ಸಲ್ಮಾನ್​ ಖಾನ್​ ಚಿತ್ರದಲ್ಲಿ ರಿಜೆಕ್ಟ್​ ಆಗಿದ್ದ 'ಜೈ ಹೋ'ಗೆ ಆಸ್ಕರ್​ ಪ್ರಶಸ್ತಿ: ಎ.ಆರ್​.ರೆಹಮಾನ್​ ಹೇಳಿದ್ದೇನು?

By Suvarna News  |  First Published Feb 1, 2024, 3:30 PM IST

ಸಲ್ಮಾನ್​ ಖಾನ್​ ಚಿತ್ರದಲ್ಲಿ ರಿಜೆಕ್ಟ್​ ಆಗಿದ್ದ 'ಜೈ ಹೋ'ಗೆ ಆಸ್ಕರ್​ ಪ್ರಶಸ್ತಿ ಲಭಿಸಿತ್ತು. ಈ ಕುರಿತು ಎ.ಆರ್​.ರೆಹಮಾನ್​ ಹೇಳಿದ್ದೇನು?
 


ಸಂಗೀತಕ್ಕೆ ಆಸ್ಕರ್ (Oscar) ಪಡೆದ ಮೊದಲ ಭಾರತೀಯ ಎ.ಆರ್ ರೆಹಮಾನ್ (AR Rahman). ಒಂದೇ ವರ್ಷ ಎರಡು ಆಸ್ಕರ್  ಇವರು ಗೆದ್ದಿದ್ದರು. ಸ್ಲಂ ಡಾಗ್ ಮಿಲೇನಿಯರ್ ಸಿನಿಮಾಕ್ಕೆ ನೀಡಿದ್ದ ಸಂಗೀತ ಹಾಗೂ ಅದೇ ಸಿನಿಮಾದ ‘ಜೈ ಹೋ’ ಹಾಡಿಗಾಗಿ ಎಆರ್ ರೆಹಮಾನ್​ಗೆ ಆಸ್ಕರ್ ಬಂದಿತ್ತು. ಈ ಮೂಲಕ ಅವರು  ವಿಶ್ವ ಮಟ್ಟದಲ್ಲಿ  ಹೆಸರು ಮಾಡಿದ್ದಾರೆ. ಈ ಹಾಡಿನ ಬಗ್ಗೆ ಇದೀಗ ಕುತೂಹಲದ ಮಾಹಿತಿಯೊಂದು ಹೊರಬಂದಿದೆ. 

ಅದೇನೆಂದರೆ,  ‘ಸ್ಲಮ್​ ಡಾಗ್ ಮಿಲಿಯನೇರ್’ ಚಿತ್ರದ ‘ಜೈ ಹೋ..’ ಹಾಡನ್ನು ಅಸಲಿಗೆ ಬರೆದದ್ದು ‘ಸ್ಲಮ್​ ಡಾಗ್ ಮಿಲಿಯನೇರ್’ ಚಿತ್ರಕ್ಕಲ್ಲ. ಬದಲಿಗೆ ಸಲ್ಮಾನ್​ ಖಾನ್​ ಅವರ ಯುವರಾಜ ಚಿತ್ರಕ್ಕೆ! ಹೌದು.  ಸಲ್ಮಾನ್ ಖಾನ್, ಅನಿಲ್ ಕಪೂರ್​, ಕತ್ರಿನಾ ಕೈಫ್ ಮೊದಲಾದವರ ನಟನೆಯ ಯುವರಾಜ ಚಿತ್ರಕ್ಕಾಗಿ ಈ ಹಾಡನ್ನು ರಚಿಸಲಾಗಿತ್ತು. 2008ರಲ್ಲಿ ‘ಯುವರಾಜ’ ಸಿನಿಮಾ ರಿಲೀಸ್ ಆಯಿತು. ಆದರೆ ಈ ಚಿತ್ರದಲ್ಲಿ ಹಾಡು ರಿಜೆಕ್ಟ್​ ಆಗಿದ್ದ ಕಾರಣ, ,  ‘ಸ್ಲಮ್​ ಡಾಗ್ ಮಿಲಿಯನೇರ್’ ಚಿತ್ರಕ್ಕೆ ನೀಡಲಾಯಿತು. ಹೀಗೆ ಆಗಿದ್ದೇ ಅದೃಷ್ಟವೋ ಎಂಬಂತೆ ಹಾಡಿಗೆ ಆಸ್ಕರ್​ ಪ್ರಶಸ್ತಿ ಬಂದಿತ್ತು. ಅಷ್ಟಕ್ಕೂ ಆಗಿದ್ದೇನೆಂದರೆ,  ‘ಯುವರಾಜ’ ಚಿತ್ರದ ನಿರ್ದೇಶಕರು ಸುಭಾಷ್ ಘೈ. ಅಸಲಿಗೆ ಅವರೇ ಈ ವಿಷಯವನ್ನು ಹಂಚಿಕೊಂಡಿದ್ದಾರೆ. ಅವರು ಹೇಳಿದ್ದೇನೆಂದರೆ, ಎ.ಆರ್​. ರೆಹಮಾನ್ ಅವರು ‘ಜೈ ಹೋ’ ಹಾಡನ್ನು ಯುವರಾಜ ಚಿತ್ರಕ್ಕಾಗಿ ಕಂಪೋಸ್ ಮಾಡಿದ್ದರು. ನಾವು ರೆಕಾರ್ಡ್ ಕೂಡ ಮಾಡಿದ್ದೆವು. ಆದರೆ, ಹಾಡು ಸಿನಿಮಾಗೆ ಸೂಕ್ತ ಅಲ್ಲ ಎನ್ನಿಸಿತು. ಆದ್ದರಿಂದ  ಅದನ್ನು ಕೈಬಿಡಲಾಯಿತು ಎಂದಿದ್ದಾರೆ. 
ರಜನೀಕಾಂತ್‌ ‘ಸಂಘಿ‘ ವಿವಾದ: ಅಪ್ಪ-ಅಮ್ಮಗಳ ಮಾತಿನ ಮಧ್ಯೆ ಬಂದ ನಟ ಅಹಿಂಸಾ ಚೇತನ್‌! 

