
ಬಾಲಿವುಡ್ ಸ್ಟಾರ್ ನಟ ರಣವೀರ್ ಸಿಂಗ್ ಬೆತ್ತಲೆ ಫೋಟೋಶೂಟ್ ಸಂಚಲನ ಸೃಷ್ಟಿ ಮಾಡಿತ್ತು. ಬೆತ್ತಲೆ ಫೋಟೋಶೂಟ್ ವೈರಲ್ ಆಗಿ ಅನೇಕ ದಿನಗಳಾದರೂ ಹಾಟ್ ಟಾಪಿಕ್ ಆಗಿಯೇ ಇದೆ. ಮ್ಯಾಗಜಿನ್ ಒಂದಕ್ಕೆ ರಣವೀರ್ ಸಿಂಗ್ ಬೆತ್ತಲಾಗುವ ಮೂಕ ಅಭಿಮಾನಿಗಳಲ್ಲಿ ಅಚ್ಚರಿ ಮೂಡಿಸಿದ್ದರು. ರಣವೀರ್ ಸಿಂಗ್ ನಗ್ನ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಬಳಿಕ ರಣವೀರ್ ಸಿಂಗ್ ವಿರುದ್ಧ ದೂರು ಕೂಡ ದಾಖಲಾಗಿದೆ. ಗಲ್ಲಿ ಬಾಯ್ ನಟನ ನಗ್ನ ಫೋಟೋಶೂಟ್ ವಿವಾದಕ್ಕೆ ಇನ್ನು ತೆರೆಬಿದ್ದಿಲ್ಲ. ಅನೇಕರು ರಣವೀರ್ ಸಿಂಗ್ ಪರ ನಿಂತರೆ ಇನ್ನು ಕೆಲವರು ರಣವೀರ್ ವಿರುದ್ಧ ಸಿಡಿದೆದ್ದರು. ಇದೀಗ ಬೂಾಲಿವುಡ್ ಖ್ಯಾತ ನಟಿ ವಿದ್ಯಾ ಬಾಲನ್ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು ರಣವೀರ್ ಬೆಂಬಲಕ್ಕೆ ನಿಂತಿದ್ದಾರೆ.
ರಣವೀರ್ ಸಿಂಗ್ ಬೆತ್ತಲೇ ಫೋಟೋಶೂಟ್ ಬಗ್ಗೆ ಮಾತನಾಡಿದ ವಿದ್ಯಾ ಬಾಲನ್, ಅರೆ ಕ್ಯಾ ಪ್ರಾಬ್ಲಮ್ ಹೈ? ಎಂದು ತನ್ನದೆ ಶೈಲಿಯಲ್ಲಿ ಉತ್ತರಿಸಿದ್ದಾರೆ. 'ಇದರಿಂದ ಏನು ಸಮಸ್ಯೆ ಆಗಿದೆ. ಒಬ್ಬ ವ್ಯಕ್ತಿ ಇದನ್ನು ಮೊದಲ ಬಾರಿಗೆ ಮಾಡಿದ್ದಾರೆ. ನಾವು ಅದನ್ನು ಎಂಜಾಯ್ ಮಾಡೋಣ' ಎಂದಿದ್ದಾರೆ. ಇದೇ ಸಮಯಕ್ಕೆ ರಣವೀರ್ ವಿರುದ್ಧ ದಾಖಲಾದ ಏಫ್ ಐ ಆರ್ ಬಗ್ಗೆ ಮಾತನಾಡಿ, ಯಾರಿಗಾದರೂ ಈ ಫೋಟೋಗಳಿಂದ ಮನನೊಂದರೆ ನೋಡಬೇಡಿ ಎಂದಿದ್ದಾರೆ. 'ಈ ಫೋಟೋಗಳು ಯಾರಿಗಾದರೂ ಮನನೊಂದರೆ ನೋಡಬೇಡಿ. ದೂರು ನೀಡಿದವರಿಗೆ ಮಾಡಲಿಕ್ಕೆ ಏನು ಕೆಲಸ ಇರಲಿಲ್ಲ ಅನಿಸುತ್ತದೆ. ಆದ್ದರಿಂದ ಅವರು ಈ ವಿಷಯಗಳಲ್ಲಿ ಹೆಚ್ಚು ಸಮಯ ವ್ಯರ್ಥ ಮಾಡುತ್ತಿದ್ದಾರೆ. ನಿಮಗೆ ಇಷ್ಟವಿಲ್ಲ ಎಂದರೆ ನೋಡಬೇಡಿ. ನಿಮಗೆ ಬಯಸಿದ್ದನ್ನು ನೋಡಿ. ಇದಕ್ಕೆ ಯಾಕೆ ಎಫ್ ಐ ಆರ್' ಎಂದು ಹೇಳಿದ್ದಾರೆ.
