ನಯನತಾರಾ-ವಿಘ್ನೇಶ್ ಮದುವೆ ಸ್ಟ್ರೀಮಿಂಗ್‌ನಿಂದ ಹಿಂದೆ ಸರಿದ ನೆಟ್‌ಫ್ಲಿಕ್ಸ್; ಕಾರಣವೇನು?

Published : Jul 16, 2022, 12:48 PM ISTUpdated : Jul 16, 2022, 01:01 PM IST
ನಯನತಾರಾ-ವಿಘ್ನೇಶ್ ಮದುವೆ ಸ್ಟ್ರೀಮಿಂಗ್‌ನಿಂದ ಹಿಂದೆ ಸರಿದ ನೆಟ್‌ಫ್ಲಿಕ್ಸ್; ಕಾರಣವೇನು?

ಸಾರಾಂಶ

ಅಂದಹಾಗೆ ನಯನತಾರಾ ಮದುವೆ ಹಕ್ಕನ್ನು ಒಟಿಟಿಗಳ ದೈತ್ಯ ನೆಟ್‌ಫ್ಲಿಕ್ಸ್ ಖರೀದಿ ಮಾಡಿತ್ತು, ಮದುವೆಯ ಇಡೀ ಖರ್ಚನ್ನು ನೆಟ್‌ಫ್ಲಿಕ್ಸ್ ನೋಡಿಕೊಂಡಿತ್ತು. ಅನ್ನುವ ಸುದ್ದಿ ವೈರಲ್ ಆಗಿತ್ತು. ಆದರೆ ನಯನತಾರಾ ಮತ್ತು ವಿಘ್ನೇಶ್ ಮದುವೆಯಾಗಿ ಒಂದು ತಿಂಗಳ ಮೇಲಾಗಿದೆ. ಆದರೂ ಒಟಿಟಿಯಲ್ಲಿ ಸ್ಟ್ರೀಮಿಂಗ್ ಆಗುವ ಬಗ್ಗೆ ಯಾವುದೇ ಸುಳಿವು ನೀಡಿಲ್ಲ ನೆಟ್‌ಫ್ಲಿಕ್ಸ್. ಹಾಗಾಗಿ ನಿಜಕ್ಕೂ ನಯನತಾರಾ ಮದುವೆ ಹಕ್ಕನ್ನು ನೆಟ್‌ಫ್ಲಿಕ್ಸ್ ಖರೀದಿ ಮಾಡಿದ್ಯಾ ಎನ್ನುವ ಅನುಮಾನ ಶುರುವಾಗಿದೆ. 

ಕಾಲಿವುಡ್ ಲೇಡಿ ಸೂಪರ್ ಸ್ಟಾರ್ ನಯನತಾರಾ ಮತ್ತು ನಿರ್ದೇಶಕ ವಿಘ್ನೇಶ್ ಶಿವನ್ ಜೂನ್ 9ರಂದು ಚೆನ್ನೈನ ಮಹಾಬಲಿಪುರಂನಲ್ಲಿ ಅದ್ದೂರಿಯಾಗಿ ಹಸೆಮಣೆ ಏರಿದ್ದರು. ಗ್ರ್ಯಾಂಡ್ ಆಗಿ ನಡೆದ ಮದುವೆ ಸಮಾರಂಭದಲ್ಲಿ ಅನೇಕ ಗಣ್ಯರು ಹಾಜರಿದ್ದರು. ಕಾಲಿವುಡ್, ಬಾಲಿವುಡ್ ನ ಸ್ಟಾರ್ಸ್ ಮದುವೆಗೆ ಹಾಜರಾಗಿ  ನವಜೋಡಿಗೆ ಶುಭಹಾರೈಸಿದ್ದರು. ದುಬಾರಿದ ಮದುವೆಯಲ್ಲಿ ಸಮಾರಂಭದಲ್ಲಿ ಇಬ್ಬರು ಕುಟುಂಬದವರು, ಆಪ್ತರು ಮತ್ತು ಚಿತ್ರರಂಗದ ಗಣ್ಯರು ಹಾಜರಿದ್ದರು. ನಯನತಾರ ಮತ್ತು ವಿಘ್ನೇಶ್ ಮದುವೆ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಸುಮಾರು ನಾಲ್ಕು ವರ್ಷಗಳಿಂದ ಡೇಟಿಂಗ್‌ನಲ್ಲಿದ್ದ ನಯನತಾರಾ ಮತ್ತು ವಿಘ್ನೇಶ್ ಶಿವನ್ ಕೊನೆಗೂ ಮದುವೆಯಾಗುವ ಮೂಲಕ ಪತಿ-ಪತ್ನಿಯರಾಗಿದ್ದಾರೆ.

