ರಶ್ಮಿಕಾ ಇಂಡಿಯಾದ ಮೋಸ್ಟ್ ಸ್ಟೈಲಿಶ್ 2022 ಈವೆಂಟ್‌ನಲ್ಲಿ ಭಾಗಿಯಾಗಿದ್ದರು. ಬಾಲಿವುಡ್ ಖ್ಯಾತ ನಟ ಅನುಪಮ್ ಖೇರ್ ಮತ್ತು ರಶ್ಮಿಕಾ ಮಂದಣ್ಣ ಇಬ್ಬರೂ ರೆಡ್ ಕಾರ್ಪೆಟ್ ಮೇಲೆ ಒಟ್ಟಿಗೆ ಪೋಸ್ ನೀಡಿದರು. ಈ ಸಮಯದಲ್ಲಿ ಹಿರಿಯ ನಟ ಅನುಪಮ್ ಖೇರ್, ರಶ್ಮಿಕಾ ಜೊತೆ ಫೋಟೋ ಕ್ಲಿಕ್ಕಿಸಿಕೊಳ್ಳುವಂತೆ ಕೇಳಿದ್ದಾರೆ. ಅನುಪಮ್ ಖೇರ್ ಕೇಳಿದಕ್ಕೆ ಕಿರಿಕ್ ಪಾರ್ಟಿ ಸುಂದರಿ ನಾಚಿನೀರಾಗಿದ್ದಾರೆ. ರಶ್ಮಿಕಾ ಮತ್ತು ಅನುಪಮ್ ಖೇರ್ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.
ನಟಿ ರಶ್ಮಿಕಾ ಮಂದಣ್ಣ ತೆಲುಗು, ತಮಿಳು ಬಳಿಕ ಬಾಲಿವುಡ್ ನಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಾಗುತ್ತಿದ್ದಾರೆ. ಹಿಂದಿಯಲ್ಲಿ ರಶ್ಮಿಕಾ ಮಂದಣ್ಣ ಮೊದಲ ಸಿನಿಮಾ ರಿಲೀಸ್ ಆಗುವ ಮೊದಲೇ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಿಗೆ ಸಹಿ ಹಾಕಿದ್ದಾರೆ. ಈಗಾಗಲೇ ರಶ್ಮಿಕಾ ಹಿಂದಿಯಲ್ಲಿ ಅಧಿಕೃತವಾಗಿ ಮೂರು ಸಿನಿಮಾಗಳನ್ನು ಘೋಷಣೆ ಮಾಡಿದ್ದಾರೆ. ಎರಡು ಸಿನಿಮಾಗಳ ಚಿತ್ರೀಕರಣ ಮುಗಿಸಿ ಇದೀಗ ಮೂರನೇ ಹಿಂದಿ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಈ ನಡುವೆ ರಶ್ಮಿಕಾ ಅನೇಕ ಕಾರ್ಯಕ್ರಮಗಳಲ್ಲಿ ಹಾಜರಾಗುತ್ತಾರೆ. ಇತ್ತೀಚಿಗಷ್ಟೆ ರಶ್ಮಿಕಾ ಇಂಡಿಯಾದ ಮೋಸ್ಟ್ ಸ್ಟೈಲಿಶ್ 2022 ಈವೆಂಟ್‌ನಲ್ಲಿ ಭಾಗಿಯಾಗಿದ್ದರು. ಬಾಲಿವುಡ್ ಖ್ಯಾತ ನಟ ಅನುಪಮ್ ಖೇರ್ ಮತ್ತು ರಶ್ಮಿಕಾ ಮಂದಣ್ಣ ಇಬ್ಬರೂ ರೆಡ್ ಕಾರ್ಪೆಟ್ ಮೇಲೆ ಒಟ್ಟಿಗೆ ಪೋಸ್ ನೀಡಿದರು. ಈ ಸಮಯದಲ್ಲಿ ಹಿರಿಯ ನಟ ಅನುಪಮ್ ಖೇರ್, ರಶ್ಮಿಕಾ ಜೊತೆ ಫೋಟೋ ಕ್ಲಿಕ್ಕಿಸಿಕೊಳ್ಳುವಂತೆ ಕೇಳಿದ್ದಾರೆ. ಅನುಪಮ್ ಖೇರ್ ಕೇಳಿದಕ್ಕೆ ಕಿರಿಕ್ ಪಾರ್ಟಿ ಸುಂದರಿ ನಾಚಿನೀರಾಗಿದ್ದಾರೆ. ರಶ್ಮಿಕಾ ಮತ್ತು ಅನುಪಮ್ ಖೇರ್ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.
