ದಿಶಾ ಪಟಾನಿ ಅವರ ಫಿಟ್‌ನೆಸ್ ಗುಟ್ಟು ರಹಸ್ಯವೇನು? ಆಕೆಯ ವ್ಯಾಯಾಮ, ಆಹಾರ ಕ್ರಮ ಮತ್ತು ಜೀವನಶೈಲಿ ವಿಶಿಷ್ಟವಾಗಿದೆ. ಜೊತೆಗೆ ಆಕೆ ಮಾನಸಿಕ ಆರೋಗ್ಯ ಕಾಪಾಡಿಕೊಳ್ಳೋಕೆ ಇನ್ನೊಂದು ವಿಶಿಷ್ಟ ಜೀವನಕ್ರಮವನ್ನೂ ಆಳವಡಿಸಿಕೊಂಡಿದ್ದಾಳೆ. ಅದೇನು ಅನ್ನೋದು ಇಲ್ಲಿದೆ.
ಬಾಲಿವುಡ್ ನಟಿ ದಿಶಾ ಪಟಾನಿ (Disha Patani) ಮೈಕಟ್ಟು ವಿಷಯದಲ್ಲಿ ಲೆಜೆಂಡ್. ಹಲವು ವರ್ಷಗಳಿಂದ ಆಕೆ ಬಳುಕು ಬಳ್ಳಿಯಂಥ ಮೈಕಟ್ಟು, ದಂತದಂಥ ಮೈಕಾಂತಿ, ಹಾಟ್ ಲುಕ್ ಬದಲಾಗಿಯೇ ಇಲ್ಲ. ತೆಳ್ಳಗೆ ಮತ್ತು ಬಿಗಿಯಾಗಿ ಕಾಣುವ ಆಕೆಯ ಬಾಡಿ ಕಟ್ಟುನಿಟ್ಟಾದ ಫಿಟ್‌ನೆಸ್ ದಿನಚರಿ, ಆರೋಗ್ಯಕರ ಸಮತೋಲಿತ ಆಹಾರ, ತೂಕ ವ್ಯಾಯಾಮ, ಕಾರ್ಡಿಯೋ ವ್ಯಾಯಾಮ ಇತ್ಯಾದಿಗಳ ಫಲ. ಜೊತೆಗೆ ಮಾನಸಿಕ ಆರೋಗ್ಯಕ್ಕಾಗಿ ಆಕೆ ಮನೆಯಲ್ಲಿ ಆರು ಸಾಕುಪ್ರಾಣಿಗಳನ್ನೂ ಇಟ್ಟುಕೊಂಡಿದ್ದಾಳಂತೆ. ಮೂರು ನಾಯಿಗಳು, ಮೂರು ಬೆಕ್ಕುಗಳು ಆಕೆಯ ಅಪಾರ್ಟ್‌ಮೆಂಟ್‌ನಲ್ಲಿವೆ. ಇವುಗಳ ಆರೈಕೆಯಲ್ಲಿ ಆಕೆ ಮಾನಸಿನ ನೆಮ್ಮದಿ ಕಂಡುಕೊಳ್ಳುತ್ತಾಳಂತೆ. ಇದರ ಬಗ್ಗೆ ಹೆಚ್ಚು ವಿವರವಾದ ನೋಟ ಇಲ್ಲಿದೆ.
ದಿಶಾ ಪಟಾನಿಯ ಫಿಟ್‌ನೆಸ್ ರೊಟೀನ್ ಏನು ಎಂದು ಆಶ್ಚರ್ಯ ಪಡುತ್ತೀರಾ? ಇನ್‌ಸ್ಟಾಗ್ರಾಮ್‌ನಲ್ಲಿ ತಮ್ಮ ಕಠಿಣವಾದ ವ್ಯಾಯಾಮಗಳ ಚಿತ್ರಗಳನ್ನು ಆಗಾಗ್ಗೆ ಹಂಚಿಕೊಳ್ಳುವ ನಟಿ, ಫಿಟ್ ಆಗಿರಲು ಡ್ಯಾನ್ಸ್‌ನಿಂದ ಹಿಡಿದು ಸಮರ ಕಲೆಗಳಲ್ಲಿ ತರಬೇತಿಯವರೆಗೆ ಎಲ್ಲವನ್ನೂ ಮಾಡುತ್ತಾಳೆ. ದಿಶಾ ಪಟಾನಿಯ ದಿನಚರಿಯಲ್ಲಿ ಬಾಡಿ ವೇಯ್ಟ್ ವ್ಯಾಯಾಮ ನಿತ್ಯದ ಭಾಗ. ಮಸಲ್ ತೂಕ ಮತ್ತು ಎನರ್ಜಿ ಗಳಿಸುವತ್ತ ಗಮನಹರಿಸುತ್ತಾಳೆ. ಇದು ಬಿಗಿಯಾಗಿ ಕಾಣಲು ಕೊಡುಗೆ ನೀಡುತ್ತದೆ.
