
ಪ್ರೀತಿಗೆ ವಯಸ್ಸು, ಲಿಂಗಬೇಧವಿಲ್ಲ ಎನ್ನುವ ಮಾತನ್ನು ಆಗಾಗ ಕೇಳುತ್ತಿರುತ್ತೇವೆ. ಈ ಮಾತಿಗೆ ಸಾಕ್ಷಿ ಎನ್ನುವಂತೆ ಈ ಮದುವೆಗೂ ಲಿಂಗಭೇದವಿಲ್ಲ. ಕಾಲಿವುಡ್ ನಟಿ ತ್ರಿಷಾ ಕೃಷ್ಣನ್ ಹಾಘೂ ಚಾರ್ಮಿ ಕೌರ್ ಮದುವೆಯಾಗುತ್ತಿದ್ದಾರೆ! ಅರೇ! ಇದೇನಿದು ಎಂದು ಅಚ್ಚರಿಪಡಬೇಡಿ. ತಾವು ಮದುವೆಯಾಗುತ್ತಿರುವುದಾಗಿ ಹೇಳಿಕೊಂಡಿದ್ದಾರೆ.
ತ್ರಿಷಾ ಕೃಷ್ಣನ್ ಮೇ 04 ರಂದು ಹುಟ್ಟುಹಬ್ಬ ಆಚರಿಸಿಕೊಂಡರು. ತ್ರಿಷಾಗೆ ಸ್ನೇಹಿತೆ ಚಾರ್ಮಿ ಕೌರ್ ವಿಶ್ ಮಾಡುತ್ತಾ, ಬೇಬಿ, ಈ ಲವ್ ಯೂ ಫಾರೆವರ್. ನಾವಿಬ್ಬರೂ ಮದುವೆಯಾಗೋಣವೇ? ನಿನ್ನ ಸಮ್ಮತಿಗಾಗಿ ನಿನ್ನ ಮೊಣಕಾಲ ಬಳಿ ಕುಳಿತು ಕಾಯುತ್ತೇನೆ’ ಎಂದು ಚಾರ್ಮಿ ಕೇಳಿಕೊಂಡಿದ್ದಾರೆ.
ಈ ಟ್ವೀಟ್ ಗೆ ತ್ರಿಷಾ ಉತ್ತರಿಸುತ್ತಾ, ಥ್ಯಾಂಕ್ಯೂ. ನಾನು ಈಗಾಗಲೇ ಯೆಸ್ ಹೇಳಿದ್ದೇನೆ ಎಂದು ಉತ್ತರಿಸಿದ್ದಾರೆ.
ಚಾರ್ಮಿ ಕೌರ್ ಹಾಗೂ ತ್ರಿಷಾ ಕೃಷ್ಣನ್ ಆತ್ಮೀಯ ಸ್ನೇಹಿತೆಯರು. ಚಾರ್ಮಿ ಕೌರ್ ಡ್ಯಾನ್ಸಿಂಗ್ ಸ್ಟಾರ್. ಲವಕುಶ, ದೇವ್ ಸನ್ ಆಫ್ ಮುದ್ದೇಗೌಡ, ಯಾರೇ ಕೂಗಾಡಲಿ ಚಿತ್ರಗಳಲ್ಲಿ ನಟಿಸಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.