ನಟ ಪ್ರಭಾಸ್ ಅವರು ಶೂಟಿಂಗ್ ಸ್ಥಳದಲ್ಲಿ ಕೂಡ ಎಲ್ಲರೊಂದಿಗೆ ಸಹಜವಾಗಿ ಹೊಂದಿಕೊಳ್ಳುವ ವ್ಯಕ್ತಿ. ಅವರು ಅಲ್ಲಿ ಕೂಡ ಎಲ್ಲರೂ ಊಟ ಶುರು ಮಾಡಿದ ಮೇಲೆಯೇ ತಾವು ಶುರು ಮಾಡುತ್ತಾರೆ ಎಂದಿದ್ದಾರೆ ಹಲವು ಸಹಕಲಾವಿದರು. ಅಷ್ಟೇ ಅಲ್ಲ, ನಟ ಪ್ರಭಾಸ್ ಅವರು ತಾವೊಬ್ಬ ಸೂಪರ್ ಸ್ಟಾರ್ ಆಗಿದ್ದರೂ..
ನಟ ಡಾರ್ಲಿಂಗ್ ಪ್ರಭಾಸ್ (Darling Prabhas) ನ್ಯಾಷನಲ್ ಸ್ಟಾರ್ ನಟರಾಗಿ ಯಾವುದೋ ಕಾಲವಾಗಿದೆ. ಎಸ್‌ಎಸ್ ರಾಜಮೌಳಿ ನಿರ್ದೇಶನದ 'ಬಾಹುಬಲಿ' ಚಿತ್ರದ ಮೂಲಕ ಪ್ಯಾನ್ ಇಂಡಿಯಾ ಸ್ಟಾರ್ ನಟರಾಗಿರುವ ಪ್ರಭಾಸ್, ಸಲಾರ್ ಚಿತ್ರದ ಬಳಿಕ ಈಗ ಕಲ್ಕಿ ಮೂಲಕ ಮತ್ತೆ ಮಿಂಚುತ್ತಿರುವುದು ಗೊತ್ತೇ ಇದೆ. ಆದರೆ, ನಟ ಪ್ರಭಾಸ್ ಬಗ್ಗೆ ಗೊತ್ತಿಲ್ಲದಿರುವ ಒಂದು ಸಂಗತಿ ಇದೀಗ ರಿವೀಲ್ ಆಗಿದೆ. ಅದೇನು ನೋಡಿ..
ಹೌದು, ಇದೀಗ ಪ್ಯಾನ್ ಇಂಡಿಯಾ ಸ್ಟಾರ್ ಆಗಿರುವ ನಟ ಪ್ರಭಾಸ್ ಕೇರಳದ ವಯನಾಡಿನಲ್ಲಿ ನಡೆದ ದುರಂತಕ್ಕೆ ಪರಿಹಾರದ ನೆರವು ನೀಡಿದ್ದಾರೆ. ಈ ಘಟನೆಯಲ್ಲಿ ಸುಮಾರು 400 ಜನರು ಮೃತಪಟ್ಟಿದ್ದು, 150ಕ್ಕೂ ಅಧಿಕ ಮಂದಿ ಕಾಣೆಯಾಗಿದ್ದಾರೆ. ಅನೇಕ ಸೆಲೆಬ್ರಿಟಿಗಳು ಪರಿಹಾರಕ್ಕೆ ನೆರವಾಗಲು ಹಣ ನೀಡುತ್ತಿದ್ದಾರೆ. ಪ್ರಭಾಸ್ ಕೂಡ 2 ಕೋಟಿ ಹಣವನ್ನ ಪರಿಹಾರವಾಗಿ ಕೇರಳ ಸಿಎಂ ಪರಿಹಾದ ನಿಧಿಗೆ ಕೊಟ್ಟಿದ್ದಾರೆ. ಆದರೆ, ಅದು ಅಷ್ಟೇನೂ ಸುದ್ದಿಯಾಗಿಲ್ಲ.
ಕನ್ನಡತಿ ರಶ್ಮಿಕಾ ಮಂದಣ್ಣಗೆ ಮರಾಠಿ ಪ್ರೀತಿ; ಮತ್ತೆ ವಿವಾದಕ್ಕೆ ಗುರಿಯಾಗ್ತಾರಾ ನ್ಯಾಷನಲ್ ಕ್ರಶ್..?!
