ಸೋಷಿಯಲ್ ಮೀಡಿಯಾದಲ್ಲಿ ಸೌಂಡ್ ಮಾಡುತ್ತಿರುವ ಸೆಲೆಬ್ರಿಟಿ ಮುದ್ದು ಮಕ್ಕಳು!

Published : Sep 27, 2023, 02:54 PM ISTUpdated : Sep 27, 2023, 03:12 PM IST
ಸೋಷಿಯಲ್ ಮೀಡಿಯಾದಲ್ಲಿ ಸೌಂಡ್ ಮಾಡುತ್ತಿರುವ ಸೆಲೆಬ್ರಿಟಿ ಮುದ್ದು ಮಕ್ಕಳು!

ಸಾರಾಂಶ

ನಿರ್ದೇಶಕ ವಿಘ್ನೇಶ್ ಪ್ರೀತಿಸಿ ಮದುವೆಯಾಗಿರುವ ಜೋಡಿ. ಪ್ರನಾಳ ಶಿಶು ಮೂಲಕ ಕಳೆದ ವರ್ಷ ಮಕ್ಕಳನ್ನು ಸ್ವಾಗತಿಸಿರುವ ಈ ಜೋಡ, ಮಕ್ಕಳ ಲಾಲನೆ-ಪಾಲನೆಯನ್ನು ತುಂಬಾ ಇಷ್ಟಪಟ್ಟು ಮಾಡುತ್ತಿದ್ದಾರೆ. ಸಮಯ ಸಿಕ್ಕಾಗ ತಮ್ಮ ಮಕ್ಕಳ ಬಗ್ಗೆ ಅಭಿಮಾನದಿಂದ ನಯನತಾರಾ-ವಿಘ್ನೇಶ್ ಜೋಡಿ ಮಾತನಾಡುತ್ತಾರೆ. ಪಾಲಕರ ಕರ್ತವ್ಯ ನಿಭಾಯಿಸುವ ಬಗ್ಗೆ ಆಗಾಗ ಹೇಳಿಕೊಳ್ಳುತ್ತಾರೆ. 

ತಮಿಳು ಚಿತ್ರರಂಗದ ಜನಪ್ರಿಯ ಜೋಡಿ 'ನಯನತಾರಾ-ವಿಘ್ನೇಶ್' (Nayanthara and Vighnesh), ತಮ್ಮ ಅವಳಿ ಮಕ್ಳಳ ಫೋಟೋ ಶೇರ್ ಮಾಡಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಕ್ಯೂಟ್ ಹುಡುಗರಿಬ್ಬರ ಫೋಟೋ ಹಂಚಿಕೊಂಡಿರುವ ನಯನತಾರಾ ಮತ್ತು ವಿಘ್ನೇಶ್ 'ಜಗತ್ತು ವಿವರಿಸುವುದಕ್ಕಿಂತ ಹೆಚ್ಚಾಗಿ ನಾವು ಅಪ್ಪ-ಅಮ್ಮ ನಿಮ್ಮನ್ನು ಪ್ರೀತಿಸುತ್ತೇವೆ ಮಕ್ಕಳೇ' ಎಂದು ಚಿತ್ರಕ್ಕೆ ಕ್ಯಾಪ್ಶನ್ ನೀಡಿದ್ದಾರೆ. ಅವರ ಈ ಪೋಸ್ಟ್ ತಮಿಳು ಚಿತ್ರರಂಗ ದಾಟಿ ಇಡೀ ಇಂಡಿಯಾ ತುಂಬ ಸೌಂಡ್ ಮಾಡುತ್ತಿದೆ. ಮುದ್ದಾದ ಮಕ್ಕಳ ಫೋಟೋ ಹಲವರ ಮೆಚ್ಚುಗೆ ಗಳಿಸಿದೆ. ಇಂದು (September 27) ಆ ಮಕ್ಕಳ ಹುಟ್ಟುಹಬ್ಬವಿದೆ.

ಹೌದು, ನಟಿ ನಯನತಾರಾ ಮತ್ತು ನಿರ್ದೇಶಕ ವಿಘ್ನೇಶ್ ಪ್ರೀತಿಸಿ ಮದುವೆಯಾಗಿರುವ ಜೋಡಿ. ಪ್ರನಾಳ ಶಿಶು ಮೂಲಕ ಕಳೆದ ವರ್ಷ ಮಕ್ಕಳನ್ನು ಸ್ವಾಗತಿಸಿರುವ ಈ ಜೋಡ, ಮಕ್ಕಳ ಲಾಲನೆ-ಪಾಲನೆಯನ್ನು ತುಂಬಾ ಇಷ್ಟಪಟ್ಟು ಮಾಡುತ್ತಿದ್ದಾರೆ. ಸಮಯ ಸಿಕ್ಕಾಗ ತಮ್ಮ ಮಕ್ಕಳ ಬಗ್ಗೆ ಅಭಿಮಾನದಿಂದ ನಯನತಾರಾ-ವಿಘ್ನೇಶ್ ಜೋಡಿ ಮಾತನಾಡುತ್ತಾರೆ. ಪಾಲಕರ ಕರ್ತವ್ಯ ನಿಭಾಯಿಸುವ ಬಗ್ಗೆ ಆಗಾಗ ಹೇಳಿಕೊಳ್ಳುತ್ತಾರೆ. 

