ಹಿಂದು ಹುಡುಗನ ಕೈ ಹಿಡಿದ ಮೇಲೆ ಕೊರಗಜ್ಜನ ಕ್ಷೇತ್ರಕ್ಕೆ ಕಾಲಿಟ್ಟ ನಟಿ ಕತ್ರಿನಾ ಕೈಫ್; ಕೋಲಾ ನೋಡಿದ್ರಾ?

By Vaishnavi ChandrashekarFirst Published Jul 15, 2024, 9:09 AM IST
Highlights

ಹುಟ್ಟುಹಬ್ಬದ ಬೆನ್ನಲೆ ಮಂಗಳೂರಿನಲ್ಲಿ ಕಾಣಿಸಿಕೊಂಡ ಕತ್ರಿನಾ ಕೈಫ್. ಕೊರಗಜ್ಜನ ಸನ್ನಿಧಿಯಲ್ಲಿ ವಿಶೇಷ ಪೂಜೆ ಸಲ್ಲಿಸಿದ ನಟಿ.....

ಬಾಲಿವುಡ್ ಬ್ಯೂಟಿ ಕತ್ರಿನಾ ಕೈಫ್‌ ಮತ್ತು ಪತಿ ವಿಕ್ಕಿ ಕೌಶಾಲ್ ದಾಂಪತ್ಯ ಜೀವನಕ್ಕೆ ಕಾಲಿಟ್ಟ ದಿನದಿಂದ ಒಂದಲ್ಲ ಒಂದು ವಿಚಾರಕ್ಕೆ ಸುದ್ದಿಯಲ್ಲಿದ್ದಾರೆ. ಬ್ಯಾಕ್ ಟು ಬ್ಯಾಕ್ ಸಿನಿಮಾ ಮಾಡುವುದರಲ್ಲಿ ವಿಕ್ಕಿ ಬ್ಯುಸಿಯಾಗಿದ್ದರೆ, ಫ್ಯಾಮಿಲಿ ಟೈಂ ಅಂತ ಕ್ಯಾಟ್ ಸದ್ಯಕ್ಕೆ ಯಾವ ಪ್ರಾಜೆಕ್ಟ್‌ ಸಹಿ ಮಾಡಿಲ್ಲ. ಈ ನಡುವೆ ಅಂಬಾನಿ ಮದುವೆಯಲ್ಲಿ ಕಾಣಿಸಿಕೊಂಡು ಮತ್ತೆ ಸುದ್ದಿಯಾಗಿದ್ದಾರೆ. 

ಜುಲೈ 16ರಂದು ಕತ್ರಿನಾ ಕೈಫ್‌ ಹುಟ್ಟುಹಬ್ಬ. ಸಾಮಾನ್ಯವಾಗಿ ಸೆಲೆಬ್ರಿಟಿಗಳು ಹುಟ್ಟುಹಬ್ಬ ಅಂತ ಫಾರಿನ್ ಟ್ರಿಪ್ ಮಾಡುವ ಆಲೋಚನೆ ಮಾಡಿದರೆ ಈ ಸುಂದರಿ ತುಳುನಾಡಿಗೆ ಕಾಲಿಟ್ಟಿದ್ದಾರೆ. ಸ್ವಾಮಿ ಕೊರಗಜ್ಜ ಸನ್ನಿಧಿಗೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಕತ್ರಿನಾ ಕೈಫ್‌ ಒಬ್ರೆ ಬಂದಿಲ್ಲ ಕ್ರಿಕೆಟರ್ ಕೆ.ಎಲ್.ರಾಹುಲ್, ಸುನೀಲ್ ಶೆಟ್ಟಿ ಪುತ್ರ ಅಹಾನ್ ಶೆಟ್ಟಿ, ಪುತ್ರಿ ಆತಿಯಾ ಶೆಟ್ಟಿ ಭೇಟಿ ನೀಡಿ ವಿಶೇಷ ಪ್ರಾರ್ಥನೆ. 9 ಮಂದಿಯ ಕೋಲ ಕಟ್ಟೆಯಲ್ಲಿ ಹರಕೆಯ ರೂಪದಲ್ಲಿ ಎರಡು ತಿಂಗಳ ಹಿಂದೆ ಬರೆಸಲಾಗಿತ್ತು.  ಕತ್ರಿನಾ ಕೈಫ್‌, ರೇಷ್ಮಾ ಶೆಟ್ಟಿ ಮತ್ತು ಆತಿಯಾ ಶೆಟ್ಟಿ ಪರಂಪರೆಯಂತೆ ಕೋಲಾದಿಂದ ಹೊರಗುಳಿದ್ದಿದ್ದರು, ರಾಹುಲ್ ಮತ್ತು ಆಹಾನ್ ಕೋಲದಲ್ಲಿ ಭಾಗಿಯಾಗಿದ್ದಾರೆ. 

