
ಒಳ್ಳೆಯದನ್ನೇ ಮಾತಾಡಬೇಕು, ಒಳ್ಳೆಯದನ್ನೇ ಯೋಚಿಸಬೇಕು, ನಮ್ಮ ಮಾತುಗಳನ್ನು ಕೇಳಿ ಅಶ್ವಿನಿ ದೇವತೆಗಳು ಅಸ್ತು ಅಂತ ಹೇಳ್ತಾರಂತೆ. ಹೌದು, ವಿಕ್ಕಿ ಕೌಶಲ್, ಕತ್ರಿನಾ ಕೈಫ್‌ನಲ್ಲಿ ಈ ವಿಷಯ ಸತ್ಯ ಆಗಿದೆ.
21ನೇ ವಯಸ್ಸಿನಲ್ಲೇ ಮದುವೆ
ವಿಕ್ಕಿ ಕೌಶಲ್ ಹಾಗೂ ಕತ್ರಿನಾ ಕೈಫ್ ಈಗ ದಂಪತಿ. ವರ್ಷಗಳ ಅಂತರದಲ್ಲಿ ಈ ಜೋಡಿ ಪ್ರೀತಿಯಲ್ಲಿ ಬಿದ್ದು, ಮದುವೆ ಆಗಿತ್ತು. ಆದರೆ ವಿಕ್ಕಿ ಕೌಶಲ್ ಅವರಿಗೆ 21ನೇ ವಯಸ್ಸಿದ್ದಾಗಲೇ ಕತ್ರಿನಾ ಕೈಫ್, “ನಾನು ನಿಮ್ಮನ್ನು ಮದುವೆ ಆಗ್ತೀನಿ” ಅಂತ ಹೇಳಿದ್ದರು.
ರಶ್ಮಿಕಾ ಮಂದಣ್ಣ ಚಿತ್ರರಂಗಕ್ಕೆ ಬರೋ ಮುನ್ನವೇ ಆ ರೀತಿ ಹೇಳಿದ್ದ ತಂದೆ ಮದನ್ ಮಂದಣ್ಣ, ನೀವು ಒಪ್ತೀರಾ?
ನಿಮ್ಮನ್ನು ಮದುವೆ ಆಗೋ ಆಸೆ
ಒಂದು ಸಂದರ್ಶನದಲ್ಲಿ ಸಲ್ಮಾನ್ ಖಾನ್, ರಣಬೀರ್ ಕಪೂರ್, ಕತ್ರಿನಾ ಕೈಫ್ ಭಾಗಿ ಆಗುತ್ತಾರೆ. ಅಲ್ಲಿ ವಿಕ್ಕಿ ಕೌಶಲ್ ಕೂಡ ಇರುತ್ತಾರೆ. ಆಗ ಅವರು “ನೀವು ರಣಬೀರ್ ಕಪೂರ್ ಹಾಗೂ ಸಲ್ಮಾನ್ ಖಾನ್ ಮಧ್ಯೆ ಯಾರನ್ನು ಮದುವೆ ಆಗ್ತೀರಿ?” ಅಂತ ಪ್ರಶ್ನೆ ಮಾಡ್ತಾರೆ. ಆ ಮಾತು ಕೇಳಿ ರಣಬೀರ್ ಸಿಕ್ಕಾಪಟ್ಟೆ ನಗುತ್ತಾರೆ. ಸಲ್ಮಾನ್ ಖಾನ್ ಮುಖದಲ್ಲೂ ನಗು ಮೂಡುವುದು. ಆಗ ಕತ್ರಿನಾ ಕೈಫ್ “ನಾನು ನಿಮ್ಮನ್ನು ಮದುವೆ ಆಗೋಕೆ ಇಷ್ಟಪಡ್ತೀನಿ” ಎಂದು ಹೇಳುತ್ತಾರೆ. ಅಂದು ಆಡಿದ ಮಾತು ನಿಜ ಆಯ್ತು ಅಲ್ವೇ? ಇದು ಎಡಿಟೆಡ್ ವಿಡಿಯೋ ಅಂತಲೂ ಹೇಳಲಾಗ್ತಿದೆ.
