ಮಾಜಿ ಸಿಎಂ ಮೊಮ್ಮಕ್ಕಳ ಜೊತೆ ಸಾರಾ ಆಲಿ ಖಾನ್‌ ಮತ್ತು ಜಾಹ್ನವಿ ಕಪೂರ್ ಡೇಟಿಂಗ್!

By Suvarna NewsFirst Published Jul 16, 2022, 12:54 PM IST
Highlights

ಬಾಲಿವುಡ್‌ ತಾರೆಯರಾದ ಸಾರಾ ಆಲಿ ಖಾನ್‌ ಹಾಗೂ ಜಾಹ್ನವಿ ಕಪೂರ್ ಮಾಜಿ ಸಿಎಂ ಒಬ್ಬರ ಮೊಮ್ಮಕ್ಕಳ ಜೊತೆಗೆ ಡೇಟಿಂಗ್ ಮಾಡ್ತಿದ್ರು ಅನ್ನೋ ವಿಚಾರ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. ಈ ಗುಟ್ಟು ರಟ್ಟಾಗಲು ಕಾರಣವಾಗಿದ್ದು ಕಾಫಿ ವಿತ್‌ ಕರಣ್‌ ವೇದಿಕೆ.

ಸಾರಾ ಆಲಿ ಖಾನ್ ಮತ್ತು ಜಾನ್ವಿ ಕಪೂರ್ ಬಾಲಿವುಡ್ ನ ಹ್ಯಾಪನಿಂಗ್ ಹೀರೋಯಿನ್‌ಗಳು. ಅದಕ್ಕೂ ಹೆಚ್ಚಾಗಿ ಪ್ರತಿಷ್ಠಿತ ಕುಟುಂಬದ ಈ ಇಬ್ಬರೂ ಗೆಳತಿಯರೂ ಹೌದು. ಇವರಿಬ್ಬರೂ ಜೊತೆಯಾಗಿ ಬಾಲಿವುಡ್​ ಖ್ಯಾತ ನಿರ್ದೇಶಕ ಹಾಗೂ ನಿರ್ಮಾಪಕ ಕರಣ್​ ಜೋಹರ್​ ನಡೆಸಿಕೊಡುವ ಕಾಫಿ ವಿತ್​ ಕರಣ್ ಶೋದಲ್ಲಿ ಭಾಗವಹಿಸಿದ್ದಾರೆ. ಈ​ ಕಾರ್ಯಕ್ರಮದ 7ನೇ ಸೀಸನ್​ನ ಎರಡನೇ ಎಪಿಸೋಡ್​ನಲ್ಲಿ ಕಾಣಿಸಿಕೊಂಡು ಈ ನಟಿಯರು ಕರಣ್ ಕೇಳಿದ ಒಂದು ಪ್ರಶ್ನೆಗೆ ತಬ್ಬಿಬ್ಬಾಗಿದ್ದಾರೆ. ಕರಣ್ ಯಾರ ಹೆಸರನ್ನೂ ಹೇಳದೇ ಇಬ್ಬರು ಸಹೋದರರ ನಡುವೆ ನೀವಿಬ್ಬರೂ ಈ ಹಿಂದೆ ಡೇಟಿಂಗ್‌ ಮಾಡ್ತಿದ್ರಿ, ಆ ಡೇಟಿಂಗ್‌ ಬಗ್ಗೆ ಒಂಚೂರು ಇಲ್ಲಿ ಹೇಳ್ತೀರಾ? ಅನ್ನೋ ಪ್ರಶ್ನೆ ಕೇಳಿದರು. ಆಗ ಸಾರಾ ಮತ್ತು ಜಾನ್ವಿ ಇಬ್ಬರೂ ಶಾಕ್‌ಗೆ ಒಳಗಾದವರಂತೆ ಕಂಡರು. ಟಾಪಿಕ್‌ ಚೇಂಜ್ ಮಾಡಿ ನುಣುಚಿಕೊಳ್ಳುವ ಪ್ರಯತ್ನ ಮಾಡಿದರು. ಆದರೆ ಅವರ ಈ ರಿಯಾಕ್ಷನ್, ಅವರು ಯಾರ ಜೊತೆಗೆ ಡೇಟ್ ಮಾಡ್ತಿದ್ರು ಅನ್ನೋ ವಿಚಾರವನ್ನು ಈ ಕಾರ್ಯಕ್ರಮ ನೋಡಿದ ಕೆಲವರು ಹುಡುಕಿ ತೆಗೆದಿದ್ದಾರೆ. ಅದೀಗ ಸೋಷಿಯಲ್ ಮೀಡಿಯಾದಲ್ಲೀಗ ವೈರಲ್ ಆಗಿದೆ.

