ವಜ್ರಾಭರಣಗಳ ಭಾರದ ಜೊತೆ ಪ್ಲಾಸ್ಟಿಕ್​ ದೇಹ ಹೊತ್ತು ಅಂಬಾನಿ ಮದ್ವೆಗೆ ಓಲಾಡುತ್ತಾ ಬಂದ ನಟಿ ಕಿಮ್​!

Published : Jul 14, 2024, 04:10 PM IST
ವಜ್ರಾಭರಣಗಳ ಭಾರದ ಜೊತೆ ಪ್ಲಾಸ್ಟಿಕ್​ ದೇಹ ಹೊತ್ತು ಅಂಬಾನಿ ಮದ್ವೆಗೆ ಓಲಾಡುತ್ತಾ ಬಂದ ನಟಿ ಕಿಮ್​!

ಸಾರಾಂಶ

ವಜ್ರಾಭರಣಗಳ ಭಾರದ ಜೊತೆ ಪ್ಲಾಸ್ಟಿಕ್​ ದೇಹ ಹೊತ್ತು ಅಂಬಾನಿ ಮದ್ವೆಗೆ ತಡಬಡಿಸಿ ಬಂದ ನಟಿ ಕಿಮ್​! ವಿಡಿಯೋ ವೈರಲ್​  

ನಗ್ನ, ಅರೆ ನಗ್ನ ಫೋಟೋಗಳನ್ನು ಹಾಕಿ ಇಂಟರ್‌ನೆಟ್ ಸೆನ್ಸೇಷನ್‌ ಉಂಟು ಮಾಡುವವರು ಈಗ ಹಲವರು ಹುಟ್ಟಿಕೊಂಡಿದ್ದಾರೆ ಎನ್ನಿ. ರಾತ್ರೋರಾತ್ರಿ ಸ್ಟಾರ್​ ಆಗುವ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿಯೇ ಇಂಥ ಪ್ರಯತ್ನಕ್ಕೆ ಕೈಹಾಕುತ್ತಿರುವವರಿಗೂ ಕಮ್ಮಿಯೇನಿಲ್ಲ. ಅರೆ ನಗ್ನ ಫೋಟೋ ಹಾಕುವ ಮೂಲಕ ಸ್ಟಾರ್​ ಕೂಡ  ಆಗಿ ಮಿಂಚುತ್ತಿದ್ದಾರೆ ಕೆಲವರು. ಅದರಲಿ. ಆದರೆ ಇಲ್ಲಿ ಹೇಳಹೊರಟಿರುವುದು  ಪ್ಲಾಸ್ಟಿಕ್​ ರಾಣಿ ಎಂದೇ ಫೇಮಸ್​ ಆಗಿರುವ ನಟಿಯರಲ್ಲಿ ಒಬ್ಬರಾದ ಕಿಮ್ ಕರ್ಡಶಿಯನ್ ಕುರಿತು. ಈಕೆ ಹಾಲಿವುಡ್​  ಜಗತ್ತಿನಲ್ಲಿ ಅತ್ಯಂತ ಸುಂದರ ನಿತಂಬವುಳ್ಳ ನಟಿ ಎಂದೇ ಒಂದು ಕಾಲದಲ್ಲಿ ಫೇಮಸ್ ಆದಾಕೆ​. ಇದಕ್ಕೆ ತಕ್ಕಂತೆ ಪ್ಲಾಸ್ಟಿಕ್​ ಸರ್ಜರಿ ಮಾಡಿಸಿಕೊಂಡು ಸ್ತನಗಳ ಗಾತ್ರವನ್ನು ಹೆಚ್ಚಿಸಿಕೊಂಡಿವರಲ್ಲಿ ಈಕೆಯೂ ಒಬ್ಬರು. ಪ್ಲಾಸ್ಟಿಕ್​ ದೇಹದ ಭಾರದ ಜೊತೆಗೆ ವಜ್ರಾಭರಣಗಳನ್ನು ತೊಟ್ಟು ಕಿಮ್​ ಕಾಣಿಸಿಕೊಂಡಿದ್ದಾರೆ. ಹೀಗೆ ಅವರು ಕಾಣಿಸಿಕೊಂಡಿರುವುದು ಅನಂತ್​ ಅಂಬಾನಿ ಮತ್ತು  ರಾಧಿಕಾ ಮರ್ಚೆಂಟ್​ ಮದುವೆಯ ಸಂದರ್ಭದಲ್ಲಿ.

