
ಬಾಲಿವುಡ್ ನಟಿ ಅಭಿಷೇಕ್ ಬಚ್ಚನ್ ಹಾಗೂ ಐಶ್ವರ್ಯ ರೈ ಬಚ್ಚನ್ ಡಿವೋರ್ಸ್ (Bollywood actor Abhishek Bachchan and Aishwarya Rai Bachchan divorce) ವಿಷ್ಯಕ್ಕೆ ಸಂಬಂಧಿಸಿದಂತೆ ರೆಡ್ಡಿಟ್ ಪೋಸ್ಟ್ (Reddit Post) ಒಂದು ಕೋಲಾಹಲ ಸೃಷ್ಟಿಸಿದೆ. ಐಶ್ವರ್ಯ ಹಾಗೂ ಅಭಿಷೇಕ್ ಬೇರೆಯಾಗಿ ವಾಸವಾಗಿದ್ದಾರೆ ಎಂಬುದನ್ನು ರೆಡ್ಡಿಟ್ ಪೋಸ್ಟ್ ನಲ್ಲಿ ಸ್ಪಷ್ಟಪಡಿಸಿದ್ದಲ್ಲದೆ, ಇದಕ್ಕೆ ಕಾರಣ ಇನ್ನೊಬ್ಬ ನಟಿ ಎಂಬ ಸ್ಫೋಟಕ ವಿಷ್ಯ ಬಹಿರಂಗವಾಗಿದೆ. ಮಾಜಿ ವಿಶ್ವ ಸುಂದರಿ ಐಶ್ವರ್ಯ ರೈಗೆ ಬಿಗ್ ಬಿ ಮಗ, ಅಭಿಷೇಕ್ ಮೋಸ ಮಾಡಿದ್ದಾರೆ ಎಂಬ ಸುದ್ದಿ ಹರಡಿದೆ. ಅಭಿಷೇಕ್ ಬಚ್ಚನ್ ತಮ್ಮ ದಾಸ್ವಿ ಸಿನಿಮಾದಲ್ಲಿ ನಟಿಸಿದ್ದ ನಿಮ್ರತ್ ಕೌರ್ (Nimrat Kaur) ಜೊತೆ ಅಫೇರ್ ಹೊಂದಿದ್ದರು, ಇದೇ ಇಬ್ಬರ ಮಧ್ಯೆ ಭಿನ್ನಾಭಿಪ್ರಾಯ ಮೂಡಲು ಕಾರಣ ಎನ್ನಲಾಗ್ತಿದೆ. ಐಶ್ ಹಾಗೂ ಅಭಿಷೇಕ್ ಈ ಬಗ್ಗೆ ಆರಂಭದಿಂದಲೂ ಯಾವುದೇ ಹೇಳಿಕೆ ನೀಡಿಲ್ಲ. ಈಗ್ಲೂ ಮೌನವಹಿಸಿದ್ದು, ಇದು ನೆಟ್ಟಿಗರಲ್ಲಿ ಕುತೂಹಲ ಮೂಡಿದೆ. ಇದರ ಸತ್ಯಾಸತ್ಯತೆ ತಿಳಿದುಕೊಳ್ಳಲು ಬಾಲಿವುಡ್ ನಿಂದ ಹಿಡಿದು ಫ್ಯಾನ್ಸ್ ಕಾತರರಾಗಿದ್ದಾರೆ.
