ನಟಿಯರ ಗರ್ಭಧಾರಣೆಯ ರಹಸ್ಯ ಬಿಚ್ಚಿಟ್ಟ ಪರಿಣೀತಿ ಚೋಪ್ರಾ! ಹೀಗೆಲ್ಲಾ ಉಂಟಾ ಕೇಳ್ತಿರೋ ಫ್ಯಾನ್ಸ್​..

Published : Feb 23, 2025, 02:29 PM ISTUpdated : Feb 23, 2025, 03:26 PM IST
ನಟಿಯರ ಗರ್ಭಧಾರಣೆಯ ರಹಸ್ಯ ಬಿಚ್ಚಿಟ್ಟ ಪರಿಣೀತಿ ಚೋಪ್ರಾ!  ಹೀಗೆಲ್ಲಾ ಉಂಟಾ ಕೇಳ್ತಿರೋ ಫ್ಯಾನ್ಸ್​..

ಸಾರಾಂಶ

ಪರಿಣೀತಿ ಚೋಪ್ರಾ ಮದುವೆಯಾಗಿ ಒಂದೂವರೆ ವರ್ಷವಾದರೂ, ಗರ್ಭಧಾರಣೆಯ ಬಗ್ಗೆ ನೆಟ್ಟಿಗರು ಪ್ರಶ್ನಿಸುತ್ತಿದ್ದಾರೆ. ಈ ಹಿಂದೆ, ಸಡಿಲ ಉಡುಗೆ ಧರಿಸಿದ್ದಾಗ ಗರ್ಭಿಣಿ ಎಂದು ಸುದ್ದಿ ಹರಡಿದಾಗ ಪರಿಣೀತಿ ಅಸಮಾಧಾನ ವ್ಯಕ್ತಪಡಿಸಿದ್ದರು. ನಟಿಯರು ಕಫ್ತಾನ್, ಸಡಿಲ ಷರ್ಟ್ ಧರಿಸಿದಾಗ ಗರ್ಭಿಣಿ ಎನ್ನುವವರಿಗೆ ಅವರು ಟಾಂಗ್ ನೀಡಿದ್ದರು. ತನಗೆ ಮಕ್ಕಳನ್ನು ದತ್ತು ತೆಗೆದುಕೊಳ್ಳುವ ಆಸೆಯಿದೆ ಎಂದು ಈ ಹಿಂದೆ ಹೇಳಿದ್ದರು.

ಬಾಲಿವುಡ್​ ನಟಿ ಪರಿಣೀತಿ ಚೋಪ್ರಾ ಮದುವೆಯಾಗಿ ಒಂದೂವರೆ ವರ್ಷ ಕಳೆದಿದೆ. 2023ರ ಸೆಪ್ಟೆಂಬರ್​ನಲ್ಲಿ ನಟಿ ಆಮ್​  ಆದ್ಮಿ ಪಕ್ಷದ ನಾಯಕ, ರಾಜ್ಯಸಭಾ ಸದಸ್ಯ ರಾಘವ್ ಚಡ್ಡಾ ಅವರ ಕೈಹಿಡಿದಿದ್ದಾರೆ. ನಿನ್ನೆಯಷ್ಟೇ ಇವರಿಬ್ಬರೂ ರೊಮ್ಯಾಂಟಿಕ್​ ಮೂಡ್​ನಲ್ಲಿ ಜಾಲಿ ರೈಡ್​ ಮಾಡುತ್ತಿರುವ ವಿಡಿಯೋ ಸಕತ್​ ವೈರಲ್​ ಆಗಿತ್ತು. ದೆಹಲಿಯಲ್ಲಿ ಆಮ್​ ಆದ್ಮಿ ಪಕ್ಷ ಅಧಿಕಾರ ಕಳೆದುಕೊಂಡಿರುವ ಹಿನ್ನೆಲೆಯಲ್ಲಿ ರಾಘವ್​ ಚಡ್ಡಾ ಅವರು  ನಿರಾಶರಾಗಿದ್ದರೂ, ಪತ್ನಿಯ ಜೊತೆ ಫುಲ್​ ಎಂಜಾಯ್​ ಮಾಡುತ್ತಿದ್ದಾರೆ ಎಂದು ಕಮೆಂಟ್​ಗಳಲ್ಲಿ ಹೇಳಲಾಗಿತ್ತು. ಮದುವೆಯಾಗಿ ಒಂದೂವರೆ ವರ್ಷವಾದರೂ, ಗುಡ್​ನ್ಯೂಸ್​ ಇಲ್ವಾ ಎಂದು ನೆಟ್ಟಿಗರು ಪ್ರಶ್ನೆ ಮಾಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ನಟಿಯರ ಗರ್ಭಧಾರಣೆಯ ಕುರಿತು ಪರಿಣೀತಿ ಅವರು, ಈ ಮೊದಲು ಹಾಕಿದ್ದ ಪೋಸ್ಟ್​  ಪುನಃ ವೈರಲ್​ ಆಗುತ್ತಿದೆ. 

