ಅವಿವಾಹಿತ ಸಲ್ಮಾನ್ ಖಾನ್ ಸೆಕ್ಸ್ ಪ್ರೀತಿ, ಆಫ್ಸ್ಕ್ರೀನ್ ಕಿಸ್ ಕುರಿತು ಹೀಗೆಲ್ಲಾ ಮರ್ಯಾದೆ ತೆಗೆಯೋದಾ ಅಣ್ಣ ಅರ್ಬಾಜ್ ಖಾನ್? ಹಳೆಯ ವಿಡಿಯೋ ವೈರಲ್
ಬಾಲಿವುಡ್ನ ಮೋಸ್ಟ್ ಎಲಿಜಿಬಲ್ ಬ್ಯಾಚುಲರ್ ಎಂದೇ ಫೇಮಸ್ ಆಗಿರೋರು ನಟ ಸಲ್ಮಾನ್ ಖಾನ್. ಮದುವೆಯಾಗದಿದ್ದರೂ ಇವರ ಹೆಸರು ಇದಾಗಲೇ ಹಲವಾರು ನಟಿಯರ ಜೊತೆ ಥಳಕು ಹಾಕಿಕೊಂಡಿದೆ ಮಾತ್ರವಲ್ಲದೇ ಕೆಲವು ನಟಿಯರು ಸಲ್ಮಾನ್ ವಿರುದ್ಧ ಲೈಂಗಿಕ ದೌರ್ಜನ್ಯದ ಬಗ್ಗೆ ಆರೋಪ ಕೂಡ ಮಾಡಿದ್ದಾರೆ. ನಟಿ ಐಶ್ವರ್ಯ ರೈ ಅವರನ್ನು ಮದುವೆಯಾಗಲು ಇಚ್ಛಿಸಿದ್ದ ಸಲ್ಮಾನ್ ಖಾನ್, ಐಶ್ವರ್ಯ ಕೈಕೊಟ್ಟ ಬಳಿಕ ಯಾರನ್ನೂ ಮದುವೆಯಾಗದೇ ಇರುವುದು ಬಿ-ಟೌನ್ನಲ್ಲಿ ಗುಟ್ಟಾಗಿ ಉಳಿದ ವಿಷಯವೇನಲ್ಲ. ಆದರೆ ಇದರ ಹೊರತಾಗಿಯೂ ಇವರ ಹೆಸರು ಹಲವರ ಜೊತೆ ಕೇಳಿಬಂದಿವೆ. ಅವರು ಡೇಟ್ ಮಾಡಿದ ಹುಡುಗಿಯರ ಪಟ್ಟಿ ದೊಡ್ಡದಿದೆ.
ಇಂತಿಪ್ಪ ಸಲ್ಮಾನ್ ಖಾನ್ ಮರ್ಯಾದೆಯನ್ನು ಅವರ ಸಹೋದರ ಅರ್ಬಾನ್ ಖಾನ್ ಓಪನ್ನಾಗಿಯೇ ತೆಗೆದಿರುವ ವಿಡಿಯೋ ಒಂದು ಇದೀಗ ವೈರಲ್ ಆಗಿದೆ. ಈ ವಿಷಯ ಹೊರಬಂದಿದ್ದು, ಕಪಿಲ್ ಶರ್ಮಾ ಅವರು ನಡೆಸಿಕೊಡುವ ಕಾಮಿಡಿ ವಿತ್ ಕಪಿಲ್ ಷೋದಲ್ಲಿ. ಈ ಷೋನಲ್ಲಿ ಸಹೋದರರಿಬ್ಬರೂ ಬಂದಿದ್ದರು. ಆ ಸಮಯದಲ್ಲಿ ಕಪಿಲ್ ಅವರು, ಸಲ್ಮಾನ್ ಖಾನ್ಗೆ ನೀವು ಆನ್ ಸ್ಕ್ರೀನ್ನಲ್ಲಿ ಕಿಸ್ ಗಿಸ್ ಮಾಡಿದ್ರಾ ಎಂದು ಪ್ರಶ್ನಿಸಿದಾಗ ಸಲ್ಮಾನ್ ಖಾನ್, ಇಲ್ಲಾ ಹಾಗೆಲ್ಲಾ ನಾನು ಮಾಡಿಲ್ಲ ಎಂದರು. ಕೂಡಲೇ ಅರ್ಬಾಜ್ ಖಾನ್ ಅವನಿಗೆ ಆನ್ ಸ್ಕ್ರೀನ್ನಲ್ಲಿ ಹಾಗೆ ಮಾಡುವ ಅವಶ್ಯಕತೆಯೇ ಇಲ್ಲ, ಏಕೆಂದ್ರೆ ಆಫ್ ಸ್ಕ್ರೀನ್ನಲ್ಲಿಯೇ ಬೇಕಾದಷ್ಟು ಆಗಿರುತ್ತವೆ ಎಂದಿದ್ದಾರೆ!
