ಮಿಸ್ಟ್ರಿ ಮ್ಯಾನ್ ಜೊತೆ ಮಲೈಕಾ;...ಪ್ರತ್ಯುತ್ತರ ನೀಡಿದ ಅರ್ಜುನ್ ಕಪೂರ್!

By Roopa Hegde  |  First Published Jul 18, 2024, 2:50 PM IST

ಮಲೈಕಾ ಅರೋರಾ ಹಾಗೂ ಅರ್ಜುನ್ ಕಪೂರ್ ಬ್ರೇಕ್ ಅಪ್ ಸುದ್ದಿ ಮಧ್ಯೆಯೇ ಇನ್ನೊಬ್ಬ ವ್ಯಕ್ತಿ ಪ್ರವೇಶವಾದಂತಿದೆ. ಮಲೈಕಾ ಹೊಸ ವ್ಯಕ್ತಿ ಜೊತೆ ಕಾಣಿಸಿಕೊಂಡಿದ್ದು, ವೈರಲ್ ಪೋಸ್ಟ್ ಗೆ ಅರ್ಜುನ್ ಕಪೂರ್ ಉತ್ತರ ನೀಡಿದ್ದಾರೆ.
 


ಬಾಲಿವುಡ್ ನಟ ಅರ್ಜುನ್ ಕಪೂರ್ ಜೊತೆ ಬ್ರೇಕ್ ಅಪ್ ವದಂತಿ ನಂತ್ರ ಮಲೈಕಾ ಅರೋರಾ ಸ್ಪೇನ್ ನಲ್ಲಿ ಪ್ರವಾಸ ಎಂಜಾಯ್ ಮಾಡ್ತಿದ್ದಾರೆ. ಮಲೈಕಾ ಅರೋರಾ ಸ್ಪೇನ್ ನಲ್ಲಿ ಮಿಸ್ಟ್ರಿ ಮ್ಯಾನ್ ಜೊತೆ ಕಾಣಿಸಿಕೊಂಡಿದ್ದು ಸುದ್ದಿಯಾಗುತ್ತಿದೆ. ಅರ್ಜುನ್ ಕಪೂರ್ ಕೈಬಿಟ್ಟು, ಈಗ ಮಲೈಕಾ ಯಾರ ಜೊತೆ ಸುತ್ತಾಡುತ್ತಿದ್ದಾರೆ ಎಂಬ ಪ್ರಶ್ನೆ ಎದ್ದಿದೆ. ಮಲೈಕಾ, ಮಿಸ್ಟ್ರಿ ಮೆನ್ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ ಬೆನ್ನಲ್ಲೇ ಅರ್ಜುನ್ ಕಪೂರ್ ರಹಸ್ಯ ಪೋಸ್ಟ್ ಒಂದು ವೈರಲ್ ಆಗಿದೆ. 

ಅರ್ಜುನ್ ಕಪೂರ್ (Arajan Kapoor) ಇನ್ಸ್ಟಾ ಸ್ಟೋರಿ ಪೋಸ್ಟ್ ಮಾಡಿದ್ದು, ಶಾಂತಿ ಬೇಕಾಗಿದೆ, ಎಂದು ಅರ್ಜುನ್ ಕಪೂರ್ ಬರೆದಿದ್ದಾರೆ. ಮಲೈಕಾ, ಮಿಸ್ಟ್ರಿಮೆನ್ (Mysterymen) ಫೋಟೋ ಹಾಕಿದ ಮೇಲೆ ಅರ್ಜುನ್ ಈ ಪೋಸ್ಟ್ ಹಾಕಿದ್ದು, ಮಲೈಕಾ (Malaika) ಪೋಸ್ಟ್ ಗೆ ಅರ್ಜುನ್ ಕಪೂರ್ ಉತ್ತರ ನೀಡಿದಂತಿದೆ ಎಂದು ಅಭಿಮಾನಿಗಳು ಹೇಳ್ತಿದ್ದಾರೆ. 

