
ಬಾಲಿವುಡ್ ಬಾಲಿವುಡ್ ಹಸಿಬಿಸಿ ಲೇಡಿ ಮಲೈಕಾ ಅರೋರಾ ಅವರಿಗೆ ಈಗ 50 ವರ್ಷ ವಯಸ್ಸು. ಆದರೂ ಇಂದಿಗೂ ಫಿಟ್ ಆ್ಯಂಡ್ ಫೈನ್ ಆಗಿದ್ದಾರೆ. ತಮ್ಮ ದೇಹಸಿರಿಯನ್ನು ಧಾರಾಳವಾಗಿ ಪ್ರದರ್ಶಿಸುವ ಮೂಲಕವೇ ಖ್ಯಾತಿ ಗಳಿಸಿದವರು ಇವರು. ವಯಸ್ಸು 50 ಆದರೂ ಇಂದಿಗೂ, ಅದನ್ನೇ ಮುಂದುವರೆಸಿಕೊಂಡು ಬಂದಿದ್ದಾರೆ. ಅಪರೂಪಕ್ಕೆ ಸಂಪೂರ್ಣ ದೇಹವನ್ನು ಮುಚ್ಚಿಕೊಂಡು ಟ್ರೋಲ್ ಆಗುವುದೂ ಇದೆ, ಅಷ್ಟರಮಟ್ಟಿಗೆ ಇವರ ಡ್ರೆಸ್ ಸೆನ್ಸ್ಗೆ ಅಭಿಮಾನಿಗಳು ಒಗ್ಗಿ ಹೋಗಿದ್ದಾರೆ. ಹಾಗೆಂದು ದೇಹ ಪ್ರದರ್ಶನ ಮಾಡಿದಾಗಲೆಲ್ಲಾ ಸುಮ್ಮನೇ ಇರುತ್ತಾರೆ ಎಂದೇನಲ್ಲ. ಆಗಲೂ ಬುಡ್ಡಿ, ಬುಡಿಯಾ, ಮುದುಕಿ ಈ ವಯಸ್ಸಲ್ಲಿ ಇದೆಲ್ಲಾ ಬೇಕಾ ಅನ್ನುವವರೇ ಹೆಚ್ಚು.
ಇದರ ವಿರುದ್ಧ ನಟಿ ಈಗ ರೊಚ್ಚಿಗೆದ್ದಿದ್ದಾರೆ. ಕಾರ್ಯಕ್ರಮವೊಂದರಲ್ಲಿ, ಈ ಬಗ್ಗೆ ಮಾತನಾಡಿದ ನಟಿ, ನಮ್ಮ ದೇಶದ ಜನರಿಗೆ ಮೂರು ವಿಷಯಗಳ ಬಗ್ಗೆಯಷ್ಟೇ ಚಿಂತೆ. ಒಂದು ಕ್ರಿಕೆಟ್, ಇನ್ನೊಂದು (ವಿವಾದಿತ ಷೋ) ಕಾಫಿ ವಿತ್ ಕರಣ್ ಯಾವಾಗ ಬರುತ್ತದೆ ಎನ್ನುವುದು ಹಾಗೂ ಮೂರನೆಯದ್ದು ನನ್ನ ವಯಸ್ಸಿನ ಬಗ್ಗೆ ಎಂದಿದ್ದಾರೆ. ನಿಮಗೆ ಗೊತ್ತಾ? ನನ್ನನ್ನು ಬುಡ್ಡಿ, ಬುಡಿಯಾ, ಆಂಟಿ ಎಂದೆಲ್ಲಾ ಕರೆಯುತ್ತಾರೆ. ಅವರಿಗೆ ನನ್ನ ವಯಸ್ಸಿನ ಬಗ್ಗೆ ಚಿಂತೆ ಇಲ್ಲ, ಆದರೆ ಈ ವಯಸ್ಸಿನಲ್ಲಿ ಹೀಗೆ ಕಾಣಿಸುತ್ತೇನಲ್ಲಾ ಎನ್ನುವುದೇ ಸಮಸ್ಯೆಯಾಗಿ ಬಿಟ್ಟಿದೆ ಎಂದಿದ್ದಾರೆ.
ಮದ್ವೆ ಯಾವಾಗ, ಹುಡುಗ ಯಾರೆಂದು ಅಮ್ಮನನ್ನೇ ಪ್ರಶ್ನಿಸಿದ ಅರ್ಹಾನ್: ಮಲೈಕಾ ಅರೋರಾ ಹೇಳಿದ್ದೇನು?
