ನನಗೇನೇ ಆದ್ರೂ ನಾನಾ ಪಟೇಕರ್, ಬಾಲಿವುಡ್ ಮಾಫಿಯಾ ಕಾರಣ; ಮತ್ತೆ ಸಿಡಿದೆದ್ದ ತನುಶ್ರೀ ದತ್ತ

Published : Jul 29, 2022, 03:49 PM IST
ನನಗೇನೇ ಆದ್ರೂ ನಾನಾ ಪಟೇಕರ್, ಬಾಲಿವುಡ್ ಮಾಫಿಯಾ ಕಾರಣ; ಮತ್ತೆ ಸಿಡಿದೆದ್ದ ತನುಶ್ರೀ ದತ್ತ

ಸಾರಾಂಶ

ಭಾರತೀಯ ಸಿನಿಮಾರಂಗದಲ್ಲಿ ಮೀಟೂ ಭಯ ಹುಟ್ಟಿಸಿದ್ದ ನಟಿ ತನುಶ್ರೀ ದತ್ತ ಮತ್ತೆ ಸಿಡಿದೆದ್ದಿದ್ದಾರೆ. ಬಾಲಿವುಡ್ ಖ್ಯಾತ ನಟ ನಾನಾ ಪಟೇಕರ್ ವಿರುದ್ಧ ಮಿಟೂ ಆರೋಪ ಮಾಡಿದ್ದ ತನುಶ್ರೀ ದತ್ತ ಇದೀಗ ಮತ್ತೆ ಈ ವಿಷಯವನ್ನು ನೆನಪಿಸಿದ್ದಾರೆ

ಭಾರತೀಯ ಸಿನಿಮಾರಂಗದಲ್ಲಿ ಮೀಟೂ ಭಯ ಹುಟ್ಟಿಸಿದ್ದ ನಟಿ ತನುಶ್ರೀ ದತ್ತ ಮತ್ತೆ ಸಿಡಿದೆದ್ದಿದ್ದಾರೆ. ಬಾಲಿವುಡ್ ಖ್ಯಾತ ನಟ ನಾನಾ ಪಟೇಕರ್ ವಿರುದ್ಧ ಮಿಟೂ ಆರೋಪ ಮಾಡಿದ್ದ ತನುಶ್ರೀ ದತ್ತ ಇದೀಗ ಮತ್ತೆ ಈ ವಿಷಯವನ್ನು ನೆನಪಿಸಿದ್ದಾರೆ. ಹಾರ್ನ್, ಓಕೆ ಸೇರಿದಂತೆ ಹಲವು ಸಿನಿಮಾಗಳಲ್ಲಿ ತನುಶ್ರೀ, ನಾನಾ ಪಾಟೇಕರ್ ಜೊತೆ ನಟಿಸಿದ್ದರು. ಆ ವೇಳೆ ತನ್ನ ಮೇಲೆ ಲೈಂಗಿಕ ದೌರ್ಜನ್ಯ ನಡೆದಿತ್ತು ಎಂದು ತನುಶ್ರೀ ಹೇಳಿಕೊಂಡಿದ್ದರು. ಬಳಿಕ ನಾನಾ ಪಾಟೇಕರ್ ವಿರುದ್ಧ ದೂರ ದಾಖಲಿಸಿದ್ದರು. 

ಇದೀಗ ಮತ್ತೆ ತನುಶ್ರೀ ಆ ಘಟನೆಯನ್ನು ನೆನಪಿಸಿಕೊಂಡಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ದೀರ್ಘ ಪೋಸ್ಟ್ ಶೇರ್ ಮಾಡಿರುವ ನಟಿ  ಅಂದು ನಾನಾ ಪಾಟೇಕರ್ ವಿರುದ್ಧ ಮಿಟೂ ಆರೋಪ ಮಾಡಿದ್ದೆ. ನನಗೆ ಏನಾದರೂ ಆದರೆ ಅದಕ್ಕೆ ನಾನಾ ಪಾಟೇಕರ್ ಮತ್ತು ಬಾಲಿವುಡ್ ಮಾಫಿಯಾ ಕಾರಣ ಎಂದು ಬರೆದುಕೊಂಡಿದ್ದಾರೆ. ಬಾಲಿವುಡ್ ಮಾಫಿಯಾ ಬಗ್ಗೆ ಮಾತನಾಡಿರುವ ಅವರು, ಸುಶಾಂತ್ ಸಿಂಗ್ ಸಾವಿನಲ್ಲಿ ಕೇಳಿ ಬಂದ ಹೆಸರುಗಳೇ ಬಾಲಿವುಡ್ ಮಾಫಿಯಾದಲ್ಲಿ ಇದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ಅಲ್ಲದೇ ಅವರ ಸಿನಿಮಾಗಳನ್ನು ನೋಡಬೇಡಿ ಬಹಿಷ್ಕರಿಸಿ ಎಂದು ತನುಶ್ರೀ ದತ್ತ ಹೇಳಿದ್ದಾರೆ. 