Latest Videos

undefined


ನಮ್ಮ ಯುವರಾಜ ಚಿತ್ರಕ್ಕೆ ಹಾಡು  ಫಿಟ್ ಆಗಿರಲಿಲ್ಲ. ಆದ್ದರಿಂದ  ಅದನ್ನು ಚಿತ್ರದಲ್ಲಿ ಸುಮ್ಮನೇ ಅಳವಡಿಸಿಕೊಳ್ಳುವುದು ಸರಿ ಎನಿಸಲಿಲ್ಲ. ಏಕೆಂದರೆ ನಮ್ಮ ಚಿತ್ರಕ್ಕೆ ಈ ಹಾಡು ತುಂಬಾ  ಸಾಫ್ಟ್​ ಎನಿಸಿತು. ಅದಕ್ಕಾಗಿ ರಿಜೆಕ್ಟ್​ ಮಾಡಿದ್ವಿ ಎಂದಿದ್ದಾರೆ. ಈ ಬಗ್ಗೆ ಮಾತನಾಡಿರುವ ಎ.ಆರ್​.ರೆಹಮಾನ್​ ಕೂಡ ಇದನ್ನೇ ಹೇಳಿದರು. ಯುವರಾಜ ಚಿತ್ರಕ್ಕೆ ಹಾಡು ರಿಜೆಕ್ಟ್​ ಆದ ಮೇಲೆ,  ಸ್ಲಮ್​ಡಾಗ್ ಮಿಲಿಯನೇರ್ ಚಿತ್ರದ ನಿರ್ದೇಶಕ ಡ್ಯಾನಿಗೆ ಹಾಡು ಇಷ್ಟ ಆಯಿತು. ಹೀಗಾಗಿ ಅವರಿಗೆ ನೀಡಿದೆ. ಅದು ಆಸ್ಕರ್​ ಗೆದ್ದಿತು ಎಂದಿದ್ದಾರೆ. ಅಂದಹಾಗೆ, ರೆಹಮಾನ್​ ಮತ್ತು ಸುಭಾಷ್​ ಅವರ ಸಂಬಂಧ ತುಂಬಾ ಚೆನ್ನಾಗಿದೆ. ಇಬ್ಬರೂ ಮೊದಲು ಕೆಲಸ ಮಾಡಿದ್ದು ‘ತಾಲ್’ ಸಿನಿಮಾದಲ್ಲಿ. ಅಸಲಿಗೆ ರೆಹಮಾನ್ ಅವರನ್ನು ಹಿಂದಿ ಚಿತ್ರರಂಗಕ್ಕೆ ಮೊದಲು ಕರೆತಂದದ್ದೇ ಸುಭಾಷ್ ಅವರು.  
 
ಈ ಹಿಂದೆ ಎಆರ್ ರೆಹಮಾನ್ ಜೊತೆಗೆ ಈ ಹಿಂದೆ ‘ರಂಗೀಲಾ’ ಸೇರಿದಂತೆ ಇನ್ನೂ ಕೆಲವು ಸಿನಿಮಾಗಳಿಗೆ ಕೆಲಸ ಮಾಡಿರುವ ಜನಪ್ರಿಯ ನಿರ್ದೇಶಕ ರಾಮ್ ಗೋಪಾಲ್ ವರ್ಮಾ, ಸಂದರ್ಶನವೊಂದರಲ್ಲಿ ಎ.ಆರ್ ರೆಹಮಾನ್ ಬಗ್ಗೆ ಮಾತನಾಡುತ್ತಾ, ಆಸ್ಕರ್ ತಂದುಕೊಟ್ಟ ‘ಜೈ ಹೋ’ ಹಾಡನ್ನು ಎಆರ್ ರೆಹಮಾನ್ ಅಲ್ಲ ಕಂಪೋಸ್ ಮಾಡಿದ್ದು, ಬದಲಿಗೆ ಗಾಯಕ, ಸಂಗೀತ ನಿರ್ದೇಶಕ ಸುಖವೀಂದರ್ ಸಿಂಗ್ ಎನ್ನುವ ಮೂಲಕ ವಿವಾದ ಸೃಷ್ಟಿಸಿದ್ದರು. 

ಸಂಗೀತ ಮಾಂತ್ರಿಕ ಎ.ಆರ್​ ರೆಹಮಾನ್​ @57: ದಿಲೀಪ್,​ ರೆಹಮಾನ್​ ಆಗಿದ್ದು ಏಕೆ? ಹೇಗೆ?

click me!