
ಬಹುಭಾಷಾ ನಟಿ ಮೃಣಾಲ್ ಠಾಕೂರ್ ಒಂದಲ್ಲೊಂದು ವಿಚಾರಕ್ಕೆ ಗಮನ ಸೆಳೆಯುತ್ತಿರುತ್ತಾರೆ. ಸೀತಾ ರಾಮಂ ಸಿನಿಮಾ ಬಳಿಕ ಸೌತ್ ಸಿನಿಮಾರಂಗದಲ್ಲೂ ದೊಡ್ಡ ಮಟ್ಟದ ಖ್ಯಾತಿ ಗಳಿಸಿರುವ ಮೃಣಾಲ್ ಠಾಕೂರ್ ತನ್ನ ಬೇಡಿಕೆಯನ್ನು ಹೆಚ್ಚಿಸಿಕೊಂಡಿದ್ದಾರೆ. ಬಿಗ್ ಸಕ್ಸಸ್ ಬಳಿಕ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ಮೃಣಾಲ್ ಇತ್ತೀಚಿಗಷ್ಟೆ ಲಸ್ಟ್ ಸ್ಟೋರಿ 2 ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದಾರೆ. ಆದರೆ ಲಸ್ಟ್ ಸ್ಟೋರಿ 2 ನಿರೀಕ್ಷೆಯ ಗೆಲುವು ಕಂಡಿಲ್ಲ. ಸದ್ಯ ತೆಲುಗು ಸಿನಿನಮಾರಂಗದ ಬೇಡಿಕೆಯ ನಟಿಯರಲ್ಲಿ ಮೃಣಾಲ್ ಕೂಡ ಒಬ್ಬರು. ಸೀತಾ ರಾಮಂ ಖ್ಯಾತಿಯಲ್ಲಿಯೇ ಮೃಣಾಲ್ ಅನೇಕ ಸಿನಿಮಾಗಳಿಗೆ ಸಹಿ ಮಾಡಿದ್ದಾರೆ. ಈ ನಡುವೆ ಮೃಣಾಲ್ ಬಗ್ಗೆ ಮತ್ತೊಂದು ಸುದ್ದಿ ವೈರಲ್ ಆಗಿದೆ. ಸಕ್ಸಸ್ ಸಿಗುತ್ತಿದ್ದಂತೆ ಸಂಭಾವನೆ ಏರಿಸಿಕೊಳ್ಳುವುದು ಸಾಮಾನ್ಯ. ಮೃಣಾಲ್ ಕೂಡ ತನ್ನ ಸಂಭಾವನೆ ಹೆಚ್ಚಿಸಿಕೊಂಡಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಿದೆ.
ಮೃಣಾಲ್ ಸದ್ಯ ಒಂದು ಸಿನಿಮಾಗೆ 3 ರಿಂದ 4 ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಿದ್ದಾರೆ ಎನ್ನಲಾಗಿದೆ. ಬಾಲಿವುಡ್‌ನಲ್ಲಿ ಮೃಣಾಲ್ ಕೇವಲ ಒಂದು ಕೋಟಿ ಸಂಭಾವನೆ ಪಡೆಯುತ್ತಿದ್ದಾರೆ. ಆದರೆ ಸೌತ್ ನಲ್ಲಿ 4 ಕೋಟಿಗೆ ಏರಿಸಿಕೊಂಡಿದ್ದಾರೆ ಎನ್ನಲಾಗಿದೆ. ಸದ್ಯ ಮೃಣಾಲ್ ತೆಲುಗು ಸ್ಟಾರ್ ನಾನಿ ಜೊತೆ ನಟಿಸುತ್ತಿದ್ದಾರೆ. ನಾನಿ ನಟನೆಯ 30ನೇ ಸಿನಿಮಾಗೆ ಮೃಣಾಲ್ ನಾಯಕಿಯಾಗಿ ಮಿಂಚಲು ಸಜ್ಜಾಗಿದ್ದಾರೆ. ಇನ್ನೂ ಹೆಸರಿಡದ ಸಿನಿಮಾಗೆ 3 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದಾರೆ ಎನ್ನಲಾಗಿದೆ.
