ಅಜಯ್ ಟೊಬ್ಯಾಕೋ ಜಾಹಿರಾತಿಗೆ ಕ್ಯಾನ್ಸರ್ ಪೇಷಂಟ್ ಉತ್ತರವಿದು!

By Web Desk  |  First Published May 6, 2019, 4:00 PM IST

ತಂಬಾಕು ಉತ್ಪನ್ನಗಳ ಜಾಹಿರಾತಿನಲ್ಲಿ ಅಜಯ್ ದೇವಗನ್ | ಟೊಬ್ಯಾಕೋ ಉತ್ಪನ್ನಗಳನ್ನು ಪ್ರಮೋಟ್ ಮಾಡುವುದನ್ನು ನಿಲ್ಲಿಸಿ ಎಂದು ಕ್ಯಾನ್ಸರ್ ರೋಗಿ ಮನವಿ 


ತಂಬಾಕು ಉತ್ಪನ್ನಗಳ ಜಾಹಿರಾತುಗಳಲ್ಲಿ ಕಾಣಿಸಿಕೊಳ್ಳುವ ಅಜಯ್ ದೇವಗನ್ ಆಗಾಗ ಟ್ರೋಲ್ ಆಗುತ್ತಿರುತ್ತಾರೆ. ಇದೀಗ ಕ್ಯಾನ್ಸರ್ ರೋಗಿಯೊಬ್ಬರು ತಂಬಾಕು ಉತ್ಪನ್ನಗಳನ್ನು ಪ್ರಮೋಟ್ ಮಾಡುವುದನ್ನು ನಿಲ್ಲಿಸಬೇಕೆಂದು ಅಜಯ್ ದೇವ್ ಗನ್ ಗೆ ಮನವಿ ಮಾಡಿಕೊಂಡಿದ್ದಾರೆ. 

ಮಜಾ ಟಾಕೀಸ್ ರಾಣಿಯ ಮಸ್ತ್-ಮಸ್ತ್ ಫೋಟೋಸ್!

Tap to resize

Latest Videos

40 ವರ್ಷದ ನಾನಕ್ ರಾಮ್ ಎನ್ನುವ ಕ್ಯಾನ್ಸರ್ ರೋಗಿಯೊಬ್ಬರು ಅಜಯ್ ದೇವ್ ಗನ್ ಅಭಿಮಾನಿ. ಅವರು ಪ್ರಮೋಟ್ ಮಾಡುವ ಉತ್ಪನ್ನಗಳನ್ನು ಬಳಸುತ್ತಿದ್ದರು. ಈಗ ಆರೋಗ್ಯಕ್ಕೆ ತಂಬಾಕು ಹಾನಿಕರ ಎಂದು ಅರ್ಥವಾಗಿ ತಂಬಾಕು ಉತ್ಪನ್ನಗಳನ್ನು ಬಳಸುವುದನ್ನು ನಿಲ್ಲಿಸಿದ್ದಾರೆ. 

ಬಿಕಿನಿಯಲ್ಲಿ ಹುಡುಗರ ಮೈ ಬಿಸಿಯೇರಿಸಿದ ‘ಬಸಣ್ಣಿ’

ಲಿಕ್ಕರ್, ಸಿಗರೇಟ್, ತಂಬಾಕು ಸೇವನೆ ಆರೋಗ್ಯಕ್ಕೆ ಒಳ್ಳೆಯದಲ್ಲ. ಇಂತಹ ಉತ್ಪನ್ನಗಳನ್ನು ಪ್ರಮೋಟ್ ಮಾಡುವುದನ್ನು ನಿಲ್ಲಿಸಿ ಎಂದು ನಾನಕ್ ರಾಮ್ ಅಜಯ್ ದೇವಗನ್ ಗೆ ಪತ್ರ ಬರೆದು ಮನವಿ ಮಾಡಿದ್ದಾರೆ. 

click me!