ಬಟ್ಟೆ ಸರಿದಿದೆ... ಕಿವಿಯೋಲೆ ಅಡ್ಡಾದಿಡ್ಡಿಯಾಗಿದೆ... ಹೋಟೆಲ್​ನಲ್ಲಿ ಮಂಚದಿಂದ ಎದ್ದು ಬಂದ್ಯಾ? ಟ್ರೋಲಿಗರ ಪ್ರಶ್ನೆ

By Suchethana D  |  First Published Jul 24, 2024, 6:22 PM IST

ಜಾಹ್ನವಿ ಕಪೂರ್​ ಪಾಪರಾಜಿಗಳಿಗೆ ಪೋಸ್​ ಕೊಡುವಾಗ ಬಟ್ಟೆ ಪದೇ ಪದೇ ಸರಿ ಮಾಡಿಕೊಳ್ಳುತ್ತಿರುವುದನ್ನು ಹಾಗೂ ಕಿವಿಯೋಲೆಗಳು ಅಡ್ಡಾದಿಡ್ಡಿ ಆಗಿರುವುದನ್ನು ಗಮನಿಸಿದ ಟ್ರೋಲಿಗರು ಏನು ಹೇಳಿದ್ರು ನೋಡಿ...
 


ನಟಿ ಜಾಹ್ನವಿ ಕಪೂರ್​ ಪಾಪರಾಜಿಗಳಿಗೆ ಪೋಸ್​ ನೀಡುವಾಗ ಹಲವು ವಿಚಿತ್ರಗಳು ನಡೆದಿದ್ದು, ಇದನ್ನು ಟ್ರೋಲಿಗರು ಬಿಟ್ಟಾರೆಯೇ? ಸೋಷಿಯಲ್​  ಮೀಡಿಯಾದಲ್ಲಿ ವೈರಲ್​ ಆಗ್ತಿರೋ ಈ ವಿಡಿಯೋಗೆ ಸಕತ್​ ಕಮೆಂಟ್​ ಬರುತ್ತಿವೆ. ಅಷ್ಟಕ್ಕೂ, ಚಿತ್ರ ನಟಿಯರು ಅದರಲ್ಲಿಯೂ ಹೆಚ್ಚಾಗಿ ಬಾಲಿವುಡ್‌ ನಟಿಯರು ಇಂದು ಪೈಪೋಟಿಗೆ ಬಿದ್ದವರಂತೆ ದೇಹ ಪ್ರದರ್ಶನ ಮಾಡುವುದು ಮಾಮೂಲಾಗಿದೆ. ಈ ಪೈಪೋಟಿ ಎಷ್ಟರ ಮಟ್ಟಿಗೆ ಇದೆ ಎಂದರೆ, ಇದೀಗ ನಟಿಯರು ಅರೆಬೆರೆ ಬೆತ್ತಲಾಗಿದ್ದು ಸಾಕಾಗಲ್ಲ ಎಂದು ಪೂರ್ಣ ಬೆತ್ತಲಾಗಿದ್ದೂ ನಡೆದಿದೆ. ಚಿತ್ರಕ್ಕೆ ಒಪ್ಪುವಂತಿದ್ದರೆ ನಾನು ರೆಡಿ ಎನ್ನುವ ಮಾತು ಬಹುತೇಕ ನಟಿಯರಿಂದ ಕೇಳಬಹುದು. ಇನ್ನು ಕೆಲವು ನಟಿಯರು ಬಳಕುವ ಬಳ್ಳಿಯಂತೆ ಇರಲು ಇನ್ನಿಲ್ಲದ ಸರ್ಕಸ್‌ ಮಾಡಿದ್ರೂ, ದೇಹದ ಭಾಗಕ್ಕೆ ಸರ್ಜರಿ ಮಾಡಿಕೊಂಡು ಅದರ ಧಾರಾಳ ಪ್ರದರ್ಶನ ಮಾಡುವುದೂ ನಡೆದಿದೆ. ಇಂಥ ನಟಿಯರು ಟ್ರೋಲ್‌ ಆಗುವುದರಿಂದಲೇ ಸಕತ್‌ ಪ್ರಚಾರದಲ್ಲಿ ಇರುವ ಕಾರಣ, ಇವರನ್ನು ನೋಡಿ ಇನ್ನುಳಿದ ನಟಿಯರು ಇವರ ಹಾದಿಯಲ್ಲಿಯೇ ಸಾಗುತ್ತಿದ್ದಾರೆ.

