ರುಂಡ ಇಲ್ಲದೇ ಕಾರಿನಿಂದ ಇಳಿದ ನಟಿ ಉರ್ಫಿ ಜಾವೇದ್ ಅವರನ್ನು ನೋಡಿ ಪಾಪರಾಜಿಗಳು ದಂಗಾಗಿರುವ ಘಟನೆ ನಡೆಯಿತು. ಅಷ್ಟಕ್ಕೂ ಆಗಿದ್ದೇನು?
ಉರ್ಫಿ ಜಾವೇದ್ (Uorfi Javed) ಎಂದಾಕ್ಷಣ ಎಲ್ಲರ ಕಣ್ಣುಮುಂದೆ ಬರುವುದು ಅತ್ಯಂತ ಕನಿಷ್ಠ ಉಡುಪು ಅಥವಾ ಉಡುಪೇ ಇಲ್ಲದ ನಟಿಯ ರೂಪ. ಚುಮುಚುಮು ಚಳಿಯಲ್ಲಿಯೂ ಮೈಮೇಲೆ ತುಂಡು ಬಟ್ಟೆಯುಟ್ಟು ಪಡ್ಡೆ ಹುಡುಗರ ಬಿಸಿ ಏರಿಸ್ತಿರೋ ಈ ನಟಿ ಸೋಷಿಯಲ್ ಮೀಡಿಯಾದಲ್ಲಿ (Social media) ಸೆನ್ಸೇಷನ್ ಕ್ರಿಯೇಟ್ ಮಾಡ್ತಿರೋದು ಹೊಸ ವಿಷಯವೇನಲ್ಲ. ಪ್ರತಿದಿನವೂ ಎಂಬಂತೆ ವಿಶಿಷ್ಟ ರೀತಿಯಲ್ಲಿ ಉಡುಗೆ ತೊಟ್ಟು ಅದರ ಫೋಟೋಶೂಟ್ ಮಾಡಿಸಿಕೊಂಡು ಜಾಲತಾಣದಲ್ಲಿ ಪೋಸ್ಟ್ ಮಾಡುವುದರಲ್ಲಿ ಉರ್ಫಿಯದ್ದು ಎತ್ತಿದ ಕೈ. ಕೆಲವೊಮ್ಮೆ ಬಟ್ಟೆಯೂ ಇಲ್ಲದೆ, ಕೈಗೆ ಸಿಕ್ಕ ವಸ್ತುಗಳಿಂದ ಖಾಸಗಿ ಅಂಗಗಳನ್ನು ಮುಚ್ಚಿಕೊಂಡು ಪೋಸ್ ನೀಡಿರುವ ಫೋಟೋಗಳೂ ಕಮ್ಮಿಯೇನಲ್ಲ. ದಿನವೂ ಬಟ್ಟೆಗಳಿಂದಲೇ ಟ್ರೋಲ್ (Troll) ಆಗುವುದು ಎಂದರೆ ಈಕೆಗೆ ತುಂಬಾ ಖುಷಿ.
ಇದೀಗ ಉರ್ಫಿ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿದ್ದಾರೆ. ರುಂಡವಿಲ್ಲದೇ ಕಾಣಿಸಿಕೊಂಡರು. ಕಾರಿನಿಂದ ಉರ್ಫಿ ಇಳಿಯುತ್ತಿದ್ದಂತೆಯೇ ಪಾಪರಾಜಿಗಳು ಅವರ ಫೋಟೋ ಕ್ಲಿಕ್ಕಿಸಿಕೊಳ್ಳಲು ಮುಂದಾದರು. ಆದರೆ ಫುಟ್ ಪ್ಯಾಂಟ್ ಷರ್ಟ್ ಧರಿಸಿದ್ದ ಉರ್ಫಿ ಅವರ ರುಂಡ ಕಾಣಿಸಲೇ ಇಲ್ಲ. ಇದರಿಂದ ಮೊದಲು ಪಾಪರಾಜಿಗಳು ಶಾಕ್ ಆದರು. ಬಹಳ ಉದ್ದ ಕಾಣಿಸುತ್ತಿದ್ದ ಉರ್ಫಿ ತಮ್ಮ ರುಂಡವನ್ನು ಎಲ್ಲಿ ಇಟ್ಟುಕೊಂಡಿದ್ದಾರೆ ಎಂದು ಎಲ್ಲರೂ ಹುಡುಕಿದರು. ನಂತರ ತಿಳಿದುಬಂದಿದ್ದೇನೆಂದರೆ, ಮುಖದ ಮೇಲೊಂದು ಕೋಲನ್ನು ಸಿಕ್ಕಿಸಿಕೊಂಡಿದ್ದ ಉರ್ಫಿ ಆ ಕೋಲಿಗೆ ಷರ್ಟ್ ಹಾಕಿದ್ದರು. ಹಿಂಬದಿಯಿಂದ ನೋಡಿದರೆ ರುಂಡ ಇಲ್ಲದ ಮನುಷ್ಯ ಕಂಡ ಹಾಗೆ ಕಾಣಿಸುತ್ತಿತ್ತು. ಇದು ಥಹರೇವಾರಿ ಕಮೆಂಟ್‌ನೊಂದಿಗೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಶೀಘ್ರದಲ್ಲಿ ಭೀಕರ ಚಂಡಮಾರುತ, ಸುನಾಮಿ- ಉರ್ಫಿ ವಿಡಿಯೋ ನೋಡಿ ನುಡೀತಿದ್ದಾರೆ ಭವಿಷ್ಯ!