 ನಟಿ ಪರಿಣಿತಿ ಮದುವೆಯಾದ ಸ್ವಲ್ಪ ತಿಂಗಳಿನ ಬಳಿಕ ಲೂಸ್​ ಡ್ರೆಸ್​ ಧರಿಸಿ ಕಾಣಿಸಿಕೊಂಡಿದ್ದರು. ಆಗ ಅವರ ಹೊಟ್ಟೆ ಮುಂದೆ ಬಂದಂತೆ ಕಾಣಿಸುತ್ತಿತ್ತು. ಆಗ ನಟಿ ಗರ್ಭಿಣಿ ಎಂದು ಸೋಷಿಯಲ್​  ಮೀಡಿಯಾದಲ್ಲಿ ಭಾರಿ ಸದ್ದು ಉಂಟಾಗಿತ್ತು.  ಇದೇ ರೀತಿ ದೀಪಿಕಾ ಪಡುಕೋಣೆಗೂ ಮದುವೆಯಾದ ಕೆಲ ತಿಂಗಳಿನಲ್ಲಿಯೇ ಸುದ್ದಿಯಾಗಿದ್ದನ್ನು ಹಾಗೂ ತಮ್ಮ ಬಗ್ಗೆ ಹರಿದಾಡಿದ್ದ ಸುದ್ದಿಯ ಬಗ್ಗೆ ನೊಂದು ನಟಿ ಹೇಳಿದ್ದ ಮಾತುಗಳು ಪುನಃ ವೈರಲ್​  ಆಗುತ್ತಿವೆ. ತಾವು ಧರಿಸಿರುವ ಸಡಿಲವಾಗಿರುವ ಬಟ್ಟೆ ಎನ್ನುವ ಹಿನ್ನೆಲೆಯಲ್ಲಿ ನಟಿಯರು ಜನರ ಬಾಯಲ್ಲಿ ಗರ್ಭಿಣಿ ಯಾವಾಗ ಆಗುತ್ತಾರೆ ಎಂಬ ಬಗ್ಗೆ ಮಾರ್ಮಿಕವಾಗಿ ತಮ್ಮ ಸೋಷಿಯಲ್​ ಮೀಡಿಯಾದಲ್ಲಿ ಬರೆದುಕೊಂಡಿದ್ದರು.   ತಾವು ಗರ್ಭಿಣಿ ಎಂಬ ಸುದ್ದಿಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸುತ್ತಲೇ, ಗರ್ಭಿಣಿ ಸುದ್ದಿ ಹರಡುವವರಿಗೆ ಪರೋಕ್ಷವಾಗಿ ಈ ಮೂಲಕ ಚುಚ್ಚಿದ್ದರು. ಅವರು ಹೇಳಿದ್ದೇನೆಂದರೆ, ನಟಿಯರು ಗರ್ಭಿಣಿ ಯಾವಾಗ ಆಗುತ್ತಾರೆ ಎಂದರೆ, ಕಫ್ತಾನ್​ ಉಡುಗೆ ತೊಟ್ಟಾಗ, ಸಡಿಲವಾಗಿರುವ ಷರ್ಟ್​ ತೊಟ್ಟಾಗ ಮತ್ತು ಕಂಫಿ ಇಂಡಿಯನ್​ ಕುರ್ತಾ ಧರಿಸಿದಾಗ ಎಂದಿದ್ದರು. ಈ ಮೂಲಕ ಸುಖಾಸುಮ್ಮನೇ ಸುದ್ದಿ ಹರಡುವವರ ಬಗ್ಗೆ ಗರಂ ಆಗಿದ್ದರು. 

