ಮಲೈಕಾ ಮದ್ವೆಲಿ ಪುಟ್ಟ ಬಾಲಕನಾಗಿದ್ದ ಅರ್ಜುನ್ ಕಪೂರ್ ಈಗ 2ನೇ ಪತಿ? ಹಿಗ್ಗಾಮುಗ್ಗಾ ಟ್ರೋಲ್

By Shruthi Krishna  |  First Published Jun 3, 2023, 4:30 PM IST

ಮಲೈಕಾ ಮದ್ವೆಲಿ ಅರ್ಜುನ್ ಕಪೂರ್ ಪುಟ್ಟ ಬಾಲಕನಾಗಿದ್ದ ಈಗ 2ನೇ ಪತಿಯಾಗ್ತಿದ್ದಾರೆ ಎಂದು ಹಿಗ್ಗಾಮುಗ್ಗಾ ಟ್ರೋಲ್ ಆಗುತ್ತಿದ್ದಾರೆ. 


ಮಲೈಕಾ ಅರೋರಾ ಮತ್ತು ಅರ್ಜುನ್ ಕಪೂರ್ ಡೇಟಿಂಗ್ ವಿಚಾರ ಗುಟ್ಟಾಗಿ ಉಳಿದಿಲ್ಲ. ಇಬ್ಬರೂ ಬಹಿರಂಗವಾಗಿಯೇ ಸುತ್ತಾಡುತ್ತಿದ್ದಾರೆ. ಸದಾ ಜೊತೆಯಲ್ಲೇ ಇರುತ್ತಾರೆ. ಆಗಾಗ ಸಾಮಾಜಿಕ ಜಾಲತಾಣದಲ್ಲಿ ರೊಮ್ಯಾಂಟಿಕ್ ಫೋಟೋಗಳನ್ನು ಶೇರ್ ಮಾಡುತ್ತಿರುತ್ತಾರೆ. ಇಬ್ಬರೂ ಎಲ್ಲಿಯೂತಮ್ಮ ಪ್ರೀತಿ ವಿಚಾರಬವನ್ನು ಬಹಿರಂಗವಾಗಿ ಒಪ್ಪಿಕೊಂಡಿಲ್ಲವಾದರೂ ಎಲ್ಲಿಯೂ ತಳ್ಳಿ ಹಾಕಿಲ್ಲ. ಸದ್ಯದಲ್ಲೇ ಮಲೈಕಾ ಮತ್ತು ಅರ್ಜುನ್ ಕಪೂರ್ ಮದುವೆ ಆಗುತ್ತಾರೆ ಎನ್ನುವ ಸುದ್ದಿ ಕೂಡ ಇದೆ. 

ಮಲೈಕಾ ಈ ಮೊದಲ ನಟ, ಸಲ್ಮಾನ್ ಖಾನ್ ಸಹೋದರ ಅರ್ಬಾಜ್ ಖಾನ್ ಅವರನ್ನು ಮದುವೆಯಾಗಿದ್ದರು. ಇಬ್ಬರೂ ಸುಮಾರು 19 ವರ್ಷಗಳು ಸುಂದರ ಸಾಂಸಾರಿಕ ಜೀವನ ನಡೆಸಿದ್ದರು. ಇವರ ದಾಂಪತ್ಯಕ್ಕೆ ಒಬ್ಬ ಮಗ ಕೂಡ ಇದ್ದಾನೆ. ಸದ್ಯ ವಿದೇಶದಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. 1998ರಲ್ಲಿ ಅರ್ಬಾಜ್ ಖಾನ್ ಜೊತೆ ದಾಂಪತ್ಯಕ್ಕೆ ಕಾಲಿಟ್ಟಿದ್ದ ನಟಿ ಮಲೈಕಾ 2017ರಲ್ಲಿ ವಿಚ್ಛೇದನ ಪಡೆದು ದೂರ ದೂರ ಆದರು. ಬಳಿಕ ಮಲೈಕಾ ಅರ್ಜುನ್ ಕಪೂರ್ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ. 