ಅಂದಹಾಗೆ ನಯನತಾರಾ ಮದುವೆ ಹಕ್ಕನ್ನು ಒಟಿಟಿಗಳ ದೈತ್ಯ ನೆಟ್‌ಫ್ಲಿಕ್ಸ್ ಖರೀದಿ ಮಾಡಿತ್ತು, ಮದುವೆಯ ಇಡೀ ಖರ್ಚನ್ನು ನೆಟ್‌ಫ್ಲಿಕ್ಸ್ ನೋಡಿಕೊಂಡಿತ್ತು. ಅನ್ನುವ ಸುದ್ದಿ ವೈರಲ್ ಆಗಿತ್ತು. ಆದರೆ ನಯನತಾರಾ ಮತ್ತು ವಿಘ್ನೇಶ್ ಮದುವೆಯಾಗಿ ಒಂದು ತಿಂಗಳ ಮೇಲಾಗಿದೆ. ಆದರೂ ಒಟಿಟಿಯಲ್ಲಿ ಸ್ಟ್ರೀಮಿಂಗ್ ಆಗುವ ಬಗ್ಗೆ ಯಾವುದೇ ಸುಳಿವು ನೀಡಿಲ್ಲ ನೆಟ್‌ಫ್ಲಿಕ್ಸ್. ಹಾಗಾಗಿ ನಿಜಕ್ಕೂ ನಯನತಾರಾ ಮದುವೆ ಹಕ್ಕನ್ನು ನೆಟ್‌ಫ್ಲಿಕ್ಸ್ ಖರೀದಿ ಮಾಡಿದ್ಯಾ ಎನ್ನುವ ಅನುಮಾನ ಶುರುವಾಗಿದೆ. ಮೂಲಗಳ ಪ್ರಕಾರ ನೆಟ್‌ಫ್ಲಿಕ್ಸ್ ನಯನತಾರಾ ಮದುವೆ ಹಕ್ಕನ್ನು ಬರೋಬ್ಬರಿ 25 ಕೋಟಿ ರೂಪಾಯಿಗೆ ಖರೀದಿ ಮಾಡಿತ್ತು ಎನ್ನಲಾಗಿತ್ತು. ಇದರ ಸಂಪೂರ್ಣ ಜವಾಬ್ದಾರಿ ನಿರ್ದೇಶಕ ಗೌತಮ್ ಮೆನನ್ ವಹಿಸಿಕೊಂಡಿದ್ದರು. 

ಆದರೀಗ ಕೇಳಿಬರುತ್ತಿರುವ ಮಾಹಿತಿ ಪ್ರಕಾರ ನೆಟ್‌ಫ್ಸಿಕ್ಸ್ ಲೇಡಿ ಸೂಪರ್ ಸ್ಟಾರ್ ಮದುವೆ  ಸ್ಟ್ರೀಮಿಂಗ್‌ನಿಂದ ಹಿಂದೆ ಸರಿದಿದ್ದಾರೆ. ನಯನತಾರಾ ಮತ್ತು ವಿಘ್ನೇಶ್ ಶಿವನ್ ಅವರ ಕೆಲವು ನಿರ್ಧಾರಗಳು ಒಟಿಟಿಗೆ ಇಷ್ಟವಾಗದ ಕಾರಣ ಹಿಂದೆ ಸರಿದಿದ್ದಾರೆ ಎನ್ನುವ ಮಾಹಿತಿ ಕೇಳಿಬರುತ್ತಿದೆ.  ನಯನತಾರಾ ದಂಪತಿ ಜೊತೆ ನೆಟ್ ಫ್ಲಿಕ್ಸ್ ಒಂದಿಷ್ಟು ಒಪ್ಪಂದ  ಮಾಡಿಕೊಳ್ಳುವಂತೆ ಹೇಳಿತ್ತು. ಮದುವೆಯ ಯಾವುದೇ ಫೋಟೋವನ್ನು ರಿವೀಲ್ ಮಾಡುವ ಹಾಗಿಲ್ಲ ಎಂದು ಷರತ್ತು ಹಾಕಿತ್ತು. ಆದರೆ ಮದುವೆ ಫೋಟೋಗಳು ಸಿಕ್ಕಾಪಟ್ಟೆ  ವೈರಲ್ ಆಗಿತ್ತು. ಸ್ವತಃ ನಯನತಾರಾ ಮತ್ತು ವಿಘ್ನೇಶ್ ಅವರೇ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದರು. ಇದು ಒಟಿಟಿಗೆ ಇಷ್ಟವಾಗಿಲ್ಲ, ಹಾಗಾಗಿ ಸ್ಟ್ರೀಮಿಂಗ್ ನಿರ್ಧಾರಿಂದ ಹಿಂದೆ ಸರಿದಿದೆ ಎನ್ನಲಾಗುತ್ತಿದೆ. ಈ ಬಗ್ಗೆ ನಟಿ ಅಥವಾ ಒಟಿಟಿ ಕಡೆಯಿಂದ ಯಾವುದೇ ಮಾಹಿತಿ ರಿವೀಲ್ ಆಗಿಲ್ಲ. 