ನಾನು ಹಂಸದಂತೆ ನಡೆಯುತ್ತೇನೆ ಎಂದು ಕೆಲವರು ಹೇಳುತ್ತಾರೆ. ನನ್ನ ಹಿಂಬದಿ ಬಫೆಟ್ ಟೇಬಲ್ನಂತೆ ಇದೆ ಅಂತಾರೆ. ಹೌದುರಿ. ಅದರಿಂದ ಯಾರಿಗೆ ಏನು ಸಮಸ್ಯೆ? ಬಫೆಟ್ ಟೇಬಲ್ನಂತೆ ಇದ್ದರೆ ಏಳು ಮಂದಿಗೆ ಊಟ ಬಡಿಸ್ತೇನೆ ಅಷ್ಟೇ ಎಂದು ಟ್ರೋಲಿಗರಿಗೆ ಟಾಂಗ್ ಕೊಟ್ಟಿದ್ದಾರೆ. ನಾನು ಹಂಸದಂತೆಯೂ ನಡೆಯಬಲ್ಲೆ, ಕ್ಯಾಟ್ ವಾಕ್ ಮಾಡಬಲ್ಲೆ, ಚಿರತೆಯಂತೆಯೂ ನಡೆಯಬಲ್ಲೆ. ಸಮಸ್ಯೆ ಏನೀಗ ಎಂದು ಪ್ರಶ್ನಿಸಿದ್ದಾರೆ.
ಅಂದಹಾಗೆ, ಮಲೈಕಾ ಅರೋರಾ (Malaika Arora) ಮತ್ತು ಅರ್ಬಾಜ್ ಖಾನ್ ಅವರನ್ನು ಹಿಂದಿನ ದಿನದ ಹಾಟೆಸ್ಟ್ ಜೋಡಿಗಳಲ್ಲಿ ಒಂದು ಎಂದೇ ಕರೆಯಲಾಗುತ್ತಿತ್ತು. ಆದರೆ ಅವರು ಬೇರ್ಪಟ್ಟು ಹಲವು ವರ್ಷಗಳೇ ಕಳೆದಿವೆ. 2017ರಲ್ಲಿ ಈ ಜೋಡಿ ಬೇರ್ಪಟ್ಟಿದೆ. ಮಲೈಕಾ ಅರೋರಾಗೆ ಈಗ 49 ವರ್ಷ ವಯಸ್ಸು. ಅರ್ಬಾಜ್ ಖಾನ್ ಜೊತೆ ಬೇರ್ಪಟ್ಟ ಬಳಿಕ 12 ವರ್ಷ ಚಿಕ್ಕವಾಗಿರುವ ನಟ ಅರ್ಜುನ್ ಕಪೂರ್ (Arjun Kapoor) ಜೊತೆ ಕೆಲ ವರ್ಷಗಳಿಂದ ಡೇಟಿಂಗ್ ಮಾಡುತ್ತಿದ್ದಾರೆ ಮಲೈಕಾ. ಮಲೈಕಾ ಅರ್ಜುನ್ ಕಪೂರ್ ಜೊತೆ ಡೇಟಿಂಗ್ನಲ್ಲಿದ್ದರೂ ಮಗನಿಗಾಗಿ ಆಗಾಗ್ಗೆ ಅರ್ಬಾಜ್ ಖಾನ್ರನ್ನು ಭೇಟಿಯಾಗುವುದು, ತಬ್ಬಿಕೊಳ್ಳುವುದು ನಡೆದಿದ್ದು, ಇವುಗಳ ವಿಡಿಯೋಗಳೂ ವೈರಲ್ ಆಗುತ್ತಲೇ ಇರುತ್ತವೆ. ಮಲೈಕಾ ಏನೋ ಅರ್ಜುನ್ ಕಪೂರ್ ಜೊತೆ ಹಲವು ವರ್ಷಗಳಿಂದ ಸಂಬಂಧದಲ್ಲಿದ್ದಾರೆ. ಆದರೆ ಅದೇ ಇನ್ನೊಂದೆಡೆ ಅರ್ಬಾಜ್ ಖಾನ್ ಕೆಲ ತಿಂಗಳ ಹಿಂದೆ ತಮ್ಮ ಅರ್ಧ ವಯಸ್ಸಿನ ಯುವತಿ ಶುರಾ ಜೊತೆ ಮದುವೆಯಾಗಿ ಸಂಸಾರ ನಡೆಸುತ್ತಿದ್ದಾರೆ.
21 ವರ್ಷದ ಪುತ್ರಂಗೆ ಓಪನ್ನಾಗಿ ಸೆಕ್ಸ್ ಬಗ್ಗೆ ಕೇಳೋದಾ ಮಲೈಕಾ? ಅರ್ಹಾನ್ ತಿರುಗಿ ಹೇಳಿದ್ದೇನು?
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.