ಅಷ್ಟಕ್ಕೂ, ವಿಶ್ವದಲ್ಲಿಯೇ ಅತ್ಯಂತ ದುಬಾರಿ ಮದುವೆಗಳಲ್ಲಿ ಇದು ಒಂದು ಎಂದೇ ಹೆಸರು ಮಾಡುತ್ತಿರುವ ಅನಂತ್​ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್​ ಮದುವೆ ಮುಗಿದರೂ ಇದರ ಸುದ್ದಿ ಇನ್ನೂ ತಣ್ಣಗಾಗಲಿಲ್ಲ.  ಇದಾಗಲೇ ನಡೆದ ಪ್ರೀ ವೆಡ್ಡಿಂಗ್​  ಮತ್ತು ಮದುವೆಯು ಹಲವಾರು ವಿಶೇಷತೆಗಳಿಂದ ಕೂಡಿತ್ತು.  ಚಿತ್ರರಂಗದ ಘಟಾನುಘಟಿಗಳು ಸೇರಿದಂತೆ ವಿವಿಧ ಕ್ಷೇತ್ರಗಳ ಗಣ್ಯರು ಬಂದು ಶುಭಾಶಯ ಕೋರಿದ್ದಾರೆ. ಸಹಸ್ರಾರು ಕೋಟಿ ರೂಪಾಯಿ ವೆಚ್ಚದಲ್ಲಿ ನಡೆದ ಪ್ರೀ-ವೆಡ್ಡಿಂಗ್​ ಮತ್ತು ಮದುವೆ ಸಂಭ್ರಮಕ್ಕೆ ದೇಶ-ವಿದೇಶಗಳಿಂದ ಗಣ್ಯಾತಿಗಣ್ಯರ ದಂಡೇ ಆಗಮಿಸಿತ್ತು. ಈ ಮೂಲಕ ಭಾರತ ಅತ್ಯಂತ ವೈಭವೋಪೇತ ಮದುವೆಯೊಂದಕ್ಕೆ ಸಾಕ್ಷಿಯಾಯಿತು. ಮದುವೆಯ ಬೆನ್ನಲ್ಲೇ ಮದುವೆಗೆ ಸಂಬಂಧಿಸಿದಂತೆ ಒಂದೊಂದೇ ವಿಶೇಷ ಹಾಗೂ ಅಚ್ಚರಿಯ ಮಾಹಿತಿಗಳು ಬಹಿರಂಗಗೊಳ್ಳುತ್ತಿವೆ. ಮದುವೆಗೆ ಸಂಬಂಧಿಸಿದಂತೆ ಇದಾಗಲೇ ಸಾಕಷ್ಟು ವಿಡಿಯೋಗಳು ಸೋಷಿಯಲ್​ ಮೀಡಿಯಾಗಳಲ್ಲಿ ಸದ್ದು ಮಾಡುತ್ತಿದ್ದು, ಔಚಿತ್ಯಪೂರ್ಣ ಮದುವೆಯ ಕುರಿತು ಇಂಟರೆಸ್ಟಿಂಗ್​ ವಿಷಯಗಳು ಹೊರಬರುತ್ತಿವೆ.