ರಣ್ವೀರ್ ಸಿಂಗ್‌ರಿಂದ ಲೇಡಿ ಗಾಗಾವರೆಗೆ; ಫೋಟೋಶೂಟ್‌ಗಾಗಿ ಬೆತ್ತಲಾದ ಸೆಲೆಬ್ರಿಟಿಗಳಿವರು
ಪೇಪರ್ ಮ್ಯಾಗಜೀನ್‌ಗಾಗಿ ರಣವೀರ್ ಬೆತ್ತಲೆ ಫೋಟೋಶೂಟ್, ಮಹಿಳೆಯರ ಭಾವನೆಗಳಿಗೆ ಧಕ್ಕೆ ತಂದಿದೆ ಎಂದು ಆರೋಪಿಸಿ ಎನ್‌ಜಿ ಒಂದು ಮುಂಬೈನಲ್ಲಿ ನೀಡಿತ್ತು. ದೂರಿನ ಅನ್ವಯ ನಟ ರಣವೀರ್ ವಿರುದ್ಧ ಎಫ್‌ಐಆರ್ ದಾಖಲಾಗಿದೆ.
ರಣವೀರ್ ಬೆತ್ತಲೇ ಫೋಟೋಶೂಟ್ ಅನ್ನು ಬಾಲಿವುಡ್ ನ ಅನೇಕ ಸಹೋದ್ಯೋಗಿಗಳು ಬೆಂಬಲ ನೀಡಿದ್ದಾರೆ. ನಿರ್ಮಾಪಕ ವಿಜಯ್ ಅಗ್ನಿಹೋತ್ರಿ, ಸ್ವರಾ ಭಾಸ್ಕರ್, ಆಲಿಯಾ ಭಟ್, ಅರ್ಜುನ್ ಕಪೂರ್, ಪೂಜಾ ಬೇಡಿ ಮತ್ತು ರಾಮ್ ಗೋಪಾಲ್ ವರ್ಮಾ ಸೇರಿದಂತೆ ಅನೇಕರು ಬೆಂಬಲ ನೀಡಿದ್ದಾರೆ.
ಬೆತ್ತಲಾಗಿ ಬಾರಿ ಸದ್ದು ಮಾಡಿದ ನಟ ರಣವೀರ್ ಸಿಂಗ್‌ಗೆ ಸಂಕಷ್ಟ, ದಾಖಲಾಯ್ತು ಕೇಸ್!
ಅಂದಹಾಗೆ ರಣವೀರ್ ಸಿಂಗ್ ಬೆತ್ತಲೆ ಫೋಟೋಶೂಟ್ 1972 ರಲ್ಲಿ ಕಾಸ್ಮೋಪಾಲಿಟನ್ ಮ್ಯಾಗಜೀನ್‌ಗಾಗಿ ನಟ ಬರ್ಟ್ ರೆನಾಲ್ಡ್ಸ್ ಬೆತ್ತಲೆ ಫೋಟೋಶೂಟ್‌ನಿಂದ ಸ್ಫೂರ್ತಿ ಪಡೆದಿದೆ ಎಂದು ಹೇಳಲಾಗುತ್ತದೆ. ಬರ್ಟ್ ಅವರಿಗೆ ಸೆಕ್ಸ್ ಸಿಂಬಲ್ ಆಫ್ ಮೇಲ್ ಎಂಬ ಬಿರುದನ್ನು ನೀಡಲಾಗುತ್ತು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.