Latest Videos

ಸಿನಿಮಾ ನಟಿ ಹೇಮಾ ಇಷ್ಟು ದೊಡ್ಡ ಮಾದಕ ವ್ಯಸನಿಯಾ? ಆಕೆ ತೆಗೆದುಕೊಂಡಿದ್ದ ಡೇಂಜರಸ್ ಡ್ರಗ್ಸ್ ಇಲ್ಲಿದೆ ನೋಡಿ..

By Sathish Kumar KHFirst Published May 24, 2024, 2:59 PM IST
Highlights

ಬೆಂಗಳೂರಿನ ರೇವ್ ಪಾರ್ಟಿಯಲ್ಲಿ ಸಿಕ್ಕಿಬಿದ್ದ ತೆಲುಗು ನಟಿ ಹೇಮಾ ಎಂತಹ ಡೇಂಜರಸ್‌ ಡ್ರಗ್ಸ್ ತೆಗೆದುಕೊಂಡಿದ್ದಾಳೆ ಎಂಬ ಮಾಹಿತಿ ಇಲ್ಲಿದೆ ನೋಡಿ...

ಬೆಂಗಳೂರು (ಮೇ 24): ಬೆಂಗಳೂರಿನ ರೇವ್ ಪಾರ್ಟಿಗೆ ಬಂದೇ ಇಲ್ಲ ನಾನು ಹೈದರಾಬಾದ್‌ ಫಾರ್ಮ್‌ಹೌಸ್‌ನಲ್ಲಿದ್ದೇನೆ ಎಂದು ಅನ್ನ ಹಾಕಿದ ಅಭಿಮಾನಿಗಳಿಗೆ ಸುಳ್ಳು ವಿಡಿಯೋ ಸಂದೇಶ ಕೊಟ್ಟಿದ್ದ ನಟಿ ಹೇಮಾ ದೊಡ್ಡ ಮಾದಕ ದ್ರವ್ಯ ವ್ಯಸನಿ ಎಂಬುದು ಸಾಬೀತಾಗಿದೆ. ಆಕೆ ತೆಗೆದುಕೊಂಡಿದ್ದ ಡೇಂಜರಸ್‌ ಡ್ರಗ್ಸ್ ಇಲ್ಲಿದೆ ನೋಡಿ..

ಬೆಂಗಳೂರಿನ ಹೊರವಲಯದಲ್ಲಿ ಕಳೆದ ಭಾನುವಾರ ರಾತ್ರಿ ಆಯೋಜನೆ ಮಾಡಿದ್ದ ರೇವ್ ಪಾರ್ಟಿಗೆ ವಿಶೇಷ ವಿಮಾನದಲ್ಲಿ ಆಗಮಿಸಿ ಮೈಮೇಲೆ ವಾಸ್ತವಾಂಶದ ಅರಿವೂ ಬಾರದ ರೀತಿಯಲ್ಲಿ ಡ್ರಗ್ಸ್ ಸೇವನೆ ಮಾಡಿದ್ದ ತೆಲುಗು ನಟಿ ಹೇಮಾ, ಅನ್ನ ಕೊಡುವ ಅಭಿಮಾನಿಗಳ ದಿಕ್ಕು ತಪ್ಪಿಸಲು ತಾನು ಹೈದರಾಬಾದ್‌ನಲ್ಲಿದ್ದೇನೆ ಎಂದು ಸುಳ್ಳು ವಿಡಿಯೋ ಮಾಡಿದ್ದಳು. ಆದರೆ, ಬೆಂಗಳೂರಿನ ರೇವ್ ಪಾರ್ಟಿಯಲ್ಲಿ ಸಿಕ್ಕಿದ್ದು ಬ್ಲಡ್ ಸ್ಯಾಂಪಲ್ ಕೊಟ್ಟು ಬಂದಿದ್ದ ಹೇಮಾ ಎಂತಹ ದೊಡ್ಡ ಮಾದಕ ವ್ಯಸನಿ ಎಂಬುದು ಆಕೆ ತೆಗೆದುಕೊಂಡ ಡ್ರಗ್ಸ್‌ನಿಂದ ತಿಳಿದುಬಂದಿದೆ.