ಯುಕೆಜಿಯಲ್ಲೇ ಪ್ರಪೋಸ್​ ಮಾಡಿದ್ದ... ಏಣಿ ಹತ್ತಿ ತಾಳಿ ಕಟ್ಟೋ ಹಾಗಿದ್ದ... ನಟಿ ನೇಹಾ ಗೌಡ ಲವ್​ ಸ್ಟೋರಿ ಕೇಳಿ..

ಸಾಮಾನ್ಯವಾಗಿ ನಟ-ನಟಿಯರ ಬಗ್ಗೆ ರೂಮರ್ಸ್​ ಸದಾ ಹರಡುತ್ತಲೇ ಇರುತ್ತದೆ. ಅವರ ಸಂಬಂಧ, ರಿಲೇಷನ್​, ಲಿವ್​ ಇನ್​ ರಿಲೇಷನ್​, ಡೇಟಿಂಗ್​ ಇವೆಲ್ಲವೂ ಸದಾ ಚಾಲ್ತಿಯಲ್ಲಿ ಇರುವ ವಿಷಯಗಳೇ. ಅದರಲ್ಲಿಯೂ ನಟ-ನಟಿಯರು ಯಾರದ್ದಾದರು ಜೊತೆ ಎಂಗೇಜ್​ ಆಗಿದ್ದಾರೆ ಎಂದಾಗ ಅವರ ಮದುವೆ ಯಾವಾಗ ಎಂದು ಅಭಿಮಾನಿಗಳು ಕಾತರದಿಂದ ಕಾಯುತ್ತಿರುತ್ತಾರೆ. ಇನ್ನು ಮದುವೆಯಾಗಿ ಬಿಟ್ಟರೆ, ಅವರನ್ನೇ ಹಿಂಬಾಲಿಸುವ ಪಾಪರಾಜಿಗಳ ಸಂಖ್ಯೆ ಕಡಿಮೆ ಏನಿಲ್ಲ. ಅವರು ಯಾವಾಗ ಗರ್ಭಿಣಿಯಾಗುತ್ತಾರೆ ಎಂಬ ಸುದ್ದಿ ಸದ್ದು ಮಾಡುತ್ತದೆ. ಇದು ಕೇವಲ ನಟ-ನಟಿಯರ ವಿಷಯವಲ್ಲದೇ ಮದುವೆಯಾದ ಮೇಲೆ ಬಹುತೇಕ ಮಹಿಳೆಯರಿಗೆ ಇದೇ ಪ್ರಶ್ನೆ ಕೇಳುವುದು ಸಹಜವಾದರೂ ನಟಿಯರ ಮೇಲೆ ದೊಡ್ಡ ಕಣ್ಣು ಇರುವ ಕಾರಣ, ಇವರು ಯಾವಾಗ ಗರ್ಭ ಧರಿಸುತ್ತಾರೆ, ಅದರ ಬಗ್ಗೆ ತಾವೇ ಮೊದಲು ವಿಷಯ ತಿಳಿಸಬೇಕು ಎಂದು ಬಹುತೇಕ ಮಂದಿ ಕಾತರದಿಂದ ಕಾಯುತ್ತಿರುತ್ತಾರೆ. ಅದರಲ್ಲಿಯೂ ಇತ್ತೀಚೆಗೆ ಮದುವೆಯಾದ ಕೆಲವೇ ತಿಂಗಳಿನಲ್ಲಿಯೇ ಮಗುವಾಗುವ ಸಂಪ್ರದಾಯವೂ ಇರುವ ಕಾರಣ, ನಟಿಯರ ಮೇಲೆ ವಿಶೇಷ ದೃಷ್ಟಿ ಇಡಲಾಗುತ್ತದೆ.
 

