Viral Vedio: ಫ್ಲರ್ಟ್​ ಮಾಡಲು ಬಂದ ಶಾರುಖ್​ಗೆ ವಯಸ್ಸಿನ ಅಂತರ ನೆನಪಿಸಿದ ​ದೀಪಿಕಾ

By Suvarna News  |  First Published Jun 3, 2023, 4:10 PM IST

ಶಾರುಖ್​ ಖಾನ್​ ವಯಸ್ಸಿನಲ್ಲಿ ತಮಗಿಂತ ತುಂಬಾ ಹಿರಿಯರು ಎಂಬುದನ್ನು ದೀಪಿಕಾ ಪಡುಕೋಣೆ ಅವರಿಗೆ ನೆನಪಿಸಿದ್ದ ವಿಡಿಯೋ ಒಂದು ಸಕತ್​ ವೈರಲ್​ ಆಗಿದೆ. ದೀಪಿಕಾ ಹೇಳಿದ್ದೇನು? 
 


ಬಾಲಿವುಡ್‌ನಲ್ಲಿ (Bollywood) ಹಿರಿಯ ನಟರು ಕಿರಿಯ ನಟಿಯರನ್ನು ರೊಮ್ಯಾನ್ಸ್ ಮಾಡುವುದರ ಕುರಿತು ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಇದು ಇಂದು ನಿನ್ನೆಯದ್ದಲ್ಲ. ಹಲವಾರು ವರ್ಷಗಳಿಂದಲೇ ಇದು ನಡೆದು ಬಂದಿದೆ. ಬಾಲಿವುಡ್​ ಮಾತ್ರವಲ್ಲದೇ ಎಲ್ಲಾ ಭಾಷೆಗಳ ಚಲನಚಿತ್ರಗಳಲ್ಲಿಯೂ ಇದು ಕಾಮನ್​.  ಬ್ಲ್ಯಾಕ್​ ಆ್ಯಂಡ್​ ವೈಟ್​ ಚಿತ್ರಗಳಲ್ಲಿ ನಟನಿಗೆ ನಾಯಕಿಯಾಗಿ ನಟಿಸುತ್ತಿರುವ ನಟಿ ಕೆಲ ವರ್ಷಗಳ ಬಳಿಕ ಅಮ್ಮ, ಅತ್ತಿಗೆ ಪಾತ್ರ ಮಾಡುತ್ತಾಳೆ. ತಾನೊಮ್ಮೆ ನಾಯಕಿಯಾಗಿ ನಟಿಸಿದ ನಟನಿಗೇ ನಟಿ ಅಮ್ಮನಾದರೆ ನಟ ಮಾತ್ರ ತಮಗಿಂದ ತೀರಾ ಚಿಕ್ಕವಳಾಗಿರುವ ನಟಿಯ ಜೊತೆ ರೊಮ್ಯಾನ್ಸ್​ (Romance) ಮಾಡುವುದು ಹೊಸ ವಿಷಯವೇನಲ್ಲ. ಇದು ಹಿಂದಿನ ಮಾತಾದರೆ ಈಗಂತೂ ಕೆಲವು ನಟರು ವಯಸ್ಸು 60 ದಾಟಿದರೂ ತಮ್ಮ ಮಗಳ ವಯಸ್ಸಿನ ನಟಿಯ ಜೊತೆ ರೊಮ್ಯಾನ್ಸ್​ ಮಾಡುವುದು ಮಾಮೂಲಾಗಿದೆ. 

ಪಠಾಣ್​ (Pathaan) ಚಿತ್ರದಲ್ಲಿ ಶಾರುಖ್​ ಖಾನ್​ ತಮಗಿಂತ ಅತ್ಯಂತ ಕಿರಿಯ ವಯಸ್ಸಿನ ದೀಪಿಕಾ ಪಡುಕೋಣೆ (Deepika Padukone) ಅವರ ಜೊತೆ ರೊಮ್ಯಾನ್ಸ್​ ಮಾಡಿದಾಗಲೂ ಇದೇ ರೀತಿ ಸುದ್ದಿಯಾಗಿತ್ತು. ಅದರಲ್ಲಿಯೂ ದೀಪಿಕಾ ಮೈ ಚಳಿ ಬಿಟ್ಟು ಅತ್ಯಂತ ಕಡಿಮೆ ಬಟ್ಟೆ ತೊಟ್ಟು ರೊಮ್ಯಾನ್ಸ್​ ಮಾಡಿ ಹಲವರ ನಿದ್ದೆ ಕದ್ದಿದ್ದರೆ, ಈ ವಯಸ್ಸಿನಲ್ಲಿ ಇಷ್ಟು ಚಿಕ್ಕ ವಯಸ್ಸಿನ ಹುಡುಗಿ ಜೊತೆ ಶಾರುಖ್​ಗೆ ಇದೆಲ್ಲಾ ಬೇಕಿತ್ತಾ ಎಂದವರೇ ಹೆಚ್ಚು. ಆದರೆ ಅವರ ಫ್ಯಾನ್ಸ್​ ಮಾತ್ರ, ದೀಪಿಕಾ ಅಲ್ಲ ಆಕೆಗಿಂತಲೂ ಚಿಕ್ಕ ವಯಸ್ಸಿನ ನಟಿಯ ಜೊತೆ ಶಾರುಖ್​ ನಟನಾಗುವುದಕ್ಕೂ ಅರ್ಹರಿದ್ದಾರೆ ಎಂದಿದ್ದರು. ಅದೇನೆ ಇದ್ದರೂ ಪಠಾಣ್​ನ ಈ ಜೋಡಿಯ ಕೆಮಿಸ್ಟ್ರಿಗೆ ಲಕ್ಷಾಂತರ ಮಂದಿ ಫಿದಾ ಆಗಿದ್ದಂತೂ ಸುಳ್ಳಲ್ಲ.

