ಮನೇಲಿ ಪಾಚಿ ಕಟ್ಟಿ, ನೀರು ಸೋರ್ತಿದೆ! 166 ಕೋಟಿ ಬಂಗಲೆ ಖಾಲಿ ಮಾಡಿದ ಪ್ರಿಯಾಂಕಾ ಚೋಪ್ರಾ- ನಿಕ್ ಜೊನಾಸ್!

By Suvarna NewsFirst Published Feb 1, 2024, 3:40 PM IST
Highlights

ಮನೆಯಲ್ಲಿ ಪಾಚಿ ಕಟ್ಟೋದು, ನೀರು ಸೋರೋದು ಇದೆಲ್ಲ ಮಧ್ಯಮ ವರ್ಗದವರ ಪಾಡು ಅಂದ್ಕೊಂಡಿದ್ರೆ ಇಲ್ನೋಡಿ- ಪ್ರಿಯಾಂಕಾ ಚೋಪ್ರಾ ಹಾಗೂ ನಿಕ್ ಜೊನಾಸ್ ಅವರ ಲಾಸ್ ಏಂಜಲೀಸ್ ಮನೆಲೂ ಇದೇ ಪ್ರಾಬ್ಲಂ ಅಂತೆ. ಎಷ್ಟರ ಮಟ್ಟಿಗೆ ಅಂದ್ರೆ ಮನೆಯಿಂದ ಹೊರ ಬಂದಿದಾರೆ ಈ ಜೋಡಿ!

ಮಳೆಗಾಲ ಬಂದ್ರೆ ಸಾಕು, ಮನೆ ಮನೆಯೊಳಗೂ ಪಾಚಿ ಕಟ್ಟುತ್ತೆ, ಬೂಸ್ಟ್ ಹಿಡಿಯತ್ತೆ, ಅಲ್ಲಲ್ಲಿ ನೀರೂ ಸೋರತ್ತೆ. ಪ್ರತಿ ವರ್ಷ ಮನೆ ರಿಪೇರಿಗೆ ದುಡ್ಡು ಹಾಕಿದ್ರುನೂ ಇದೂ ಜೀವನದ ಒಂದು ಭಾಗ ಆಗಿ ಬರೋ ವರ್ಷ ಇದೇ ಸಮಸ್ಯೆ ಕಾಡುತ್ತೆ. ಬಹುತೇಕ ಮಧ್ಯಮ ವರ್ಗದವರು ನೋಡಿ ಅನುಭವಿಸೋ ಈ ಪಾಡು- ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಹಾಗೂ ನಿಕ್ ಜೊನಾಸ್‌ರದ್ದು ಕೂಡಾ ಎಂದರೆ ಆಶ್ಚರ್ಯವಾಗುತ್ತೆ ಅಲ್ವಾ?

ಆದ್ರೆ ಈ ಜೋಡಿಯ ಲಾಸ್ ಏಂಜಲೀಸ್‌ನಲ್ಲಿರುವ ಬರೋಬ್ಬರಿ 166 ಕೋಟಿ ರುಪಾಯಿ ಮೌಲ್ಯದ ಮನೆಯಲ್ಲಿ ಕೂಡಾ ಈ ನೀರು ಸೋರೋ, ಬೂಸ್ಟ್ ಹಿಡಿಯೋ ಸಮಸ್ಯೆ ತಲೆ ಚಿಟ್ಟು ಹಿಡಿಸಿದೆಯಂತೆ. ಎಷ್ಟರ ಮಟ್ಟಿಗೆ ಅಂದ್ರೆ ಇವರಿಬ್ರೂ ಮನೆಯಿಂದನೇ ಹೊರ ಬರೋ ಲೆವೆಲ್ಗೆ. ಈದೀಗ ಈ ಜೋಡಿ ಮನೆ ಸೋರುತ್ತಿರುವ ಬಗ್ಗೆ ಕಾನೂನು ಹೋರಾಟ ನಡೆಸುತ್ತಿದ್ದಾರೆ. 

Latest Videos

ಏನಪ್ಪಾ ಇದು, ಇಷ್ಟು ದೊಡ್ಡ ಸೆಲೆಬ್ರಿಟಿಗಳಾಗಿ, ನೂರಾರು ಕೋಟಿ ಖರ್ಚು ಮಾಡಿನೂ ಈ ಸಣ್ಣ ಸಣ್ಣ ಸಮಸ್ಯೆಗಳು ತಪ್ಪೋದಿಲ್ವಲ್ಲಾ? 