ಕರಣ್ ಜೋಹರ್ ನಡೆಸಿಕೊಡುವ ಜನಪ್ರಿಯ ಶೋ 'ಕಾಫಿ ವಿತ್ ಕರಣ್' . ಈ ಬಾರಿ ಈ ಶೋ ನಡೆಯೋದಿಲ್ಲ ಎಂದು ಈ ಹಿಂದೆ ವಿಷಾದದಿಂದ ಹೇಳಿಕೊಂಡಿದ್ದ ಕರಣ್ ಜೋಹರ್ ಓಟಿಟಿಯಲ್ಲಿ 'ಕಾಫಿ ವಿತ್‌ ಕರಣ್' ಶೋ(Koffe With Karan) ಆರಂಭಿಸಿ ಸಪ್ರ್ರೈಸ್ ಕೊಟ್ಟಿದ್ದರು. ಇದರಲ್ಲಿ ಮೊದಲ ಭಾಗದಲ್ಲಿ ಆಲಿಯಾ ಭಟ್ ಮತ್ತು ರಣಬೀರ್ ಸಿಂಗ್ ಪಾಲ್ಗೊಂಡಿದ್ದರು. ಈ ಎಪಿಸೋಡ್‌ನಲ್ಲಿ ಮೊದಲ ರಾತ್ರಿ(First night)ಯ ಬಗೆಗಿನ ಕೆಲವು ಮಾತುಗಳು ವೈರಲ್ ಆಗಿದ್ದವು. ಇದೀಗ ಈ ಶೋದ ಎರಡನೇ ಎಪಿಸೋಡ್ ಪ್ರಸಾರವಾಗಿದೆ. ಇದಕ್ಕೆ 'ಇಟ್ಸ್ ಎ ಗರ್ಲ್ಸ್ ನೈಟ್' ಅಂತ ಹೆಸರಿಟ್ಟಿದ್ದಾರೆ. ಇದರಲ್ಲಿ ಸಾರಾ ಮತ್ತು ಜಾನ್ವಿ ತಮ್ಮ ಡೇಟಿಂಗ್(Dating) ಹಾಗೂ ಸಿನಿ ಜೀವನದ ಕುರಿತು ಸಾಕಷ್ಟು ಆಸಕ್ತಿಕರ ಸಂಗತಿಗಳನ್ನು ಈ ಎಪಿಸೋಡ್‌ನಲ್ಲಿ ಬಿಚ್ಚಿಟ್ಟಿದ್ದಾರೆ.