Tap to resize

Latest Videos

undefined

ರೀಲ್ ಹೀರೋ ಅಕ್ಷಯ್ ಕುಮಾರ್ ರಿಯಲ್ ಕೆಲಸಕ್ಕೆ ಮೆಚ್ಚುಗೆ: ವೀಡಿಯೋ ವೈರಲ್

ಬಾಲಿವುಡ್ ಫಿಟ್ನೆಸ್ ಬ್ಯೂಟಿ (Bollywood Fitness Beauty) ಎಂದೇ ಹೆಸರು ಪಡೆದಿರುವ ಮಲೈಕಾ, 2019ರಲ್ಲಿ ಅರ್ಜುನ್ ಜೊತೆ ಕಾಣಿಸಿಕೊಂಡಿದ್ದರು. ಇಬ್ಬರು ತಮ್ಮ ಸಂಬಂಧವನ್ನು ಒಪ್ಪಿಕೊಂಡಿದ್ದರು. ಅವರಿಬ್ಬರ ರೊಮ್ಯಾಂಟಿಕ್ ಫೋಟೋ (Romantic Photo), ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದವು. ಆದ್ರೆ ಕೆಲ ದಿನಗಳಿಂದ ಮಲೈಕಾ ಹಾಗೂ ಅರ್ಜುನ್ ಕಪೂರ್ ಬ್ರೇಕ್ ಅಪ್ ಸುದ್ದಿ ಹರಡಿದೆ. ಯಾವುದೇ ಪಾರ್ಟಿಯಲ್ಲಿ ಇಬ್ಬರೂ ಒಟ್ಟಿಗೆ ಕಾಣಿಸಿಕೊಂಡಿಲ್ಲ. ಪರಸ್ಪರರ ಹುಟ್ಟುಹಬ್ಬವನ್ನೂ ಪ್ರತ್ಯೇಕವಾಗಿ ಆಚರಿಸಿಕೊಂಡಿದ್ದಾರೆ. ಇಬ್ಬರು ಒಪ್ಪಿಗೆ ಮೇಲೆ ಬೇರೆ ಆಗಿದ್ದಾರೆ. ಇಬ್ಬರ ಮಧ್ಯೆ ಯಾವುದೇ ಭಿನ್ನಾಭಿಪ್ರಾಯವಿಲ್ಲ ಎಂದು ಅವರ ಆಪ್ತ ಸ್ನೇಹಿತರೊಬ್ಬರು ಹೇಳಿದ್ದರು. ಆದ್ರೆ ಇದನ್ನು ಮಲೈಕಾ ತಳ್ಳಿ ಹಾಕಿದ್ದರು. ಆದ್ರೆ ಬ್ರೇಕ್ ಅಪ್ ಸುದ್ದಿ ಹೊರಬಿದ್ದ ನಂತ್ರ ಸಾಮಾಜಿಕ ಜಾಲತಾಣದಲ್ಲಿ ಇಬ್ಬರೂ ಆಗಾಗ ಶಾಂತಿ, ದುಃಖದ ವಿಷ್ಯಗಳನ್ನು ಪೋಸ್ಟ್ ಮಾಡ್ತಿದ್ದು, ಇಬ್ಬರ ಮಧ್ಯೆ ಸಂಬಂಧ ಮುರಿದು ಬಿದ್ದಿದೆ ಎಂಬುದು ಇದರಿಂದ ಸ್ಪಷ್ಟವಾಗಿದೆ. 

ಬ್ರೇಕ್ ಅಪ್ ನಂತ್ರ ಮಲೈಕಾ ಸ್ಪೇನ್ ನಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿರುವ ಮಲೈಕಾ, ತಮ್ಮ ಹಾಟ್ ಫೋಟೋ ಹಂಚಿಕೊಳ್ತಿದ್ದಾರೆ. ಬಿಕನಿ ಫೋಟೋ ಪೋಸ್ಟ್ ಮಾಡಿ ಅಭಿಮಾನಿಗಳ ಹೃದಯಬಡಿತ ಹೆಚ್ಚಿಸಿದ್ದ ಬೆಡಗಿ ಆ ನಂತ್ರ ಮತ್ತೊಂದು ಫೋಟೋ ಮೂಲಕ ಚರ್ಚೆಯಾಗಿದ್ದಳು.