ಕೆಲ ತಿಂಗಳ ಹಿಂದೆ ನಟಿ  ಅಮ್ಮನಾಗುವ ವಿಷಯದ ಕುರಿತು ಬಹಿರಂಗವಾಗಿ ಮಾತನಾಡಿದ್ದರು. ತಮಗೆ ಮಗುವನ್ನು ಹೆರುವುದಕ್ಕಿಂತಲೂ ದತ್ತು ತೆಗೆದುಕೊಳ್ಳಬೇಕು ಎನ್ನುವ ಆಸೆಯಿದೆ ಎಂದು ಹೇಳಿದ್ದರು. ಒಂದಲ್ಲ, ಎರಡಲ್ಲ ಅನೇಕ ಮಕ್ಕಳನ್ನು ದತ್ತಕಕ್ಕೆ ಪಡೆಯುವ ಆಸೆಯನ್ನು ನಟಿ ಬಿಚ್ಚಿಟ್ಟಿದ್ದರು. ನಾನು ಮಗುವನ್ನು ದತ್ತು ತೆಗೆದುಕೊಳ್ಳಲು ಬಯಸುವೆ, ಒಂದಲ್ಲ ಹಲವು ಮಕ್ಕಳನ್ನು ದತ್ತು ತೆಗೆದುಕೊಳ್ಳಲು ಬಯಸುವೆ ಎಂದು ಫಿಲ್ಮ್‌ಫೇರ್‌ಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದರು. ನನಗೆ ಮಗುವನ್ನು ದತ್ತು ತೆಗೆದುಕೊಳ್ಳುವುದು ಇಷ್ಟ. ನನಗೆ ಸಾಕಷ್ಟು ಮಕ್ಕಳು ಬೇಕು. ನನಗೆ ಎಲ್ಲಾ ಮಕ್ಕಳನ್ನು ಹೆರುವುದು ಕಷ್ಟವಾಗಬಹುದು. ಅದಕ್ಕಾಗಿ ನಾನು ದತ್ತು ತೆಗೆದುಕೊಳ್ಳಲು ಬಯಸುವೆ ಎಂದು ಅವರು ಹೇಳಿದ್ದರು. ಇದೇ ಕಾರಣಕ್ಕೆ ನಟಿ ಗರ್ಭಿಣಿ ಎಂದು ಸೋಷಿಯಲ್​ ಮೀಡಿಯಾದಲ್ಲಿ ಸಕತ್​ ಸುದ್ದಿಯಾಗಿದೆ.

ಅಣ್ಣಯ್ಯನ ಮೇಲೆ ಪಾರುಗೆ ಈಗಷ್ಟೇ ಶುರುವಾಗಿದೆ ಲವ್​: ಅಬ್ಬಬ್ಬಾ ಇಲ್ಲಿ ನೋಡಿ ಈ ಪರಿ ರೊಮಾನ್ಸ್...

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಅತ್ತ ಪಂಚೆ ಉದುರಿ ಹೋಗುತ್ತಿದೆ.. ಇತ್ತ ಕುಣಿದು ಕುಪ್ಪಳಿಸಿ ಇಳಯರಾಜಾ ಕಂಪೋಸ್ ಮಾಡಿದ ಮಜವಾದ ಹಾಡು ಯಾವುದು?
ಅಖಂಡ 2 ರಿಲೀಸ್ ನಿಲ್ಲೋಕೆ ಅಸಲಿ ಕಾರಣ ಇದೇನಾ? ಅಷ್ಟಕ್ಕೂ ಬಾಲಯ್ಯ ಮುಂದೆ ಏನ್ಮಾಡ್ತಾರೆ?