ಇನ್ನು ಚಿತ್ರ ತಾರೆಯರನ್ನೇ ಅದರಲ್ಲಿಯೂ ಹೆಚ್ಚಾಗಿ ನಟಿಯರ ಹಿಂದೆ ಹಿಂದೆ ಹೋಗುವ ಪಾಪರಾಜಿಗಳ ಬಗ್ಗೆ ಹೇಳಬೇಕೆ? ಕೆಲವೊಮ್ಮೆ ಅಸಹ್ಯ ಎನ್ನುವ ರೀತಿಯಲ್ಲಿ ನಟಿಯರು ಎಲ್ಲಿಯೇ ಹೋದರೂ ಅವರ ಹಿಂದೆ ಹೋಗುತ್ತಾರೆ. ಈ ರೀತಿಯ ಫೋಟೋ ತೆಗೆದು ಮಾರಾಟ ಮಾಡಿದರೆ ಅವರಿಗೆ ಸಕತ್‌ ದುಡ್ಡು ಬರುವುದಾದರೆ ಕೆಲ ದಿನಗಳ ಹಿಂದಷ್ಟೇ ನಟಿ ಜಾಹ್ನವಿ ಕಪೂರ್‌ ಹೇಳಿದ್ದರು. ಚಿತ್ರದ ಪ್ರಮೋಷನ್‌ ಇದ್ದರೆ ನಾವೇ ಅವರನ್ನು ದುಡ್ಡು ಕೊಟ್ಟು ಕರೆಸುತ್ತೇವೆ. ಇಲ್ಲದಿದ್ದರೆ ನಮ್ಮ ಹಿಂದೆ ಅವರು ಬಿದ್ದು, ಫೋಟೋ, ವಿಡಿಯೋ ಮಾಡಿ ಸಾಕಷ್ಟು ಹಣ ಗಳಿಸುತ್ತಾರೆ ಎಂದಿದ್ದರು. ಆದರೆ ಇದೀಗ ಪಾಪರಾಜಿಗಳು ಅವರ ಹಿಂದೆ ಹೋಗಿದ್ದಾರೋ, ಅಥವಾ ಅವರನ್ನು ಇವರು ಕರೆಸಿದ್ದಾರೋ ಗೊತ್ತಿಲ್ಲ. ಎದೆಕಾಣುವ ಬಟ್ಟೆ ತೊಟ್ಟ ನಟಿ ಮಾತ್ರ ಎಲ್ಲಾ ಓಪನ್​ ಡ್ರೆಸ್​ ಹಾಕಿಕೊಂಡು ಕೈಯಿಂದ ಅದನ್ನು ಸರಿ ಮಾಡುತ್ತಾ ಬಂದು ಸಕತ್​ ಟ್ರೋಲ್​ ಆಗುತ್ತಿದ್ದಾರೆ. ನಟಿಯರು ಧಾರಾಳವಾಗಿ ಎಲ್ಲವನ್ನೂ ತೋರಿಸುತ್ತಾರೆ ಎಂದ ಮೇಲೆ ಪಾಪರಾಜಿಗಳಿಗೆ ಇನ್ನೇನು? ಅವರಿಗೆ ಹಬ್ಬವೋ ಹಬ್ಬ. ಹಿಂದೆ ಮುಂದೆ ಎಲ್ಲೆಲ್ಲಿ ಜೂಮ್‌ ಮಾಡಬೇಕೋ ಅಲ್ಲೆಲ್ಲಾ ತಮ್ಮ ಕ್ಯಾಮೆರಾಗಳನ್ನು ಓಡಿಸಿ ಅದನ್ನೇ ತೋರಿಸುತ್ತಾರೆ. ತಮ್ಮ ದೇಹ ಸೌಂದರ್ಯವನ್ನು ನೋಡಲಿ ಎನ್ನುವ ಕಾರಣಕ್ಕೇ ಇಂಥ ಅಸಭ್ಯ, ಅಶ್ಲೀಲ ಎನ್ನುವ ತುಂಡುಡುಗೆ ಹಾಕಿಕೊಂಡು ಇಂಥ ನಟಿಯರು ಓಡಾಡುವುದು ಏನೂ ಗುಟ್ಟಾಗಿ ಉಳಿದಿಲ್ಲ.

