ಪ್ರೇಕ್ಷಕರು 'ಕೇರಳ ಸ್ಟೋರಿ' ನೋಡಲೇ ಬೇಕು, ಆದರೆ...: ಕಮಲ್ ಹಾಸನ್

By Shruthi Krishna  |  First Published Jun 3, 2023, 3:49 PM IST

ಈ ಮೊದಲು ದಿ ಕೇರಳ ಸ್ಟೋರಿ ಸಿನಿಮಾ ವಿರುದ್ಧ ಇದೊಂದು ಪ್ರೊಪೊಗಾಂಡ ಸಿನಿಮಾ ಎಂದು ಕಿಡಿ ಕಾರಿದ್ದ ಕಮಲ್ ಹಾಸನ್ ಇದೀಗ ಈ ಸಿನಿಮಾ ನೋಡಲೇ ಬೇಕು ಎಂದು ಹೇಳಿದ್ದಾರೆ. 


ಕಾಲಿವುಡ್ ಸ್ಟಾರ್ ನಟ ಕಮಲ್ ಹಾಸನ್ ಇತ್ತೀಚೆಗಷ್ಟೆ ದಿ ಕೇರಳ ಸ್ಟೋರಿ ಸಿನಿಮಾವನ್ನು ಪ್ರೊಪೊಗಾಂಡ ಜರಿದಿದ್ದರು. ಇಂಥ ಸಿನಿಮಾಗಳನ್ನು ನೋಡಲ್ಲ ಎಂದು ಹೇಳಿದ್ದರು. ಇದೀಗ ಕೇರಳ ಸ್ಟೋರಿ ಸಿನಿಮಾವನ್ನು ಪ್ರೇಕ್ಷಕರು ನೋಡಲೇ ಬೇಕು ಎಂದು ಹೇಳಿದ್ದಾರೆ. ಈ ಮೊದಲು  ಇಂಡಿಯಾ ಟುಡೇಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಕಮಲ್ ಹಾಸನ್,  'ನಾನು ನಿಮಗೆ ಹೇಳಿದ್ದೇನೆ, ನಾನು ಪ್ರೊಪೊಗಾಂಡ ಚಿತ್ರಗಳ ವಿರುದ್ಧ ಇದ್ದೇನೆ ಅಂತ. ನೀವು ಟೈಟಲ್ ಕೆಳ ಭಾಗದಲ್ಲಿ ನೈಜ ಕಥೆ ಎಂದು ಬರೆದರೆ ಸಾಕಾಗುವುದಿಲ್ಲ. ಅದು ನಿಜವಾಗಿಯೂ ನೈಜ ಕಥೆಯಾಗಿರಬೇಕು ಮತ್ತು ಅದು ನಿಜವಲ್ಲ' ಎಂದು ಹೇಳಿದ್ದರು. ಇದೀಗ ಇಂಡಿಯಾ ಟುಡೇ ಕಾನ್ಕ್ಲೇವ್ ಸೌತ್ 2023ನಲ್ಲಿ ಮಾತನಾಡಿದ ಕಮಲ್ ದಿ ಕೇರಳ ಸ್ಟೋರಿ ತಮ್ಮ ಅಭಿಪ್ರಾಯ ಹೊರಹಾಕಿದ್ದಾರೆ. 

'ಪ್ರೇಕ್ಷಕರು ಕೇರಳ ಕಥೆಯಂತಹ ಚಲನಚಿತ್ರವನ್ನು ವೀಕ್ಷಿಸಲು ಹೋಗಬೇಕು. ಆದರೆ ಅದೇ ಸತ್ಯ ಎಂದು ನಂಬಿಕೊಂಡು ಹೋಗಬಾರದು' ಎಂದು ಹೇಳಿದ್ದಾರೆ. ಯಾವುದೇ ಸಿನಿಮಾದ ನಿಷೇಧವನ್ನು ಒಪ್ಪಲ್ಲ ಎಂದ ಕಮಲ್ ಚಿತ್ರದ ಉದ್ದೇಶವನ್ನು ಅರ್ಥಮಾಡಿಕೊಳ್ಳಬೇಕು ಎಂದಿದ್ದಾರೆ.

Tap to resize

Latest Videos

 'ನಾನು ಯಾವುದೇ ಚಿತ್ರವನ್ನು ನಿಷೇಧಿಸುವುದನ್ನು ಒಪ್ಪಲ್ಲ. ಚಿತ್ರದ ಉದ್ದೇಶವೇನು ಎಂಬುದನ್ನು ಜನರಿಗೆ ಅರ್ಥಮಾಡಿಕೊಳ್ಳಲು ನಾನು ಪ್ರಯತ್ನಿಸುತ್ತೇನೆ. ಜನರು ನನ್ನನ್ನು ಕೇಳಿದಾಗ ನಾನು ಅದನ್ನೇ ಮಾಡುವುದು. ತಮಿಳುನಾಡಿನಲ್ಲಿ ನನ್ನ ವಿಶ್ವರೂಪಂ ಚಿತ್ರವನ್ನು ನಿಷೇಧಿಸಲಾಗಿತ್ತು, ಇದನ್ನು ಏಕೆ ನಿಷೇಧಿಸಲಾಯಿತು ಎಂದು ಜನರು ಇನ್ನೂ ಆಶ್ಚರ್ಯ ಪಡುತ್ತಿದ್ದಾರೆ. ರಾಜ್ ಕಮಲ್ ಫಿಲಂಸ್ ಮತ್ತು ತಮಿಳುನಾಡು ಸರ್ಕಾರದ ನಡುವೆ ಪ್ರಕರಣ ನಡೆದಿತ್ತು. ಪ್ರಕರಣವನ್ನು ಗೆದ್ದು ಚಿತ್ರ ಬಿಡುಗಡೆ ಮಾಡಿದೆವು. ನಾನು ಯಾವುದೇ ಚಲನಚಿತ್ರವನ್ನು ನಿಷೇಧಿಸುವುದನ್ನು ಪ್ರತಿಪಾದಿಸುವುದಿಲ್ಲ' ಎಂದು ಹೇಳಿದ್ದಾರೆ. 