ಇನ್ನು ಕಾರ್ಡಿಯೋ ಎಕ್ಸರ್‌ಸೈಸ್. ಹೆಚ್ಚಿನ ಕ್ಯಾಲೊರಿಗಳನ್ನು ಸುಡಲು ಮತ್ತು ಹೃದಯ ರಕ್ತನಾಳಗಳ ಆರೋಗ್ಯವನ್ನು ಸುಧಾರಿಸಲು ದಿಶಾ ನೃತ್ಯ, ಕಿಕ್‌ಬಾಕ್ಸಿಂಗ್ ಮತ್ತು ಜಿಮ್ನಾಸ್ಟಿಕ್ಸ್‌ನಂತಹ ಕಾರ್ಡಿಯೋ ವ್ಯಾಯಾಮಗಳನ್ನು ಮಾಡುತ್ತಾಳಂತೆ. ದಿಶಾ ಅವರ ಜಿಮ್ ತರಬೇತುದಾರ ರಾಜೇಂದ್ರ ಧೋಲ್ ಹೇಳುವ ಪ್ರಕಾರ, ದಿಶಾ ಫಿಟ್‌ನೆಸ್‌ಗೆ ಹೆಚ್ಚಿನ ಸಮಯ ಕೊಡುತ್ತಾಳೆ. ವಾರದಲ್ಲಿ ಕನಿಷ್ಠ ಆರು ದಿನ ತಪ್ಪದೆ ವ್ಯಾಯಾಮ ಮಾಡುತ್ತಾಳೆ.
ಇನ್ನು ಆಹಾರದ ವಿಷಯ. ದಿಶಾ ತೆಗೆದುಕೊಳ್ಳುವುದು ಬ್ಯಾಲೆನ್ಸ್‌ಡ್ ಡಯಟ್ ಅಥವಾ ಸಮತೋಲಿತ ಆಹಾರ. ಪ್ರೋಟೀನ್‌ಗಳು, ಕಾರ್ಬೋಹೈಡ್ರೇಟ್‌ಗಳು ಮತ್ತು ತರಕಾರಿಗಳ ಆರೋಗ್ಯಕರ ಮಿಶ್ರಣಕ್ಕೆ ಆದ್ಯತೆ. ಜಂಕ್ ಫುಡ್ ಅನ್ನು ತಪ್ಪಿಸುತ್ತಾಳೆ. ಸಾಕಷ್ಟು ನೀರು ಕುಡಿಯುವ ಮೂಲಕ ಸದಾ ಹೈಡ್ರೇಟೆಡ್ ಆಗಿರುತ್ತಾಳೆ. ವ್ಯಾಯಾಮದ ಕೆಲವು ಗಂಟೆಗಳ ಮೊದಲು ಕಿರು ಆಹಾರ ತೆಗೆದುಕೊಳ್ಳುತ್ತಾಳೆ. ಅದರಲ್ಲೂ ಮೊಟ್ಟೆಗಳಂತಹ ಪ್ರೋಟೀನ್ ರಿಚ್ ಆಹಾರ. ಹಾಗೆಯೇ ಮಧ್ಯಂತರ ಉಪವಾಸ. ಇದು ಅವಳ ತೆಳ್ಳಗಿನ ದೇಹಕ್ಕೆ ಕಾರಣವಾಗಬಹುದು.
ಫಿಟ್ ಆಗಿರಲು ನೀವು ಏನು ಮಾಡುತ್ತೀರಿ ಎಂದು ಕೇಳಿದಾಗ ದಿಶಾ ಹೇಳಿದ್ದು- “ಯಾವುದೇ ವ್ಯಕ್ತಿ ಸಕ್ರಿಯರಾಗಿರಬೇಕು. ನೀವು ನಟನೋ ನಟಿಯೋ ಅಲ್ಲವೋ ಎಂಬುದು ಮುಖ್ಯವಲ್ಲ. ನೀವು ನಿಮ್ಮ ದೇಹದ ಬಗ್ಗೆ ಕಾಳಜಿ ವಹಿಸಬೇಕು. ಅದು ಏನೇ ಇರಲಿ, ಜಿಮ್, ಕ್ರೀಡೆ, ವಾಕಿಂಗ್ ಅಥವಾ ಜಾಗಿಂಗ್ ಹೀಗೆ ಅದು ಏನೇ ಇರಲಿ.”
