ಗೆಳತಿ ಹೇಳಿದ ಪ್ರಶ್ನೆಗೆ ಕೋಪಿಸಿಕೊಳ್ಳದೆ ಸಖತ್ ತಾಳ್ಮೆಯಿಂದ ನಗು ನಗುತ್ತಲೇ ಉತ್ತರ ಕೊಟ್ಟ ಐಶ್ವರ್ಯ ರೈ. ತಾಯಿತನವನ್ನು ಹೊರ ತೆಗೆಯಲು ಸಾಧ್ಯವೇ?
ವಿಶ್ವ ಸುಂದರಿ ಐಶ್ವರ್ಯ ರೈ ಕಣ್ಣು, ನಗು ಮತ್ತು ಫಿಟ್ನೆಸ್‌ಗೆ ಫಿದಾ ಆದವರು ಕೋಟಿಗಟ್ಟಲೆ. ಒಂದು ಕಾಲದಲ್ಲಿ ಸಿನಿಮಾಗಳು ಸೂಪರ್ ಹಿಟ್ ಆಗುತ್ತಿದ್ದಿದ್ದೇ ಐಶ್ವರ್ಯ ರೈ ಇದ್ದಿದ್ದಕ್ಕೆ ಎಂಬ ಮಾತುಗಳು ಇತ್ತು. ಮಗು ಆದ ಮೇಲೆ ಇಂಡಸ್ಟ್ರಿಯಿಂದ ಐಶು ದೂರ ಉಳಿದುಬಿಟ್ಟರು. ರ್ಯಾಂಪ್ ಶೋಗಳ ಮೂಲಕ ಕಮ್ ಬ್ಯಾಕ್ ಮಾಡಿದ ನಟಿ ಈಗ ತಾಯಿ, ಸೆಕೆಂಡ್ ಹೀರೋಯಿನ್ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ನಿಜ ಹೇಳಿ ಈಗಲೂ ಐಶ್ವರ್ಯ ರೈ ಬ್ಯೂಟಿಗೆ ಫಿದಾ ಆಗುವವರು ಇದ್ದಾರೆ. ನೀವು ಮಮ್ಮಿ ಆಗಲಿ ಅಜ್ಜಿ ಆಗಲಿ ಎಂದಿಗೂ ಸ್ಟಾರ್ ಎಂದು ಅಭಿಮಾನಿಗಳು ಕಾಮೆಂಟ್ ಮಾಡುತ್ತಾರೆ. ಈ ಹಿಂದೆ ನಡೆದ ಸಂದರ್ಶನದಲ್ಲಿ ಐಶು ಕೊಟ್ಟ ಸ್ಮಾರ್ಟ್ ಉತ್ತರ ವೈರಲ್ ಆಗುತ್ತಿದೆ.
ಹೌದು! ಹಲವು ವರ್ಷಗಳ ಹಿಂದೆ ಐಶ್ವರ್ಯ ರೈ ಸಂದರ್ಶನ ಒಂದರಲ್ಲಿ ಭಾಗಿಯಾಗಿದ್ದರು. ಆಗ ಇಂಡಸ್ಟ್ರಿಯಲ್ಲಿ ಇರುವ ಸ್ನೇಹಿತರು ಪ್ರಶ್ನೆ ಕೇಳುವ ಅವಕಾಶವಿತ್ತು. ಆಗ'ಈ ಪ್ರಪಂಚದಲ್ಲಿ ಇರುವ ಅತಿ ಸುಂದರವಾದ ಮಹಿಳೆ ನೀವು ಎಂದು ನಂಬುತ್ತೀರಾ? ಇಲ್ಲವಾದರೆ ನಿಮ್ಮ ಪ್ರಕಾರ ಈ ಪ್ರಪಂಚದ ಅತಿ ಸುಂದರವಾದ ಮಹಿಳೆ ಯಾರು ಎಂದು ಹೇಳಬೇಕು ಆದರೆ ನಿಮ್ಮ ತಾಯಿ ಹೆಸರನ್ನು ತೆಗೆಯುವಂತೆ ಇಲ್ಲ' ಎಂದು ಅನುಷ್ಕಾ ಶರ್ಮಾ ಪ್ರಶ್ನೆ ಮಾಡುತ್ತಾರೆ.
ಟೆಂಟ್‌ನಲ್ಲಿ ಜಾಕಿ ಚಿತ್ರ ನೋಡುವಾಗ ನಟ ಕಿಶೋರ್ ಜೇಬಿನಲ್ಲಿದ್ದ ಹಣವನ್ನು ಎಸೆದು ಕುಣಿದು ಕುಪ್ಪಳಿಸಿದ ಅನುಶ್ರೀ
'ನೀವು ತುಂಬಾ ಟ್ರಿಕಿ ಪ್ರಶ್ನೆಯನ್ನು ಕೇಳಿದ್ದೀರಿ. ಏಕೆಂದರೆ ನೀವು ನನ್ನ ತಾಯಿಯನ್ನು ಉತ್ತರದಿಂದ ಹೊರ ಇಡಲು ಹೇಳಿದ್ದೀರಿ. ಆದರೆ ಈ ರೀತಿ ಪ್ರಶ್ನೆಗಳಿಗೆ ನನ್ನಲ್ಲಿ ಇರುವ ತಾಯಿಯನ್ನು ನೀವು ಹೊರ ಇಡಲು ಸಾಧ್ಯವಿಲ್ಲ. ನನ್ನ ಪ್ರಕಾರ ಬ್ಯೂಟಿ ಅನ್ನೋದು ನೋಡುವವರ ದೃಷ್ಟಿಗೆ ಬಿಟ್ಟಿದ್ದು. ಸದ್ಯಕ್ಕೆ ನನ್ನ ಪ್ರಕಾರ ಬ್ಯೂಟಿ ಅಂದ್ರೆ ನನ್ನ ಮಗಳು. ಆಕೆಯನ್ನು ಸದಾ ನೋಡುತ್ತಿರುತ್ತೀನಿ ಆಕೆ ಕೂಡ ನನ್ನನ್ನು ದಿಟ್ಟಿಸಿ ನೋಡುತ್ತಿರುತ್ತಾಳೆ. ನನ್ನ ಜೀವನದಲ್ಲಿ ಸದ್ಯಕ್ಕೆ ಬ್ಯೂಟಿಫುಲ್ ವ್ಯಕ್ತಿ ಅಂದ್ರೆ ನನ್ನ ಮಗಳು ಆರಾಧ್ಯ' ಎಂದು ಐಶ್ವರ್ಯ ಉತ್ತರಿಸುತ್ತಾರೆ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಅದಿಕ್ಕೆ ನೀವು ವಿಶ್ವ ಸುಂದರಿ ಫಿನಾಲೆ ಹಂತ ತಲುಪುವಾಗ ಕೇಳುವ ಪ್ರಶ್ನೆಗೂ ಇಷ್ಟೇ ಸ್ಮರ್ಟ್ ಆಗಿ ಉತ್ತರ ನೀಡಿ ಕಿರೀಟ ಪಡೆದಿರುವುದು ಎನ್ನುತ್ತಿದ್ದಾರೆ ಫ್ಯಾನ್ಸ್.
ಅಪ್ಪು ಕೊನೆಯ ದಿನ ಈ ವಿಚಾರದ ಬಗ್ಗೆ ಬೇಸರ ವ್ಯಕ್ತ ಪಡಿಸಿದ್ದರು; ಸತ್ಯ ಬಿಚ್ಚಿಟ್ಟ ರಾಘವೇಂದ್ರ ರಾಜ್‌ಕುಮಾರ್ ಸೊಸೆ