Tap to resize

Latest Videos

ಸ್ನಾನದ ವಿಡಿಯೋ ಶೇರ್​ ಮಾಡಿ ಫ್ಯಾನ್ಸ್​ ಎದೆಬಡಿತ ಹೆಚ್ಚಿಸಿದ ನಟಿ ಸೋನಂ, ವೀಡಿಯೋ ನೋಡಿ

ಆದರೆ ಇದೀಗ ವಿಡಿಯೋ ಒಂದು ವೈರಲ್​ ಆಗಿದ್ದು, ಅದರಲ್ಲಿ ದೀಪಿಕಾ ಪಡುಕೋಣೆ (Deepika Padukone) ಶಾರುಖ್ ಅವರಿಗೆ ತಮ್ಮ ನಡುವೆ ಇರುವ ವಯಸ್ಸಿನ ಅಂತರದ ಕುರಿತು ಪರೋಕ್ಷವಾಗಿ ಮಾತನಾಡಿರುವುದನ್ನು ನೋಡಬಹುದು. ಶಾರುಖ್​ ದೀಪಿಕಾರ ಜೊತೆ ರೊಮ್ಯಾನ್ಸಿಂಗ್​ ವಿಷಯ ಮಾತನಾಡಲು ಬಂದಾಗ ವಯಸ್ಸಿನ ಅಂತರದ ಬಗ್ಗೆ ಸೂಚ್ಯವಾಗಿ ದೀಪಿಕಾ ಹೇಳಿದ್ದಾರೆ.  

ಅದೇನೆಂದರೆ, ಟಾಕ್​ ಷೋ ಒಂದರಲ್ಲಿ ಪತ್ರಕರ್ತ ಕೇಳಿದ ಪ್ರಶ್ನೆಗೆ ದೀಪಿಕಾ ನಾನು  ಬೆಂಗಳೂರಿನಲ್ಲಿ ಓದಿದವಳು ಮತ್ತು  ಮುಂಬೈಗೆ ಬಂದು  ಐದು ವರ್ಷಗಳಾಗಿವೆ ಎಂದಿದ್ದಾರೆ. ಆ ಸಮಯದಲ್ಲಿ ಬೆಂಗಳೂರಿನಲ್ಲಿ ನಂದಿದುರ್ಗ ರಸ್ತೆಯಲ್ಲಿ ಇದ್ದುದಾಗಿ ಹೇಳಿದ್ದಾರೆ. ಕೂಡಲೇ ಮಧ್ಯ ಪ್ರವೇಶಿಸಿದ ಶಾರುಖ್​ ಖಾನ್​, ನಾನೊಮ್ಮೆ ಅಲ್ಲಿಗೆ ಬಂದಾಗ ಹುಡುಗಿಯೊಬ್ಬಳ ಜೊತೆ ರೊಮ್ಯಾನ್ಸ್​  ಮಾಡಿದ್ದೆ, ನೀನೇ ಇರಬಹುದು ಎಂದಾಗ ಸ್ವಲ್ಪ ಮುನಿಸಿನಿಂದಲೇ ದೀಪಿಕಾ, ಆ ಟೈಂ ನಲ್ಲಿ ನಾನು ಹುಟ್ಟೇ ಇರಲಿಲ್ಲ ಬಿಡಿ ಎಂದಿದ್ದಾರೆ. ಈ ಮೂಲಕ ತಮ್ಮ ನಡುವಿನ ವಯಸ್ಸಿನ ಅಂತರವನ್ನು ಸೂಚ್ಯವಾಗಿ ತಿಳಿಸಿದ್ದಾರೆ.  

ಕೆನ್ನೆಗೆ ಹೊಡೆದವನನ್ನೇ ಮದ್ವೆಯಾದ ಇಶಾ ಡಿಯೋಲ್​: ಇಂಟರೆಸ್ಟಿಂಗ್​ ಲವ್​ ಸ್ಟೋರಿ
 
ಇದು ಸಾಮಾಜಿಕ ಜಾಲತಾಣದಲ್ಲಿ (Social Media) ಸಕತ್​ ವೈರಲ್​ ಆಗಿದ್ದು, ದೀಪಿಕಾ ಮಾತು ಶಾರುಖ್​ ಅವರನ್ನು ಕಸಿವಿಸಿ ಮಾಡಿತು ಎಂದಿದ್ದಾರೆ. ಕೆಲವರು ವಯಸ್ಸು ಒಂದು ಮ್ಯಾಟರ್​ ಅಷ್ಟೇ. ಇವರಿಬ್ಬರ ಕೆಮೆಸ್ಟ್ರಿಗೆ ಅವರೇ ಸಾಟಿ ಎಂದಿದ್ದಾರೆ. ಇನ್ನು ಕೆಲವರು ಇನ್ನು ಮುಂದಾದರೂ ತಮ್ಮ ಮಗಳ (Daughters age) ವಯಸ್ಸಿನ ನಟಿಯರ ಜೊತೆ ನಟನಾಗಿ ಕೆಲಸ ಮಾಡುವ ಬದಲು ಶಾರುಖ್​ ನಾಯಕನ ವೃತ್ತಿಯಿಂದ ನಿವೃತ್ತಿ ತೆಗೆದುಕೊಳ್ಳುವುದು ಒಳ್ಳೆಯದು ಎಂದಿದ್ದಾರೆ. ಅಂದ ಹಾಗೆ ದೀಪಿಕಾಗೆ 37 ವರ್ಷ ವಯಸ್ಸು ಹಾಗೂ ಶಾರುಖ್​ಗೆ 57 ವರ್ಷ ವಯಸ್ಸು.

click me!