
ಹತ್ಯೆಗೀಡಾದ ಪಂಜಾಬಿನ ಖ್ಯಾತ ಗಾಯಕ ಸಿಧು ಮೂಸೆವಾಲಾ ನೆನಪಲ್ಲಿಯೇ ಅವರ ಕುಟುಂಬ ದಿನ ಕಳೆಯುತ್ತಿದೆ. ಸಿಧು ಮೂಸೆವಾಲ ತಂದೆ ಬಲ್ಕೌರ್ ಮಗನ ನೆನಪಿಗಾಗಿ ಕೈಮೇಲೆ ಸಿಧು ಭಾವಚಿತ್ರ ಹಚ್ಚೆ ಹಾಕಿಸಿಕೊಂಡಿದ್ದಾರೆ. ಈ ಮೂಲಕ ಮಗನಿಗೆ ಭಾವನಾತ್ಮಕ ಗೌರವ ಸಲ್ಲಿಸಿದ್ದಾರೆ. ಪಂಜಾಬಿನ ಜನಪ್ರಿಯ ರ್ಯಾಪರ್ ಅಧಿಕೃತ ಇನ್‌ಸ್ಟಾಗ್ರಾಮ್ ಖಾತೆ ಸಕ್ರೀಯವಾಗಿದೆ. ಅವರ ನೆನಪಿಗಾಗಿ ಇನ್ಸ್ಟಾಗ್ರಾಮ್ ಖಾತೆಯನ್ನು ಸಕ್ರೀಯವಾಗಿ ಇಡಲಾಗಿದೆ. ಇನ್ಸ್ಟಾಗ್ರಾಮ್ ಸ್ಟೇಟಸ್‌ನಲ್ಲಿ ಮಗನ ಮುಖವನ್ನು ಕೈಮೇಲೆ ಟ್ಯಾಟೂ ಹಾಕಿಸಿಕೊಳ್ಳುತ್ತಿರುವ ವಿಡಿಯೋ ಶೇರ್ ಮಾಡಲಾಗಿದೆ. ಮಲಗಿರುವ ಸಿಧು ತಂದೆ ಕೈ ಮೇಲೆ ಟ್ಯಾಟೂ ಹಾಕಿಸಿಕೊಳ್ಳುತ್ತಿದ್ದಾರೆ. ತಂದೆ ಹಚ್ಚೆ ಹಾಕಿಸಿಕೊಂಡಿರುವ ಫೋಟೋದಲ್ಲಿ ಗಾಯಕ ಸಿಧು ತನ್ನ ಮುಖದ ಪಕ್ಕದಲ್ಲಿ ಗನ್ ಹಿಡಿದು ಪೋಸ್ ನೀಡುತ್ತಿರುವುದನ್ನು ಕಾಣಬಹುದು.
ಮಗನ ಭಾವಚಿತ್ರದ ಕೆಳಗೆ, ತಂದೆ ಬಲ್ಕೌರ್ ಸಿಂಗ್ ಗುರುಮುಖಿ ಲಿಪಿಯಲ್ಲಿ 'ಸರ್ವಾನ್ ಪಟ್' ಎಂದು ಬರೆಸಿಕೊಂಡಿದ್ದಾರೆ. 'ಸರ್ವಾನ್ ಪಟ್' ಎಂದರೆ ವಿಧೇಯ ಮತ್ತು ಕಾಳಜಿಯುಳ್ಳ ಮಗ ಎಂದರ್ಥ.
ಬಲ್ಕೌರ್ ಸಿಂಗ್ ಅನೇಕ ಸಂದರ್ಭಗಳಲ್ಲಿ ತನ್ನ ಮಗನನ್ನು ನೆನಪಿಸಿಕೊಂಡು ಭಾವುಕರಾಗಿದ್ದಾರೆ. ಪುತ್ರನ ಅಂತ್ಯಸಂಸ್ಕಾರದ ನಂತರ ತನ್ನ ಪೇಟವನ್ನು ತೆಗೆದು ಜನರ ಸಾಗರದ ಕಡೆಗೆ ತಿರುಗಿ ತನ್ನ ಕೈಯಲ್ಲಿ ಹಿಡಿದಿದು ನಿಂತರು. ಅದು ಎಲ್ಲವನ್ನೂ ಕಳೆದುಕೊಂಡಿದ್ದೇನೆಂದು ತೋರಿಸುವ ಸೂಚಕ ಎಂದು ಹಲವರು ಹೇಳಿದ್ದರು.
