ಅಂಬಾನಿ ಸೊಸೆ ರಾಧಿಕಾರ ಮರ್ಚೆಂಟ್ ಭರ್ಜರಿ ಎಂಟ್ರಿ ಹೇಗಿತ್ತು? ಅನಂತ್-ರಾಧಿಕಾ ಹಾರ ಬದಲಿಸಿಕೊಂಡಾಗ ನಡೆದದ್ದೇನು? ಮದುವೆಯ ವಿಶೇಷ ವಿಡಿಯೋ ವೈರಲ್
ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಮದುವೆ ಬಹಳ ದಿನಗಳ ಸೆಲೆಬ್ರೇಷನ್ ಬಳಿ ಅದ್ಧೂರಿಯಾಗಿ ನಡೆದಿದೆ. ವಿಶ್ವದಲ್ಲಿಯೇ ಅತ್ಯಂತ ದುಬಾರಿ ಮದುವೆಗಳಲ್ಲಿ ಇದು ಒಂದು ಎಂದೂ ಹೇಳಲಾಗುತ್ತಿದೆ. ಇದಾಗಲೇ ನಡೆದ ಪ್ರೀ ವೆಡ್ಡಿಂಗ್ ಮತ್ತು ಮದುವೆಯು ಹಲವಾರು ವಿಶೇಷತೆಗಳಿಂದ ಕೂಡಿತ್ತು. ಚಿತ್ರರಂಗದ ಘಟಾನುಘಟಿಗಳು ಸೇರಿದಂತೆ ವಿವಿಧ ಕ್ಷೇತ್ರಗಳ ಗಣ್ಯರು ಬಂದು ಶುಭಾಶಯ ಕೋರಿದ್ದಾರೆ. ಸಹಸ್ರಾರು ಕೋಟಿ ರೂಪಾಯಿ ವೆಚ್ಚದಲ್ಲಿ ನಡೆದ ಪ್ರೀ-ವೆಡ್ಡಿಂಗ್ ಮತ್ತು ಮದುವೆ ಸಂಭ್ರಮಕ್ಕೆ ದೇಶ-ವಿದೇಶಗಳಿಂದ ಗಣ್ಯಾತಿಗಣ್ಯರ ದಂಡೇ ಆಗಮಿಸಿತ್ತು. ಈ ಮೂಲಕ ಭಾರತ ಅತ್ಯಂತ ವೈಭವೋಪೇತ ಮದುವೆಯೊಂದಕ್ಕೆ ಸಾಕ್ಷಿಯಾಯಿತು. ಮದುವೆಯ ಬೆನ್ನಲ್ಲೇ ಮದುವೆಗೆ ಸಂಬಂಧಿಸಿದಂತೆ ಒಂದೊಂದೇ ವಿಶೇಷ ಹಾಗೂ ಅಚ್ಚರಿಯ ಮಾಹಿತಿಗಳು ಬಹಿರಂಗಗೊಳ್ಳುತ್ತಿವೆ. ಮದುವೆಗೆ ಸಂಬಂಧಿಸಿದಂತೆ ಇದಾಗಲೇ ಸಾಕಷ್ಟು ವಿಡಿಯೋಗಳು ಸೋಷಿಯಲ್ ಮೀಡಿಯಾಗಳಲ್ಲಿ ಸದ್ದು ಮಾಡುತ್ತಿದ್ದು, ಔಚಿತ್ಯಪೂರ್ಣ ಮದುವೆಯ ಕುರಿತು ಇಂಟರೆಸ್ಟಿಂಗ್ ವಿಷಯಗಳು ಹೊರಬರುತ್ತಿವೆ.
ಇದೀಗ ನವ ದಂಪತಿ ಹಾರ ಬದಲಿಸಿಕೊಂಡಿರುವ ವಿಡಿಯೋ ಹಾಗೂ ರಾಧಿಕಾ ಮರ್ಚೆಂಟ್ ಮೆರವಣಿಗೆಯಲ್ಲಿ ಮದುವೆಗೆ ಎಂಟ್ರಿ ಕೊಟ್ಟ ವಿಡಿಯೋಗಳು ವೈರಲ್ ಆಗಿವೆ. ಸಾಮಾನ್ಯವಾಗಿ ವಧು ಮತ್ತು ವರ ಹಾರ ಬದಲಾಯಿಸಿಕೊಳ್ಳುವಾಗ ಇಬ್ಬರನ್ನೂ ಮೇಲಕ್ಕೆ ಎತ್ತುವ ಮೂಲಕ ಹಾರ ಹಾಕುವುದರಿಂದ ತಡೆಯೊಡ್ಡುವ ತಮಾಷೆಯ ಸಂಪ್ರದಾಯವೊಂದು ನಡೆಯುತ್ತದೆ. ಪತಿ-ಪತ್ನಿ ಇಬ್ಬರಲ್ಲಿ ಯಾರು ಯಾರಿಗೆ ತಲೆಬಾಗುತ್ತಾರೆ ಎನ್ನುವ ಒಂದು ವಿಷಯವೂ ಇದರಲ್ಲಿ ಅಡಗಿದೆ. ಅದೇ ರೀತಿ ಅನಂತ್ ಮತ್ತು ರಾಧಿಕಾ ಮದುವೆಯಲ್ಲಿಯೂ ಇಬ್ಬರನ್ನೂ ಮೇಲಕ್ಕೆ ಎತ್ತಲಾಗಿದೆ. ಒಬ್ಬರನ್ನೊಬ್ಬರು ಹಾರ ಬದಲಾಯಿಸಿಕೊಳ್ಳುವಾಗ ಹಾರ ಬೀಳದಂತೆ ತಡೆಯೊಡ್ಡುವುದನ್ನು ನೋಡಬಹುದು.
