ಆರ್ಯನ್ ಖಾನ್‌ಗೆ ಮತ್ತೆ ಜೈಲೇ ಗತಿ; ಡ್ರಗ್ಸ್ ಪ್ರಕರಣ ಜಾಮೀನು ಅರ್ಜಿ ವಿಚಾರಣೆ ಅ.28ಕ್ಕೆ ಮುಂದೂಡಿಕೆ!

By Suvarna NewsFirst Published Oct 27, 2021, 6:19 PM IST
Highlights
  • ಆರ್ಯನ್ ಖಾನ್‌ ಡ್ರಗ್ಸ್ ಪ್ರಕರಣ ವಿಚಾರಣೆ ಮತ್ತೆ ಮುಂದೂಡಿದ ಕೋರ್ಟ್
  • ಅ.28ಕ್ಕೆ ವಿಚಾರಣೆ ಮುಂದೂಡಿದ ಕೋರ್ಟ್, ಮತ್ತೆ ಜೈಲಿನಲ್ಲಿ ಆರ್ಯನ್
  • ಜಾಮೀನು ನಿರೀಕ್ಷಿಸಿದ್ದ ಶಾರುಖ್ ಖಾನ್ ಕುಟುಂಬಕ್ಕೆ ನಿರಾಸೆ

ಮುಂಬೈ(ಅ.27): ಜಾಮೀನಿಗಾಗಿ ಜಾತಕ ಪಕ್ಷಿಯಂತೆ ಕಾಯುತ್ತಿರುವ ಬಾಲಿವುಡ್(Bollywood) ಸೂಪರ್ ಸ್ಟಾರ್ ಶಾರುಖ್ ಖಾನ್(Shah Rukh Khan) ಕುಟುಂಬಕ್ಕೆ ಮತ್ತೆ ನಿರಾಸೆಯಾಗಿದೆ. ಡ್ರಗ್ಸ್ ಪ್ರಕರಣದಲ್ಲಿ ಜೈಲು ಸೇರಿರುವ  ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್(Aryan Khan) ಮತ್ತೆ ಜೈಲೇ ಗತಿಯಾಗಿದೆ. ಇಂದು ಜಾಮೀನು ಅರ್ಜಿ ವಿಚಾರಣೆ ನಡೆಸಿದ ಬಾಂಬೆ ಕೋರ್ಟ್(Bombay Court), ವಿಚಾರಣೆಯನ್ನು ಮತ್ತೆ ಮುಂದೂಡಿದೆ(court adjourns hearing).

ಆರ್ಯನ್ ಖಾನ್‌ಗೆ ಮತ್ತೆ ಜೈಲು ವಾಸ, ಜಾಮೀನು ಅರ್ಜಿ ವಿಚಾರಣೆ ಅ.27ಕ್ಕೆ ಮುಂದೂಡಿಕೆ!

ಅಕ್ಟೋಬರ್ 26 ರಂದು ಆರ್ಯನ್ ಖಾನ್ ಜಾಮೀನು ಅರ್ಜಿ(Bail Plea) ವಿಚಾರಣೆ ನಡೆಸಿದ ಕೋರ್ಟ್, ವಿಚಾರಣೆಯನ್ನು ಅಕ್ಟೋಬರ್ 27ಕ್ಕೆ ಮುಂದೂಡಿತ್ತು. ಹೀಗಾಗಿ ಇಂದು ಜೈಲಿನಿಂದ ಬಿಡುಗಡೆ ನಿರೀಕ್ಷೆಯಲ್ಲಿದ್ದ ಆರ್ಯನ್ ಖಾನ್‌ ಮತ್ತೆ ಜೈಲಿನಲ್ಲೇ ಕಳೆಯಬೇಕಾಗಿದೆ. ಇಂದಿನ ವಿಚಾರಣೆಯನ್ನು ಬಾಂಬೆ ಸೆಷನ್ ಕೋರ್ಟ್ ನಾಳೆಗೆ(ಅ.28) ಮುಂದೂಡಿದೆ. ಅಕ್ಟೋಬರ್ 28ರಂದು 3 ಗಂಟೆ ಆರ್ಯನ್ ಖಾನ್ ಜಾಮೀನು ಅರ್ಜಿ ವಿಚಾರಣೆ ಕೈಗೆತ್ತಿಕೊಳ್ಳುವುದಾಗಿ ಬಾಂಬೆ ಕೋರ್ಟ್ ಹೇಳಿದೆ. 

