ವಿಚ್ಛೇದನ ಸುಲಭವಲ್ಲ... ಆದರೆ ನಿರೀಕ್ಷೆಯೇ ಹುಸಿಯಾದಾಗ.... ಐಷ್‌-ಅಭಿ ಬಿರುಕಿಗೆ ಸಾಕ್ಷಿಯಾದ ಪೋಸ್ಟ್‌?

By Suchethana D  |  First Published Jul 18, 2024, 1:43 PM IST

ಡಿವೋರ್ಸ್‌ಗೆ ಸಂಬಂಧಿಸಿದಂತೆ ಇರುವ ಪೋಸ್ಟ್‌ ಒಂದನ್ನು ಲೈಕ್‌ ಮಾಡುವ ಮೂಲಕ ಅಭಿಷೇಕ್‌ ಬಚ್ಚನ್‌ ಹೇಳಲು ಹೊರಟಿದ್ದೇನು? ಐಷ್‌ ಜೊತೆ ವಿಚ್ಛೇದನ ನಿಜವಾಗೋಯ್ತಾ?
 


’ಪ್ರತಿಯೊಬ್ಬರಿಗೂ ನಿರೀಕ್ಷೆ ಬರುತ್ತದೆ. ಆದರೆ ಕೆಲವು ಬಾರಿ ಜೀವನ ನಾವು ನಿರೀಕ್ಷಿಸದಂತೆ ಇರುವುದಿಲ್ಲ. ಅಷ್ಟಕ್ಕೂ ಡಿವೋರ್ಸ್ ಎನ್ನುವುದು ಸುಲಭದ ಮಾತಲ್ಲ. ಪ್ರತಿಯೊಬ್ಬಗೂ ಸಂತೋಷದ ಕನಸು ಕಾಣುತ್ತಾರೆ. ಖುಷಿಯ ಕ್ಷಣಗಳನ್ನು ಆನಂದಿಸುತ್ತಾರೆ. ಅದೇ ರೀತಿ,  ರಸ್ತೆ ದಾಟುತ್ತಿರುವಾಗ ಕೈಗಳನ್ನು ಹಿಡಿದಿರುವ ವೃದ್ಧ ದಂಪತಿಯ ಹೃದಯಸ್ಪರ್ಶಿ ವಿಡಿಯೋ ನೋಡಿದಾಗ ಎಲ್ಲರ ಮನಸ್ಸೂ ಪ್ರಫುಲ್ಲವಾಗುತ್ತದೆ. ಆದರೆ ಎಲ್ಲರ ಜೀವನವೂ ಹಾಗಲ್ಲವಲ್ಲ.  ಜೊತೆಯಾಗಿಯೇ ಇದ್ದವರು ದಶಕಗಳ ನಂತರ  ಬೇರ್ಪಟ್ಟಾಗ ತಮ್ಮ ಜೀವನದ ಮಹತ್ವದ ಭಾಗ, ಕಡಿದುಕೊಳ್ಳಬೇಕಾಗುತ್ತದೆ.  ಗ್ರೇ ಡಿವೋರ್ಸ್‌ ಎನ್ನುವುದು ಸಾಮಾನ್ಯವಾಗಿ 50 ವರ್ಷ ವಯಸ್ಸಿನ ನಂತರ ವಿವಾಹ ವಿಚ್ಚೇದನ ನೀಡುವುದಕ್ಕೆ ಸಂಬಂಧಪಟ್ಟಿದೆ...’

ಇದು ಸದ್ಯ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿರುವ ಪೋಸ್ಟ್‌. ಅಷ್ಟಕ್ಕೂ ಈ ಪೋಸ್ಟ್‌ನಿಂದ ಬಾಲಿವುಡ್‌ನ ಹಾಟ್‌ ಜೋಡಿಗಳಾದ ಐಶ್ವರ್ಯ ರೈ ಮತ್ತು ಅಭಿಷೇಕ್‌ ಬಚ್ಚನ್‌ ಅವರ ಡಿವೋರ್ಸ್‌ಗೆ ಪುಷ್ಟಿ ನೀಡಲು ಶುರು ಮಾಡಿದೆ. ಅಷ್ಟಕ್ಕೂ ಈ ಪೋಸ್ಟ್‌ ಅನ್ನು ಐಶ್ವರ್ಯ ಆಗಲೀ, ಅಭಿಷೇಕ್‌ ಆಗಲೀ ಬರೆದಿಲ್ಲ. ಆದರೆ ಇಂಥದ್ದೊಂದು ಪೋಸ್ಟ್‌ಗೆ ಅಭಿಷೇಕ್‌ ಬಚ್ಚನ್‌ ಅವರು, ಲೈಕ್‌ ಮಾಡಿದ್ದಾರೆ. ಈ ರೀತಿ ಲೈಕ್‌ ಮಾಡುವ ಮೂಲಕ ದಂಪತಿಯ ನಡುವಿನ ಡಿವೋರ್ಸ್‌ ಮತ್ತೆ ಮುನ್ನೆಲೆಗೆ ಬಂದಿದೆ. 

