ಫೈಟರ್‌ನಲ್ಲಿ ಹೃತಿಕ್ ಕಟ್ಟುಮಸ್ತಾದ ದೇಹ ನೋಡಿ ಫಿದಾ ಆಗದವರಿಲ್ಲ. ಅಂಥಾ ನಟನ ಫಿಟ್‌ನೆಸ್‌ನ ಹಿಂದಿರೋ ವಿಶೇಷ ವ್ಯಕ್ತಿ ಬಗ್ಗೆ ಹೃತಿಕ್ ಹೇಳ್ತಿದ್ದಾರೆ ನೋಡಿ.
ಹೃತಿಕ್ ರೋಷನ್ ಅವರನ್ನು ಇಷ್ಟಪಡದೇ ಇರೋರು ಕಡಿಮೆ. ಹೃತಿಕ್ ರೋಷನ್ ಆಕ್ಟಿಂಗ್ ಡ್ಯಾನ್ಸ್‌ಗೆ ಹೇಗೆ ಫೇಮಸ್ಸೋ ಕಟ್ಟುಮಸ್ತಾದ ಬಾಡಿಗೂ ಫೇಮಸ್. ಇದೀಗ ಇವರು ವಿಶೇಷ ವ್ಯಕ್ತಿಯೊಬ್ಬರನ್ನು ಕುರಿತು ಮಾಡಿರುವ ಹಾರೈಕೆ ವೈರಲ್ ಆಗ್ತಿದೆ. ಒಂದು ಕಡೆ ಫೈಟರ್ ಸಿನಿಮಾ ಯಶಸ್ವಿಯಾಗಿ ಬಾಲಿವುಡ್‌ನಲ್ಲಿ ಹೆಸರು ಮಾಡುತ್ತಿರುವಾಗಲೇ ಅವರ ಫಿಟ್‌ನೆಸ್ ಬಗ್ಗೆ ಸಖತ್ ಹೈಪ್ ಕ್ರಿಯೇಟ್ ಆಗಿದೆ. ವಯಸ್ಸು ಐವತ್ತಾದರೂ ಹೃತಿಕ್ ದೇಹದಾರ್ಢ್ಯ ಹಾಗೇ ಇದೆ ಅಂದರೆ ಅದರ ಹಿಂದೆ ಒಬ್ಬ ವಿಶೇಷ ವ್ಯಕ್ತಿ ಇದ್ದಾರೆ.
'ಹುಟ್ಟುಹಬ್ಬದ ದಿನದ ವರ್ಕೌಟ್ ಮುಗಿಯಿತು. ಬರ್ತ್ಡೇ ವರ್ಕೌಟ್ಗಳು ತುಂಬ ಸ್ಪೆಷಲ್ ಆಗಿರುತ್ತವೆ. ನಿನ್ನ ಹುಟ್ಟುಹಬ್ಬದ ದಿನವೂ ನನ್ನನ್ನು ಸಾಯಿಸಿದ್ದಕ್ಕೆ ಧನ್ಯವಾದಗಳು. ಈ ವರ್ಷ ನಾವು ಹೊಸ ಗುರಿ ಮುಟ್ಟೋಣ. ಜನ್ಮದಿನದ ಶುಭಾಶಯಗಳು’ ಎಂದು ಹೃತಿಕ್ ರೋಷನ್ ಅವರು ಸೋಶಿಯಲ್ ಮೀಡಿಯಾದಲ್ಲಿ ಆ ವಿಶೇಷ ವ್ಯಕ್ತಿಗೆ ಶುಭ ಹಾರೈಕೆ ಸಲ್ಲಿಸಿದ್ದಾರೆ. ಇಬ್ಬರೂ ಜೊತೆಗಿರುವ ಫೋಟೋವನ್ನು ಪೋಸ್ಟ್ ಮಾಡಿದ್ದಾರೆ.