ಬಯಲಾಯ್ತು ನಟಿ ಹೇಮಾ ರಂಗಿನಾಟ; ಬೆಂಗಳೂರು ರೇವ್ ಪಾರ್ಟಿಗೆ ಬಂದಿಲ್ಲ ಎಂದವಳ ರಕ್ತದಲ್ಲಿ ಡ್ರಗ್ಸ್ ಪತ್ತೆ

ಮಾದಕ ದ್ರವ್ಯ ಸೇವನೆಯೇ ಅಪಾಯಕಾರಿ ಎಂಬ ವಿಚಾರ ಗೊತ್ತಿದ್ದರೂ ನಟಿ ಹೇಮಾ ಮಾದಕ ದ್ರವ್ಯ ಸೇವನೆಗಾಗಿ ಬೆಂಗಳೂರಿಗೆ ವಿಶೇಷ ವಿಮಾನದಲ್ಲಿ ಆಗಮಿಸಿದ್ದಾರೆಂದರೆ ಅವರೆಂತಹ ಮಾದಕ ವ್ಯಸನಿ ಆಗಿರಬೇಡ ನೀವೇ ಲೆಕ್ಕಹಾಕಿ.. ರೇವ್ ಪಾರ್ಟಿಯಲ್ಲಿ ಮೈಮೇಲೆ ಪ್ರಜ್ಞೆ ಇಲ್ಲದಷ್ಟು ಮಾದಕ ದ್ರವ್ಯ ಸೇವನೆ ಮಾಡಿದ ನಂತರ ಪೊಲೀಸರು ದಾಳಿ ಮಾಡಿದರೂ ಅದನ್ನು ತೀವ್ರ ಹಗುರವಾಗಿ ತೆಗೆದುಕೊಂಡಿದ್ದಾರೆ. ಮಾದಕ ದ್ರವ್ಯದ ನಶೆಯಲ್ಲಿದ್ದುಕೊಂಡೇ ತಾನು ಬೆಂಗಳೂರಿನ ರೇವ್ ಪಾರ್ಟಿಯಲ್ಲಿ ಸಿಕ್ಕಿಬಿದ್ದಿಲ್ಲ ಎಂದು ಸುಳ್ಳು ಹೇಳಿದ್ದರು. ಆದರೆ, ನಟಿ ಹೇಮಾ ರಕ್ತ ಪರೀಕ್ಷೆ ಮಾಡಿಸಿದ ಪೊಲೀಸರಿಗೆ ಡ್ರಗ್ಸ್ ಸೇವನೆ ಮಾಡಿರುವುದು ಮಾತ್ರ ಖಚಿತವಾಗಿತ್ತು. ಇನ್ನು ಯಾವ ಮಾದರಿ ಡ್ರಗ್ಸ್ ಎಂದು ಪತ್ತೆ ಮಾಡಿದರೆ ಅದು ಅತಿ ಡೇಂಜರಸ್ ಹಾಗೂ ದುಬಾರಿ ಆಗಿರುವ ಎಂಡಿಎಂಎ ಡ್ರಗ್ಸ್ ಮಾತ್ರೆ ಎಂಬುದು ಖಚಿತವಾಗಿದೆ.