'ಈ ದೇಶವು ವಾಕ್ ಸ್ವಾತಂತ್ರ್ಯವನ್ನು ಹೊಂದಿರಬೇಕು. ಅವರು ಚಲನಚಿತ್ರವನ್ನು ಪ್ರಮಾಣೀಕರಿಸಬಹುದು ಮತ್ತು ಕೆಲವರು ಚಲನಚಿತ್ರವನ್ನು ನೋಡಲ್ಲ ಎಂದು ಹೇಳಬಹುದು. ಪ್ರೇಕ್ಷಕರು ಕೇರಳ ಕಥೆಯಂತಹ ಚಲನಚಿತ್ರವನ್ನು ವೀಕ್ಷಿಸಲು ಹೋಗಬೇಕು ಇದೇ ಸತ್ಯ ಎಂದು ನಂಬಬಾರದು. ಸಿನಿಮಾ ನೋಡಿದ ಮೇಲೆ ಆಲೋಚಿಸಬೇಕು' ಎಂದು ಹೇಳಿದ್ದಾರೆ.

 The Kerala Story: ಟೈಟಲ್ ಕೆಳಗೆ ನೈಜ ಕಥೆ ಅಂತಿದ್ರೆ ಆಗಲ್ಲ, ಸತ್ಯ ಇರಬೇಕು; ಕಮಲ್ ಹಾಸನ್ ಕಿಡಿ

ದಿ ಕೇರಳ ಸ್ಟೋರಿ ಈಗಾಗಲೇ 250 ಕೋಟಿ ರೂಪಾಯಿ ದಾಟಿ ಮುಂದೆ ಸಾಗಿದೆ. ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಸಕ್ಸಸ್ ಕಂಡಿದೆ. ಈ ಬಗ್ಗೆ ನಟಿ ಅದಾ ಶರ್ಮಾ ಕೂಡ ಸಂತಸ ಹಂಚಿಕೊಂಡಿದ್ದರು. ಸುದೀಪ್ತೋ ಸೇನ್ ಸಾರಥ್ಯದಲ್ಲಿಈ ಸಿನಿಮಾ ಮೂಡಿ ಬಂದಿದೆ. 

'ಕೇರಳ ಸ್ಟೋರಿ' ಬ್ಯಾನ್‌ ಬೆಂಬಲಿಸಿ ಹೇಳಿಕೆ ವೈರಲ್: ನಟ ನವಾಜುದ್ದೀನ್ ಸಿದ್ಧಿಕಿ ಕೆಂಡಾಮಂಡಲ

ಸಿನಿಮಾ ಅಲ್ಲ ಇದೊಂದು ಚಳುವಳಿ ಎಂದ ಅದಾ

ಸಿನಿಮಾ ಬಗ್ಗೆ ಮಾತನಾಡಿದ್ದ ನಟಿ ಅದಾ, 'ಕಳೆದ ಒಂದು ವಾರದಲ್ಲಿ, ನಾನು ನಾಲ್ಕು ವಿಮಾನಗಳಲ್ಲಿ ಓಡಾಡಿದೆ. ಮೊದಲು ವಿಮಾನ ನಿಲ್ದಾಣಗಳಲ್ಲಿ ಅಭಿಮಾನಿಗಳು ಬಂದು ನನ್ನೊಂದಿಗೆ 1920 ಮತ್ತು ಕಮಾಂಡೋ ಬಗ್ಗೆ ಮಾತನಾಡುತ್ತಿದ್ದರು. ಅವರ ಕಣ್ಣುಗಳಲ್ಲಿ ಕಣ್ಣೀರು. ಅವರ ಕಣ್ಣುಗಳನ್ನು ತೆರೆದಿದ್ದಕ್ಕಾಗಿ ನನಗೆ ಧನ್ಯವಾದಗಳು. ನಾನು ಈಗಾಗಲೇ ನಾಲ್ಕೈದು ಬಾರಿ ಚಲನಚಿತ್ರವನ್ನು ನೋಡಿದ ಮತ್ತು ನಿರ್ದಿಷ್ಟ ದೃಶ್ಯಗಳನ್ನು ವಿವರಿಸುವ  ಚಿಕ್ಕ ಹುಡುಗರನ್ನು ಭೇಟಿಯಾಗಿದ್ದೇನೆ. ಕೇರಳದ ಸ್ಟೋರಿ ಇನ್ನು ಮುಂದೆ ಕೇವಲ ಚಿತ್ರವಲ್ಲ, ಇದು ಒಂದು ಚಳುವಳಿಯಾಗಿ ಮಾರ್ಪಟ್ಟಿದೆ' ಎಂದು ಹೇಳಿದ್ದರು. 

click me!