ಪ್ಯಾಂಟ್ ಬಿಚ್ಚಿರುವಾಗಲೇ ಮೇಕಪ್‌ ವ್ಯಾನ್‌ಗೆ ಪರಿಣೀತಿ ಚೋಪ್ರಾ ಬರ್ತಾರೆ; ಹೀಗಂದ್ರಾ ರಣವೀರ್ ಸಿಂಗ್ ?

By Shriram Bhat  |  First Published May 24, 2024, 3:42 PM IST

ಪರಿಣೀತಿ ಚೋಪ್ರಾ ನಾವೆಲ್ಲರೂ ರೆಸ್ಟ್‌ನಲ್ಲಿ ಇರುವಾಗ ಎಲ್ಲಾ ಕೋ-ಆರ್ಟಿಸ್ಟ್‌ಗಳ ಮೇಕಪ್‌ ವ್ಯಾನ್‌ ಒಳಕ್ಕೆ ಬಂದು ರೌಂಡ್ಸ್ ಹೊಡೆಯುತ್ತಾ ಇರ್ತಾರೆ. ನಾವು ಕ್ಯಾಮೆರಾ ಮುಂದೆ ಹೋಗುವ ಮೊದಲು ನಮ್ಮದೇ ವ್ಯಾನ್‌ನಲ್ಲಿ ಸಿಂಪಲ್..


ನಟ ರಣವೀರ್ ಸಿಂಗ್ (Ranveer Singh) ನಟಿ ಪರಿಣೀತಿ ಚೋಪ್ರಾ ಮೇಲೆ ಹೀಗೊಂದು ಆರೋಪ ಹೊರಿಸಿದ್ದಾರಾ? ಹೌದು ಎನ್ನುತ್ತಿವೆ ಬಾಲಿವುಡ್ ಸುದ್ದಿ ಮೂಲಗಳು! ನಟ ರಣವೀರ್ ಸಿಂಗ್ ಹಾಗೂ ನಟಿ ಪರಿಣೀತಿ ಚೋಪ್ರಾ (Parineeti Chopra) ಕೆಲವು ಸಿನಿಮಾಗಳಲ್ಲಿ ಒಟ್ಟಿಗೇ ನಟಿಸಿದ್ದಾರೆ. ಅವುಗಳಲ್ಲಿ 'ಕಿಲ್ ದಿಲ್' ಸಾಕಷ್ಟು ಸುದ್ದಿಯಾಗಿತ್ತು. ಕಾರಣ, ಈ ಚಿತ್ರದಲ್ಲಿ ನಟ ರಣವೀರ್ ಸಿಂಗ್ ಹಾಗೂ ಪರಿಣೀತಿ ಚೋಪ್ರಾ ಲಿಪ್‌ ಲಾಕ್ (Lip Lock) ಮಾಡಿದ್ದರು. ಅವರಿಬ್ಬರ ತೆರೆಯ ಮೇಲಿನ ಕೆಮೆಸ್ಟ್ರಿ ಅದೆಷ್ಟು ಸಖತ್‌ ಆಗಿ ವರ್ಕೌಟ್ ಆಗಿತ್ತು ಎಂದರೆ, ಕೆಲವು ಸೀನ್‌ಗಳಿಗಾಗಿ ಹಲವರು ಈ ಚಿತ್ರವನ್ನು ಪದೇಪದೇ ಹೋಗಿ ನೋಡಿದ್ದರು. 

ಕಿಲ್ ದಿಲ್ ಚಿತ್ರದ ಬಳಿಕ ಈ ಜೋಡಿ ಈಗ 'ಕಿಲ್ ಹಾರ್ಟ್' ಚಿತ್ರಕ್ಕೆ ಮತ್ತೆ ಒಟ್ಟಿಗೇ ನಟಿಸುತ್ತಿದ್ದಾರೆ. ಶೂಟಿಂಗ್ ಅಂದಮೇಲೆ ಮೇಕಪ್ ವ್ಯಾನ್, ಶೂಟಿಂಗ್ ಸ್ಪಾಟ್ ಎಲ್ಲವೂ ಸಹಜ. ಅಲ್ಲಿ ಸಹನಟರ ಮಧ್ಯೆ ಮಾತುಕತೆ, ಸೆಟ್‌ನಲ್ಲಿ ಓಡಾಟ ಎಲ್ಲವೂ ಅತ್ಯಂತ ಸಹಜವಾಗಿಯೇ ನಡೆಯುತ್ತವೆ. ಆದರೆ, ಈ ಬಗ್ಗೆ ಸಂದರ್ಶನವೊಂದರಲ್ಲಿ ನಟಿ ಪರಿಣೀತಿ ಚೋಪ್ರಾ, ರಣವೀರ್ ಸಿಂಗ್‌ ಬಗ್ಗೆ ಆರೋಪವೊಂದನ್ನು ಮಾಡಿದ್ದರು. 'ರಣವೀರ್ ವ್ಯಾನ್‌ನಲ್ಲಿ ಡ್ರೆಸ್ ಇಲ್ಲದೆ ಇರುತ್ತಾರೆ. ನಮಗೆ ಮುಜುಗರವಾಗಿ ಕನಿಷ್ಠ ಪ್ಯಾಂಟ್ ಆದರೂ ಹಾಕಿಕೋ ಎಂದು ಸೂಚಿಸಬೇಕು ಎಂದು ಪರಿಣಿತಿ ಹೇಳಿದ್ದಾರೆ. ರಣವೀರ್ ಸಿಂಗ್‌ಗೆ ನಾಚಿಕೆ ಅನ್ನೋದೆ ಇಲ್ಲ' ಎಂದಿದ್ದರು. 