ನಯನತಾರಾ-ವಿಘ್ನೇಶ್ ಮದುವೆಗೆ 1 ತಿಂಗಳು; ಶಾರುಖ್-ರಜನಿಕಾಂತ್ ಫೋಟೋ ಹಂಚಿಕೊಂಡ ನಿರ್ದೇಶಕ

ಲೇಡಿ ಸೂಪರ್ ಸ್ಟಾರ್ ಮದುವೆಯನ್ನು ಒಟಿಟಿಯಲ್ಲಿ ನೋಡಲು ಕಾತರರಾಗಿದ್ದ ಅಭಿಮಾನಿಗಳಿಗೆ ಇದು ತುಂಬಾ ನಿರಾಸೆ ಮೂಡಿಸಿದೆ. ಕೆಲವು ಮೂಲಗಳ ಪ್ರಕಾರ ನೆಟ್‌ಫ್ಲಿಕ್ಸ್ ಹಿಂದೆ ಸರಿದ ಬಳಿಕ ಯೂಟ್ಯೂಬ್ ನಲ್ಲಿ ಮದುವೆ ವಿಡಿಯೋ ಶೇರ್ ಮಾಡಲು ನಿರ್ಧರಿಸಿದ್ದಾರೆ ಎನ್ನಲಾಗುತ್ತಿದೆ. 

ಅರಿಶಿಣ ದಾರ ಹಾಕಿ ಏರ್ಪೋಟ್‌ನಲ್ಲಿ ಕಾಣಿಸಿಕೊಂಡ ನಯನತಾರಾ; ಅಭಿಮಾನಿಗಳ ಮೆಚ್ಚುಗೆ

ಇತ್ತೀಚಿಗಷ್ಟೆ ತಾರಾಜೋಡಿ ಮದುವೆಯಾಗಿ ಒಂದು ತಿಂಗಳ ಸಂಭ್ರವನ್ನು ಆಚರಿಸಿದ್ದರು. ಒಂದು ತಿಂಗಳ ಖುಷಿಯನ್ನು ಮತ್ತೊಂದಿಷ್ಟು ಫೋಟೋವನ್ನು ಶೇರ್ ಮಾಡಿದ್ದರು. ಸೂಪರ್ ಸ್ಟಾರ್ ರಜನಿಕಾಂತ್ ಮತ್ತು ಶಾರುಖ್ ಖಾನ್ ಭೇಟಿಯ ಫೋಟೋವನ್ನು ಹಂಚಿಕೊಂಡಿದ್ದರು. ಹೌದು, ನಯನಾತಾರಾ ಮದುವೆಗೆ ಶಾರುಖ್ ಮತ್ತು ರಜನಿಕಾಂತ್ ಭೇಟಿ ನೀಡಿದ್ದರು. ಶಾರುಖ್ ಖಾನ್ ಮದುಮಗಳು ನಯನತಾರಾ ಅವರನ್ನು ಹಗ್ ಮಾಡಿ ಶುಭಾಶಯ ತಿಳಿಸಿದ್ದರು. ಶಾರುಖ್ ಖಾನ್ ಜೊತೆಗಿನ ಫೋಟೋ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಶಾರುಖ್ ಖಾನ್ ಗೆ ನಿರ್ದೇಶಕ ಅಟ್ಲೀ ಕುಮಾರ್ ಸಾಥ್ ನೀಡಿದ್ದರು. ಅಂದಹಾಗೆ ಶಾರುಖ್ ಮತ್ತು ನಯನತಾರಾ ಇಬ್ಬರೂ ಅಟ್ಲೀ ನಿರ್ದೇಶನದ ಜವಾನ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈಗಾಗಲೇ ಜವಾನ್ ಸಿನಿಮಾದ ಟೀಸರ್ ರಿಲೀಸ್ ಆಗಿದ್ದು ನಿರೀಕ್ಷೆ ಹೆಚ್ಚಿಸಿದೆ. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಸಲ್ಮಾನ್ ಖಾನ್ ಹೊಂದಿರೋ ಅಷ್ಟೊಂದು ಆಸ್ತಿಯ ರಹಸ್ಯವೇನು? ಎಲ್ಲಿಲ್ಲಿ ಹೂಡಿಕೆ ಮಾಡಿದ್ದಾರೆ?
ತುಂಡುಡುಗೆ ತೊಟ್ಟು ಎಲ್ಲಾ ತೋರಿಸೋ ತರ ಬಟ್ಟೆ ಹಾಕಬೇಡಿ ಎಂದ ನಟನ ಪರ ನಿಂತ ನಟಿ ಶ್ರೀ ರೆಡ್ಡಿ