ಆತ್ಮಹತ್ಯೆಗೆ ಯತ್ನಿಸಿಲ್ಲವಷ್ಟೇ ಬಾಲಿವುಡ್ ಮಾಫಿಯಾದಿಂದ ತೀವ್ರ ಕಿರುಕುಳ

ಈ ಬಗ್ಗೆ ತನುಶ್ರೀ ದತ್ತ ಸಾಮಾಜಿಕ ಜಾಲತಾಣದಲ್ಲಿ, 'ನನಗೆ ಏನಾದರೂ ಸಂಭವಿಸಿದರೆ  metoo ಆರೋಪಿ ನಾನಾ ಪಾಟೇಕರ್, ಅವರ ವಕೀಲರು ಮತ್ತು ಸಹಚರರು ಹಾಗು ಅವರ ಬಾಲಿವುಡ್ ಮಾಫಿಯಾ ಸ್ನೇಹಿತರು ಅವರೇ ಕಾರಣ. ಬಾಲಿವುಡ್ ಮಾಫಿಯಾ ಅಂದರೆ ಯಾರು?, ಎಸ್‌ಎಸ್‌ಆರ್ ಸಾವಿನ ಪ್ರಕರಣದಲ್ಲಿ ಕಳಿಬಂದ ಹೆಸರುಗಳು, ಪದೇ ಪದೇ ಕೇಳಿಬರುತ್ತಿದ್ದ ಅದೇ ಜನರು. (ಎಲ್ಲರೂ ಒಂದೇ ಕ್ರಿಮಿನಲ್ ವಕೀಲರನ್ನು ಹೊಂದಿದ್ದಾರೆ ಅದನ್ನೂ ಗಮನಿಸಿ)' ಎಂದಿದ್ದಾರೆ. 

'ಅವರ ಚಲನಚಿತ್ರಗಳನ್ನು ನೋಡಬೇಡಿ, ಅವುಗಳನ್ನು ಸಂಪೂರ್ಣವಾಗಿ ಬಹಿಷ್ಕರಿಸಿ. ನನ್ನ ಬಗ್ಗೆ ಕೆಟ್ಟ ಸುದ್ದಿಗಳನ್ನು ಮಾಡಿದ ಉದ್ಯಮದ ಎಲ್ಲಾ ಕೆಟ್ಟ ಮುಖಮಖಗಳು ಮತ್ತು ಕಿರುಕುಳ ನೀಡಿದವರ ಜೀವನ ನರಕಮಾಡಿ. ಕಾನೂನು ಮತ್ತು ನ್ಯಾಯ ನನ್ನನ್ನು ವಿಫಲಗೊಳಿಸಿರಬಹುದು ಆದರೆ ನನ್ನ ದೇಶದ ಜನರ ಬಗ್ಗೆ ತುಂಬಾ ನಂಬಿಕೆ ಇದೆ' ಎಂದು ಬರೆದುಕೊಂಡಿದ್ದಾರೆ. ತನುಶ್ರೀ ದತ್ತ ದೀರ್ಘ ಪೋಸ್ಟ್ ಅಚ್ಚರಿ ಮೂಡಿಸಿದೆ.

'ಬಟ್ಟೆ ತೆಗೆದು ಡಾನ್ಸ್ ಮಾಡು'ಎಂದಿದ್ರು; ಕಾಶ್ಮೀರ್ ಫೈಲ್ಸ್ ನಿರ್ದೇಶಕರ ವಿರುದ್ಧ ತನುಶ್ರೀ ಗಂಭೀರ ಆರೋಪ


2008 ರಲ್ಲಿ ತನುಶ್ರೀ ದತ್ತ ಹಾರ್ನ್ ಓಕೆ ಪ್ಲೀಸ್‌ ಸಿನಿಮಾ ಸೆಟ್‌ನಲ್ಲಿ ನಾನಾ ಪಾಟೇಕರ್ ಲೈಂಗಿಕ ಕಿರುಕುಳ ನೀಡಿದ್ದರು ಎಂದು ಆರೋಪಿಸಿದ್ದರು. ಬಳಿಕ ಅದೇ ವರ್ಷ CINTAAಗೆ ದೂರು ನೀಡಿದ್ದರು. 2018 ರಲ್ಲಿ ಈ ಪ್ರಕರಣವನ್ನು ಪುನಃ ತೆರೆಯಲಾಯಿತು. ಆದರೆ ನಾನಾ ಪಾಟೇಕರ್ ಆರೋಪಗಳನ್ನು ನಿರಾಕರಿಸಿದರು ಮತ್ತು 2019ರಲ್ಲಿ ಕ್ಲೀನ್ ಚಿಟ್ ಪಡೆದರು ಎನ್ನಲಾಗಿದೆ. ಆದರೂ ನಟಿ ತಾನು ಅನೇಕ ವರ್ಷಗಳಿಂದ ಉದ್ಯಮದಲ್ಲಿ ಎದುರಿಸಿದ ಕಷ್ಟ ಮತ್ತು ಹೋರಾಟಗಳ ಬಗ್ಗೆ ಬಹಿರಂಗ ಪಡಿಸಿದ್ದರು. ಭಾರತದಲ್ಲಿ MeToo ಆಂದೋಲನವನ್ನು ಮುನ್ನಡೆಸಿದ ಮೊದಲ ಸೆಲೆಬ್ರಿಟಿಗಳಲ್ಲಿ ಒಬ್ಬರಾಗಿದ್ದಾರೆ. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ನಾನೇನು ಸಾಧುವಲ್ಲ.. ಹೀಗೆ ಮಾತಾಡೋಕೆ ನನಗೂ ಬರುತ್ತೆ: ಪುಷ್ಪ ನಟಿ ಹೇಳಿದ್ದೇನು?
ವೃತ್ತಿಜೀವನದಲ್ಲಿ 2 ಬಾರಿ ದೊಡ್ಡ ತಪ್ಪು ಮಾಡಿದ ರಾಮ್ ಚರಣ್.. ಚಿರಂಜೀವಿಯೂ ಏನೂ ಮಾಡಲಾಗಲಿಲ್ಲವೇ?