Tap to resize

Latest Videos

A ಸೀಕ್ವೆಲ್‌ಗೆ ಸಜ್ಜಾದ ಚಾಂದಿನಿ-ಗುರುಕಿರಣ್‌ಗೆ ಟೆನ್ಷನ್, ಉಪೇಂದ್ರ ಹೂಂ ಅಂತಾರಾ ಇಲ್ವಾ?

ಈ ಬಗ್ಗೆ ತಿಳಿದ ನಟ ರಣವೀರ್, ನಟಿ ಪರಿಣೀತಿ ಚೋಪ್ರಾಗೆ ಸಖತ್ತಾಗಿಯೇ ಕೌಂಟರ್‌ ಕೊಟ್ಟಿದ್ದಾರೆ. ಆಕೆ, ಪರಿಣೀತಿ ಚೋಪ್ರಾ ನಾವೆಲ್ಲರೂ ರೆಸ್ಟ್‌ನಲ್ಲಿ ಇರುವಾಗ ಎಲ್ಲಾ ಕೋ-ಆರ್ಟಿಸ್ಟ್‌ಗಳ ಮೇಕಪ್‌ ವ್ಯಾನ್‌ ಒಳಕ್ಕೆ ಬಂದು ರೌಂಡ್ಸ್ ಹೊಡೆಯುತ್ತಾ ಇರ್ತಾರೆ. ನಾವು ಕ್ಯಾಮೆರಾ ಮುಂದೆ ಹೋಗುವ ಮೊದಲು ನಮ್ಮದೇ ವ್ಯಾನ್‌ನಲ್ಲಿ ಸಿಂಪಲ್, ಕ್ಯಾಸುವಲ್ ಡ್ರೆಸ್‌ ಹಾಕಿಕೊಂಡಿರುತ್ತೇವೆ. ಕೆಲವೊಮ್ಮೆ ಕನಿಷ್ಠ ಬಟ್ಟೆಯಲ್ಲೂ ಇರುತ್ತೇವೆ. ಶೂಟ್‌ಗೆ ಕರೆ ಬಂದಾಗ, ಬಟ್ಟೆ ಬದಲಾಯಿಸಕೊಂಡು ಹೋಗ್ತೇವೆ. ಆದರೆ, ಈ ನಟಿ ಪರಿಣೀತಿ ಚೋಪ್ರಾ ಎಂಥವರು ಎಂದರೆ, ಅವರು ಯಾವಾಗ ಯಾವ್ ವ್ಯಾನ್‌ ಒಳಗೆ ಎಂಟ್ರಿ ಕೊಡುತ್ತಾರೋ ತಿಳಿಯದು' ಎಂದಿದ್ದಾರೆ. 

ಪ್ಯಾನ್ ಇಂಡಿಯಾ 'ಹಲಗಲಿ'ಯಿಂದ ಹೊರನಡೆದ ಡಾರ್ಲಿಂಗ್ ಕೃಷ್ಣ, ಒಳಬರುವರೇ ಡಾಲಿ ಧನಂಜಯ್?

ಅದೆಷ್ಟೋ ವೇಳೆ ನಾನು ಪ್ಯಾಂಟ್‌ ಬದಲಾಯಿಸುವ ವೇಳೆ ಬರೀ ಚಡ್ಡಿಯಲ್ಲೇ ಇದ್ದಾಗಲೇ ಪರಣೀತಿ ಎಂಟ್ರಿ ಕೊಟ್ಟು ಮಜುಗರ ಅನುಭವಿಸಿದ್ದೂ ಇದೆ. ಹೆಚ್ಚಾಗಿ ಅವರು, ನಾನು ಒಂದು ಪ್ಯಾಂಟ್‌  ತೆಗೆದು ಇನ್ನೊಂದನ್ನು ಹಾಕಿಕೊಳ್ಳುವ ಮಧ್ಯೆ ಇರುವ ಅದೇ ಗ್ಯಾಪ್‌ನಲ್ಲಿ ವ್ಯಾನ್ ಒಳಕ್ಕೆ ಬರುತ್ತಾರೆ. ಆ ಶಾರ್ಪ್‌ ಟೈಮ್‌ ಅನ್ನು ಅಷ್ಟು ಕರಾರುವಕ್ಕಾಗಿ ಅವರಿಗೆ ಅದ್ಯಾರು ಹೇಳುತ್ತಾರೋ ಎಂದು ನಾನು ಬಹಳಷ್ಟು ವೇಳೆ ಯೋಚಿಸುವಂತಾಗಿದೆ' ಎಂದಿದ್ದಾರೆ ನಟ ರಣವೀರ್ ಸಿಂಗ್. ಒಟ್ಟಿನಲ್ಲಿ, ನಟ ರಣವೀರ್ ಸಿಂಗ್ ಹಾಗೂ ನಟಿ ಪರಿಣೀತಿ ಚೋಪ್ರಾ ನಡುವೆ ನಡೆಯುತ್ತಿರುವ ಈ ಪ್ಯಾಂಟ್‌ ಪ್ರಕರಣಕ್ಕೆ ಫುಲ್‌ಸ್ಟಾಪ್ ಸದ್ಯಕ್ಕೆ ಇಲ್ಲವೆಂದು ಅನ್ನಿಸುತ್ತಿದೆ. 

ರಜನಿಕಾಂತ್ ಫೇವರೆಟ್ ಸ್ಟಾರ್ ನಟಿಯ ದುರಂತ ಸಾವು 22ರಲ್ಲೇ ಯಾಕೆ ಸಂಭವಿಸಿತು?

click me!