Tap to resize

Latest Videos

ಅಂಬಾನಿ ಪುತ್ರನ ಮದ್ವೆಯಲ್ಲಿ ಬಯಲಾಗೋಯ್ತು ಅಮಿತಾಭ್​ ಫ್ಯಾಮಿಲಿ ಬಿಗ್​ ಸೀಕ್ರೆಟ್​: ಫ್ಯಾನ್ಸ್​ ಶಾಕ್​!

ಆದರೆ ಇದು ಪಬ್ಲಿಸಿಟಿ ಸ್ಟಂಟೋ, ನಿಜವೋ ಎನ್ನುವುದು ಇನ್ನಷ್ಟೇ ಗೊತ್ತಾಗಬೇಕಿದೆ. ಏಕೆಂದರೆ ಇದಾಗಲೇ ಹಲವಾರು ಸಂದರ್ಭದಲ್ಲಿ ಈ ರೀತಿ ವದಂತಿಯನ್ನು ಹುಟ್ಟುಹಾಕಿ ಬಳಿಕ ಇಬ್ಬರೂ ಒಟ್ಟಿಗೇ ಕಾಣಿಸಿಕೊಂಡಿದ್ದಾರೆ.  ಅಭಿಷೇಕ್ ಬಚ್ಚನ್​ ತಮ್ಮ ಮದುವೆಯ ಉಂಗುರವನ್ನು ಧರಿಸದೆ ಕಾರ್ಯಕ್ರಮವೊಂದರಲ್ಲಿ ಕಾಣಿಸಿಕೊಂಡಿದ್ದರು. ಅಲ್ಲಿಂದ ಶುರುವಾದ ಇವರ ಡಿವೋರ್ಸ್‌ ಸುದ್ದಿ ದಿನಕ್ಕೊಂದರಂತೆ ರೂಪು ಪಡೆಯುತ್ತಿದೆ.  ಡಿವೋರ್ಸ್‌ ಆಗಿಯೇ ಬಿಟ್ಟರು ಎನ್ನುವ ರೀತಿಯಲ್ಲಿ ಇಬ್ಬರೂ ನಡೆದುಕೊಳ್ಳುತ್ತಿದ್ದಾರೆ. ಸುದ್ದಿಯಾಗುತ್ತಿದ್ದಂತೆಯೇ ಒಟ್ಟಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇದಾದ ಬಳಿಕ ಐಶ್ವರ್ಯ ಮಾವ ಅಮಿತಾಭ್​ ಬಚ್ಚನ್​ ಕೂಡ ಇದಕ್ಕೆ ಸ್ಪಷ್ಟವಾಗಿ ಉತ್ತರ ನೀಡದೇ, ಅಡ್ಡಗೋಡೆ ಮೇಲೆ ದೀಪ ಇಟ್ಟವರಂತೆ ಹಾರಿಕೆ ಉತ್ತರ ಕೊಟ್ಟಿರುವುದು ಕೂಡ ಈ ವಿಚ್ಛೇದನದ ಸುದ್ದಿ ನಿಜ ಎಂದೇ ಹೇಳಲಾಗಿತ್ತು. ಇವರಿಬ್ಬರದ್ದೂ ಪಬ್ಲಿಸಿಟಿ ಹುಚ್ಚು ಜಾಸ್ತಿಯಾಯಿತು ಎಂದು ಸೋಷಿಯಲ್‌ ಮೀಡಿಯಾದಲ್ಲಿ ಟ್ರೋಲ್‌ ಕೂಡ ಆಗಿದ್ದರು.  