ಮುಂಬೈ ಏರ್ಪೋರ್ಟ್‌ನಲ್ಲಿ ಶಾರೂಖ್‌ನನ್ನು ತಡೆದ NCB ಆಫೀಸರ್ ವಾಂಖೆಡೆ

ಡ್ರಗ್ಸ್ ಪ್ರಕರಣ ಹಾಗೂ ಜಾಮೀನು ಅರ್ಜಿ ಕುರಿತ ಇಂದು  ಆರೋಪಿ 1,2,3  ಪರ ವಾದ ಮಂಡಿಸಲಾಗಿದೆ. ನಿನ್ನೆ ಆರ್ಯನ್ ಖಾನ್ ಪರ ವಾದ ಮಂಡಿಸಿದ್ದ ಮುಕುಲ್ ರೋಹ್ಟಗಿ ಇಂದು ಕೂಡ ವಾದ ಮಂಡಿಸಿದರು. ನಾಳೆ NCB ಪರ ಸಾಲಿಸಿಟರ್ ಜನರಲ್ ಅನಿಲ್ ಕುಮಾರ್ ಸಿಂಗ್ ವಾದ ಮಂಡಿಸಲಿದ್ದಾರೆ. 

ಆರ್ಯನ್ ಖಾನ್ ಹಾಗೂ ಇತರರಿಗೆ ಜಾಮೀನು ಏಕೆ ನೀಡಬಾರದು ಎಂದು ನಾಳೆ ಅನಿಲ್ ಕುಮಾರ್ ಸಿಂಗ್ ವಾದ ಮಂಡಿಸಲಿದ್ದಾರೆ. ಈ ಹಿಂದಿನ ವಿಚಾರಣೆಯಲ್ಲಿ ಆರ್ಯನ್ ಖಾನ್ ಸೇರಿದಂತೆ ಇತರರಿಗೆ ಅಂತಾರಾಷ್ಟ್ರೀಯ ಡ್ರಗ್ಸ್ ಪೆಡ್ಲರ್ ಜೊತೆ ನಂಟು ಹೊಂದಿದ್ದಾರೆ. ಇದರ ಹಿಂದೆ ಬಹುದೊಡ್ಡ ಜಾಲ ಕಾರ್ಯನಿರ್ವಹಿಸುತ್ತಿದೆ. ಆರ್ಯನ್ ಖಾನ್ ಡ್ರಗ್ಸ್ ಸೇವನೆಗಿಂತ ಕಳ್ಳಸಾಗಾಣಿಕೆ ಮಾಡುತ್ತಿದ್ದರು ಎಂದು ವಾದ ಮಂಡಿಸಿದ್ದರು. ಭಾರತದಲ್ಲಿ ಕಾರ್ಯನಿರ್ವಹಿಸುತ್ತಿರುವ ಬಹುದೊಡ್ಡ ಡ್ರಗ್ಸ್ ಜಾಲ ಪತ್ತೆಹಚ್ಚಲು ಆರ್ಯನ್ ಖಾನ್ ಸೇರಿದಂತೆ ಇತರರ ಹೆಚ್ಚಿನ  ವಿಚಾರಣೆ ಅಗತ್ಯವಿದೆ. ಹೀಗಾಗಿ ಜಾಮೀನು ನಿರಾಕರಿಸಿ NCB ವಶಕ್ಕೆ ನೀಡಬೇಕು ಎಂದು ವಾದ ಮಂಡಿಸಿದ್ದರು.

ವಿವಾದದ ಮಧ್ಯೆ ಸಮೀರ್‌ ವಾಂಖೇಡೆ 'ನಿಖಾ' ಫೋಟೋ ಶೇರ್ ಮಾಡಿದ ಸಚಿವ ಮಲಿಕ್!