ರಾಜಕಾರಣಿ ವಿರುದ್ಧ ಏಳು ಬಾರಿ ಗರ್ಭಪಾತದ ಆರೋಪ ಹೊರಿಸಿದ್ದ ನಟಿ ವಿಜಯಲಕ್ಷ್ಮಿಗೆ ಎದುರಾಯ್ತು ಸಂಕಷ್ಟ!

ನಟಿ ನಯನತಾರಾ ಇತ್ತೀಚೆಗೆ ಬಾಲಿವುಡ್ ಚಿತ್ರ ಜವಾನ್ ನಲ್ಲಿ ನಟಿಸುವ ಮೂಲಕ ಬಾಲಿವುಡ್‌ ಪ್ರವೇಶಿಸಿದಂತಾಗಿದೆ. ಶಾರುಖ್ ನಟನೆಯ ಜವಾನ್ ಚಿತ್ರದಲ್ಲಿ ನಯನತಾರಾ 'ನರ್ಮದಾ' ಹೆಸರಿನ ಪಾತ್ರ ಮಾಡಿದ್ದು, ಅವರ ಪಾತ್ರ ಬಾಲಿವುಡ್‌ ಸೇರಿದಂತೆ ಬಹಳಷ್ಟು ಪ್ರೇಕ್ಷಕರ ಮೆಚ್ಚುಗೆ ಗಳಿಸಿದೆ. ಆದರೆ ಸ್ವತಃ ನಯನತಾರಾಗೆ ಈ ಚಿತ್ರದಲ್ಲಿ ತಮ್ಮ ಪಾತ್ರವನ್ನು ಕಡಿಮೆ ಅವಧಿ ತೋರಿಸಲಾಗಿದೆ ಎಂಬ ಮುನಿಸು ಇದ್ದು, ಅವರು ಜವಾನ್ ಚಿತ್ರದ ಪ್ರಮೋಶನ್‌ಗೆ ಕೂಡ ಎಲ್ಲೂ ಕಾಣಿಸಿಕೊಂಡಿಲ್ಲ. 

ನಾನು ಬದುಕಿದ್ದರೆ ಮತ್ತೆ ನಿಮ್ಮ ಸೇವೆ ಮಾಡುತ್ತೇನೆ; ಇಲ್ಲದಿದ್ದರೆ ಜೈ ಹಿಂದ್: ಸಲ್ಮಾನ್ ಖಾನ್!

ಒಟ್ಟಿನಲ್ಲಿ, ನಯನತಾರಾ-ವಿಘ್ನೇಶ್ ಜೋಡಿ ತಮ್ಮ ಮಕ್ಕಳನ್ನು ಸಾಮಾಜಿಕ ಮಾಧ್ಯಮಗಳ ಮೂಲಕ ತಮ್ಮ ಅಭಿಮಾನಿಗಳಿಗೆ ದರ್ಶನ ಮಾಡಿಸಿದ್ದಾರೆ. ಕ್ಯೂಟ್ ಮಕ್ಕಳು ಹಲವರನ್ನು ಮೆಚ್ಚಿಸಿದ್ದು, ಕುಟುಂಬ ಚೆನ್ನಾಗಿರಲಿ ಎಂದು ಹಲವರು ಹಾರೈಸಿದ್ದಾರೆ. ಅಂದಹಾಗೆ, ಮಕ್ಕಳ ಹೆಸರು ಉಯಿಲ್ ಮತ್ತು ಉಲಗ್. 

 

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಡಾರ್ಲಿಂಗ್.. ಆ ಪ್ರೀತಿಯನ್ನು ಕಂಡು ನಿನಗೆ ಆನಂದಬಾಷ್ಪ ಬಂದಿರುತ್ತದೆ; ರಾಜಮೌಳಿ ಪತ್ರದ ಮರ್ಮವೇನು?
'ರೀನಾ, ಕಿರಣ್ & ಲವರ್ ಗೌರಿ.. 'ನಾವೆಲ್ಲರೂ ಒಂದೇ ಫ್ಯಾಮಿಲಿ' ಎಂದ ಅಮೀರ್ ಖಾನ್; ಒಳಗೊಳಗೇ ನಕ್ಕ ನೆಟ್ಟಿಗರು!