ಬೆಂಗಳೂರಿನ ಹೊರ ವಲಯ ಎಲೆಕ್ಟ್ರಾನಿಕ್ ಸಿಟಿ ಬಳಿಯ ಸಿಂಗಸಂದ್ರದ ಜಿ.ಆರ್. ಫಾರ್ಮ್‌ಹೌಸ್‌ನಲ್ಲಿ ಭಾನುವಾರ ರಾತ್ರಿ ವಾಸು ಬರ್ತಡೇ ಅಂಗವಾಗಿ ಸನ್ ಸೆಟ್‌ ಟು ಸನ್ ರೈಸ್ ವಿಕ್ಟರಿ (Sunset To Sun Rise victory) ಎಂಬ ಶೀರ್ಷಿಕೆಯಲ್ಲಿ ರೇವ್ ಪಾರ್ಟಿ ಆಯೋಜನೆ ಮಾಡಲಾಗಿತ್ತು. ಇದು ಬರ್ತಡೇ ಪಾರ್ಟಿ ಎನ್ನುವ ಬದಲಾಗಿ ಡ್ರಗ್ಸ್ ಪಾರ್ಟಿ ಆಗಿತ್ತು. ಸುತ್ತಲಿನ ಸಾರ್ವಜನಿಕರಿಗೆ ಕಿರಿಕಿರಿ ಉಂಟಾಗುವ ರೀತಿಯಲ್ಲಿ ದೊಡ್ಡ ಮಟ್ಟದ ಡಿಜೆ ಹಾಕಿ ಕುಣಿಯುತ್ತಿದ್ದ ಪಾರ್ಟಿಯ ಮೇಲೆ ಪೊಲೀಸರು ದಾಳಿ ಮಾಡಿದ್ದಾರೆ. ಆಗ ಡ್ರಗ್ಸ್ ಸೇವನೆ ಕಂಡುಬಂದ ಹಿನ್ನೆಲೆಯಲ್ಲಿ ಸಿಸಿಬಿ ಡ್ರಗ್ಸ್ ನಿಯಂತ್ರಣ ದಳ ಸ್ಥಳಕ್ಕೆ ಆಗಮಿಸಿದೆ. ಕೋಟ್ಯಂತರ ರೂ. ಮೌಲ್ಯದ ಎಂಡಿಎಂಎ, ಕೊಕೇನ್, ಹೈಡ್ರೋ ಗಾಂಜಾ ಪತ್ತೆಯಾಗಿದ್ದವು. ಇದರ ಬೆನ್ನಲ್ಲಿಯೇ ಪಾರ್ಟಿಯಲ್ಲಿ ಭಾಗಿಯಾಗಿದ್ದ ಎಲ್ಲ 103 ಜನರನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಇದರಲ್ಲಿ ತೆಲುಗು ನಟಿ ಹೇಮಾ ಹಾಗೂ ಆಶಿ ರಾಯ್ ಕೂಡ ಇದ್ದರು.

Bengaluru Rave Party: ಡ್ರಗ್ಸ್ ಸೇವಿಸಿ ಸಿಕ್ಕಿಬಿದ್ದ ನಟಿ ಆಶಿ ರಾಯ್‌ಗೆ ಸಿಸಿಬಿ ನೊಟೀಸ್

ಸುಳ್ಳು ವಿಡಿಯೋ ಹರಿಬಿಟ್ಟಿದ್ದ ನಟಿ ಹೇಮಾ: ತೆಲುಗು ನಟಿ ಹೇಮಾ ಅವರು ಬೆಂಗಳೂರು ರೇವ್ ಪಾರ್ಟಿಯಲ್ಲಿ ಸಿಕ್ಕಿಬಿದ್ದಿದ್ದಾರೆಂಬ ಮಾಹಿತಿ ಮಾಧ್ಯಮಗಳಲ್ಲಿ ಪ್ರಸಾರವಾದ ಬೆನ್ನಲ್ಲಿಯೇ ಆಕೆ ಅದೇ ಫಾರ್ಮ್‌ಹೌಸ್‌ನಿಂದ ವಿಡಿಯೋ ಮಾಡಿ ನಾನು ಬೆಂಗಳೂರಿನ ಯಾವುದೇ ಪಾರ್ಟಿಗೆ ಹೋಗಿಲ್ಲ. ನಾನು ಹೈದರಾಬಾದ್‌ನ ಫಾರ್ಮ್‌ಹೌಸ್‌ನಲ್ಲಿದ್ದೇನೆ ಎಂದು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದರು. ಈ ಮೂಲಕ ಪೊಲೀಸರ ತನಿಖೆಯ ದಿಕ್ಕು ತಪ್ಪಿಸಿದ್ದು ಮಾತ್ರವಲ್ಲದೇ ಮಾಧ್ಯಮಗಳು ಹಾಗೂ ತಮಗೆ ಅನ್ನ ಹಾಜುವ ಅಭಿಮಾನಿಗಳ ದಿಕ್ಕನ್ನು ತಪ್ಪಿಸಿದ್ದರು. ಆದರೆ, ಪೊಲೀಸರು ಮಾತ್ರ ನಟಿ ಹೇಮಾ ನಮ್ಮ ವಶದಲ್ಲಿದ್ದಾರೆ ಎಂದು ಖಚಿತಪಡಿಸಿದ್ದರು.

click me!