Latest Videos

ಮಾಧ್ಯಮಗಳಿಗೆ ಮಾಹಿತಿ ನೀಡದಂತೆ ಕಟ್ಟೆಯ ಕಚೇರಿ ಅಧಿಕೃತರಲ್ಲಿ ಮನವು ಮಾಡಿದ್ದರು ಆದರೆ ಅಲ್ಲಿದ್ದ ಸ್ಥಳೀಯರು ಫೋಟೋ ತೆಗೆದು ವೈರಲ್ ಮಾಡಿದ್ದಾರೆ. ಗಮನಕ್ಕೆ ಬರುತ್ತಿದ್ದಂತೆ ಡಿಲೀಟ್ ಮಾಡಲು ಮನವಿ ಮಾಡಿಕೊಂಡಿದ್ದಾರೆ ಸೆಲೆಬ್ರಿಟಿಗಳು. 

ಧರ್ಮಸ್ಥಳ ಮಂಜುನಾಥ, ಕೊರಗಜ್ಜನ ದೇಗುಲದಲ್ಲಿ ರಕ್ಷಿತಾ ಪ್ರೇಮ್; ಸೆಲ್ಫಿ ಕೊಡಲಿಲ್ಲ ಎಂದ ಫ್ಯಾನ್!

ಬಾಲಿವುಡ್‌ನಲ್ಲಿ ಜನರಿಗೆ ತುಳುನಾಡಿನ ಬಗ್ಗೆ ವಿಶೇಷ ಗೌರವ ಹುಟ್ಟಲು ಕಾರಣವೇ ಅಲ್ಲಿರುವ ಶೆಟ್ಟಿ ಗ್ಯಾಂಗ್. ನಟ ಸುನೀಶ್ ಶೆಟ್ಟಿ ಕುಟುಂಬ, ಶಿಲ್ಪಾ ಶೆಟ್ಟಿ ಕುಟುಂಬ ಮತ್ತು ಪೂಜಾ ಹೆಗ್ಡೆ, ಐಶ್ವರ್ಯ ರೈ ಆಗಾಗ ಭೇಟಿ ನೀಡುತ್ತಿರುತ್ತಾರೆ. ಮುಸ್ಲಿಂ ಹುಡುಗಿ ಆಗಿರುವ ಕತ್ರಿನಾ ಕೈಫ್‌ ಹಿಂದು ಹುಡುಗನನ್ನು ಮದುವೆ ಮಾಡಿಕೊಂಡ ಮೇಲೆ ಕೊರಗಜ್ಜನ ಸನ್ನಿಧಿಗೆ ಕಾಲಿಟ್ಟಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. 

ಕೊರಗಜ್ಜನ ಆಧಿಸ್ಥಳದಲ್ಲಿ ನೆಮ್ಮದಿ ಇದೆ: ಮೂರು ತಿಂಗಳಿಗೊಮ್ಮೆ ನಟಿ ರಕ್ಷಿತಾ ಬರ್ತಿರೋದು ಈ ಕಾರಣಕ್ಕೆ!

ಹಿಂದಿ ಮಂದಿ ಮಾತ್ರವಲ್ಲ ಕುತ್ತಾರು ಕೊರಗಜ್ಜನ ಕ್ಷೇತ್ರಕ್ಕೆ ನಟ ಡಾ. ಶಿವರಾಜ್‌ಕುಮಾರ್, ರಕ್ಷಿತ್ ಪ್ರೇಮ್, ರಚಿತಾ ರಾಮ್ ಸೇರಿದಂತೆ ದೊಡ್ಡ ತಾರ ಬಳಗ ಆಗಾಗ ಭೇಟಿ ನೀಡುತ್ತಾರೆ. ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೂ ಮುನ್ನ ದರ್ಶನ್‌ ಮಾರ್ಚ್‌ ತಿಂಗಳಿನಲ್ಲಿ ಕೊರಗಜ್ಜನ ಕ್ಷೇತ್ರಕ್ಕೆ ಭೇಟಿ ನೀಡಿದ್ದರು. 

click me!