ಒಡಿಸ್ಸಾದಲ್ಲಿ ಫನಿ ಅಬ್ಬರಕ್ಕೆ ಜನಜೀವನ ತತ್ತರ | ನೆರೆ ಸಂತ್ರಸ್ತರಿಗೆ ಅಕ್ಷಯ್ ಕುಮಾರ್ ಆರ್ಥಿಕ ನೆರವು | ಮುಖ್ಯಮಂತ್ರಿ ಪರಿಹಾರ ನಿಧಿಗೆ ಹಣ ನೀಡಿದ ಅಕ್ಷಯ್ ಕುಮಾರ್
ಫನಿ ಚಂಡಮಾರುತದ ಅಬ್ಬರದಿಂದ ಒಡಿಶಾ ಅಕ್ಷರಶಃ ನಲುಗಿ ಹೋಗಿದೆ. ಸಾಕಷ್ಟು ಮಂದಿ ಮನೆ, ಆಸ್ತಿಯನ್ನು ಕಳೆದುಕೊಂಡು ಸಂತ್ರಸ್ತರಾಗಿದ್ದಾರೆ. 34 ಮಂದಿ ಪ್ರವಾಹಕ್ಕೆ ಸಿಲುಕಿ ಮೃತಪಟ್ಟಿದ್ದಾರೆ.
ಮದುವೆ ಬಳಿಕ ಮೇಘನಾ ರಾಜ್ ಹೊಸ ಸಿನಿಮಾ
ಒಡಿಶಾ ಸಂತ್ರಸ್ತರಿಗೆ ನೆರೆ ರಾಜ್ಯದವರು, ಕೇಂದ್ರ ಸರ್ಕಾರ ನೆರವಿನ ಹಸ್ತ ಚಾಚಿದೆ. ಬಾಲಿವುಡ್ ನಟ ಅಕ್ಷಯ್ ಕುಮಾರ್ ಕೂಡಾ ಸಹಾಯ ಹಸ್ತ ಚಾಚಿದ್ದಾರೆ. ಸಂತ್ರಸ್ತರಿಗಾಗಿ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ 1 ಕೋಟಿ ರೂ ದೇಣಿಗೆ ನೀಡಿದ್ದಾರೆ.
ದೇಹದ ‘ಆ‘ ಅಂಗದ ಬಗ್ಗೆ ಮಾತನಾಡಿದ್ದವನಿಗೆ ಈ ನಟಿ ಕೊಟ್ಟ ಚಾಟಿ ಏಟು!
ಅಕ್ಷಯ್ ಕುಮಾರ್ ಸಾಮಾಜಿಕ ಸೇವೆಯಲ್ಲಿ ಯಾವಾಗಲೂ ಮುಂದು. ಸಹಾಯ ಮಾಡುತ್ತಿರುವುದು ಇದೇ ಮೊದಲೇನಲ್ಲ. ಈ ಹಿಂದೆ ಕೇರಳ, ಚೆನ್ನೈನಲ್ಲಿ ಪ್ರವಾಹ ಬಂದಾಗ ಅಲ್ಲಿನ ಸಂತ್ರಸ್ತರಿಗೂ ನೆರವು ನೀಡಿದ್ದರು.