ಇಷ್ಟೇ ಅಲ್ಲ, ಅನಿಲ್ ಕಪೂರ್ ಮತ್ತು ಮಾಧುರಿ ದೀಕ್ಷಿತ್ ಅಭಿನಯದ 'ಬೇಟಾ' ಚಿತ್ರದ ಗುಟ್ಟನ್ನೂ ಅವರು ಬಿಚ್ಚಿಟ್ಟಿದ್ದಾರೆ. 'ಮಾಧುರಿಗಿಂತ ಮೊದಲು, ಈ ಚಿತ್ರಕ್ಕೆ ಶ್ರೀದೇವಿ (Sridevi) ಅವರೇ ಮೊದಲ ಆಯ್ಕೆಯಾಗಿದ್ದರು. ಆದರೆ, ನಟಿ ಶ್ರೀದೇವಿ..
ಸಿನಿಮಾ ಜಗತ್ತು ಹಾಗೂ ಅಲ್ಲಿ ಮಿಂಚುವುದು ಅಂದುಕೊಂಡಷ್ಟು ಸುಲಭವಲ್ಲ.. ಬಾಲಿವುಡ್‌ನ ಬೆಳ್ಳಿ ಪರದೆ ಮೇಲೆ ಆಮೀರ್ ಖಾನ್ (Aamir Khan) ಮತ್ತು ಮಾಧುರಿ ದೀಕ್ಷಿತ್ (Madhuri Dixit) ಸ್ಟಾರ್ ನಟನಟಿಯರಾಗಿ ಮೆರೆದಿರಬಹುದು. ಆದರೆ. ಶುರುವಿನಲ್ಲಿ ಅಂದ್ರೆ ಅವರು ಬಾಲಿವುಡ್‌ಗೆ ಕಾಲಿಟ್ಟ ಕಾಲದಲ್ಲಿ ಅವರಿಬ್ಬರೂ ಯಶಸ್ಸಿನ ಹೊಸ್ತಿಲು ದಾಟಲು ಪರದಾಡುತ್ತಿದ್ದರು! ಹಿರಿಯ ನಟ ಆದಿ ಇರಾನಿ, ಈ ರಹಸ್ಯವನ್ನು ಬಹಿರಂಗಪಡಿಸಿದ್ದಾರೆ. ಅವರೇನು ಅಂದಿದ್ದಾರೆ ನೋಡಿ..
ಆಮೀರ್ ಖಾನ್ ಅವರ ಆರಂಭದ ಚಿತ್ರಗಳು ಮಕಾಡೆ ಮಲಗಿದ್ದವು. ಅವರು ಮುಂದೊಂದು ದಿನ ಸ್ಟಾರ್ ನಟರಾಗಿ ಬಾಲಿವುಡ್ ಜಗತ್ತಿನಲ್ಲಿ ದೊಡ್ಡ ಹೆಸರು ಮಾಡುತ್ತಾರೆ ಅಂತ ಯಾರೊಬ್ಬರೂ ಅಂದುಕೊಂಡಿರಲಿಲ್ಲ. ನಟಿ ಮಾಧುರಿ ದೀಕ್ಷಿತ್ ಸಹಾ ಅಷ್ಟೇ, 'ದಿಲ್' ಸಿನಿಮಾಗಿಂತ ಮೊದಲು ಅವರು ಬೇಕಾದಷ್ಟು ಪರದಾಡಿದ್ದಾರೆ. ಆದರೆ ದಿಲ್ ಸಿನಿಮಾಬಳಿಕ ಅವರ ಅದೃಷ್ಟದ ಬಾಗಿಲು ತೆರೆಯಿತಷ್ಟೇ' ಎಂದು ಆದಿ ಇರಾನಿ ಹೇಳಿದ್ದಾರೆ.
ಪುನೀತ್ & ಅಣ್ಣಾವ್ರ ಬಗ್ಗೆ ನಟ ರಮೇಶ್ ಭಟ್ ಮಾತು.. ನಾನು 'ನತದೃಷ್ಟ' ಅಂದಿದ್ದೇಕೆ?