ಅಂದ ಹಾಗೆ ಆ ವ್ಯಕ್ತಿ ಹೆಸರು ಸ್ವಪ್ನೀಲ್ ಹಜಾರೆ. ಇವರನ್ನು ಹೃತಿಕ್ ಸ್ಪೆಷಲ್ ಆಗಿ ಮೆನ್ಶನ್ ಮಾಡೋದಕ್ಕೂ ಕಾರಣ ಇದೆ. ಹೃತಿಕ್ ನಟನೆಯ ‘ಫೈಟರ್’ ಸಿನಿಮಾ ಗಣರಾಜ್ಯೋತ್ಸವದ ಪ್ರಯುಕ್ತ ಜ.25ರಂದು ತೆರೆಕಂಡು ಉತ್ತಮವಾಗಿ ಕಲೆಕ್ಷನ್ ಮಾಡಿದೆ. ಈ ಚಿತ್ರದಲ್ಲಿ ಹೃತಿಕ್ ಯುದ್ಧ ವಿಮಾನದ ಪೈಲೆಟ್ ಆಗಿ ನಟಿಸಿದ್ದಾರೆ. ಈ ಸಿನಿಮಾದ ಯಶಸ್ಸಿನ ನಂತರ ಹೃತಿಕ್ ರೋಷನ್ ಅವರ ಬೇಡಿಕೆ ಹೆಚ್ಚಾಗಿದೆ. ಈಗ ಅವರು ‘ವಾರ್ 2’ ಚಿತ್ರಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಫಿಟ್ನೆಸ್ ಬಗ್ಗೆ ಹೆಚ್ಚು ಗಮನ ಹರಿಸುತ್ತಿದ್ದಾರೆ.
ಸುಸ್ಸಾನೆ ಖಾನ್- ಹೃತಿಕ್ ಆಲಿಂಗನ! ಸಿನಿಮಾ ತಾರೆಯರಿಗೆ ಡಿವೋರ್ಸ್ ಆದ್ಮೇಲೆ ಲವ್ ಜಾಸ್ತಿಯಾಗೋದ್ಯಾಕೆ?
ನಟ ಹೃತಿಕ್ ರೋಷನ್ ಮನ ಸೆಳೆಯುವ ನಟನೆಯಿಂದ ಅಭಿಮಾನಿಗಳನ್ನು (fans) ರಂಜಿಸುತ್ತಾರೆ. ಅಷ್ಟೇ ಅಲ್ಲದೇ, ಕಟ್ಟುಮಸ್ತಾದ ದೇಹದ ಕಾರಣದಿಂದಲೂ ಅವರು ಅನೇಕರಿಗೆ ಇಷ್ಟ ಆಗುತ್ತಾರೆ. ಫಿಟ್ನೆಸ್ ಬಗ್ಗೆ ಸಖತ್ ಕಾಳಜಿ ಹೊಂದಿರುವ ಅವರು ಒಂದು ದಿನವೂ ವರ್ಕೌಟ್ ತಪ್ಪಿಸುವುದಿಲ್ಲ. ಅಂದಹಾಗೆ, ಅವರಿಗೆ ವರ್ಕೌಟ್ ಹೇಳಿಕೊಡಲು ವಿಶೇಷ ತರಬೇತುರಾರರು (trainer) ಇದ್ದಾರೆ. ಅವರ ಹೆಸರು ಸ್ವಪ್ನೀಲ್ ಹಜಾರೆ. ನಿನ್ನೆ ಸ್ವಪ್ನೀಲ್ ಹಜಾರೆ ಜನ್ಮದಿನ. ಅದಕ್ಕಾಗಿ ಹೃತಿಕ್ ರೋಷನ್ ಅವರು ವಿಶೇಷವಾಗಿ ಶುಭಾಶಯ ತಿಳಿಸಿದ್ದಾರೆ.
ಹೃತಿಕ್ ರೋಷನ್ ಅವರ ಸಿಕ್ಸ್ ಪ್ಯಾಕ್ ಆ್ಯಬ್ಸ್ ನೋಡಿ ಎಲ್ಲರೂ ವಾವ್ ಎನ್ನುತ್ತಾರೆ. ಅಂಥ ಕಟ್ಟುಮಸ್ತಾದ ಬಾಡಿ ಹೊಂದಲು ಪ್ರತಿದಿನವೂ ಕಷ್ಟಪಡಬೇಕು. ಸೂಕ್ತ ರೀತಿಯ ತರಬೇತಿ ಬೇಕು. ಅದರ ಜವಾಬ್ದಾರಿಯನ್ನು ಸ್ವಪ್ನೀಲ್ ಹಜಾರೆ ವಹಿಸಿಕೊಂಡಿದ್ದಾರೆ. ವಿಶೇಷ ಏನೆಂದರೆ, ತಮ್ಮ ಹುಟ್ಟುಹಬ್ಬದ (birthday) ದಿನವೂ ಸ್ವಪ್ನೀಲ್ ಹಜಾರೆ ಅವರು ಟ್ರೇನಿಂಗ್ ನೀಡುವುದನ್ನು ತಪ್ಪಿಸಿಲ್ಲ. ಇದು ಸ್ವಪ್ನೀಲ್ ಎಂಥಾ ಫ್ರೊಫೆಶನಲ್ ಟ್ರೈನರ್ ಅನ್ನೋದನ್ನು ಸೂಚಿಸುತ್ತೆ. ಇವರ ಈ ಡೆಡಿಕೇಶನ್ ಅನ್ನು ಕಾಲೆಳೆಯುತ್ತಲೇ ಹೃತಿಕ್ ಕೊಂಡಾಡಿದ್ದಾರೆ.
