ಪಾರಿವಾಳ ತಿನ್ನೋ ಅಕ್ಕಿಯನ್ನು ರಸ್ತೆಗೆ ಚೆಲ್ಲಿದ ಬಿಜೆಪಿ ನಾಯಕ ಕೃಷ್ಣಕುಮಾರ್; ಮಗಳಿಂದಲೇ ವ್ಯಕ್ತವಾಯ್ತು ಟೀಕೆ!

By Vaishnavi Chandrashekar  |  First Published Jan 10, 2024, 3:55 PM IST

ಪದೇ ಪದೇ ಟ್ರೋಲ್‌ಗೆ ಗುರಿಯಾಗುತ್ತಿರುವ ಕೃಷ್ಣ ಕುಮಾರ್ ಫ್ಯಾಮಿಲಿ. ದಿಯಾ ಯುಟ್ಯೂಬ್ ವಿಡಿಯೋ ಸಖತ್ ವೈರಲ್....


ಮಲಯಾಳಂ ಖ್ಯಾತ ನಟ ಹಾಗೂ ಬಿಜೆಪಿ ನಾಯಕ ಕೃಷ್ಣ ಕುಮಾರ್ ತಮ್ಮ ಕುಟುಂಬದ ಜೊತೆ ಹೊಸ ವರ್ಷ ಆಚರಿಸಿದ್ದಾರೆ. ಲಂಡನ್‌ ಪ್ರವಾಸದಲ್ಲಿ ಬ್ಯುಸಿಯಾಗಿದ್ದರೂ ಕೇರಳದಲ್ಲಿ ಸುದ್ದಿಯಾಗುತ್ತಿದ್ದಾರೆ. ಕೃಷ್ಣ ಕುಮಾರ್ ಪತ್ನಿ ಸಿಂಧು ಯುಟ್ಯೂಬರ್, ಹಿರಿಯ ಪುತ್ರಿ ಆಹಾನ ಕೃಷ್ಣ ನಟಿ ಹಾಗೂ ಯುಟ್ಯೂಬ್, ದ್ವಿತಿಯ ಪುತ್ರಿ ದಿಯಾ ಕೂಡ ಯುಟ್ಯೂಬರ್, ಮೂರನೇ ಪುತ್ರಿ ಇಶಾನಿ ಮಮ್ಮೂಟಿ ಜೊತೆ ಓನ್ ಸಿನಿಮಾದಲ್ಲಿ ನಟಿಸಿ ಯುಟ್ಯೂಬ್ ನಡೆಸುತ್ತಿದ್ದಾರೆ ಹಾಗೂ ಕಿರಿಯ ಪುತ್ರಿ ಹನ್ಸಿಕಾ ವ್ಯಾಸಂಗ ಮಾಡಿಕೊಂಡು ಯುಟ್ಯೂಬ್ ವಿಡಿಯೋ ಮಾಡುತ್ತಿದ್ದಾರೆ.