ಶಾರುಖ್ ಜೊತೆ ನಟಿಸುವಾಗ್ಲೇ ಕಾಜೋಲ್ಗೆ ಗರ್ಭಪಾತ! ಭಯಾನಕ ಘಟನೆ ನೆನಪಿಸಿಕೊಂಡ ನಟಿ
ಈ ಪ್ರಶ್ನೆ ಕೇಳುವುದಕ್ಕೆ ಕಾರಣವೂ ಇದೆ. ಅದೇನೆಂದರೆ ಸಲ್ಮಾನ್ ಖಾನ್ ಪರದೆಯ ಮೇಲೆ ಅಂದ್ರೆ ಚಿತ್ರಗಳಲ್ಲಿ ನಟಿಯರಿಗೆ ಕಿಸ್ ಮಾಡಲ್ಲ. ಇದು ಅವರು ಮೊದಲಿನಿಂದ ತಮ್ಮಷ್ಟಕ್ಕೇ ತಾವು ಹಾಕಿಕೊಂಡಿರುವ ನಿಯವಾಗಿದ್ದು, ಅದರಂತೆಯೇ ನಡೆಯುತ್ತಿದ್ದಾರೆ. ಇದಕ್ಕೆ ನಟ ಕಾರಣವನ್ನೂ ನೀಡಿದ್ದಾರೆ. ಸಿನಿಮಾ ನೋಡಲು ಬರೋ ಫ್ಯಾಮಿಲಿ ಆಡಿಯನ್ಸ್ಗೆ ಮುಜುಗರ ಆಗಬಾರದು ಅನ್ನೋದು ತಮ್ಮ ಉದ್ದೇಶ ಎಂದಿದ್ದಾರೆ. ಆದರೆ ಈ ಪ್ರಶ್ನೆಗೆ ಅರ್ಬಾಜ್ ಹೀಗೆ ಹೇಳುವ ಮೂಲಕ ಎಲ್ಲರನ್ನೂ ನಗುವಿನ ಅಲೆಯಲ್ಲಿ ತೇಲಿಸಿದ್ದಾರೆ.
ಇದೇ ವೇಳೆ, ವಿವಾದಿತ ಕರಣ್ ಜೋಹರ್ ಷೋನಲ್ಲಿನ ಹಳೆಯ ವಿಡಿಯೋ ಒಂದು ವೈರಲ್ ಆಗಿದೆ. ಇದರಲ್ಲಿ ಕೂಡ ಸಹೋದರರು ಬಂದಿದ್ದರು. ಈ ಷೋನ ರ‍್ಯಾಪಿಡ್ ಫೈರ್ ರೌಂಡ್ ನಲ್ಲಿ ಕರಣ್ ಜೋಹರ್ ಸೆಕ್ಸ್ ಬಗ್ಗೆ ಪ್ರಶ್ನೆ ಕೇಳಿದ್ದಾರೆ. ಅಷ್ಟಕ್ಕೂ ಈ ಷೋನಲ್ಲಿ ಕರಣ್ ಅವರು ಬರುವ ಎಲ್ಲರಿಗೂ ಕೇಳುವುದು ಲೈಂಗಿಕ ವಿಷಯಗಳದ್ದೇ ಪ್ರಶ್ನೆ ಎನ್ನುವ ಆರೋಪವೂ ಇದೆ. ಈ ಸಮಯದಲ್ಲಿ ಸೆಕ್ಸ್ ಬಗ್ಗೆ ಕೇಳಿದಾಗ ಅರ್ಬಾಜ್ ಖಾನ್, ಒಂದು ತಿಂಗಳು ಸೆಕ್ಸ್ ಇಲ್ಲದೆ ಬದುಕುವ ಚಾಲೆಂಜ್ನ ಸಲ್ಮಾನ್ ಖಾನ್ ತೆಗೆದುಕೊಳ್ಳಲು ಸಾಧ್ಯವಿಲ್ಲ ಎಂದು ಬಿಡೋದಾ?
ಇನ್ನು ಸಲ್ಮಾನ್ ಖಾನ್ ಅವರ ಸಿನಿಮಾದ ಕುರಿತು ಹೇಳುವುದಾದರೆ ಸದ್ಯ ‘ಸಿಕಂದರ್’ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ. ಸಲ್ಮಾನ್ ಖಾನ್ ಸಾಲು ಸಾಲು ಸೋಲು ಕಂಡಿದ್ದಾರೆ. ಈ ಚಿತ್ರದ ಮೂಲಕ ಗೆಲ್ಲೋ ಭರವಸೆಯಲ್ಲಿ ಅವರಿದ್ದಾರೆ. ಈ ಚಿತ್ರಕ್ಕೆ ತಮಿಳಿನ ಎ.ಮುರುಗದಾಸ್ ಅವರು ನಿರ್ದೇಶನ ಮಾಡುತ್ತಿದ್ದಾರೆ. ಈ ಸಿನಿಮಾದ ಶೂಟಿಂಗ್ ಭರದಿಂದ ಸಾಗುತ್ತಿದೆ.ಈ ಸಿನಿಮಾ 2025ರ ಈದ್ ಸಂದರ್ಭದಲ್ಲಿ ಬಿಡುಗಡೆಯಾಗುವ ನಿರೀಕ್ಷೆ ಇದೆ.
ಶಾರುಖ್ ಖಾನ್ ಚೈನ್ ಸ್ಮೋಕರ್; ಚಿಮ್ನಿಯಂತೆ ಹೊಗೆ ಬಿಡ್ತಾರೆ... ಬಾದ್ಶಾಹ್ನ ಕಥೆ ಬಿಚ್ಚಿಟ್ಟ ನಟ ಗೋವಿಂದ