Tap to resize

Latest Videos

ಅಂಬಾನಿ ಮದುವೆಯ ಬೆನ್ನಲ್ಲೇ ನಟಿ ಜಾಹ್ನವಿ ಕಪೂರ್​ಗೆ ಏನಾಯ್ತು? ತಂದೆ ಬೋನಿ ಕಪೂರ್​ ಮಾಹಿತಿ

ಇಲ್ಲಿಯೂ ಅದೇ ರೀತಿ ಆಗಿದೆ. ಡ್ರೆಸ್​ ಸರಿ ಮಾಡಿಕೊಂಡು ಬಂದರೆ ಪರವಾಗಿರಲಿಲ್ಲ, ನಟಿ ಧರಿಸಿದ್ದ ಕಿವಿಯೋಲೆ ಒಂದು ಮೇಲೆ, ಒಂದು ಕೆಳಗೆ ಆಗಿದೆ. ಹೀಗಾಗಲು ನಿದ್ದೆಯಿಂದ ಎದ್ದು ಬಂದರೆ  ಮಾತ್ರ ಸಾಧ್ಯ ಎಂದು ಸಕತ್​ ಟ್ರೋಲ್​ ಮಾಡಲಾಗುತ್ತಿದೆ. ಹಿಂದೊಮ್ಮೆ ನಟಿ  ಜಾಹ್ನವಿ ಕಪೂರ್‌ ಪಾಪರಾಜಿಗಳಿಗೆ ಕ್ಲಾಸ್‌ ತೆಗೆದುಕೊಂಡಿದ್ದರು. ನೀವು ಎಲ್ಲೆಲ್ಲೋ ಜೂಮ್‌ ಮಾಡುತ್ತೀರಿ. ಹಿಂದೆ-ಮುಂದೆ ಬೇಡದ ಕಡೆಗಳಲ್ಲೆಲ್ಲಾ ಜೂಮ್‌ ಮಾಡುತ್ತೀರಿ. ಹಾಗೆಲ್ಲಾ ಮಾಡಬೇಡಿ ಎಂದು ಸ್ವಲ್ಪ ಗರಂ ಆಗಿಯೇ ಹೇಳಿದ್ದರು.

 ಮೂರೂ ಬಿಟ್ಟವರಿಗೆ ನಾಚಿಕೆ ಎಂದರೆ ಏನು ಗೊತ್ತಿದ್ಯಾ ಎಂದು ಆಗ ನೆಟ್ಟಿಗರು ಪ್ರಶ್ನಿಸಿದ್ದರು. ಇದೀಗ ಮತ್ತದೇ ವಿಷಯವನ್ನು ಟ್ರೋಲಿಗರು ತೆಗೆಯುತ್ತಿದ್ದಾರೆ. ಪಾರದರ್ಶಕ ಉಡುಗೆ ತೊಟ್ಟು ಬಂದ ನಟಿ ಅದನ್ನು ಪದೇ ಪದೇ ಸರಿ ಮಾಡಿಕೊಳ್ಳುತ್ತಿರುವ ಹಿಂದೆ ಅಲ್ಲಿ ದೃಷ್ಟಿ ಹೋಗಲಿ ಎನ್ನುವ ಕಾರಣನಾ ಎಂದು ಪ್ರಶ್ನಿಸುತ್ತಿದ್ದಾರೆ. ಮಂಚದಿಂದ ಎದ್ದು ಬಂದರೆ ಎಲ್ಲಾ ಸರಿ ಮಾಡಿಕೊಂಡು ಬರಬೇಕು ತಾನೆ? ಕಿವಿಯೋಲೆ ನೋಡಿ, ಡ್ರೆಸ್​ ನೋಡಿ ಎಂದೆಲ್ಲಾ ಭಾರಿ ಕಮೆಂಟ್​  ಮೂಲಕ ನಟಿಯ ಕಾಲೆಳೆಯುತ್ತಿದ್ದಾರೆ. 

ಟೆನ್ನಿಸ್​ ಬಾಲ್​ ಹಿಡ್ಕೊಂಡಕ್ಕೆ ಜಾಹ್ನವಿ ಕಪೂರ್​ಗೆ ಈ ಪರಿ ಗಾಯವಾಯ್ತಾ? ಬ್ಯಾಂಡೇಜ್​ ಹಿಂದಿನ ರಹಸ್ಯವೇನು?

 

click me!