ಯುಟ್ಯೂಬ್ ಮೂಲಕ ಜನಪ್ರಿಯತೆ ಪಡೆದಿರುವ ಈ ಫ್ಯಾಮಿಲಿ ಲಂಡನ್ ಪ್ರವಾಸ ಹೇಗಿತ್ತು ಅಂತ ಕ್ಷಣ ಕ್ಷಣಕ್ಕೂ ಅಪ್ಡೇಟ್ ಮಾಡುತ್ತಿದ್ದಾರೆ. ಅದರಲ್ಲಿ ದಿಯಾ ಕೃಷ್ಣ ಮಾಡಿರುವ ಯುಟ್ಯೂಬ್ ವಿಡಿಯೋ ಒಂದು ವೈರಲ್ ಆಗುತ್ತಿದೆ. ಬಿಜೆಪಿ ನಾಯಕ ಕೃಷ್ಣ ಕುಮಾರ್ ಲಂಡನ್‌ ಅರಮನೆ ಮುಂದೆ ಇರುವ ಪಾರಿವಾಳಗಳಿಗೆ ಅಕ್ಕಿ ನೀಡುತ್ತಿರುವ ವಿಡಿಯೋವನ್ನು ದಿಯಾ ಸೆರೆ ಹಿಡಿಯುತ್ತಾರೆ. ಅಷ್ಟರಲ್ಲಿ ಕೈಯಲ್ಲಿದ್ದ ಆಹಾಯವನ್ನು ಕೃಷ್ಣ ಕುಮಾರ್ ನೆಲದ ಮೇಲೆ ಹಾಕಿಬಿಡುತ್ತಾರೆ. ಇಷ್ಟೂ ಸೆರೆ ಹಿಡಿಯುತ್ತಿರುವ ದಿಯಾ ಅಯ್ಯೋ ಯಾಕೆ ಹಾಗೆ ಮಾಡಿದ್ದು...ಪಾಪ ಪಾರಿವಾಳಕ್ಕೆ ಹಾಗೆ ಮಾಡಬಾರದು ಅಂತ ಜನ ಹೇಳಲು ಶುರು ಮಾಡುತ್ತಾರೆ. ಇನ್ಮೇಲೆ ನಾವು ತಟ್ಟೆ ಹಿಡಿದುಕೊಂಡು ಬರಬೇಕು. ಪಾರಿವಾಳಕ್ಕೆ ತಟ್ಟೆ ಇಡಬೇಕು ಎಂದು ಹಾಸ್ಯ ಮಾಡುತ್ತಾರೆ. 

Tap to resize

Latest Videos

ಲಂಡನ್‌ನಲ್ಲಿ ಖ್ಯಾತ ನಟನ ಪುತ್ರಿ ಜೇಬಿಗೆ ಕನ್ನ, ಕಳ್ಳಿ ಬಗ್ಗೆ ಗೊತ್ತಾದ್ರೂ ಕ್ಯಾರೇ ಅನ್ನದ ಪೊಲೀಸರು!

ಈ ವಿಡಿಯೋದಲ್ಲಿ ಧಕ್ಕೆಯಾಗುವ ರೀತಿಯಲ್ಲಿ ದಿಯಾ ಹೇಳಿಲ್ಲ ಅನ್ನೋದು ಸ್ಪಷ್ಟವಾಗಿ ಗೊತ್ತಾಗುತ್ತಿದ್ದರೂ ದಿಯಾ ಮಾತನಾಡಿರುವುದು ಸರಿ ಅಲ್ಲ ಎಂದು ವಿರೋಧಿಸುತ್ತಿದ್ದಾರೆ. ಇದನ್ನು ದಿಯಾ ರಿಯಾಕ್ಟ್‌ ಕೂಡ ಮಾಡಿದ್ದಾರೆ. 'ಇತ್ತೀಚಿನ ದಿನಗಳಲ್ಲಿ ನನಗೆ ಸಿಗುತ್ತಿರುವ ಗಮನ ಇಷ್ಟವಾಗುತ್ತಿದೆ ಅಲ್ಲದೆ ನನ್ನ ಖಾತೆ ದೊಡ್ಡ ಮಟ್ಟದಲ್ಲಿ ರೀಚ್ ಆಗುತ್ತಿದೆ. ನನ್ನ ಯುಟ್ಯೂಬ್ ವಿಡಿಯೋ ನೋಡಿದಕ್ಕೆ ವಂದನೆಗಳು. ಮಲ್ಲು ಮತ್ತು ಕೇರಳದ ಮಂದಿಗೆ ನನ್ನ ವಿಶೇಷ ವಂದನೆಗಳು. ನೀವಿಲ್ಲದೆ ನಾನು ಇಷ್ಟು ಖುಷಿಯಾಗಿರಲು ಸಾಧ್ಯವಾಗುತ್ತಿರಲಿಲ್ಲ' ಎಂದು ದಿಯಾ ಬರೆದುಕೊಂಡಿದ್ದಾರೆ. 

click me!