್ಗೆ ವಿಡಿಯೋ ಮಾಡಿದ್ದರು. ಅದ್ರಲ್ಲಿ ಯುಟ್ಯೂಬರ್ ಅರ್ಮಾನ್ ಮಲ್ಲಿಕ್ ಕಾಲೆಳೆದಿದ್ದ ರಾಖಿ ಸಾವಂತ್, ಪಾಯಲ್ ಪರ ಬ್ಯಾಟ್ ಬೀಸಿದ್ದಳು. ಬಿಗ್ ಬಾಸ್ ಗೆ ಹೋದ್ರೆ ಅರ್ಮಾನ್ ಮಲ್ಲಿಕ್ ಮೂರನೇ ಪತ್ನಿ ನಾನಾದ್ರೂ ಆಗ್ಬಹುದು ಎಂದಿದ್ದ ರಾಖಿ ವಿಡಿಯೋ ಸುದ್ದಿ ಮಾಡಿತ್ತು. ಕೆಲ ತಿಂಗಳ ಹಿಂದಷ್ಟೆ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ರಾಖಿ ಈಗ ಆರೋಗ್ಯವಾಗಿದ್ದಾರೆ. 

click me!