ಬೆತ್ತಲಾಗಲು ಪೈಪೋಟಿಗೆ ಬಿದ್ದ ನಟಿ ದೀಪಿಕಾಗೆ 'ಫೈಟರ್' ಶಾಕ್- ದೇಶಭಕ್ತಿ ಚಿತ್ರಕ್ಕೆ UA ಪ್ರಮಾಣಪತ್ರ!
'ಹುಟ್ಟಹಬ್ಬದ ದಿನದ ವರ್ಕೌಟ್ ಮುಗಿಯಿತು. ಬರ್ತ್ಡೇ ವರ್ಕೌಟ್ಗಳು (workout) ತುಂಬ ಸ್ಪೆಷಲ್ ಆಗಿರುತ್ತವೆ. ನಿನ್ನ ಹುಟ್ಟುಹಬ್ಬದ ದಿನವೂ ನನ್ನನ್ನು ಸಾಯಿಸಿದ್ದಕ್ಕೆ ಧನ್ಯವಾದಗಳು. ಈ ವರ್ಷ ನಾವು ಹೊಸ ಗುರಿ ಮುಟ್ಟೋಣ. ಜನ್ಮದಿನದ ಶುಭಾಶಯಗಳು’ ಎಂದು ಹೃತಿಕ್ ರೋಷನ್ ವಿಭಿನ್ನವಾಗಿ ವಿಶ್ (wish) ಮಾಡಿದ್ದು ಹೃತಿಕ್ ಮತ್ತು ಸ್ವಪ್ನಿಲ್ ನಡುವಿನ ಬಾಂಧವ್ಯವನ್ನೂ ತೋರಿಸುತ್ತೆ.
ಹಾಗೆ ನೋಡಿದರೆ ಫಿಟ್‌ನೆಸ್ ಟ್ರೈನರ್ (Fitness Trainer) ಜೊತೆಗೆ ನಟ, ನಟಿಯರಿಗೆ ವಿಶೇಷ ನಂಟು ಇರುತ್ತೆ. ಕೆಲವು ಸೆಲೆಬ್ರಿಟಿಗಳ ನಡುವೆ ಈ ಬಾಂಧವ್ಯ ಲವ್ (love) ನತ್ತ ತಿರುಗಿದ್ದೂ ಇದೆ. ಅಮೀರ್ ಖಾನ್ ಮಗಳು ಇರಾ ತನ್ನ ಫಿಟ್‌ನೆಸ್ ಟ್ರೈನರ್ ಅನ್ನೇ ಮದುವೆ ಆಗಿದ್ದು ಇದಕ್ಕೆ ಸಾಕ್ಷಿ. ಇಂಥಾ ಅನೇಕ ಅಫೇರ್‌ಗಳನ್ನು ಮನರಂಜನಾ ಜಗತ್ತು (Entertainment World) ಕಾಣುತ್ತಲೇ ಬಂದಿದೆ. ಸದ್ಯ ಹೃತಿಕ್ ಅವರ ಈ ಹಾರೈಕೆ ಅವರ ಹಾಗೂ ಟ್ರೈನರ್ ನಡುವಿನ ಫ್ರೆಂಡ್‌ಶಿಪ್ (Friendship) ಅನ್ನೂ ತೋರಿಸುತ್ತೆ.
ಹೃತಿಕ್ ರೋಷನ್ @59: ಬಾಲ್ಯದಲ್ಲಿದ್ದ ಕಾಯಿಲೆಯಿಂದ ಎಲ್ಲೆಲ್ಲೂ ಅಪಹಾಸ್ಯಕ್ಕೊಳಗಾಗಿದ್ದ ಟಾಪ್ 10 ಸುಂದರ ನಟ!