Happy Birthday Katrina Kaif; ಚಿತ್ರರಂಗದಲ್ಲಿ 19 ವರ್ಷ ಪೂರೈಸಿದ ಕ್ಯಾಟ್ ರೋಚಕ ಜರ್ನಿ

ಅದರಲ್ಲಿ ಕುತೂಹಲ ಕೆರಳಿಸಿದ್ದು ಕರಣ್ ಕೇಳಿದ ಒಂದು ಪ್ರಶ್ನೆ. 'ಸಾರಾ ಅಲಿ ಖಾನ್​ ಮತ್ತು ಜಾಹ್ನವಿ ಕಪೂರ್​ ಒಂದೇ ಕುಟುಂಬದ ಇಬ್ಬರು ಸಹೋದರರ ಜೊತೆ ಈ ಹಿಂದೆ ಡೇಟಿಂಗ್​ ಮಾಡಿದ್ದರು. ಅದರ ಬಗ್ಗೆ ಈ ಶೋನಲ್ಲಿ ಏನಾದರೂ ಹೇಳುತ್ತೀರಾ?' ಎಂದು ಕರಣ್​ ಜೋಹರ್​ ಪ್ರಶ್ನಿಸಿದಾಗ ಇಬ್ಬರು ಶಾಕ್‌ಗೆ ಒಳಗಾದರು. ಈ ಗುಟ್ಟು, ಇವರಿಗೆ ಹೇಗೆ ಗೊತ್ತಾಯಿತು ಎಂದು ಒಂದು ಕ್ಷಣ ಗಲಿಬಿಲಿಗೊಂಡರು. ತಕ್ಷಣ ಜಾಹ್ನವಿ ಕಡೆ ನೋಡಿದ ಸಾರಾ, ಈ ಬಗ್ಗೆ ಕೇಳ್ತಾರೆ ಅನ್ನೋದು ನಿನಗೆ ಮೊದಲೇ ತಿಳಿದಿತ್ತಾ ಎಂದು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಜಾಹ್ನವಿ ನನಗೆ ಗೊತ್ತಿರಲಿಲ್ಲ ಎಂದರು. ಬಳಿಕ ಮಾತನಾಡಿದ ಕರಣ್​, ನನ್ನ ಮಾತಿನ ಅರ್ಥ ಏನೆಂದರೆ, ನೀವು ಈ ಹಿಂದೆ ಇಬ್ಬರು ಸಹೋದರರ ಜೊತೆ ಡೇಟಿಂಗ್​ ಮಾಡಿದ್ದಿರಿ. ನಮ್ಮ ಮೂವರ ನಡುವೆ ಇರುವ ಸಾಮಾನ್ಯತೆ ಏನೆಂದರೆ, ನಾನಿದ್ದ ಕಟ್ಟಡದಲ್ಲಿ ಆ ಸಹೋದರರು ವಾಸಿಸುತ್ತಿದ್ದರು ಎಂದು ಕರಣ್ ಹೇಳಿದರು. ಇದರಿಂದ ಸಾರಾ ಮತ್ತು ಜಾಹ್ನವಿ ಗಲಿಬಿಲಿಗೊಂಡರು.

ಅನಿಲ್‌ ಅಂಬಾನಿ ಸೇರಿ ಸುಶ್ಮಿತಾ ಸೇನ್‌ ಡೇಟ್‌ ಮಾಡಿದ ಬ್ಯುಸಿನೆಸ್‌ಮೆನ್‌

ಇದು ಇಷ್ಟಕ್ಕೇ ಮುಗಿಯಲಿಲ್ಲ. ಯಾವಾಗ ಕರಣ್​ ಈ ವಿಚಾರ ಪ್ರಸ್ತಾಪಿಸಿದರೋ ಸೋಷಿಯಲ್‌ ಮೀಡಿಯಾ(Social Media)ದಲ್ಲಿ ಆ ಇಬ್ಬರು ಸಹೋದರರು ಯಾರು ಎಂಬ ಹುಡುಕಾಟ ಶುರುವಾಯಿತು. ಕೊನೆಗೂ ಆ ಇಬ್ಬರು ಸಹೋದರರನ್ನು ಹುಡುಕಿ ಅವರ ಜೊತೆಗೆ ಇವರಿಬ್ಬರಿದ್ದ ಫೋಟೋಗಳನ್ನು ಕೆಲವರು ಸೋಷಿಯಲ್‌ ಮೀಡಿಯಾದಲ್ಲಿ ಪೋಸ್ಟ್​ ಮಾಡಿದ್ದಾರೆ.

 

 
 
 
 
 
 
 
 
 
 
 
 
 
 
 

A post shared by veersara (@veerandsara)

ಆ ಇಬ್ಬರು ಸಹೋದರರ ಹೆಸರು ವೀರ್​ ಪಹಾರಿಯ ಮತ್ತು ಶಿಖರ್​ ಪಹಾರಿಯ. ಈ ಇಬ್ಬರು ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಸುಶಿಲ್​ ಕುಮಾರ್​ ಶಿಂಧೆ ಅವರ ಮೊಮ್ಮಕ್ಕಳು. ಜಾಹ್ನವಿ ಮತ್ತು ಸಾರಾ ಜೊತೆ ಇವರಿಬ್ಬರು ಇರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ವೀರ್​ ಪಹಾರಿಯ ಜೊತೆ ಸಾರಾ ಅಲಿ ಖಾನ್​ ಮತ್ತು ಶಿಖರ್​ ಪಹಾರಿಯ ಜತೆ ಜಾಹ್ನವಿ ಕಪೂರ್​ ಡೇಟಿಂಗ್​ ಮಾಡಿದ್ದರು ಎಂಬ ವಿಚಾರ ಇದೀಗ ಬಹಿರಂಗವಾಗಿದೆ.

 

click me!