Tap to resize

Latest Videos

2 ವರ್ಷ ಕಡಿಮೆ ಇರೋ ಅರ್ಬಾಜ್‌ನೇ ಬಿಟ್ಟಿದ್ದಾಳೆ ಅರ್ಜುನ್ ಕಪೂರ್ ಯಾವ ಲೆಕ್ಕ?: ಮಲೈಕಾ ಕಾಲೆಳೆದ ನೆಟ್ಟಿಗರು!

ಮಲೈಕಾ ಮತ್ತು ಅರ್ಜುನ್ ಕಪೂರ್ ನಡುವೆ ವಯಸ್ಸಿನ ಅಂತರ ತುಂಬ ಇದೆ. ಮಲೈಕಾಗಿಂತ ಅರ್ಜುನ್ ಕಪೂರ್ ತುಂಬಾ ಚಿಕ್ಕವರು. ಇಬ್ಬರ ನಡುವೆ 12 ವರ್ಷಗಳ ವಯಸ್ಸಿನ ಅಂತರವಿದೆ ಎನ್ನಲಾಗಿದೆ. ಈ ವಿಚಾರವಾಗಿ ಅರ್ಜುನ್ ಮತ್ತು ಮಲೈಕಾ ಜೋಡಿ ಸಿಕ್ಕಾಪಟ್ಟೆ ಟ್ರೋಲ್ ಆಗಿದ್ದು ಇದೆ. ಇದೀಗ ಅರ್ಜುನ್ ಕಪೂರ್ ಅವರ ಅಪರೂಪದದ ಫೋಟೋವೊಂದು ವೈರಲ್ ಆಗಿದೆ. ಪುಟ್ಟ ಬಾಲಕ ಅರ್ಜುನ್ ಕಪೂರ್ ಬಟೆಲ್ ಹಿಡಿದು ಕುಡಿಯುತ್ತಿರುವ ಫೋಟೋ ಇದಾಗಿದೆ.

 

ಮಲೈಕಾ ಅರೋರಾ- ಅರ್ಜುನ್ ಕಪೂರ್ ಅಪ್ಪ-ಅಮ್ಮ ಆಗ್ತಿದ್ದಾರಾ? ನಟ ಹೇಳಿದ್ದೇನು?

ಮಲೈಕಾ ಮತ್ತು ಅರ್ಬಾಜ್ ಮದುವೆಯಲ್ಲಿ ಅರ್ಜುನ್ ಕಪೂರ್ ಹೀಗಿದ್ದರು ಎನ್ನಲಾಗಿದೆ. ಬಾಲಕ ಅರ್ಜುನ್ ಕಪೂರ್ ಫೋಟೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಟ್ರೋಲಿಗರು ಅರ್ಜುನ್ ಕಪೂರ್ ಫೋಟೋಗೆ ತರಹೇವಾರಿ ಕಾಮೆಂಟ್ ಮಾಡಿ ವೈರಲ್ ಮಾಡುತ್ತಿದ್ದಾರೆ. ಮಲೈಕಾ ಮದ್ವೆಯಲ್ಲಿ  ಬಾಲಕನಾಗಿದ್ದ ಅರ್ಜುನ್ ಕಪೂರ್ ಇದೀಗ ಎರಡನೇ ಪತಿ ಆಗುತ್ತಿದ್ದಾರೆ ಎಂದು ಟ್ರೋಲ್ ಮಾಡುತ್ತಿದ್ದಾರೆ. ಎಷ್ಟೋ ಟ್ರೋಲ್ ಮಾಡಿದರೂ, ಕಾಲೆಳೆದರೂ ಮಲೈಕಾ ಮತ್ತು ಅರ್ಜುನ್ ಹೆಚ್ಚು ತಲೆ ಕೆಡಿಸಿಕೊಂಡಿಲ್ಲ. ಇಬ್ಬರೂ ಆರಾಮಾಗಿ ಸುತ್ತಾಡಿಕೊಂಡು ಜೀವನ ಎಂಜಾಯ್ ಮಾಡುತ್ತಿದ್ದಾರೆ. 

click me!