ತಾಜಾ ತಾಜಾ ಮಲ್ಲಿಗೆ, ಚೆಂಡು ಹೂವುಗಳಿಂದ ರಾಧಿಕಾ ದುಪ್ಪಟ್ಟಾ, ಆಭರಣ! ಘಮಘಮಿಸಿದ ಮದುಮಗಳ ಝಲಕ್...
ಇದಕ್ಕೂ ಮುನ್ನ ವಧು ರಾಧಿಕಾ, ಭರ್ಜರಿ ಎಂಟ್ರಿ ಕೊಟ್ಟಿದ್ದಾರೆ. ಮೆರವಣಿಗೆಯಲ್ಲಿ ಅವರನ್ನು ಕರೆತಂದಿರುವ ವಿಡಿಯೋ ವೈರಲ್ ಆಗಿದೆ. ಈ ಹಿಂದೆ ಅರಿಶಿಣ ಕಾರ್ಯಕ್ರಮಮದಲ್ಲಿ ರಾಧಿಕಾ ಮರ್ಚೆಂಟ್ ಧರಿಸಿದ್ದ ಲೆಹಂಗಾದ ದುಪ್ಪಟ್ಟಾ ಮತ್ತು ಆಭರಣಗಳು ಸಕತ್ ವೈರಲ್ ಆಗಿದ್ದವು. ಈ ದುಪ್ಪಟ್ಟಾ ಮತ್ತು ಕೆಲವು ಆಭರಣಗಳು ಸಂಪೂರ್ಣವಾಗಿ ತಾಜಾತಾಜಾ ಮಲ್ಲಿಗೆ ಮತ್ತು ಚೆಂಡು ಹೂವುಗಳಿಂದ ಅಲಂಕರಿಸಲಾಗಿತ್ತು. ರಾಧಿಕಾ ಇಡೀ ಕಾರ್ಯಕ್ರಮದಲ್ಲಿ ಘಮಘಮಿಸುತ್ತಿದ್ದರು. ಅತ್ಯದ್ಭುತವಾಗಿ ಈ ದುಪ್ಪಟ್ಟಾ ಮತ್ತು ಆಭರಣಗಳನ್ನು ತಯಾರು ಮಾಡಲಾಗಿತ್ತು. ಕೆಜಿಗಟ್ಟಲೆ ಮಲ್ಲಿಗೆ ಮತ್ತು ಚೆಂಡು ಹೂವುಗಳನ್ನು ದುಪ್ಪಟ್ಟಾಕ್ಕೆ ಬಳಸಲಾಗಿತ್ತು. ಮಲ್ಲಿಗೆ ಹೂವುಗಳು ದುಪ್ಪಟ್ಟಾ ಅಲಂಕಿಸಿದ್ದರೆ, ಬಾರ್ಡರ್ಗೆ ಚೆಂಡುಹೂವುಗಳನ್ನು ಜೋಡಿಸಲಾಗಿತ್ತು. ಜೊತೆಗೆ ಆಭರಣಗಳಿಗೂ ತಾಜಾ ಮಲ್ಲಿಗೆ ಹೂವುಗಳ ಟಚ್ ಕೊಡಲಾಗಿತ್ತು. ಇದು ನಿಜವಾದ ಹೂವುಗಳು ಎಂದು ಹೇಳಿದರೆ ಸುಲಭದಲ್ಲಿ ಯಾರೂ ಒಪ್ಪದ ರೀತಿಯಲ್ಲಿ ಡಿಸೈನ್ ಮಾಡಲಾಗಿತ್ತು.
ಅನಂತ್-ರಾಧಿಕಾ ಮದುವೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಎಂಟ್ರಿಯ ಝಲಕ್ ಹೀಗಿತ್ತು... ವಿಡಿಯೋ ವೈರಲ್
ಇದೀಗ ವರಮಾಲೆಯ ವಿಡಿಯೋ ರಿಲೀಸ್ ಆಗಿದೆ. ಇದರಲ್ಲಿ ಕೂಡ ರಾಧಿಕಾ ಸೊಗಸಾಗಿ ಕಾಣುತ್ತಿದ್ದಾರೆ. ರೇಷ್ಮೆಯ ಬಟ್ಟೆ, ವಜ್ರ ವೈಢೂರ್ಯಗಳಿಂದ ಅಲಂಕರಿಸಲ್ಪಟ್ಟ ರಾಧಿಕಾರನ್ನು ಇದರಲ್ಲಿ ನೋಡಬಹುದು. ಇದಾಗಲೇ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವು ದಿಗ್ಗಜರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ನೂತನ ವಧು-ವರರಿಗೆ ಶುಭ ಕೋರಿದ್ದಾರೆ.