ಇಷ್ಟೇ ಅಲ್ಲ, ಅನಿಲ್ ಕಪೂರ್ ಮತ್ತು ಮಾಧುರಿ ದೀಕ್ಷಿತ್ ಅಭಿನಯದ 'ಬೇಟಾ' ಚಿತ್ರದ ಗುಟ್ಟನ್ನೂ ಅವರು ಬಿಚ್ಚಿಟ್ಟಿದ್ದಾರೆ. 'ಮಾಧುರಿಗಿಂತ ಮೊದಲು, ಈ ಚಿತ್ರಕ್ಕೆ ಶ್ರೀದೇವಿ (Sridevi) ಅವರೇ ಮೊದಲ ಆಯ್ಕೆಯಾಗಿದ್ದರು. ಆದರೆ, ನಟಿ ಶ್ರೀದೇವಿ ಅವರ ಕಾಲ್‌ಶೀಟ್ ತುಂಬಾ ಸಮಯದವರೆಗೂ ಬುಕ್ ಆಗಿದ್ದ ಕಾರಣಕ್ಕೆ ಶ್ರೀದೇವಿ ಆ ಚಿತ್ರದಲ್ಲಿ ನಟಿಸಲು ಸಾಧ್ಯವಾಗಲಿಲ್ಲ. ಬಳಿಕ ಆ ಜಾಗಕ್ಕೆ ಬಂದವರು ನಟಿ ಮಾಧುರಿ ದೀಕ್ಷಿತ್ ಎಂಬ ಗುಟ್ಟನ್ನೂ ಅವರು ರಟ್ಟು ಮಾಡಿದ್ದಾರೆ.
ಒಟ್ಟಿನಲ್ಲಿ, ಯಶಸ್ಸು ಯಾರಿಗೂ ಅಷ್ಟು ಸುಲಭವಾಗಿ ಒಲಿಯುವುದಿಲ್ಲ. ಕಠಿಣ ಪರಿಶ್ರಮ, ಕೆಲವೊಮ್ಮೆ ಅದೃಷ್ಟ ಮತ್ತು ಸತತ ಪ್ರಯತ್ನದಿಂದ ಮಾತ್ರ ಉತ್ತುಂಗಕ್ಕೇರಲು ಸಾಧ್ಯ ಎಂಬುದನ್ನು ಈ ಘಟನೆಗಳು ಸಾರಿ ಹೇಳುತ್ತವೆ. ಬಾಲಿವುಡ್ ಇತಿಹಾಸದ ಪುಟಗಳಲ್ಲಿ ಮರೆಯಲಾಗದ ಕಥೆಯಿದು. ಇಂಥದ್ದೇ ಹಲವಾರು ಕಥೆ ನನ್ನ ಬಳಿ ಇದೆ. ಟೈಮ್ ಬಂದಾಗ ಎಲ್ಲವನ್ನೂ ಒದೊಂದಾಗಿ ಹೇಳುತ್ತೇನೆ' ಎಂದಿದ್ದಾರೆ ಬಾಲಿವುಡ್ ಹಿರಿಯ ಆದಿ ಇರಾನಿ. ಅವರು ಅದೇನೇನು ಕಥೆ ಹೇಳಬಹುದು, ಹಳೆಯ ರಹಸ್ಯಗಳನ್ನು ಬಿಚ್ಚಿಡಬಹುದು ಎಂಬ ಕುತೂಹಲ ಸಹಜವಾಗಿಯೇ ಈಗ ಎಲ್ಲರ ಮನದಲ್ಲಿ ಮೂಡಿದೆ.
ಡಾ ಭುಜಂಗ ಶೆಟ್ಟಿ ಬಳಿ ನೇತ್ರದಾನದ ಬಗ್ಗೆ ಡಾ ರಾಜ್‌ಕುಮಾರ್ ಹೇಳಿದ್ದು..! ಪುನೀತ್ ಸಹ..