ನೀವು ಇಂಪಾಸಿಬಲ್ ಮಹಿಳೆ ಎಂದು ಹಲವರು ಹೇಳುತ್ತಿದ್ದಾರೆ. ನಿಮ್ಮಂಥ ಹುಚ್ಚರನ್ನು ಜೀವನದಲ್ಲಿ ನೋಡಿಲ್ಲ ಎಂದು ಕೆಲವರು ಹೇಳಿದರೆ, ನಿಮ್ಮ ತಲೆಗೆ ಹ್ಯಾಟ್ಸ್‌ಆಫ್ ಹೇಳಲೇಬೇಕು ಎಂದು ಇನ್ನು ಕೆಲವರು ಹೇಳುತ್ತಿದ್ದಾರೆ. ಕೆಲ ದಿನಗಳ ಹಿಂದೆ ಉರ್ಫಿ ಫುಲ್ ಡ್ರೆಸ್ ತೊಟ್ಟಾಗಲೂ ಟ್ರೋಲ್‌ಗೆ ಒಳಗಾಗಿದ್ದು ಇದೆ. ಸ್ವಲ್ಪವೂ ಮೈ ಪ್ರದರ್ಶನವಿಲ್ಲದೇ ಈ ಡ್ರೆಸ್ನಲ್ಲಿ ಉರ್ಫಿ ತುಂಬಾ ಸುಂದರವಾಗಿ ಕಾಣಿಸುತ್ತಿದ್ದರು. ಆದರೆ ನಿಮ್ಮನ್ನು ಈ ಫುಲ್ ಅವತಾರದಲ್ಲಿ ನೋಡಲು ಆಗ್ತಿಲ್ಲಾ ತಾಯೀ ಎಂದು ಕೆಲವರು ಕಾಲೆಳೆದಿದ್ದರು.
ಕೆಲ ದಿನಗಳ ಹಿಂದೆ ಡಿನ್ನರ್ ಡೇಟ್‌ಗೂ ಮೊದಲು ಕ್ಯಾಮೆರಾಗೆ ಫೋಸ್ ನೀಡಿದ್ದ ಉರ್ಪಿ, ನಗು ನಗುತ್ತಲೇ ರೆಸ್ಟೋರೆಂಟ್‌ಗೆ ತೆರಳಿದ್ದಾರೆ. ಈ ಮೂಲಕ ತಮ್ಮ ಹಿಂಭಾಗದ ಸೌಂದರ್ಯವನ್ನು ತೋರಿಸಿ ಕಿಚ್ಚು ಹಚ್ಚಿದ್ದಾರೆ. ಉರ್ಫಿಯ ಹೊಸ ಅವತಾರಕ್ಕೆ ಎಂದಿನಂತೆ ಪರ ವಿರೋಧಗಳು, ಟೀಕೆಗಳು, ಹೊಗಳಿಕೆ ವ್ಯಕ್ತವಾಗಿದೆ. ಉರ್ಫಿಯನ್ನು ಬಾಲಿವುಡ್ ಫ್ಯಾಶನ್ ಡಿಸೈನರ್ ಆಗಿ ನೇಮಿಸಿಕೊಳ್ಳಿ, ಎಲ್ಲಾ ಸಿನಿಮಾ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆಯಲಿದೆ ಎಂದು ಸಲಹೆ ನೀಡಿದ್ದಾರೆ. ಅದು ಸಾಲದು ಎಂಬಂತೆ ಕಳೆದ ವಾರ, ಉರ್ಫಿ ಜಾವೇದ್ ಹೊಸ ಕ್ರಿಯೆಟಿವಿಟಿ, ಹೊಸ ಫ್ಯಾಶನ್ ಮೂಲಕ ಪ್ರತ್ಯಕ್ಷರಾಗಿದ್ದರು. ಉರ್ಫಿ ತಮ್ಮ ಅಕ್ವೇರಿಯಂ ಬ್ರಾ ತೊಟ್ಟು ಝಲಕ್ ತೋರಿಸಿದ್ದರು. ಮೀನುಗಳು ತುಂಬಿದ ಫಿಶ್ ಟ್ಯಾಂಕ್ ಬ್ರಾ ಹಾಕಿ ಮೈಮಾಟ ಪ್ರದರ್ಶಿಸಿದ್ದರು. ಉರ್ಫಿಯ ಅಕ್ವೇರಿಯಂ ಬ್ರಾದೊಳಗೆ ಜೀವಂತ ಮೀನುಗಳಿದ್ದವು. ಕೆಂಪು ಬಣ್ಣದ ಮೀನುಗಳು ಓಡಾಡುತ್ತಿದ್ದವು. ಹೀಗೂ ಬ್ರಾ ಬಳಕೆ ಮಾಡಬಹುದಾ ಅನ್ನೋ ಪ್ರಶ್ನೆ ನಿಮ್ಮಲ್ಲಿ ಮೂಡಿದರ ಅಚ್ಚರಿಯಿಲ್ಲ.
ಆಡಿಷನ್‌ಗೆ ಕರ್ದು ತಬ್ಬಿಕೋ ಅಂದ್ರು, ಕ್ಯಾಮೆರಾನೇ ಇರ್ಲಿಲ್ಲ, ಆದ್ರೂ ನಾನು.. ಉರ್ಫಿ ಹೇಳಿದ್ದೇನು?