50 ವರ್ಷಕ್ಕೆ ಕಾಲಿಟ್ಟಿರುವ ಮಲೈಕಾ, ತಮ್ಮ ಇನ್‌ಸ್ಟಾಗ್ರಾಮ್ ಸ್ಟೇಟಸ್‌ನಲ್ಲಿ ನಾಲ್ಕು ಚಿತ್ರಗಳ ಕೊಲಾಜ್ ಹಂಚಿಕೊಂಡಿದ್ದರು. ಈ ಕೊಲಾಜ್‌ನಲ್ಲಿ ಮಲೈಕಾ, ಆಹಾರ ಹಾಗೂ ಒಬ್ಬ ವ್ಯಕ್ತಿ ಕಾಣಿಸಿಕೊಂಡಿದ್ದಾನೆ. ಆತನ ಮುಖ ಬ್ಲರ್ ಆಗಿದೆ. ಹಾಗಾಗಿ ಆತ ಯಾರು ಎಂಬುದು ಸ್ಪಷ್ಟವಾಗ್ತಿಲ್ಲ.  

ಈ ಫೋಟೋ ನೋಡಿದ ಅಭಿಮಾನಿಗಳು, ಮಲೈಕಾ ಲೈಫ್ ನಲ್ಲಿ ಹೊಸ ವ್ಯಕ್ತಿ ಎಂಟ್ರಿಯಾಗಿದೆ ಎಂದು ಊಹಿಸಿದ್ದಾರೆ. ಅರ್ಜುನ್ ಜೊತೆ ಬ್ರೇಕ್ ಅಪ್ ಆದ್ಮೇಲೆ ಮಲೈಕಾಗೆ ಹೊಸ ಪ್ರೀತಿ ಸಿಕ್ಕಿದೆ. ಡೇಟಿಂಗ್ ಶುರು ಮಾಡಿದ್ದಾರೆ ಎಂದು ಅಭಿಮಾನಿಗಳು ಮಾತನಾಡಿಕೊಳ್ತಿದ್ದಾರೆ. 

ಸ್ಟ್ರೀಟ್ ಫುಡ್‌ನಿಂದ ರಾಯಲ್ ಫುಡ್ ತನಕ, ಅನಂತ್ ಅಂಬಾನಿ ಮದ್ವೇಲಿ ಭಾರತೀಯ ಆಹಾರದ ಅನಾವರಣ!

ಮಿಸ್ಟ್ರಿಮೆನ್ ಜೊತೆ ಕಾಣಿಸಿಕೊಂಡಿದ್ದಲ್ಲದೆ ಸ್ಪೇನ್ ನ ಅನೇಕ ಫೋಟೋಗಳನ್ನು ಮಲೈಕಾ ಪೋಸ್ಟ್ ಮಾಡ್ತಿದ್ದಾರೆ. ಸ್ನಾರ್ಕ್ಲಿಂಗ್‌ ಫೋಟೋ ಹಾಕಿರುವ ಮಲೈಕಾ, ಆಳತೆಯಿಂದ ದೂರ ಎಂದು ಶೀರ್ಷಿಕೆ ಹಾಕಿದ್ದಾರೆ. ಅಲ್ಲದೆ ಸ್ಪ್ಯಾನಿಷ್ ಸಮ್ಮರ್ ಎಂದು ಹ್ಯಾಶ್ ಟ್ಯಾಗ್ ಹಾಕಿದ್ದಾರೆ. ಮಲೈಕಾ ಸ್ಪೇನ್ ನಲ್ಲಿ ಎಂಜಾಯ್ ಮಾಡ್ತಾ ಒಂದಾದ್ಮೇಲೆ ಒಂದು ಫೋಟೋ ಹಾಕ್ತಿದ್ದರೆ ಇತ್ತ ಅರ್ಜುನ್ ಕಪೂರ್ ಫೋಟೋಕ್ಕೆ ಪರೋಕ್ಷವಾಗಿ ಕಮೆಂಟ್ ಹಾಕ್ತಾ ಅಭಿಮಾನಿಗಳನ್ನು ಮತ್ತಷ್ಟು ಕನ್ಫ್ಯೂಜ್ ಮಾಡಿದ್ದಾರೆ. 

click me!