ಯಶಸ್ಸು ಬೇಕಂದ್ರೆ ಮೊದ್ಲು ಈ ಸಿಂಪಲ್ ವಿಷ್ಯ ಕಲೀರಿ ಅಂತಾರೆ ನಟ ಮಾಧವನ್

ಮನೆಯಲ್ಲಿ ಏನೆಲ್ಲ ಇದೆ?
ವರದಿಯ ಪ್ರಕಾರ, ದಂಪತಿ ಸೆಪ್ಟೆಂಬರ್ 2019 ರಲ್ಲಿ $20 ಮಿಲಿಯನ್ಗೆ ಮನೆಯನ್ನು ಖರೀದಿಸಿದರು. ಪ್ರಿಯಾಂಕಾ ಚೋಪ್ರಾ ಮತ್ತು ನಿಕ್ ಜೋನಾಸ್ ಅವರ ಈ ಐಷಾರಾಮಿ ಮಹಲಿನೊಳಗೆ ಏಳು ಮಲಗುವ ಕೋಣೆಗಳು, ಒಂಬತ್ತು ಸ್ನಾನಗೃಹಗಳು, ಶೆಫ್ ಅಡುಗೆಮನೆ, ವೈನ್‌ಗಾಗಿ ವಿಶೇಷ ಕೊಠಡಿ, ಒಳಾಂಗಣ ಬಾಸ್ಕೆಟ್‌ಬಾಲ್ ಅಂಕಣ, ಬೌಲಿಂಗ್ ಏರಿಯಾ, ಹೋಮ್ ಥಿಯೇಟರ್, ಮೋಜಿಗಾಗಿ ಲಾಂಜ್, ಸ್ಟೀಮ್ ಶವರ್ ಹೊಂದಿರುವ ಸ್ಪಾ, ಪೂರ್ಣ-ಸೇವಾ ಜಿಮ್, ಮತ್ತು ಬಿಲಿಯರ್ಡ್ಸ್ ಆಡಲು ಕೊಠಡಿಗಳಿವೆ.

ಸಿಹಿಯನ್ನು ಪ್ರೀತಿಸುವ ಯುಕೆ ಪ್ರಧಾನಿ ರಿಷಿ ಸುನಾಕ್ ವಾರಾಂತ್ಯದಲ್ಲಿ 36 ಗಂಟೆ ಉಪವಾಸ ಮಾಡ್ತಾರೆ!

ಕೇಸ್‌ನಲ್ಲಿ ಕೊಟ್ಟಿರುವ ಕಾರಣಗಳು
ಮೇ 2023ರಲ್ಲಿ ದಾಖಲಾದ ಮೊಕದ್ದಮೆಯಲ್ಲಿ ಪೂಲ್ ಮತ್ತು ಸ್ಪಾಗೆ ಸಂಬಂಧಿಸಿದ ಸಮಸ್ಯೆಗಳು ಏಪ್ರಿಲ್ 2020 ರ ಸುಮಾರಿಗೆ ಪ್ರಾರಂಭವಾಯಿತು ಎಂದು ಹೇಳುತ್ತದೆ. ನೀರು ಸೋರುವ ಸಮಸ್ಯೆ ಇದೆ. ಇದು ಪಾಚಿ ಬೆಳೆಯಲು ಕಾರಣವಾಯಿತು ಮತ್ತು ಇತರ ಸಂಬಂಧಿತ ಸಮಸ್ಯೆಗಳನ್ನು ಉಂಟುಮಾಡಿತು. ಅದೇ ಸಮಯದಲ್ಲಿ, ಡೆಕ್‌ನಲ್ಲಿರುವ ಬಾರ್ಬೆಕ್ಯೂ ಪ್ರದೇಶದಲ್ಲಿ ನೀರಿನ ಸೋರಿಕೆ ಕಾಣಿಸಿಕೊಂಡಿತು. ಈ ಸೋರಿಕೆಯು ಡೆಕ್‌ನ ಕೆಳಗಿರುವ ಆಂತರಿಕ ವಾಸದ ಪ್ರದೇಶದ ಒಂದು ಭಾಗವನ್ನು ಹಾನಿಗೊಳಿಸಿತು. ಇದರಿಂದ ಈ ಆರೋಗ್ಯದ ದೃಷ್ಟಿಯಿಂದಲೂ ಅಪಾಯಕಾರಿಯಾಗಿದೆ ಎಂದು ಹೇಳಲಾಗಿದೆ. ನೀರು ಸೋರುವ ಸಮಸ್ಯೆ ಸರಿಪಡಿಸಲು ಏನಿಲ್ಲ ಎಂದರೂ 12 ಕೋಟಿ ರೂ. ಬೆೇಕಾಗುತ್ತದೆ. ಆಗಿರುವ ಹಾನಿ ಸರಿಪಡಿಸಲು 20 ಕೋಟಿ ರೂ.ಗೂ ಹೆಚ್ಚು ಖರ್ಚಾಗುತ್ತದೆ ಎಂದು ವಿವರಿಸಲಾಗಿದೆ. ಮನೆಯನ್ನು ತಮಗೆ ಮಾರಿದವರ ವಿರುದ್ಧ ಈ ಕೇಸ್ ಫೈಲ್ ಮಾಡಲಾಗಿದೆ. 

ಏತನ್ಮಧ್ಯೆ, ಪ್ರಿಯಾಂಕಾ ಚೋಪ್ರಾ ಕೊನೆಯ ಬಾರಿಗೆ ಹಾಲಿವುಡ್ ಚಲನಚಿತ್ರ 'ಲವ್ ಎಗೇನ್‌'ನಲ್ಲಿ ಕಾಣಿಸಿಕೊಂಡರ. ಅವರು ಮುಂದಿನ 'ಹೆಡ್ಸ್ ಆಫ್ ಸ್ಟೇಟ್' ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ, ಇದರಲ್ಲಿ ಜಾನ್ ಸೆನಾ ಮತ್ತು ಇದ್ರಿಸ್ ಎಲ್ಬಾ ಕೂಡ ನಟಿಸಿದ್ದಾರೆ. 

click me!