ಗುಂಡಿಟ್ಟು ಸಿಧು ಹತ್ಯೆ
ಪಂಜಾಬ್ ಖ್ಯಾತ ಸಿಂಗರ್, ಕಾಂಗ್ರೆಸ್ ನಾಯಕ ಸಿಧು ಮೂಸೆ ವಾಲನನ್ನು ದುರ್ಷರ್ಮಿಗಳು ಮೇ 29ರಂದು ಗುಂಡಿಟ್ಟು ಹತ್ಯೆ ಮಾಡಿದ್ದರು. ಮಾನ್ಸಾ ಜಿಲ್ಲೆಯ ಜವಾಹರ್ಕೆ ಗ್ರಾಮದ ಬಳಿ ಘಟನೆ ನಡೆದಿತ್ತು. ಅಪರಿಚಿತ ವ್ಯಕ್ತಿಗಳು ನಡೆಸಿದ ಗುಂಡಿನ ದಾಳಿಗೆ ಸ್ಥಳದಲ್ಲೇ ಸಿಧು ಮೂಸೆ ವಾಲಾ ಹತ್ಯೆಯಾಗಿದ್ದರು. ಪಂಜಾಬ್ ಸಿಎಂ ಭಗವಂತ್ ಮಾನ್ ನೇತೃತ್ವದ ಆಮ್ ಆದ್ಮಿ ಸರ್ಕಾರ ಹಲವರ ಭದ್ರತೆ ವಾಪಸ್ ಪಡೆದಿತ್ತು. ಅದರಲ್ಲಿ ಸಿಧು ಮೂಸೆವಾಲ ಭದ್ರತೆ ಕೂಡ ವಾಪಾಸ್ ಪಡೆಯಲಾಗಿತ್ತು. ಹತ್ಯೆಗೂ ಒಂದು ದಿನ ಮುನ್ನ ಖ್ಯಾತ ಸಿಂಗರ್, ಕಾಂಗ್ರೆಸ್ ನಾಯಕ ಸಿಧು ಮೂಸ್ ವಾಲಾ ಭದ್ರತೆಯನ್ನು ಸರ್ಕಾರ ವಾಪಸ್ ಪಡೆದಿತ್ತು. ಭದ್ರತೆ ವಾಪಸ್ ಪಡೆದ ಒಂದೇ ದಿನದಲ್ಲಿ ಸಿಧು ಮೂಸೆವಾಲಾ ಹತ್ಯೆಯಾಗಿದ್ದರು.
Punjab: ಗಾಯಕ ಸಿಧು ಮೂಸೇವಾಲ ಹಂತಕರ ಎನ್‌ಕೌಂಟರ್
ಪಂಜಾಬ್‌ನಲ್ಲಿ ಸಿಧು ಮೂಸ್ ವಾಲಾ ಅತ್ಯಂತ ಜನಪ್ರಿಯ ರ್ಯಾಪ್ ಸಿಂಗರ್ ಆಗಿ ಗುರುತಿಸಿಕೊಂಡಿದ್ದರು. ಇತ್ತೀಚೆಗೆ ಸಿಧು ಮೂಸೆ ವಾಲ ಬಿಡುಗಡೆ ಮಾಡಿದ್ದ ಹಾಡು ವಿವಾದಕ್ಕೆ ಕಾರಣವಾಗಿತ್ತು. ಈ ಹಾಡಿನಲ್ಲಿ ಆಪ್ ವಿರುದ್ಧ ಕೆಲ ಪದಗಳನ್ನು ಸೇರಿಸಲಾಗಿದೆ ಎನ್ನುವ ಆರೋಪ ಕೇಳಿಬಂದಿತ್ತು.
Sidhu Moose Wala ಭದ್ರತೆ ವಾಪಸ್ ಪಡೆದ ಬೆನ್ನಲ್ಲೇ ಪಂಜಾಬ್ ಸಿಂಗರ್, ಕಾಂಗ್ರೆಸ್ ನಾಯಕ ಸಿಧುನನ್ನು ಗುಂಡಿಕ್ಕಿ ಹತ್ಯೆ!
ಸಿಧು ಮೂಸೆವಾಲ ಬಗ್ಗೆ
ಸಿಧು ಮೂಸೆವಾಲ ಜೂನ್ 17, 1993ರಲ್ಲಿ ಮಾನ್ಸಾ ಜಿಲ್ಲೆಯ ಮೂಸೆವಾಲ ಗ್ರಾಮದಲ್ಲಿ ಹುಟ್ಟಿದರು. ಸಿಧು ಅಪಾರ ಬೆಂಬಲಿಗರು, ಫ್ಯಾನ್ ಫಾಲೋವಿಂಗ್ ಹೊಂದಿದ್ದಾರೆ. ಇವರ ಎಲ್ಲಾ ಹಾಡುಗಳು ಅತ್ಯಂತ ಜನಪ್ರಿಯವಾಗಿದೆ. ಎಲೆಕ್ಟ್ರಿಕ್ ಎಂಜಿನಿಯರಿಂಗ್ ಪದವಿ ಪಡೆದಿರುವ ಸಿಧು, ಅತ್ಯಂತ ವಿವಾದಾತ್ಮ ಸಿಂಗರ್ ಆಗಿ ಗುರುತಿಸಿಕೊಂಡಿದ್ದರು.
ಸಿಧು ಮೂಸೆ ವಾಲ ತಮ್ಮ ಹಾಡುಗಳಲ್ಲಿ ಗನ್, ಹೊಡೆದಾಟ, ಬಡಿದಾಟ, ಕೊಲೆ, ದರೋಡೆಕೋರರ ವೈಭವೀಕರಿಸುತ್ತಿದ್ದರು. ಇದು ಹಲವು ವಿವಾದಕ್ಕೆ ಕಾರಣವಾಗಿದೆ. 2019ರ ಸೆಪ್ಟೆಂಬರ್ ತಿಂಗಳಲ್ಲಿ ಬಿಡುಗಡೆಯಾದ ಜಟ್ಟಿ ಜೆನಾಯ್ ಮೊರ್ಹ್ ದಿ ಬಂದೂಕ್ ವಾರ್ಗಿ ಹಾಡು ಭಾರಿ ವಿವಾದಕ್ಕೆ ಕಾರಣವಾಗಿತ್ತು.ಬಳಿಕ ಸಿಧು ಮೂಸೆ ವಾಲ ಕ್ಷಮೆಯಾಚಿಸಿದ್ದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.