
ಬಿಗ್ ಬಾಸ್ ಕನ್ನಡ , ಸೀಸನ್ 9 ರ ರನ್ನರ್ ಅಪ್ ಅರವಿಂದ್ ಕೆಪಿ (Aravind KP),ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಖುಷಿಯ ಕ್ಷಣವೊಂದನ್ನು ಹಂಚಿಕೊಂಡಿದ್ದಾರೆ. ಇತ್ತೀಚೆಗೆ ಈವೆಂಟ್ ಒಂದರಲ್ಲಿ ಅರವಿಂದ್ ಅವರು ತಮ್ಮ ರೋಲ್ ಮಾಡೆಲ್ ನಟ ರಣವೀರ್ ಸಿಂಗ್ (Ranveer Singh) ಅವರನ್ನು ಬೇಟಿಯಾಗಿದ್ದಾರೆ. ನಟ ಅರವಿಂದ್ ಕೆಪಿ, ತಮ್ಮಿಷ್ಟದ ನಟ ರಣವೀರ್ ಸಿಂಗ್ ಭೇಟಿಯಾದ ಕ್ಷಣವನ್ನು ಫೋಟೋ ಸಮೇತ ಶೇರ್ ಮಾಡಿಕೊಂಡು ತಮ್ಮ ಅಭಿಮಾನಿಗಳಿಗೆ ಸಖತ್ ಥ್ರಿಲ್ ನೀಡಿದ್ದಾರೆ.
ಅರವಿಂದ್ ಕೆಪಿ, ಭಾರತದ ಮೋಟಾರ್ ರೇಸ್ ಸ್ಪರ್ಧಿ ಕೂಡ ಹೌದು. 2005ರಲ್ಲಿಯೇ ಅವರು ಮೋಟಾರ್ ರೇಸ್‌ನಲ್ಲಿ ಪಾಲ್ಗೊಂಡಿದ್ದಾರೆ. ಕನ್ನಡದ ಬಿಗ್ ಬಾಸ್ ಸೀಸನ್-8 ರ ರನ್ನರ್ ಅಪ್ ಆಗಿರುವ ಅರವಿಂದ್ ಕೆಪಿ, ಬಳಿಕ ಸ್ಯಾಂಡಲ್‌ವುಡ್ ಸಿನಿಮಾಗಳಲ್ಲಿ ಕೂಡ ನಟಿಸಿದ್ದಾರೆ. 'ನಾನು ಮತ್ತು ವರಲಕ್ಷ್ಮೀ' ಹೆಸರಿನ ಕನ್ನಡ ಚಿತ್ರದ ಮೂಲಕ ಕನ್ನಡ ಚಿತ್ರರಂಗ ಪ್ರವೇಶಿಸಿದ ನಟ ಅರವಿಂದ್ ಕೆಪಿ, ಬಳಿಕ 'ಬೆಂಗಳೂರು ಡೇಸ್' ಎಂಬ ಮಲಯಾಳಂ ಚಿತ್ರದಲ್ಲಿ ಸಹ ನಟಿಸಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲಿ ಸೌಂಡ್ ಮಾಡುತ್ತಿರುವ ಸೆಲೆಬ್ರಿಟಿ ಮುದ್ದು ಮಕ್ಕಳು!
ಬಿಗ್ ಬಾಸ್ ಸಹ ಸ್ಪರ್ಧಿ ಮತ್ತು ಸ್ನೇಹಿತೆ ದಿವ್ಯಾ ಉರುಡಗ ಜತೆ 'ಅರ್ಧಂಬರ್ಧ ಪ್ರೇಮ ಕಥೆ ಚಿತ್ರದಲ್ಲಿ ಲೀಡ್ ರೋಲ್ ನಲ್ಲಿ ನಟ ಅರವಿಂದ ಕೆಪಿ ನಟಿಸಿದ್ದು, ಈ ಚಿತ್ರವನ್ನು ಅರವಿಂದ್ ಕೌಶಿಕ್ ನಿರ್ದೇಶಿಸಿದ್ದಾರೆ. ಈ ಚಿತ್ರವು ಈಗಾಗಲೇ ರಿಲೀಸ್ ಆಗಿದ್ದು ತಕ್ಕಮಟ್ಟಿಗೆ ಸೌಂಡ್ ಸಹ ಮಾಡಿದೆ. ಒಟ್ಟಿನಲ್ಲಿ, ಇದೀಗ ಈವೆಂಟ್ ಒಂದರಲ್ಲಿ ತಮ್ಮ ಮೆಚ್ಚಿನ ನಟ ಬಾಲಿವುಡ್ ಸ್ಟಾರ್ ರಣವೀರ್ ಸಿಂಗ್ ಅವರನ್ನು ಭೇಟಿಯಾಗಿ ಅರವಿಂದ್ ಕೆಪಿ, ಸೋಷಿಯಲ್ ಮೀಡಿಯಾ ಮೂಲಕ ಮತ್ತೊಮ್ಮೆ ಸುದ್ದಿಗೆ ಸಿಕ್ಕಿದ್ದಾರೆ.
ನಾನು ಬದುಕಿದ್ದರೆ ಮತ್ತೆ ನಿಮ್ಮ ಸೇವೆ ಮಾಡುತ್ತೇನೆ; ಇಲ್ಲದಿದ್ದರೆ ಜೈ ಹಿಂದ್: ಸಲ್ಮಾನ್ ಖಾನ್!
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.