ಕೆಲ ದಿನಗಳ ಹಿಂದಷ್ಟೇ ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯಾ ರೈ ಅಭಿನಯದ ಮಣಿರತ್ನಂ ನಿರ್ದೇಶನದ ಹಿಂದಿ ಸಿನಿಮಾ ರಾವನ್ 14 ವರ್ಷಗಳನ್ನು ಮುಗಿಸಿದ ಸಂದರ್ಭದಲ್ಲಿ  ಅಮಿತಾಭ್​ ಅವರು ‘ಅಭಿಷೇಕ್ ಅವರ ನಟನೆ ಮರೆಯಲು ಸಾಧ್ಯವಿಲ್ಲ. ಅವರ ಎಲ್ಲಾ ಸಿನಿಮಾಗಳಿಗಿಂತ ಈ ಚಿತ್ರ ಭಿನ್ನವಾದುದು. ಕಲಾವಿದನ ನಿಜವಾದ ಮೌಲ್ಯ ಇದು’ ಎಂದು ಹೇಳಿದ್ದರು. ಈ ಚಿತ್ರದಲ್ಲಿ ಸೊಸೆ ಐಶ್ವರ್ಯಾ ನಟಿಸಿದ್ದರೂ  ಮಗ ಅಭಿಷೇಕ್ ನಟನೆಯನ್ನು ಅವರು  ಮನಸಾರೆ ಹೊಗಳಿದ್ದರೇ ವಿನಾ  ಸೊಸೆ ಐಶ್ವರ್ಯಾ  ಬಗ್ಗೆ ಎಲ್ಲೂ ಉಲ್ಲೇಖ ಮಾಡಲಿಲ್ಲ. ಇದು ಹಲವು ಗುಮಾನಿಗಳನ್ನು ಸೃಷ್ಟಿಸಿತ್ತು. ಅದಾದ ಬಳಿಕ,  ಅನಂತ್​ ಅಂಬಾನಿ ಮದುವೆಯಲ್ಲಿ ಅಮಿತಾಭ್​, ಜಯಾ, ಅಭಿಷೇಕ್ ಸೇರಿದಂತೆ ಅಮಿತಾಭ್​ ಪುತ್ರಿಯರೂ ಆಗಮಿಸಿದ್ದರು. ಮದುವೆಯಲ್ಲಿ ಐಶ್ವರ್ಯ ರೈ ಮತ್ತು ಮಗಳು ಆರಾಧ್ಯ ಕೂಡ ಭಾಗವಹಿಸಿದ್ದರು. ಆದರೆ ಕುತೂಹಲ ಎನ್ನುವಂತೆ ಅಲ್ಲಿ ನಡೆದ ಫೋಟೋಶೂಟ್​ನಲ್ಲಿ ಐಶ್ವರ್ಯ ಮತ್ತು ಆರಾಧ್ಯ ಅವರನ್ನು ಹೊರತುಪಡಿಸಿ ಉಳಿದವರು ಫೋಟೋಗೆ ಪೋಸ್​ ಕೊಟ್ಟಿದ್ದರು. ಇನ್ನೊಂದರಲ್ಲಿ ಪ್ರತ್ಯೇಕವಾಗಿ ತಾಯಿ-ಮಗಳು ಫೋಟೋಗೆ ಪೋಸ್​ ಕೊಟ್ಟಿದ್ದಾರೆ. ಮದುವೆ ಆಗಮಿಸುವ ಸಂದರ್ಭದಲ್ಲಿ ಕೂಡ ತಾಯಿ-ಮಗಳು ಪ್ರತ್ಯೇಕವಾಗಿ ಬಂದಿದ್ದರು, ಉಳಿದವರು ಒಟ್ಟಿಗೇ ಬಂದಿದ್ದರು. ಇದರಿಂದ ಐಶ್ವರ್ಯಾ ಮತ್ತು ಅಭಿಷೇಕ್​ ವಿಚ್ಛೇದನದ ಸುದ್ದಿಗೆ ಮತ್ತಷ್ಟು ಬಲ ತುಂಬಿದ್ದರು. 

ಎಲ್ಲಾ ಕಾಣುವ ಬಟ್ಟೆ ತೊಟ್ಟು ಅನನ್ಯಾ ಪೇಚಾಟ: ಮಾನ ಮುಚ್ಚಲು ವಿಜಯ್​ ದೇವರಕೊಂಡ ಮಾಡಿದ್ದೇನು? ವಿಡಿಯೋ ವೈರಲ್​
 

click me!