ಅಭಿಷೇಕ್ ಹಾಗೂ ಐಶ್ ಮಧ್ಯೆ ಮೂರ್ನಾಲ್ಕು ವರ್ಷಗಳ ಹಿಂದೆಯೇ ಭಿನ್ನಾಭಿಪ್ರಾಯ ಶುರುವಾಗಿತ್ತು. ಆದ್ರೆ ಅದು ಹೆಚ್ಚಾಗಿದ್ದು ನಟಿ ನಿಮ್ರತ್ ಆಗಮನದಿಂದ. ಅಭಿಷೇಕ್ ಮತ್ತು ನಿಮ್ರತ್ ಹತ್ತಿರವಾಗ್ತಿದ್ದಂತೆ ಐಶ್ ದೂರವಾದ್ರು. ತಪ್ಪಿನ ಅರಿವಾಗ್ತಿದ್ದಂತೆ ಅಭಿಷೇಕ್ ನಿಮ್ರತ್ ಬಿಟ್ಟಿದ್ದಾರೆ. ಆದ್ರೆ ದಂಪತಿ ಮಧ್ಯೆ ಬಂದಿರುವ ಬಿರುಕನ್ನು ಮಾತ್ರ ಸರಿಪಡಿಸಲು ಸಾಧ್ಯವಾಗ್ತಿಲ್ಲ. ಇಬ್ಬರೂ ದೂರವಿದ್ದು, ವಿಚ್ಛೇದನ ಪಡೆಯುವ ಸಾಧ್ಯತೆ ಕಡಿಮೆ ಇದೆ ಎಂದು, ಅಭಿಷೇಕ್ ಕುಟುಂಬದ ಬಲ್ಲ ಮೂಲಗಳು ಹೇಳ್ತಿವೆ.
ಸಂಜಾನಾ ಆನಂದ್ ಜೊತೆ ಚಂದನ್ ಶೆಟ್ಟಿ ಮದ್ವೆ: ನಟಿ ಹೇಳಿದ್ದಾಯ್ತು, ಶೆಟ್ರು ಹೇಳ್ತಿರುವುದೇನು?
ಅಭಿಷೇಕ್ ಮತ್ತು ಐಶ್ವರ್ಯ ಬೇರೆ ವಾಸ ಶುರು ಮಾಡಿದ್ದಾರೆ ಎಂಬ ಮಾತುಗಳು ಆಗಾಗ ಕೇಳಿ ಬರ್ತಿದ್ದವು. ಅಭಿ ಮತ್ತು ಐಶ್ ಮದುವೆಯಾಗಿ 17 ವರ್ಷ ಕಳೆದಿದೆ. ಇಷ್ಟು ವರ್ಷದ ಮೇಲೆ ದಂಪತಿ ದೂರವಾಗ್ತಿದ್ದಾರೆ ಎಂಬುದನ್ನು ಆರಂಭದಲ್ಲಿ ನಂಬಲು ಫ್ಯಾನ್ಸ್ ಸಿದ್ಧವಿರಲಿಲ್ಲ. ಆದ್ರೆ ಅನಂತ್ ಅಂಬಾನಿ ಹಾಗೂ ರಾಧಿಕಾ ಮದುವೆ ಸಮಯದಲ್ಲಿ ಅನುಮಾನಕ್ಕೆ ಬಲವಾದ ಸಾಕ್ಷ್ಯ ಸಿಕ್ಕಿತ್ತು. ಅಭಿಷೇಕ್ ತಮ್ಮ ಕುಟುಂಬದ ಜೊತೆ ಮದುವೆಗೆ ಬಂದ್ರೆ ಐಶ್ವರ್ಯ ರೈ, ಮಗಳು ಆರಾಧ್ಯ ಜೊತೆ ಬಂದಿದ್ದರು. ಅಲ್ಲಿಂದ ಯಾವುದೇ ಸಾರ್ವಜನಿಕ ಕಾರ್ಯಕ್ರಮದಲ್ಲಿ ಈ ಜೋಡಿಯನ್ನು ಫ್ಯಾನ್ಸ್ ಒಟ್ಟಿಗೆ ನೋಡಿಲ್ಲ. ಮಗಳು ಆರಾಧ್ಯ ಜೊತೆ ಐಶ್, ಇವೆಂಟ್ ಗಳಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಅಭಿಷೇಕ್ ತಮ್ಮ ಕೆಲಸದಲ್ಲಿ ಬ್ಯುಸಿಯಿದ್ದಾರೆ. ಅವರಿಬ್ಬರ ಈ ವರ್ತನೆ,ಅಭಿ ಮತ್ತು ಐಶ್ ದೂರವಾಗಿದ್ದಾರೆ ಎಂಬುದನ್ನು ಸ್ಪಷ್ಟಪಡಿಸುತ್ತಿದೆ. ಗಣೇಶ ವಿಸರ್ಜನೆಯಿಂದ ಹಿಡಿದು ಐಫಾವರೆಗೆ ಎಲ್ಲೂ ಅಭಿಷೇಕ್ ಜೊತೆ ಐಶ್ವರ್ಯ ಕಾಣಿಸಿಕೊಂಡಿಲ್ಲ. ಮೇ ತಿಂಗಳಿನಲ್ಲಿ ಅಭಿಷೇಕ್ ಇಲ್ಲದೆ ಐಶ್ವರ್ಯ ರೈ ಮಗಳ ಜೊತೆ ಹುಟ್ಟುಹಬ್ಬ ಆಚರಿಸಿಕೊಂಡಿದ್ದು, ಇವರಿಬ್ಬರ ಬೇರ್ಪಡಿಸುವಿಕೆ ವಿಷ್ಯಕ್ಕೆ ಮತ್ತಷ್ಟು ಬಲ ನೀಡಿದೆ.
ರಜನಿಕಾಂತ್ ವೆಟ್ಟೈಯಾನ್ ಸಿನಿಮಾ ನೋಡಲು ರಜೆ ಘೋಷಣೆ ಮಾಡಿದ ಖಾಸಗಿ ಕಂಪನಿ
ಮಾಜಿ ವಿಶ್ವ ಸುಂದರಿ ಐಶ್ವರ್ಯಾ ತಮ್ಮ ಸ್ವಾತಂತ್ರ್ಯ ಮತ್ತು ಶಕ್ತಿಗೆ ಹೆಸರುವಾಸಿಯಾಗಿದ್ದಾರೆ. ವೈಯಕ್ತಿಕ ಸವಾಲುಗಳ ನಡುವೆಯೂ, ಅವರು ರಿಯಲ್ ಎಸ್ಟೇಟ್ ಮತ್ತು ಸ್ಟಾರ್ಟ್‌ಅಪ್‌ಗಳಲ್ಲಿ ಹೂಡಿಕೆ ಮಾಡಿ ಬಲವಾದ ಆರ್ಥಿಕ ನೆಲೆಯನ್ನು ಉಳಿಸಿಕೊಂಡಿದ್ದಾರೆ. ವರದಿಗಳ ಪ್ರಕಾರ, ಐಶ್ವರ್ಯಾ ಮತ್ತು ಅವರ ಮಗಳು ಪ್ರಸ್ತುತ ತನ್ನ ತಾಯಿ ಬೃಂದ್ಯಾ ರೈ (Brindya Rai) ಅವರೊಂದಿಗೆ ಉಳಿದುಕೊಂಡಿದ್ದಾರೆ. ಐಶ್ವರ್ಯ ರೈ, ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದಾರೆ ಎನ್ನುವ ಮಾತಿದೆ. ಇದು ಅವರ ತೂಕ ಹೆಚ್ಚಳಕ್ಕೆ ಕಾರಣವಾಗಿದ್ದು, ತೂಕ ಇಳಿಸಿಕೊಳ್ಳಲು ಅವರು ಹೆಣಗಾಡುತ್ತಿದ್ದಾರೆಂದೂ ಸೋಶಿಯಲ್ ಮೀಡಿಯಾದಲ್ಲಿ ಹೇಳಲಾಗಿದೆ. ಐಶ್, ಸ್ಟ್ರಾಂಗ್ ಮಹಿಳೆಯಾಗಿದ್ದು, ಅವರ ಬೆಂಬಲಕ್ಕೆ ಫ್ಯಾನ್ಸ್ ನಿಂತಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.