“ನನಗೆ ನೃತ್ಯ ಇಷ್ಟ; ನನಗೆ ಜಿಮ್ ಇಷ್ಟ. ನಾನು ಸ್ವಲ್ಪ ಮಿಶ್ರ ಸಮರ ಕಲೆಗಳನ್ನು ಅಭ್ಯಾಸ ಮಾಡುತ್ತೇನೆ. ಮತ್ತು ನಾನು ಸಕ್ರಿಯವಾಗಿರಲು ಇಷ್ಟಪಡುತ್ತೇನೆ. ನಾನು ತುಂಬಾ ಡಿಸ್ಟರ್ಬ್‌ಡ್ ವ್ಯಕ್ತಿ. ಒಂದೇ ಸ್ಥಳದಲ್ಲಿ ಹೆಚ್ಚು ಕಾಲ ಇರಲು ಇಷ್ಟಪಡುವುದಿಲ್ಲ. ನನ್ನ ಮನೆಯಲ್ಲಿ ಆರು ಪ್ರಾಣಿಗಳಿವೆ. ಮೂರು ಬೆಕ್ಕುಗಳು ಮತ್ತು ಮೂರು ನಾಯಿಗಳು. ನಾವು ಒಂದು ಸಣ್ಣ ಅಪಾರ್ಟ್ಮೆಂಟ್‌ನಲ್ಲಿ ವಾಸಿಸುತ್ತೇವೆ. ನನ್ನ ಹೆಚ್ಚಿನ ಸಮಯ ಅಕ್ಷರಶಃ ಅವುಗಳನ್ನು ನೋಡಿಕೊಳ್ಳುವುದರಲ್ಲಿ ಕಳೆಯುತ್ತದೆ. ನನ್ನ ಮಾನಸಿಕ ಆರೋಗ್ಯಕ್ಕಾಗಿ ಇವು ನನಗೆ ಬೇಕು. ಕೆಲಸದ ಹೊರತಾಗಿ ನೀವು ಆನಂದಿಸುವ ಕೆಲಸಗಳನ್ನು ಮಾಡುವುದು ಅಗತ್ಯ. ಅವು ನಿಮ್ಮ ವೃತ್ತಿಗೆ ಸಂಬಂಧಿಸಿರಬಾರದು. ನೀವು ವೃತ್ತಿಯಿಂದ ದೂರವಿದ್ದು ನಿಮ್ಮ ಸ್ವಂತ ಜೀವನವನ್ನು ಹೊಂದಿರಬೇಕು ಎಂದು ನಾನು ಭಾವಿಸುತ್ತೇನೆ, ಅದು ಮುಖ್ಯ. ”
ಶಾರುಖ್ಗೂ ಗೌರಿ, ಆಮೀರ್ಗೂ ಗೌರಿ! 'ಗೌರಿ'ಗಳೇ ಖಾನ್ ನಟರಿಗೆ ಯಾಕಿಷ್ಟು ಪ್ರಿಯ? ಬಿಸಿಬಿಸಿ ಚರ್ಚೆ
"ನಾನು ಪ್ರತಿದಿನ ವ್ಯಾಯಾಮ ಮಾಡುತ್ತೇನೆ. ನನ್ನ ದಿನಚರಿಯಲ್ಲಿ ಸಾಮಾನ್ಯವಾಗಿ ಬೆಳಿಗ್ಗೆ ಕಾರ್ಡಿಯೋ, ಡ್ಯಾನ್ಸ್, ಕಿಕ್ ಬಾಕ್ಸಿಂಗ್ ಅಥವಾ ಜಿಮ್ನಾಸ್ಟಿಕ್ಸ್ ಮತ್ತು ಸಂಜೆ ತೂಕ ತರಬೇತಿ ಒಳಗೊಂಡಿರುತ್ತದೆ. ಜೊತೆಗೆ ಪ್ರೋಟೀನ್- ಕಾರ್ಬ್ಸ್ ಆಹಾರ. ನನ್ನದು ನಿಯಮಿತ ಆಹಾರಕ್ರಮ. ವ್ಯಾಯಾಮ ಮಾಡುವ ಮೊದಲು ಸಣ್ಣ ಊಟ ಸೇವಿಸುವುದು ಖಂಡಿತವಾಗಿಯೂ ಒಳ್ಳೆಯದು. ಇದರಲ್ಲಿ ಮೊಟ್ಟೆಗಳಂತಹ ಕೆಲವು ಪ್ರೋಟೀನ್ ಇರುತ್ತದೆ. ವ್ಯಾಯಾಮದ ನಂತರ ಚಿಕನ್, ಮೊಟ್ಟೆ ಅಥವಾ ಪನೀರ್ ಮೂಲಕ ಮತ್ತೆ ಪ್ರೋಟೀನ್ ಸೇರಿಸುವುದು ಒಳ್ಳೆಯದು" ಎನ್ನುತ್ತಾಳೆ ಪಟಾನಿ.
ಹೃತಿಕ್ ರೋಷನ್ ಈ ಕನಸಿನ ಚಿತ್ರಕ್ಕೆ 700 ಕೋಟಿ ಬೇಕು, ಕೈ ಸುಟ್ಟುಕೊಳ್ಳೋ ಭಯದಲ್ಲಿ ನಿರ್ಮಾಪಕರು! ಯಾವುದು ಆ ಸಿನಿಮಾ?