ಅಕ್ಟೋಬರ್ 26 ರಂದು ನಡೆದ ವಿಚಾರಣೆಯಲ್ಲಿ ಆರ್ಯನ್ ಖಾನ್ ಪರ ಮಾಜಿ ಆಟಾರ್ನಿ ಜನರಲ್ ಮುಕುಲ್ ರೋಹ್ಟಗಿ ವಾದ ಮಂಡಿಸಿದ್ದರು. ಆರ್ಯನ್ ಖಾನ್ ಬಂಧನ ಕಾನೂನು ಬಾಹಿರವಾಗಿದೆ. ಗೆಳಯನ ಆಹ್ವಾನದ ಮೇರೆಗೆ ಕ್ರ್ಯೂಸ್ ಹಡಗಿನಲ್ಲಿ ಆಯೋಜಿಸಿದ್ದ ಪಾರ್ಟಿಯಲ್ಲಿ ಆರ್ಯನ್ ಖಾನ್ ಪಾಲ್ಗೊಂಡಿದ್ದರು. ಇತ್ತ NCB ಅಧಿಕಾರಿಗಳು ದಾಳಿ ನಡೆಸಿ ಆರ್ಯನ್ ಖಾನ್ ಬಂಧಿಸಿದ್ದಾರೆ. ದಾಳಿ ವೇಳೆ ಆರ್ಯನ್ ಖಾನ್ ಬಳಿ ಡ್ರಗ್ಸ್ ಪತ್ತೆಯಾಗಿಲ್ಲ. ಇತ್ತ ಬಂಧನ ಬಳಿಕ ಆರ್ಯನ್ ಖಾನ್ ವೈದ್ಯಕೀಯ ಪರೀಕ್ಷೆ ನಡೆಸಿಲ್ಲ. ಹೀಗಾಗಿ ಇದು ಪಿತೂರಿ ಎಂದು ಮುಕುಲ್ ರೋಹ್ಟಗಿ ವಾದ ಮಂಡಿಸಿದ್ದರು. 

ಡ್ರಗ್ಸ್ ಸಂಕಟ..ದಕ್ಷಿಣ ಭಾರತದ ಬಹುದೊಡ್ಡ ಅವಕಾಶ ಕಳಕೊಂಡ ಅನನ್ಯಾ!

ವಾದ ಮಂಡನೆ ವೇಳೆ ಮುಕುಲ್ ರೋಹ್ಟಗಿ ಭಾರತದ ದಂಡ ಸಂಹಿತೆ CRPC ಕಾಯ್ದಿಯ ಸೆಕ್ಷನ್ 50ನ್ನು ಉಲ್ಲೇಖಿಸಿದ್ದಾರೆ. ಸಂವಿಧಾನದ 22ನೇ ವಿಧಿ(Article 22) CRPC ಸೆಕ್ಷನ್ 50ಕ್ಕಿಂತ ಮುಖ್ಯವಾಗಿದೆ. ಯಾವುದೇ ವ್ಯಕ್ತಿಯನ್ನು ಬಂಧಿಸುವಾಗ, ಬಂಧನ ಆಧಾರದ ಬಗ್ಗೆ ತಿಳಿಸದೆ ಬಂಧಿಸುವಂತಿಲ್ಲ. ಇನ್ನು ವ್ಯಕ್ತಿಗೆ ತನ್ನ ಆಯ್ಕೆಯ ಅಥವಾ ತನ್ನ ಆಪ್ತ ವಕೀಲರನ್ನು ಸಂಪರ್ಕಿಸುವ ಹಕ್ಕಿದೆ ಎಂದು ರೋಹ್ಟಗಿ ವಾದ ಮಂಡಿಸಿದ್ದರು.

ಡ್ರಗ್ಸ್ ಪ್ರಕರಣದಲ್ಲಿ ಆರೋಪಿಗಳಾಗಿರುವ ಅವಿನ್ ಸಾಹು ಹಾಗೂ ಮನಿಶ್ ರಾಜಗರಿಯಾಗೆ ವಿಶೇಷ ನ್ಯಾಯಾಲಯ ಅಕ್ಟೋಬರ್ 26 ರಂದು ಜಾಮೀನು ನೀಡಿದೆ. 

click me!