ಪುಷ್ಪ ಶ್ರೀವಲ್ಲಿಯನ್ನು ನೋಡಿ ಬಾಲಿವುಡ್ ನಟ ಅನುಪಮ್ ಖೇರ್ ಫೋಟೋ ತೆಗೆಸಿಕೊಳ್ಳುವಂತೆ ಕೇಳಿದ್ದಾರೆ. ಅಲ್ಲದೆ ಅಲ್ಲೇ ಇದ್ದ ಕ್ಯಾಮರಾ ಮ್ಯಾನ್ ಬಳಿ ತನ್ನ ಮೊಬೈಲ್ ನೀಡಿ ರಶ್ಮಿಕಾ ಜೊತೆ ಫೋಟೋ ಕ್ಲಿಕ್ಕಿಸಿಕೊಡುವಂತೆ ಕೇಳಿದ್ದಾರೆ. ಅನುಪಮ್ ಖೇರ್ ಕೇಳುತ್ತಿದ್ದಂತೆ ಪಕ್ಕದಲ್ಲೇ ಇದ್ದ ರಶ್ಮಿಕಾ ಕೆನ್ನೆಯನ್ನು ಬಡಿಕೊಂಡು ನಾಚಿಕೆಪಟ್ಟಿದ್ದಾರೆ. ರಶ್ಮಿಕಾ ಎಕ್ಸ್‌ಪ್ರೆಶನ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ನಟಿ ರಶ್ಮಿಕಾ ಮಂದಣ್ಣ ಮೋಸ್ಟ್ ಸ್ಟೈಲಿಶ್ ಹಾಟ್‌ಸ್ಟೆಪ್ಪರ್ ಪ್ರಶಸ್ತಿಯನ್ನು ಗೆದ್ದರು. ಬಳಿಕ ನಟಿ ವೇದಿಕೆಯಲ್ಲಿ ಮಾತನಾಡಿ ಅಭಿಮಾನಿಗಳ ಗಮನ ಸೆಳೆದರು. 'ನನ್ನನ್ನು ತಿಳಿದಿಲ್ಲದವರಿಗೆ ನನ್ನ ಹೆಸರು ರಶ್ಮಿಕಾ ಮಂದಣ್ಣ' ಎಂದು ಹೇಳಿದರು. ಅಲ್ಲಿರುವ ಎಲ್ಲರಿಗೂ ಅವಳ ಹೆಸರು ತಿಳಿದಿದೆ ಎಂದು ಒಬ್ಬರು ರಶ್ಮಿಕಾಗೆ ಹೇಳಿದರು. ನಂತರ ರಶ್ಮಿಕಾ 'ನಾನು ಇನ್ನೂ ನನ್ನನ್ನು ಪರಿಚಯಿಸಿಕೊಳ್ಳಬೇಕು, ಏಕೆಂದರೆ ನಾನು ಇಲ್ಲಿಗೆ ಬಂದಿರುವುದು ಇದೇ ಮೊದಲು'.
ಟೈಗರ್ ಶ್ರಾಫ್ ಜೊತೆಗಿನ ವಿಡಿಯೋ ಶೇರ್ ಮಾಡಿ ಗಾಸಿಪ್ ನಿಜವೆಂದ ರಶ್ಮಿಕಾ ಮಂದಣ್ಣ
ಮಾತು ಮುಂದುವರೆಸಿದ ರಶ್ಮಿಕಾ, 'ಇದು ತುಂಬಾ ವಿಶೇಷವಾಗಿದೆ. ನಾನು ಅದ್ಭುತ ವ್ಯಕ್ತಿಗಳ ಮುಂದೆ ಮಾತನಾಡುತ್ತಿದ್ದೇನೆ. ಇಲ್ಲಿಗೆ ಬರಲು ಆರು ವರ್ಷಗಳ ಶ್ರಮವಿದೆ. ತುಂಬಾ ಚೆನ್ನಾಗಿದೆ ರಶ್ಮಿಕಾ' ಎಂದು ರಶ್ಮಿಕಾ ತನ್ನನ್ನು ತಾನೆ ಹೊಗಳಿಕೊಂಡರು.
ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಮನಸ್ಸು ಗೆದ್ದ ಆ ಲವರ್ ಇವರೇ ನೋಡಿ..!
ಇನ್ನು ರಶ್ಮಿಕಾ ಸಿನಿಮಾ ವಿಚಾರಗಳ ಬಗ್ಗೆ ಹೇಳುವುದಾದರೆ ಸದ್ಯ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಹಿಂದಿಯಲ್ಲಿ ರಶ್ಮಿಕಾ ನಟನೆಯ ಮಿಷನ್ ಮಜ್ನು, ಗುಡ್ ಬೈ ಸಿನಿಮಾದ ಚಿತ್ರೀಕರಣ ಮುಗಿಸಿದ್ದು ರಿಲೀಸ್‌ಗೆ ಎದುರು ನೋಡುತ್ತಿದ್ದಾರೆ. ಮಿಷನ್ ಮಜ್ನು ಸಿನಿಮಾದಲ್ಲಿ ಸಿದ್ಧಾರ್ಥ್ ಮಲ್ಹೋತ್ರ ನಾಯಕನಾಗಿ ನಟಿಸಿದ್ದಾರೆ. ಇನ್ನು ಗುಡ್ ಬೈ ಸಿನಿಮಾದಲ್ಲಿ ಅಮಿತಾಬ್ ಬಚ್ಚನ್ ಜೊತೆ ನಟಿಸಿದ್ದಾರೆ. ಸದ್ಯ ರಶ್ಮಿಕಾ ಹಿಂದಿಯಲ್ಲಿ ರಣಬೀರ್ ಕಪೂರ್ ಜೊತೆ ಅನಿಮಲ್ ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಈ ಸಿನಿಮಾ ಜೊತೆಗೆ ತಮಿಳಿನಲ್ಲಿ ದಳಪತಿ ವಿಜಯ್ ಜೊತೆ ನಟಿಸುತ್ತಿದ್ದಾರೆ. ಈ ಸಿನಿಮಾ ಬಳಿಕ ರಶ್ಮಿಕಾ ಬಹುನಿರೀಕ್ಷೆಯ ಪುಷ್ಪ-2 ಸಿನಿಮಾದಲ್ಲಿ ಬ್ಯುಸಿಯಾಗಲಿದ್ದಾರೆ.