ನಾನಿ ಸಿನಿಮಾ ಜೊತೆಗೆ ಮೃಣಾಲ್ ತೆಲುಗಿನ ಮತ್ತೋರ್ವ ಖ್ಯಾತ ನಟ ಸೆನ್ಸೇಷನ್ ಸ್ಟಾರ್ ವಿಜಯ್ ದೇವರಕೊಂಡ ಜೊತೆ ನಟಿಸುತ್ತಿದ್ದಾರೆ. ದೇವರಕೊಂಡ ಜೊತೆ ನಟಿಸಲು ಮೃಣಾಲ್ ಭರ್ಜರಿ ಮೊತ್ತ ಜೇಬಿಗಿಳಿಸಿದ್ದಾರೆ ಎನ್ನಲಾಗಿದೆ. ಮೂಲಗಳ ಪ್ರಕಾರ 4 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದಾರಂತೆ.
ಇದು ಅತಿ ಆಯ್ತು, ಸೀತಾ ಈಗ ಶೀಲಾ ಆಗಿದ್ದಾರೆ; ಮೃಣಾಲ್ ಹಾಟ್ ಫೋಟೋಗೆ ಅಭಿಮಾನಿಗಳ ಬೇಸರ
ತೆಲುಗು ಸಿನಿಮಾರಂಗದಲ್ಲಿ ಸದ್ಯ ಸಿಕ್ಕಾಪಟ್ಟೆ ಬ್ಯುಸಿಯಾಗಿರುವ ನಟಿಯರಲ್ಲಿ ಕನ್ನಡತಿ ಶ್ರೀಲೀಲಾ ಕೂಡ ಒಬ್ಬರು. ಶ್ರೀಲೀಲಾನೆ ಇನ್ನೂ 1-2 ಕೋಟಿ ರೂಪಾಯಿ ಪಡೆಯುತ್ತಿದ್ದಾರೆ. ಆದರೆ ಬಾಲಿವುಡ್‌ನಿಂದ ಬಂದ ಮೃಣಾಲ್ 4 ಕೋಟಿ ಪಡೆಯುತ್ತಿರುವುದು ಅಚ್ಚರಿ ಮೂಡಿಸಿದೆ. ಮೃಣಾಲ್ ಗಾಗಿ ನಿರ್ಮಾಪಕರು ಸಹ ದೊಡ್ಡ ಮೊತ್ತ ಸುರಿಯಲು ಸಿದ್ಧರಾಗಿದ್ದಾರೆ. ಸೀತ ರಾಮಂ ಬಳಿಕ ಮತ್ತೊಂದು ಸಕ್ಸಸ್‌ಗಾಗಿ ಮೃಣಾಲ್ ಕಾಯುತ್ತಿದ್ದಾರೆ. ತೆಲುಗು ಸಿನಿಮಾಗಳು ಮತ್ತೆ ಗೆಲುವು ತಂದುಕೊಡುತ್ತಾ ಕಾದು ನೋಡಬೇಕಿದೆ.
ಹೊಸ ನಾಯಕಿ ಹುಡುಕಿಕೊಂಡ ವಿಜಯ್ ದೇವರಕೊಂಡ: ಗೀತಗೋವಿಂದಂ ಪಾರ್ಟ್ 2ನಿಂದ ರಶ್ಮಿಕಾ ಔಟ್
ಮೃಣಾಲ್ ಸದ್ಯ ಪೂಜಾ ಮೇರಿ ಜಾನ್, ಪಿಪ್ಪಾ, ಆಂಕ್ ಮಿಚೋಲಿ, ನಾನಿ 30 ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಸೀತಾ ರಾಮಂ ಬಳಿಕ ಬಂದ ಸಿನಿಮಾಗಳು ದೊಡ್ಡ ಮಟ್ಟದಲ್ಲಿ ಸಕ್ಸಸ್ ಕಂಡಿಲ್ಲ. ಹಾಗಾಗಿ ಮತ್ತೊಂದು ಸಕ್ಸಸ್‌ಗಾಗಿ ಮೃಣಾಲ್ ಕಾಯುತ್ತಿದ್ದಾರೆ. ಸೌತ್ ಪ್ರೇಕ್ಷಕರು ಮೃಣಾಲ್ ಕೈ ಹಿಡಿಯುತ್ತಾರಾ ಕಾದುನೋಡಬೇಕಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.