ಸಿನಿಮಾ ತುಂಬಾ ಚೆನ್ನಾಗಿದೆ, ವಿಕ್ಕಿ ಕೌಶಲ್ ನಟನೆ ಅದ್ಭುತವಾಗಿದೆ | 'Chhaava' movie review | Suvarna News
ವೇದಿಕೆಯಲ್ಲಿ ಪ್ರೇಮ ನಿವೇದನೆ
ಅದಾದ ನಂತರದಲ್ಲಿ ಕೆಲ ವರ್ಷಗಳ ಬಳಿಕ ಪ್ರತಿಷ್ಠಿತ ಪ್ರಶಸ್ತಿ ಸಮಾರಂಭದಲ್ಲಿ ವಿಕ್ಕಿ ಕೌಶಲ್ ಅವರು ನಿರೂಪಕರಾಗಿದ್ದಾಗ, ವೇದಿಕೆ ಮೇಲೆ ಕತ್ರಿನಾ ಕೈಫ್ ಆಗಮನ ಆಗುವುದು. ಕತ್ರಿನಾರ ಜೊತೆ ತಮಾಷೆ ಮಾಡುತ್ತ ವಿಕ್ಕಿ ಕೌಶಲ್ ಅವರು “ನೀವು ವಿಕ್ಕಿ ಕೌಶಲ್‌ರಂಥ ಹುಡುಗನನ್ನು ಹುಡುಕಿ ಯಾಕೆ ಮದುವೆ ಆಗಬಾರದು?” ಅಂತ ಪ್ರಶ್ನೆ ಮಾಡ್ತಾರೆ. ಅಲ್ಲೇ ಇದ್ದ ಸಲ್ಮಾನ್ ಖಾನ್ ಕೂಡ ಒಂದುಕ್ಷಣ ಹುಬ್ಬೇರಿಸುತ್ತಾರೆ. ಕತ್ರಿನಾ ಕೈಫ್ ನಾಚಿಕೊಂಡು ಸುಮ್ಮನಾಗುತ್ತಾರೆ.
Chhaava Movie 200 ಕೋಟಿ ರೂ ಕಲೆಕ್ಷನ್; ರಶ್ಮಿಕಾ ಮಂದಣ್ಣ ಸಂಭಾವನೆ ಎಷ್ಟು?
ಖಾಸಗಿಯಾಗಿ ಮದುವೆ!
ಇನ್ನೇನು ಕೊರೊನಾ ಟೈಮ್‌ನಲ್ಲಿ ವಿಕ್ಕಿ ಕೌಶಲ್ ಹಾಗೂ ಕತ್ರಿನಾ ಕೈಫ್ ನಡುವೆ ಸ್ನೇಹ ಶುರುವಾಗಿ ಮದುವೆ ಹಂತಕ್ಕೆ ಹೋಗುವುದು. ಸಾಕಷ್ಟು ಬಾರಿ ಕತ್ರಿನಾ ಮನೆ ಮುಂದೆ ವಿಕ್ಕಿ ಕೌಶಲ್ ಹೋಗುವ ದೃಶ್ಯ ಕ್ಯಾಮರಾದಲ್ಲಿ ಸೆರೆ ಆಗಿದೆ. ಪ್ರೀತಿ ಬಗ್ಗೆ ಎಲ್ಲಿಯೂ ಹೇಳಿಕೊಳ್ಳದ ಈ ಜೋಡಿ ರಾಜಸ್ಥಾನದಲ್ಲಿ ಡಿಸೆಂಬರ್ 9ರಂದು ವೈವಾಹಿಕ ಜೀವನಕ್ಕೆ ಕಾಲಿಟ್ಟಿತ್ತು. ಬಹಳ ಖಾಸಗಿಯಾಗಿ ನಡೆದ ಈ ಮದುವೆಯಲ್ಲಿ ಕೇವಲ 120 ಅತಿಥಿಗಳು ಭಾಗವಹಿಸಿದ್ದರು.
8 ವರ್ಷ, 24 ಸ್ಟಾರ್ ಸಿನಿಮಾ; Rashmika Mandanna ಹೇಳೋ ಆ ಧಾರ್ಮಿಕ ಮಂತ್ರದಿಂದಲೇ ಇಷ್ಟು ಯಶಸ್ಸು ಸಿಕ್ತಾ?
ಮದುವೆ ಬಳಿಕ ಕತ್ರಿನಾ ಕೈಫ್ ಅಷ್ಟಾಗಿ ಸಿನಿಮಾಗಳಲ್ಲಿ ಬ್ಯುಸಿ ಆಗ್ತಿಲ್ಲ. ಇನ್ನು ವಿಕ್ಕಿ ಕೌಶಲ್ ಅವರು ಚಿತ್ರರಂಗದಲ್ಲಿ ಆಕ್ಟಿವ್ ಆಗಿದ್ದು, ಇತ್ತೀಚೆಗೆ ʼಛಾವಾʼ ಸಿನಿಮಾದಲ್ಲಿ ಛತ್ರಪತಿ ಶಿವಾಜಿ ಪಾತ್ರ ಮಾಡಿ ದೊಡ್ಡ ಖ್ಯಾತಿ ಗಳಿಸಿದರು. ಡ್ಯಾನ್ಸ್, ನಟನೆಯಲ್ಲೂ ಮೋಡಿ ಮಾಡಿರೋ ವಿಕ್ಕಿ ಕೌಶಲ್ ಈಗ ಪುರಾಣದ ಪಾತ್ರಗಳನ್ನೂ ನಾನು ನಟಿಸಬಲ್ಲೆ, ಜೀವ ತುಂಬಬಲ್ಲೆ ಎಂದು ಸಾಬೀತುಪಡಿಸಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.