ಇದೀಗ ಕಿಮ್​ ಅವರ ವಿಡಿಯೋ ಕೂಡ ವೈರಲ್ ಆಗಿದೆ.  ಯೌವನಾವಸ್ಥೆಗೆ ಕಾಲಿಟ್ಟ ದಿನಗಳಲ್ಲಿ ಅಂಗಾಂಗಗಳು ಬಲಿಯುವ ಸಮಯದಲ್ಲಿ ನಾನು ಎಲ್ಲರಿಗಿಂತ ಉತ್ತಮವಾದ ಬಲಿಷ್ಠವಾದ ದೇಹ ನನ್ನದಾಗಲಿ ಎಂದು ಬಯಸುತ್ತಿದ್ದೆ. ಇದಕ್ಕಾಗಿ ದಿನವೂ ಪ್ರಾರ್ಥಿಸುತ್ತಿದ್ದೆ. ಈಗ ಅದೆಲ್ಲವೂ ನನಗೆ ಸಿಕ್ಕಿದೆ ಎಂದು ಕೆಲ ವರ್ಷಗಳ ಹಿಂದೆ ಹೇಳಿಕೊಂಡಿದ್ದ ನಟಿ, ಪ್ಲಾಸ್ಟಿಕ್​ ಸರ್ಜರಿಯ ಮೊರೆ ಹೋಗಿರುವ ಗುಟ್ಟನ್ನು ರಟ್ಟು ಮಾಡಿದ್ದರು. ಈಕೆ ಬಹಳ ಸುದ್ದಿಯಾಗಿದ್ದು,  2007ರಲ್ಲಿ ಪ್ಲೇ ಬಾಯ್ ಮ್ಯಾಗಜೀನ್ ನಲ್ಲಿ ಬೆತ್ತಲೆಯಾಗಿ ಕಾಣಿಸಿಕೊಳ್ಳುವ ಮೂಲಕ. ಅಲ್ಲಿಂದ ಈಕೆಗೆ ಸಕತ್​ ಡಿಮಾಂಡ್​ ಬಂತು. ಸದ್ಯ ಕಿಮ್​ಗೆ ವಯಸ್ಸು 43 ವರ್ಷ. ಸದ್ಯ ಈಕೆ  ರೂಪದರ್ಶಿ, ನಟಿ, ನಿರ್ಮಾಪಕಿ ಹಾಗೂ ಮಳಿಗೆ ಓನರ್ ಕೂಡ ಹೌದು. ಈಕೆ ಸ್ತನಗಳನ್ನು ಮಾತ್ರವಲ್ಲದೇ ನಿತಂಬವನ್ನೂ ಪ್ಲಾಸ್ಟಿಕ್​ ಸರ್ಜರಿ ಮೂಲಕ ಬದಲಾಯಿಸಿಕೊಂಡವರು! ಈಕೆಯನ್ನೇ ಹೋಲುತ್ತಿದ್ದ ನಟಿಯೊಬ್ಬಳು ತಾನೂ ಕಿಮ್​ ರೀತಿ ಆಗಲು ಪ್ಲಾಸ್ಟಿಕ್​  ಸರ್ಜರಿ ಮಾಡಿಸಿಕೊಂಡು ಕೆಲವೇ ದಿನಗಳಲ್ಲಿ ಹೃದಯಾಘಾತದಿಂದ ಸಾವನ್ನಪ್ಪಿದ್ದು ಸಕತ್​ ಸದ್ದು ಮಾಡಿತ್ತು. 

ಹಾಗೆಂದು ಹಲವು ಬಾಲಿವುಡ್​ ನಟಿಯರು ಪ್ಲಾಸ್ಟಿಕ್​ ಸರ್ಜರಿ ಮೊರೆ ಹೋದವರೆ. ಮೂಗು, ಕಣ್ಣು, ಕೆನ್ನೆ, ತುಟಿ... ಹೀಗೆ ಕತ್ತರಿ ಹಾಕಿಸಿಕೊಂಡವರು ಕೆಲವರಾದರೆ, ರಾಖಿ ಸಾವಂತ್​, ಶೆರ್ಲಿನ್​ ಚೋಪ್ರಾ, ಮಲೈಕಾ ಅರೋರಾ ಸೇರಿದಂತೆ ಕೆಲವು ನಟಿಯರು ದೇಹಕ್ಕೆ ಕತ್ತರಿ ಪ್ರಯೋಗ ಮಾಡಿಸಿಕೊಂಡಿದ್ದಾರೆ. ಅಂಥವರಲ್ಲಿ ಒಬ್ಬರು ಕಿಮ್​. ಇದೀಗ ಕಿಮ್​ ಭರ್ಜರಿ ವಜ್ರಾಭರಣಗಳ ಜೊತೆ ವಜ್ರಗಳೇ ಇರುವ ಬಟ್ಟೆಯನ್ನು ಧರಿಸಿ, ಬಂದಿರುವ ವಿಡಿಯೋ ವೈರಲ್​  ಆಗಿದೆ. ಈ ಡ್ರೆಸ್​ ಸ್ವಲ್ಪ ಆಕೆಗೆ ಇರುಸುಮುರುಸು ತರುತ್ತಿದ್ದುರಿಂದ ಆಗಾಗ ರಿಪೇರಿ ಮಾಡಿಕೊಳ್ಳುವುದನ್ನೂ ಈ ವಿಡಿಯೋದಲ್ಲಿ ನೋಡಬಹುದು. 
 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಸಾಯಿಬಾಬ ನಟ ಸುಧೀರ್ ಆಸ್ಪತ್ರೆ ದಾಖಲು, ಚಿಕಿತ್ಸೆಗೆ 11 ಲಕ್ಷ ರೂ ನೀಡಲು ಶಿರಡಿ ಟ್ರಸ್ಟ್‌ಗೆ ಸೂಚನೆ
ಶಾಕಿಂಗ್.. ಆ ನಟ-ನಟಿ ಈ ವಯಸ್ಸಿನಲ್ಲಿ ಮದುವೆ ಆಗೋದಾ?.. ವಿಡಿಯೋ ನೋಡಿ ನೆಟ್ಟಿಗರ ತಲೆ ಗಿರಗಿರ..!