ನಟ ಪ್ರಭಾಸ್ ಅವರನ್ನು ಬಲ್ಲವರು ಹೇಳುವ ಪ್ರಕಾರ, ಅವರು ಬಲಗೈಲಿ ಕೊಟ್ಟಿದ್ದು ಎಡಗೈಗೆ ಗೊತ್ತಾಗಬಾರದು ಎನ್ನುವ ಮೆಂಟಾಲಿಟಿ ಹೊಂದಿರುವ ವ್ಯಕ್ತಿ. ಅವರು ಬಹಳಷ್ಟು ಸಾಮಾಜಿಕ ಕೆಲಸಕಾರ್ಯಗಳನ್ನು ಮಾಡುತ್ತಲೇ ಇರುತ್ತಾರೆ. ತಮ್ಮ ಬಳಿ ಯಾರೇ ಬಂದರೂ ಅವರಿಗೆ ಹೊಟ್ಟೆ ತುಂಬಾ ಊಟ ಹಾಕಿಸಿ ಬಾಯ್ತುಂಬಾ ಮಾತನಾಡಿ ಕಳಿಸುತ್ತಾರೆ ನಟ ಪ್ರಭಾಸ್. ಹೀಗಾಗಿ ಅವರು ಯಾವುದನ್ನೂ ಟಾಂ ಟಾಂ ಮಾಡಿಕೊಳ್ಳುವುದಿಲ್ಲ.
ನಟ ಪ್ರಭಾಸ್ ಅವರು ಶೂಟಿಂಗ್ ಸ್ಥಳದಲ್ಲಿ ಕೂಡ ಎಲ್ಲರೊಂದಿಗೆ ಸಹಜವಾಗಿ ಹೊಂದಿಕೊಳ್ಳುವ ವ್ಯಕ್ತಿ. ಅವರು ಅಲ್ಲಿ ಕೂಡ ಎಲ್ಲರೂ ಊಟ ಶುರು ಮಾಡಿದ ಮೇಲೆಯೇ ತಾವು ಶುರು ಮಾಡುತ್ತಾರೆ ಎಂದಿದ್ದಾರೆ ಹಲವು ಸಹಕಲಾವಿದರು. ಅಷ್ಟೇ ಅಲ್ಲ, ನಟ ಪ್ರಭಾಸ್ ಅವರು ತಾವೊಬ್ಬ ಸೂಪರ್ ಸ್ಟಾರ್ ಆಗಿದ್ದರೂ ಶೂಟಿಂಗ್ ಸೆಟ್‌ನಲ್ಲಿ ಯಾವ ಅಹಂಕಾರ ತೋರಿಸದೇ ಎಲ್ಲರೊಂದಿಗೆ ಬೆರೆತು ಖುಷಿಯಾಗಿ ಇರುತ್ತಾರೆ ಎನ್ನಲಾಗಿದೆ.
ರಾಕಿಂಗ್ ಸ್ಟಾರ್ ಯಶ್ ಪರ್ಸನಲ್ ಗುಟ್ಟು ರಿವೀಲ್; ಕೆಜಿಎಫ್ ರಾಕಿ ಭಾಯ್ ಲಕ್ಕಿ ನಂಬರ್ ಇದೇನಾ?
ಒಟ್ಟಿನಲ್ಲಿ, ಇದೀಗ ಕೇರಳದಲ್ಲಿ ಆಗಿರುವ ವಯನಾಡು ದುರಂತಕ್ಕೆ ಮಿಡಿದ ಹಲವಾರು ಕಲಾವಿದರ ಜತೆ ನಟ ಪ್ರಭಾಸ್ ಕೂಡ ಕೈ ಜೋಡಿಸಿದ್ದಾರೆ. ನಟಿ ರಶ್ಮಿಕಾ ಮಂದಣ್ಣ ಕೂಡ ಹತ್ತು ಲಕ್ಷ ರೂಪಾಯಿ ಕೊಟ್ಟಿದ್ದಾರೆ. ಉಳಿದಂತೆ, ಹಲವು ಕಲಾವಿದರು ತಮ್ಮಿಂದಾದ ಸಹಾಯ ಮಾಡಿದ್ದಾರೆ ಎನ್ನಲಾಗಿದೆ.